#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Sajjan Kumar: ಸಿಖ್‌ ವಿರೋಧಿ ದಂಗೆ- ಕಾಂಗ್ರೆಸ್‌ ಮಾಜಿ ಸಂಸದ ಸಜ್ಜನ್‌ ಕುಮಾರ್‌ ದೋಷಿ ಎಂದು ಸಾಬೀತು

1984ರ ಸಿಖ್ ವಿರೋಧಿ ಗಲಭೆಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಅವರನ್ನು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ಈ ಪ್ರಕರಣವು 1984 ನವೆಂಬ‌ರ್ 1ರಂದು ಸರಸ್ವತಿ ವಿಹಾ‌ರ್ ಪ್ರದೇಶದಲ್ಲಿ ನಡೆದ ತಂದೆ-ಮಗನ ಕೊಲೆಗೆ ಸಂಬಂಧಿಸಿದ್ದಾಗಿದೆ.

ಸಿಖ್‌ ವಿರೋಧಿ ಗಲಭೆ-ಮಾಜಿ ಸಂಸದ ಸಜ್ಜನ್‌ ಕುಮಾರ್‌ ದೋಷಿ!

ಮಾಜಿ ಕಾಂಗ್ರೆಸ್‌ ಸಂಸದ ಸಜ್ಜನ್‌ ಕುಮಾರ್‌

Profile Deekshith Nair Feb 12, 2025 3:51 PM

ನವದೆಹಲಿ: 1984ರ ಸಿಖ್ ವಿರೋಧಿ ಗಲಭೆಯಲ್ಲಿ(Anti-Sikh Riots Case) ನಡೆದ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್(Sajjan Kumar) ಅವರನ್ನು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ದೋಷಿ ಎಂದು ಇಂದು(ಫೆ.12) ತೀರ್ಪು ನೀಡಿದೆ. ಈ ಪ್ರಕರಣವು 1984 ನವೆಂಬ‌ರ್ 1ರಂದು ಸರಸ್ವತಿ ವಿಹಾ‌ರ್ ಪ್ರದೇಶದಲ್ಲಿ ನಡೆದ ತಂದೆ-ಮಗನ ಕೊಲೆಗೆ ಸಂಬಂಧಿಸಿದ್ದಾಗಿದೆ. ಸಜ್ಜನ್ ಕುಮಾರ್‌ಗೆ ನೀಡುವ ಶಿಕ್ಷೆಯ ಪ್ರಮಾಣದ ಕುರಿತು ನ್ಯಾಯಾಲಯವು ಫೆಬ್ರವರಿ 18ರಂದು ನಿರ್ಧರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣದಲ್ಲಿ ಮಾಜಿ ಸಂಸದ ಸಜ್ಜನ್ ಕುಮಾರ್ ದಂಗೆ ನಡೆಸಿದ ಗುಂಪನ್ನು ಮುನ್ನಡೆಸುತ್ತಿದ್ದರು ಎಂಬ ಆರೋಪವಿದೆ. ಅವರ ಪ್ರಚೋದನೆಯ ಮೇರೆಗೆ ಗುಂಪೊಂದು ಇಬ್ಬರು ಸಿಖ್ಖರನ್ನು ಜೀವಂತವಾಗಿ ಸುಟ್ಟುಹಾಕಿತು ಎಂದು ಗಂಭೀರವಾಗಿ ಆರೋಪಿಸಲಾಗಿತ್ತು. ಹತ್ಯೆಯ ನಂತರವೂ ಸಂತ್ರಸ್ತರ ಮನೆಯನ್ನು ಲೂಟಿ ಮಾಡಿದ್ದು, ಮನೆಯಲ್ಲಿದ್ದ ಇತರ ಜನರನ್ನೂ ಥಳಿಸಿದ್ದರು ಎನ್ನಲಾಗಿದೆ. ಸಿಖ್‌ ವಿರೊಧಿ ದಂಗೆಯ ಸಮಯದಲ್ಲಿ 1984 ನವೆಂಬರ್ 1ರಂದು ಜಸ್ವಂತ್ ಸಿಂಗ್ ಮತ್ತು ಅವರ ಮಗ ತರುಣದೀಪ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು.



ಈ ಪ್ರಕರಣ ಸಂಬಂಧ ಪಂಜಾಬ್‌ನ ಬಾಗ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿತ್ತು. ನಂತರ ವಿಶೇಷ ತನಿಖಾ ತಂಡವು ತನಿಖೆಯನ್ನು ಕೈಗೆತ್ತಿಕೊಂಡಿತು. 2021 ಡಿಸೆಂಬ‌ರ್ 16ರಂದು ನ್ಯಾಯಾಲಯವು ಸಜ್ಜನ್ ಕುಮಾರ್ ವಿರುದ್ಧದ ಆರೋಪಗಳನ್ನು ರೂಪಿಸಿತ್ತು. ಪ್ರಾಥಮಿಕ ಪ್ರಕರಣ ಸಾಬೀತಾಗಿದೆ ಎಂತಲೂ ಹೇಳಿತ್ತು. ಬರೋಬ್ಬರಿ 40 ವರ್ಷಗಳ ಪ್ರಕರಣವನ್ನು ಇತ್ಯರ್ಥಗೊಳಿಸಿರುವ ನ್ಯಾಯಾಲಯವು ಸಜ್ಜನ್‌ ಕುಮಾರ್‌ ದೋಷಿ ಎಂದು ತೀರ್ಪು ನೀಡಿದೆ.

ಈ ಸುದ್ದಿಯನ್ನೂ ಓದಿ: Mallikarjun Kharge: ಮೋದಿ ದೋಸ್ತ ಆರಂಭದಲ್ಲೇ ಹೆದರಿಸ್ತಿದಾನೆ; ಟ್ರಂಪ್‌ ಬಗ್ಗೆ ಖರ್ಗೆ ಮಾತು

ಈ ಪ್ರಕರಣದ ವಿಚಾರಣೆಯ ವೇಳೆಯಲ್ಲಿ, ಜಸ್ವಂತ್ ಅವರ ಪತ್ನಿಯ ಮನೆಯ ಮೇಲೆ ಗುಂಪೊಂದು ದಾಳಿ ಮಾಡಿದೆ. ಆಕೆಯ ಪತಿ ಮತ್ತು ಮಗನನ್ನು ಅಮಾನೀಯವಾಗಿ ಹತ್ಯೆಗೈದು ಮನೆಯ ವಸ್ತುಗಳನ್ನು ಲೂಟಿ ಮಾಡಲಾಯಿತು. ಇದಾದ ನಂತರ ಅವರ ಮನೆಗೆ ಬೆಂಕಿ ಹಚ್ಚಲಾಯಿತು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು. ಸಜ್ಜನ್ ಕುಮಾ‌ರ್ ಸದ್ಯಕ್ಕೆ ದೆಹಲಿ ಕಂಟೋನ್ಮಂಟ್‌ನಲ್ಲಿ ಮತ್ತೊಂದು ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ತೀರ್ಪನ್ನು ಪ್ರಕಟಿಸಲು ಸಜ್ಜನ್ ಕುಮಾರ್ ಅವರನ್ನು ತಿಹಾ‌ರ್ ಜೈಲಿನಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.