ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Putin India Visit: ‘ರಸಂ’ನಿಂದ ಹಿಡಿದು ಬಾದಾಮ್ ಹಲ್ವಾದವರೆಗೆ; ಪುಟಿನ್‌ಗಾಗಿ ತಯಾರಿಸಿದ ಮೆನು ಏನು ಗೊತ್ತಾ?

grand banquet to Putin: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಭಾರತದ ಎರಡು ದಿನ ಭೇಟಿ ಸಂದರ್ಭದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ವಿಶೇಷ ಭೋಜನ ಕೂಟ ಆಯೋಜಿಸಿದ್ದರು. ದಕ್ಷಿಣ ಭಾರತದ ‘ರಸಂ’ನಿಂದ ಹಿಡಿದು ಬಾದಾಮ್ ಹಲ್ವಾ ತನಕ ವಿಭಿನ್ನ ಹಾಗೂ ರುಚಿಕರ ಆಹಾರವೈವಿಧ್ಯವನ್ನು ಹಂಚಿಕೊಳ್ಳಲಾಗಿತ್ತು.

ಭಾರತದಲ್ಲಿ ಪುಟಿನ್‌ಗಾಗಿ ತಯಾರಿಸಿದ ಮೆನು ಏನು ಗೊತ್ತಾ?

ಪುಟಿನ್‌ ಭಾರತ ಭೇಟಿ -

Priyanka P
Priyanka P Dec 6, 2025 12:22 PM

ನವದೆಹಲಿ: ಎರಡು ದಿನಗಳ ಕಾಲ ಭಾರತ ಪ್ರವಾಸದಲ್ಲಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Putin) ಹಿಂದಿರುಗಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ (Rashtrapati Bhavan) ಆಯೋಜಿಸಿದ್ದ ಭೋಜನಕೂಟದಲ್ಲಿ ಅದ್ಧೂರಿ, ಸಸ್ಯಾಹಾರಿ ಖಾದ್ಯವನ್ನು ಬಡಿಸಲಾಯಿತು. ರಷ್ಯಾದ ಅಧ್ಯಕ್ಷರಿಗೆ ಸಾಂಪ್ರದಾಯಿಕ ಥಾಲಿಯನ್ನು ಬಡಿಸಲಾಯಿತು. ಇದು ಭಾರತದ ಶ್ರೀಮಂತ ಪ್ರಾದೇಶಿಕ ಖಾದ್ಯವಾಗಿದ್ದು, ಅವರು ಈ ಅದ್ಭುತ ಭೋಜನವನ್ನು ಸವಿದರು.

ವಿಶೇಷವಾಗಿ ತಯಾರಿಸಲಾದ ಆಹಾರವನ್ನು ದಕ್ಷಿಣ ಭಾರತೀಯ ರಸಂ (ಸೂಪ್) ಮೂರಂಗೇಳೈ ಚಾರುದಿಂದ ಪ್ರಾರಂಭಿಸಲಾಯಿತು. ನಂತರ ಅಪೆಟೈಜರ್‌ಗಳಾದ ಗುಚ್ಚಿ ಡೂನ್ ಚೆಟಿನ್ (ಕಾಶ್ಮೀರ ವಾಲ್ನಟ್ ಚಟ್ನಿಯೊಂದಿಗೆ ತುಂಬಿದ ಸ್ಟಫ್ಡ್ ಮೋರಲ್), ಕಾಲೆ ಚಾನೆ ಕೆ ಶಿಕಂಪುರಿ (ಪ್ಯಾನ್-ಗ್ರಿಲ್ಡ್ ಬ್ಲ್ಯಾಕ್ ಕಬಾಬ್‍) ಮತ್ತು ಮಸಾಲೆಯುಕ್ತ ಚಟ್ನಿಯೊಂದಿಗೆ ವೆಜಿಟೆಬಲ್ ಜೋಲ್ ಮೋಮೊ ಇತ್ಯಾದಿ ಖಾದ್ಯ ಸವಿದರು. ಪುಟಿನ್ ಅವರಿಗೆ ಕಾಶ್ಮೀರದಿಂದ ಪೂರ್ವ ಹಿಮಾಲಯವರೆಗಿನ ಭಾರತೀಯ ಪಾಕಪದ್ಧತಿ ಪರಂಪರೆಯ ಒಂದು ಚಿಕ್ಕ ಪ್ರವಾಸ ನೀಡಲಾಯಿತು.

ಅಸ್ಸಾಂ ಚಹಾ, ಭಗವದ್ಗೀತೆ, ಬೆಳ್ಳಿ ಕುದುರೆ: ರಷ್ಯಾ ಅಧ್ಯಕ್ಷ ಪುಟಿನ್‌ಗೆ ಪ್ರಧಾನಿ ಮೋದಿ ನೀಡಿದ ಉಡುಗೊರೆಗಳಿವು

ಮುಖ್ಯ ಮೆನುವಿನಲ್ಲಿ ಜಫ್ರಾನಿ ಪನೀರ್ ರೋಲ್, ಪಾಲಕ್ ಮೇಥಿ ಮಟ್ಟರ್ ಕಾ ಸಾಗ್, ತಂದೂರಿ ಭರ್ವಾನ್ ಆಲೂ, ಆಚಾರಿ ಬೈಂಗನ್ ಮತ್ತು ಹಳದಿ ದಾಲ್ ತಡ್ಕಾ, ಜೊತೆಗೆ ಡ್ರೈ ಫ್ರೂಟ್ ಮತ್ತು ಕೇಸರಿ ಪಲಾವ್ ಜೊತೆಗೆ ಭಾರತೀಯ ಬ್ರೆಡ್‌ಗಳಾದ ಲಚ್ಚಾ ಪರಂತ, ಮೆಗಜ್ ನಾನ್, ಸತಾನಾಜ್ ರೋಟಿ, ಮಿಸ್ಸಿ ರೋಟಿ ಮತ್ತು ಬಿಸ್ಕೂಟ್ ರೋಟಿ ಮುಂತಾದ ಭಾರತೀಯ ವಿಭಿನ್ನ ರೊಟ್ಟಿ ಭಕ್ಷ್ಯಗಳಿದ್ದವು.

ಸಿಹಿತಿಂಡಿಗಳಲ್ಲಿ ಬಾದಾಮ್ ಹಲ್ವಾ, ಕೇಸರ್-ಪಿಸ್ತಾ ಕುಲ್ಫಿ ಮತ್ತು ತಾಜಾ ಹಣ್ಣುಗಳು, ಸಾಂಪ್ರದಾಯಿಕ ಭಕ್ಷ್ಯಗಳಾದ ಗುರು ಸಂದೇಶ್, ಮುರಕ್ಕು ಮತ್ತು ವಿವಿಧ ರೀತಿಯ ಉಪ್ಪಿನಕಾಯಿ ಮತ್ತು ಸಲಾಡ್‌ಗಳಿದ್ದವು. ಪುಟಿನ್ ಅವರಿಗೆ ದಾಳಿಂಬೆ, ಕಿತ್ತಳೆ, ಕ್ಯಾರೆಟ್ ಮತ್ತು ಶುಂಠಿ ರಸಗಳ ಆರೋಗ್ಯಕರ ಮಿಶ್ರಣವನ್ನು ಸಹ ನೀಡಲಾಯಿತು.

ಇಲ್ಲಿದೆ ಮೆನು ಲಿಸ್ಟ್:



ಇನ್ನು ರಾಷ್ಟ್ರಪತಿ ಭವನದ ನೌಕಾ ತಂಡದವರು, ಭಾರತೀಯ ಶಾಸ್ತ್ರೀಯ ಸಂಗೀತವನ್ನು ರಷ್ಯಾದ ಸಂಗೀತದೊಂದಿಗೆ ಸಂಯೋಜಿಸುವ ಸಂಗೀತ ಪ್ರದರ್ಶನವನ್ನು ಸಹ ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದರು. ಅಮೃತವರ್ಷಿಣಿ, ಖಮಾಜ್, ಯಮನ್, ಶಿವರಂಜಿನಿ, ನಳಿನಕಾಂತಿ, ಭೈರವಿ ಮತ್ತು ದೇಶ್ ಮುಂತಾದ ಭಾರತೀಯ ರಾಗಗಳು, ಕಾಲಿಂಕಾ ಮತ್ತು ಚೈಕೋವ್ಸ್ಕಿಯ ನಟ್‌ಕ್ರಾಕರ್ ಸೂಟ್‌ನ ಆಯ್ದ ಭಾಗಗಳು ಹಾಗೂ ಜನಪ್ರಿಯ ಹಿಂದಿ ಚಲನಚಿತ್ರ ರಾಗ ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ ಸೇರಿದಂತೆ ರಷ್ಯಾದ ರಾಗಗಳನ್ನು ನುಡಿಸಲಾಯಿತು.

ಈ ಸಂದರ್ಭದಲ್ಲಿ, ಪುಟಿನ್ ಅವರು ಉಭಯ ರಾಷ್ಟ್ರಗಳ ನಡುವಿನ ಪಾಲುದಾರಿಕೆಯನ್ನು ಎತ್ತಿ ತೋರಿಸಿದರು. ಅವರು ಮತ್ತು ಪ್ರಧಾನಿ ಮೋದಿ ಅವರು ಅಳವಡಿಸಿಕೊಂಡ ಘೋಷಣೆಯು ರಾಜಕೀಯ, ಭದ್ರತೆ, ಆರ್ಥಿಕತೆ ಮತ್ತು ವ್ಯಾಪಾರ, ಇಂಧನ, ಶಿಕ್ಷಣ ಮತ್ತು ಇತರ ಕ್ಷೇತ್ರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಸಹಕಾರವನ್ನು ಒಳಗೊಂಡಿದೆ ಎಂದು ಹೇಳಿದರು. ನ್ಯಾಯಯುತ ಮತ್ತು ಸಮತೋಲನ ವಿಶ್ವ ಕ್ರಮವನ್ನು ಸ್ಥಾಪಿಸಲು ಎರಡೂ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಅವರು ಒತ್ತಿ ಹೇಳಿದರು. ಹಾಗೆಯೇ ಭಾರತ-ರಷ್ಯಾ ಸಹಭಾಗಿತ್ವವನ್ನು ಒಟ್ಟಿಗೆ ಹೋಗಿ, ಒಟ್ಟಿಗೆ ಬೆಳೆಯೋಣ ಎಂದು ವರ್ಣಿಸಿದರು.

ಭೋಜನದ ನಂತರ ರಷ್ಯಾದ ಅಧ್ಯಕ್ಷರು ದೆಹಲಿಯಿಂದ ಸ್ವದೇಶಕ್ಕೆ ಹೊರಟರು. ವಿದೇಶಾಂಗ ಸಚಿವ ಎಸ್. ಜೈಶಂಕರ್ ವಿಮಾನ ನಿಲ್ದಾಣದಲ್ಲಿ ಅವರನ್ನು ಬೀಳ್ಕೊಟ್ಟರು.