IND vs WI: 117 ಎಸೆತಗಳಲ್ಲಿ ಭರ್ಜರಿ ದ್ವಿಶತಕ ಬಾರಿಸಿ ವಿಶ್ವ ದಾಖಲೆ ಬರೆದ ಶುಭಮನ್ ಗಿಲ್!
Shubman Gill Scored Double Century: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ ಭರ್ಜರಿ ದ್ವಿಶತಕವನ್ನು ಬಾರಿಸಿದರು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದೊಡ್ಡ ದಾಖಲೆಯನ್ನು ಬರೆದಿದ್ದಾರೆ.
ಒಡಿಐ ಕ್ರಿಕೆಟ್‌ನಲ್ಲಿ ವೇಗದ ದ್ವಿಶತಕ ಬಾರಿಸಿ ವಿಶ್ವ ದಾಖಲೆ ಬರೆದ ಶುಭಮನ್ ಗಿಲ್. -
ಗುವಾಹಟಿ: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ (Shubman Gill) ಐತಿಹಾಸಿಕ ದಾಖಲೆಯನ್ನು ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ದ್ವಿಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ವಿಶ್ವ ದಾಖಲೆಯನ್ನು ಗಿಲ್ ಬರೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ (IND vs WI) 117 ಎಸೆತಗಳಲ್ಲಿ ಶುಭಮನ್ ಗಿಲ್ ತಮ್ಮ ಎರಡನೇ ದ್ವಿಶತಕವನ್ನು ಪೂರ್ಣಗೊಳಿಸಿದರು. ಈ ವೇಗದ ದ್ವಿಶತಕದ ಮೂಲಕ ಭಾರತ ತಂಡದ ನಾಯಕ ಹಲವು ದಾಖಲೆಗಳನ್ನು ಮುರಿದಿದ್ದಾರೆ.
ಸೆಪ್ಟಂಬರ್ 30 ರಂದು ಬುಧವಾರ ನಡೆದಿದ್ದ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 406 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಶುಭಮನ್ ಗಿಲ್ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದರು. ಮೊದಲಿಗೆ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಜೊತೆಗೆ 255 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದ ಗಿಲ್, ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ದಾಖಲೆಯ ಇನಿಂಗ್ಸ್ ಆಡಿದರು. ಅವರು ಆಡಿದ 117 ಎಸೆತಗಳಲ್ಲಿ ದ್ವಿಶತಕವನ್ನು ಪೂರ್ಣಗೊಳಿಸಿದರು.
IND vs WI: ಭರ್ಜರಿ ಶತಕ ಸಿಡಿಸಿ ಎಂಎಸ್ ಧೋನಿ ದಾಖಲೆ ಮುರಿದ ಶೇಯ್ ಹೋಪ್!
ಇಶಾನ್ ಕಿಶನ್ ದಾಖಲೆಯನ್ನು ಮುರಿದ ಗಿಲ್
117 ಎಸೆತಗಳಲ್ಲಿ ದ್ವಿಶತಕವನ್ನು ಪೂರ್ಣಗೊಳಿಸುವ ಮೂಲಕ ಇಶಾನ್ ಕಿಶನ್, ಒಡಿಐ ಕ್ರಿಕೆಟ್ ಪಂದ್ಯದಲ್ಲಿ ವೇಗವಾಗಿ ಡಬಲ್ ಸೆಂಚುರಿ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ವಿಶ್ವ ದಾಖಲೆಯನ್ನು ಬರೆದರು. ಆ ಮೂಲಕ ಈ ಹಿಂದೆ 126 ಎಸೆತಗಳಲ್ಲಿ ಡಬಲ್ ಸೆಂಚುರಿ ಬಾರಿಸಿದ್ದ ಇಶಾನ್ ಕಿಶನ್ ಅವರ ದಾಖಲೆಯನ್ನು ಗಿಲ್ ಮುರಿದಿದ್ದಾರೆ. ಇದು ಗಿಲ್ ಅವರ ಪಾಲಿಗೆ ಎರಡನೇ ದ್ವಿಶತಕವಾಗಿದೆ. ಈ ಹಿಂದೆ 2023ರಲ್ಲಿ ಗಿಲ್ ನ್ಯೂಜಿಲೆಂಡ್ ವಿರುದ್ಧ ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ 149 ಎಸೆತಗಳಲ್ಲಿ 208 ರನ್‌ಗಳನ್ನು ಬಾರಿಸಿದ್ದರು.
𝗠𝗔𝗝𝗘𝗦𝗧𝗜𝗖. 𝗠𝗔𝗥𝗩𝗘𝗟𝗢𝗨𝗦. 𝗠𝗔𝗚𝗡𝗜𝗙𝗜𝗖𝗘𝗡𝗧 🫡
— BCCI (@BCCI) September 30, 2026
Shubman Gill becomes just the 2️⃣nd Indian to score multiple ODI double hundreds 👏👏
Updates ▶️ https://t.co/6XCYRtZLAi#TeamIndia | #INDvWI | @mflone_ | @ShubmanGill pic.twitter.com/e6MCoUfNbV
ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ ದ್ವಿಶತಕ ಬಾರಿಸಿದ ಬ್ಯಾಟರ್ಸ್(ಎಸೆತಗಳಲ್ಲಿ)
117 ಎಸೆತಗಳು, ಶುಭಮನ್ ಗಿಲ್ vs ವೆಸ್ಟ್ ಇಂಡೀಸ್-ಗುವಾಹಟಿ 2026
126 ಎಸೆತಗಳು, ಇಶಾನ್ ಕಿಶನ್ vs ಬಾಂಗ್ಲಾದೇಶ- ಚಟ್ಟೋಗ್ರಾಮ್ 2022
128 ಎಸೆತಗಳು, ಗ್ಲೆನ್ ಮ್ಯಾಕ್ಸ್‌ವೆಲ್ vs ಅಫ್ಘಾನಿಸ್ತಾನ-ವಾಂಖೆಡೆ 2023
136 ಎಸೆತಗಳು, ನಿಸಾಂಕಾ vs ಅಫ್ಘಾನಿಸ್ತಾನ- ಪಲ್ಲೆಕೆಲೆ 2024
138 ಎಸೆತಗಳು, ಕ್ರಿಸ್ ಗೇಲ್ vs ಜಿಂಬಾಬ್ವೆ- ಕ್ಯಾನ್‌ಬೆರಾ 2015
IND vs WI: 200 ಒಡಿಐ ವಿಕೆಟ್‌ಗಳನ್ನು ಕಿತ್ತು ವಿಶೇಷ ದಾಖಲೆ ಬರೆದ ಕುಲ್ದೀಪ್ ಯಾದವ್!
ಒಂದಕ್ಕಿಂತ ಹೆಚ್ಚು ಒಡಿಐ ದ್ವಿಶತಕ ಬಾರಿಸಿದ ಗಿಲ್
ಏಕದಿನ ಕ್ರಿಕೆಟ್ ಇತಿಹಾಸಲ್ಲಿ ಒಂದಕ್ಕಿಂತ ಹೆಚ್ಚು ದ್ವಿಶತಕ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಶುಭಮನ್ ಗಿಲ್ ಬರೆದಿದ್ದಾರೆ. ಭಾರತದ ಪರ ಮೂರು ಬಾರಿ ದ್ವಿಶತಕ ಬಾರಿಸಿರುವ ಮಾಜಿ ನಾಯಕ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್, 2014ರಲ್ಲಿ ಶ್ರೀಲಂಕಾ ವಿರುದ್ಧ 264 ರನ್ ಹಾಗೂ 2017ರಲ್ಲಿ ಶ್ರೀಲಂಕಾ ವಿರುದ್ಧ 208 ರನ್‌ಗಳನ್ನು ಬಾರಿಸಿದ್ದರು. ಇನ್ನು ಶುಭಮನ್ ಗಿಲ್ 2023ರಲ್ಲಿ ನ್ಯೂಜಿಲೆಂಡ್ ವಿರುದ್ಧ 208 ರನ್ ಹಾಗೂ ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 223 ರನ್‌ಗಳನ್ನು ಬಾರಿಸಿದ್ದಾರೆ.