ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೊಸ ವೋಟರ್ ಐಡಿ ನೋಂದಣಿ ಇನ್ಮುಂದೆ ಮತ್ತಷ್ಟು ಸುಲಭ: ಪೋಷಕರ ವಿವರ ಕಡ್ಡಾಯವಲ್ಲ ಎಂದ ಚುನಾವಣಾ ಆಯೋಗ

Election Commission: ದೇಶದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಬಯಸುವ ಯುವಜನತೆಗೆ ಕೇಂದ್ರ ಚುನಾವಣಾ ಆಯೋಗವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಹೊಸ ವೋಟರ್ ಐಡಿ ಪಡೆಯಲು ಬಳಸುವ ಫಾರ್ಮ್ 6 ನಿಯಮಗಳನ್ನು ಸರಳಗೊಳಿಸಲಾಗಿದ್ದು, ಇನ್ಮುಂದೆ ಪೋಷಕರು ಅಥವಾ ಅಜ್ಜ-ಅಜ್ಜಿಯಂದಿರ ಮತದಾರರ ಗುರುತಿನ ಚೀಟಿ ವಿವರಗಳನ್ನು ನೀಡುವುದು ಕಡ್ಡಾಯವಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಕರ್ನಾಟಕ ಸೇರಿ 20 ರಾಜ್ಯಗಳಲ್ಲಿ ಈ ಹೊಸ ನಿಯಮ ತಕ್ಷಣದಿಂದಲೇ ಜಾರಿಗೆ ಬರಲಿದೆ.

ಹೊಸ ವೋಟರ್ ಐಡಿ ನೋಂದಣಿಗೆ ಪೋಷಕರ ವಿವರ ಕಡ್ಡಾಯವಲ್ಲ

ಚಾಟ್‌ಜಿಪಿಟಿ ರಚಿತ ಚಿತ್ರ -

Ramesh Ballamoole
Ramesh Ballamoole Sep 30, 2026 9:50 PM

ನವದೆಹಲಿ, ಸೆ. 30: ದೇಶದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಬಯಸುವ ಯುವಜನತೆಗೆ ಹಾಗೂ ನಾಗರಿಕರಿಗೆ ಕೇಂದ್ರ ಚುನಾವಣಾ ಆಯೋಗವು (Election Commission) ಭರ್ಜರಿ ಸಿಹಿ ಸುದ್ದಿ ನೀಡಿದೆ. ಹೊಸ ಮತದಾರರ ನೋಂದಣಿಗಾಗಿ ಬಳಸಲಾಗುವ ಫಾರ್ಮ್ 6 ನಿಯಮಗಳಲ್ಲಿ ಆಯೋಗವು ಮಹತ್ವದ ತಿದ್ದುಪಡಿ ತಂದಿದ್ದು, ಇನ್ನು ಮುಂದೆ ಅರ್ಜಿದಾರರು ತಮ್ಮ ಪೋಷಕರು ಅಥವಾ ಅಜ್ಜ-ಅಜ್ಜಿಯಂದಿರ ಮತದಾರರ ಗುರುತಿನ ಚೀಟಿ ವಿವರಗಳನ್ನು ನೀಡುವುದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಹೊಸ ನಿಯಮವು ದೇಶದ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರಲಿದೆ.

ನಿಯಮ ಬದಲಾವಣೆಗೆ ಕಾರಣವೇನು?

ಇಲ್ಲಿಯವರೆಗೆ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಬಯಸುವವರು ಫಾರ್ಮ್ 6ರಲ್ಲಿ ತಮ್ಮ ಕುಟುಂಬದ ಸದಸ್ಯರ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕಾಗಿತ್ತು. ಆದರೆ ಹಲವು ಅರ್ಜಿದಾರರಿಗೆ ತಮ್ಮ ಪೋಷಕರ ಹಳೆಯ ಗುರುತಿನ ಚೀಟಿ ಸಂಖ್ಯೆ ಸಿಗುತ್ತಿಲ್ಲ, ಪೋಷಕರು ತೀರಿಹೋಗಿದ್ದರೆ ಅಥವಾ ವಲಸೆ ಬಂದಿದ್ದಲ್ಲಿ ದಾಖಲೆಗಳ ಕೊರತೆಯಿಂದಾಗಿ ಹೊಸ ವೋಟರ್ ಐಡಿ ಪಡೆಯಲು ತೀವ್ರ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಿ, ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಚುನಾವಣಾ ಆಯೋಗ ನಿರ್ಧಾರ ಕೈಗೊಂಡಿದೆ.

ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ, ಜೈಶಂಕರ್‌, ಚುನಾವಣಾ ಆಯುಕ್ತ ಸಂಧುಗೂ SIR ನೋಟಿಸ್‌!

ಪ್ರಮುಖ ಬದಲಾವಣೆಗಳು

ಇನ್ಮುಂದೆ 18 ವರ್ಷ ತುಂಬಿದ ಯಾವುದೇ ಭಾರತೀಯ ಪ್ರಜೆ ತಮ್ಮ ಪೋಷಕರ ಮತದಾರರ ಚೀಟಿಯ ಲಿಂಕ್ ಇಲ್ಲದೆಯೇ ಸ್ವತಂತ್ರವಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು. ಮತದಾರರಾಗಿ ನೋಂದಾಯಿಸಿಕೊಳ್ಳಲು ಅರ್ಜಿದಾರರ ವಯಸ್ಸಿನ ಪುರಾವೆ (ಜನನ ಪ್ರಮಾಣಪತ್ರ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಆಧಾರ್ ಇತ್ಯಾದಿ) ಮತ್ತು ಪ್ರಸ್ತುತ ವಾಸಸ್ಥಳದ ಆಧಾರ್/ವಿಳಾಸದ ದಾಖಲೆಗಳು ಇದ್ದರೆ ಸಾಕಾಗುತ್ತದೆ. ಮೊದಲ ಹಂತದಲ್ಲಿ ಈ ಹೊಸ ಸೌಲಭ್ಯವು ಕರ್ನಾಟಕ ಸೇರಿದಂತೆ ದೇಶದ 20 ಪ್ರಮುಖ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ಬರಲಿದೆ. ಪೋಷಕರ ವಿವರ ಕಡ್ಡಾಯವಲ್ಲದಿದ್ದರೂ, ಆಧಾರ್ ಮತ್ತು ಡಿಜಿಟಲ್ ತಂತ್ರಜ್ಞಾನದ ಮೂಲಕ ನಕಲಿ ಅಥವಾ ದ್ವಿಗುಣ ಮತದಾರರ ಸೇರ್ಪಡೆಯನ್ನು ತಡೆಯಲು ಆಯೋಗವು ಆಧುನಿಕ ಸಾಫ್ಟ್‌ವೇರ್ ವ್ಯವಸ್ಥೆಯನ್ನು ಬಲಪಡಿಸಿದೆ.

ಅರ್ಜಿ ಸಲ್ಲಿಸುವುದು ಹೇಗೆ?

  • ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ ಅಥವಾ ವೋಟರ್‌ ಹೆಲ್ಪಪಲೈನ್‌ ಆ್ಯಪ್‌ಗೆ ಭೇಟಿ ನೀಡಬೇಕು.
  • ಫಾರ್ಮ್‌ 6 ಅನ್ನು ಆಯ್ಕೆ ಮಾಡಿ, ನಿಮ್ಮ ವೈಯಕ್ತಿಕ ವಿವರಗಳು, ವಯಸ್ಸು ಮತ್ತು ವಿಳಾಸದ ಸಾಕ್ಷಿ ದಾಖಲೆಗಳನ್ನು ಅಪ್‌‌ಲೋಡ್ ಮಾಡಬೇಕು.
  • ಪೋಷಕರ ಮತದಾರರ ಐಡಿ ಸಂಖ್ಯೆ ನಮೂದಿಸುವ ಕಾಲಂ ಅನ್ನು ಈಗ ಐಚ್ಛಿಕ (Optional) ಮಾಡಲಾಗಿದ್ದು, ಅದನ್ನು ಖಾಲಿ ಬಿಟ್ಟು ಅರ್ಜಿ ಪೂರ್ಣಗೊಳಿಸಬಹುದು.

ಎಲ್ಲ ಎಸ್‌ಐಆರ್ ಆದೇಶಗಳಿಗೆ ಸರ್ವಾನುಮತದ ಅನುಮೋದನೆ ಪಡೆಯಲಾಗಿದೆ: ಭಿನ್ನಾಭಿಪ್ರಾಯ ವದಂತಿ ತಳ್ಳಿ ಹಾಕಿದ ಚುನಾವಣಾ ಆಯೋಗ

ಚುನಾವಣಾ ಆಯೋಗದ ಈ ನಿರ್ಧಾರದಿಂದಾಗಿ ಲಕ್ಷಾಂತರ ಯುವ ಮತದಾರರಿಗೆ, ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ಬೇರೆ ಊರುಗಳಿಗೆ ವಲಸೆ ಹೋಗಿರುವ ನಾಗರಿಕರಿಗೆ ವೋಟರ್ ಐಡಿ ಕಾರ್ಡ್ ಪಡೆಯುವುದು ಇನ್ಮುಂದೆ ಅತ್ಯಂತ ಸರಳವಾಗಲಿದೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.