ಸಂಜೆ 7 ಗಂಟೆಯನ್ನು ಬೆಳಗ್ಗೆ ಎಂದು ಭಾವಿಸಿ ಶಾಲೆಗೆ ಹೊರಟ ಪುಟ್ಟ ಬಾಲಕ: ನೆಟ್ಟಿಗರ ಮನಗೆದ್ದ ಮುಗ್ಧತೆಯ ವಿಡಿಯೊ ಇಲ್ಲಿದೆ
Viral Video: ಶಾಲಾ ಸಮವಸ್ತ್ರ ಧರಿಸಿದ ಬಾಲಕ, ಬ್ಯಾಗ್ ಧರಿಸಿಕೊಂಡು ಸಂಜೆ 7 ಗಂಟೆ ಎನ್ನುವ ಅರಿವಿಲ್ಲದೆ ಆತ್ಮವಿಶ್ವಾಸದಿಂದ ಶಾಲೆಗೆ ಹೊರಟ ದೃಶ್ಯವೊಂದು ವೈರಲ್ ಆಗಿದೆ. ಬಾಲಕನು ಮಧ್ಯಾಹ್ನ ದೀರ್ಘಕಾಲ ನಿದ್ರೆ ಮಾಡಿದ್ದು ಸಂಜೆ 7 ಗಂಟೆ ಸುಮಾರಿಗೆ ಎಚ್ಚರವಾದಾಗ, ಬೆಳಗ್ಗೆಯಾಗಿದೆ ಎಂದು ಭಾವಿಸಿ ಶಾಲೆಗೆ ಹೊರಟಿದ್ದಾನೆ.
ದೀರ್ಘ ನಿದ್ರೆಯ ನಂತರ ಸಂಜೆ ಶಾಲೆಗೆ ಹೊರಟ ಬಾಲಕ -
ಬೆಂಗಳೂರು, ಫೆ. 4: ಮಕ್ಕಳ ಮುಗ್ದತೆಯ ಹಲವು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತವೆ. ಆದರಲ್ಲಿ ಕೆಲವು ದೃಶ್ಯಗಳು ನೋಡುಗರ ಗಮನ ಸೆಳೆಯುತ್ತವೆ. ಕೆಲವೊಂದು ನಮ್ಮ ಮೊಗದಲ್ಲಿ ನಗು ತರಿಸುತ್ತವೆ. ಸದ್ಯ ಅಂತಹದ್ದೇ ಬಾಲಕನ ಒಂದು ಮುದ್ದಾದ ವಿಡಿಯೊ ಎಲ್ಲರನ್ನೂ ನಗೆಗಡಲಲ್ಲಿ ತೇಲಾಡುವಂತೆ ಮಾಡಿದೆ. ಶಾಲಾ ಸಮವಸ್ತ್ರ ಧರಿಸಿದ ಬಾಲಕ, ಬ್ಯಾಗ್ ಧರಿಸಿಕೊಂಡು ಸಂಜೆ 7 ಗಂಟೆ ಎಂಬ ಅರಿವಿಲ್ಲದೆ ಆತ್ಮವಿಶ್ವಾಸದಿಂದ ಶಾಲೆಗೆ ಹೊರಟ ದೃಶ್ಯ ವೈರಲ್ ಆಗಿದೆ. ಬಾಲಕನು ಮಧ್ಯಾಹ್ನ ದೀರ್ಘಕಾಲ ನಿದ್ರೆ ಮಾಡಿದ್ದು ಸಂಜೆ 7 ಗಂಟೆ ಸುಮಾರಿಗೆ ಎಚ್ಚರವಾದಾಗ, ಬೆಳಗ್ಗೆಯಾಗಿದೆ ಎಂದು ಭಾವಿಸಿ ಶಾಲೆಗೆ ಹೊರಟಿದ್ದಾನೆ.
ಶಾಲಾ ಸಮವಸ್ತ್ರ ಧರಿಸಿದ ಬಾಲಕ, ಬ್ಯಾಗ್ ಧರಿಸಿಕೊಂಡು, ಬೆಳಗ್ಗೆ 7 ಗಂಟೆ ಅಲ್ಲ, ಸಂಜೆ 7 ಗಂಟೆ ಎಂಬ ಅಂಶದ ಅರಿವಿಲ್ಲದೆ ಮನೆಯಿಂದ ಹೊರಗೆ ಹೋಗುವುದನ್ನು ವಿಡಿಯೊ ತೋರಿಸುತ್ತದೆ. ಸದ್ಯ ಮಗುವಿನ ಈ ಮುಗ್ಧ ಗೊಂದಲವನ್ನು ನೋಡಿ ಜನರನ್ನು ಬಿದ್ದು ಬಿದ್ದು ನಗಾಡಿದ್ದಾರೆ. ವಿಡಿಯೊದ ಪ್ರಕಾರ, ಬಾಲಕನು ಮಧ್ಯಾಹ್ನದ ದೀರ್ಘ ನಿದ್ರೆಯ ನಂತರ ಎಚ್ಚರಗೊಂಡು ಸಮಯದ ಬಗ್ಗೆ ಗೊಂದಲ ಮಾಡಿಕೊಂಡಿದ್ದ. ಅವನು ಬೆಳಗ್ಗೆ ಎಂದು ಭಾವಿಸಿ ಎಂದಿನಂತೆ ತನ್ನ ದಿನಚರಿಯಲ್ಲಿ ತೊಡಗಿದ್ದಾನೆ.
ವಿಡಿಯೊ ನೋಡಿ:
ಸಂಜೆ 7 ಗಂಟೆ ಸುಮಾರಿಗೆ ಆತನಿಗೆ ಎಚ್ಚರವಾದಾಗ, ಹೊರಗಿನ ವಾತಾವರಣ ಗಮನಿಸಿ ಮರುದಿನ ಬೆಳಗ್ಗೆಯಾಗಿದೆ ಎಂದು ಆತ ತಪ್ಪಾಗಿ ಭಾವಿಸಿದ್ದಾನೆ. ಎದ್ದಾಗ ತಡವಾಯಿತು ಎಂಬ ಭಯದಿಂದ ತನ್ನ ದಿನನಿತ್ಯದ ಕೆಲಸಗಳನ್ನು ಬೇಗನೆ ಮುಗಿಸಿ ಶಾಲಾ ಸಮವಸ್ತ್ರ ತೊಟ್ಟು ಶಾಲೆಗೆ ಹೊರಟಿದ್ದಾನೆ. ವಿಡಿಯೊವನ್ನು ತುಂಬ ವಿಶೇಷವಾಗಿಸುವುದು ಅದರಲ್ಲಿ ಕಂಡು ಬಂದ ಮಗುವಿನ ಗಂಭೀರತೆ ಮತ್ತು ಆತ್ಮವಿಶ್ವಾಸ. ಆ ಬಾಲಕನ ಕರ್ತವ್ಯ ಪ್ರಜ್ಞೆಗೆ ಜನರು ಫಿದಾ ಆಗಿದ್ದಾರೆ.
ಅಂತ್ಯಕ್ರಿಯೆ ವೇಳೆ ಶವಪೆಟ್ಟಿಗೆಯಿಂದ ಜೀವಂತವಾಗಿ ಎದ್ದು ಬಂದ ಮಹಿಳೆ
ಮನೆಯವರು ಬಾಲಕನ ದೃಶ್ಯವನ್ನು ವಿಡಿಯೊ ಮಾಡುತ್ತಿದ್ದರೂ, ಆತ ಮಾತ್ರ ಯಾವುದನ್ನೂ ಗಮನಿಸದೆ ಶಾಲೆಗೆ ಹೊರಟಿರುವ ದೃಶ್ಯ ನಗು ತರಿಸುವಂತೆ ಮಾಡಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಜನರು ನಾನಾ ಬಗೆಯ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ನಗುವ ಇಮೋಜಿಗಳನ್ನು ಹಂಚಿಕೊಂಡರೆ, ಇತರರು ತಮ್ಮ ಬಾಲ್ಯದಲ್ಲಿ ನಡೆದ ಇದೇ ರೀತಿಯ ಘಟನೆಗಳ ಅನುಭವಗಳನ್ನು ಹಂಚಿಕೊಂಡರು. ಬಳಕೆದಾರರೊಬ್ಬರು ಬಾಲ್ಯವು ಆಕರ್ಷಕ ಅನಿರೀಕ್ಷಿತತೆಯಿಂದ ತುಂಬಿದೆ. ಅಲ್ಲಿ ಸಮಯವನ್ನು ಸಹ ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂದಿದ್ದಾರೆ. ಮತ್ತೊಬ್ಬರು ಬಾಲಕನ ಕರ್ತವ್ಯ, ಜವಾಬ್ದಾರಿಗೆ ಫಿದಾ ಆಗಿರುವುದಾಗಿ ತಿಳಿಸಿದ್ದಾರೆ.