ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

2 ಕೋಟಿ ರುಪಾಯಿ ಸಾಲ, ಮದುವೆ ಬೆದರಿಕೆ, ಮೊಬೈಲ್‌ ಬಳಕೆಗೆ ನಿರ್ಬಂಧ; ಗಾಜಿಯಾಬಾದ್‌ ಬಾಲಕಿಯರ ಸಾವಿಗೆ ಕಾರಣವಾದ ಅಂಶವೇನು?

Ghaziabad Tragedy: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಆನ್‌ಲೈನ್‌ ಗೇಮ್‌ನ ವ್ಯಸನಕ್ಕೆ ಒಳಗಾಗಿ ಮೂವರು ಅಪ್ರಾಪ್ತ ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆಯ ಬಗ್ಗೆ ಒಂದೊಂದೇ ಮಾಹಿತಿ ಹೊರ ಬರುತ್ತಿದೆ. ಮೃತ ಬಾಲಕಿಯ ಕುಟುಂಬ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ.

ಗಾಜಿಯಾಬಾದ್‌ ಬಾಲಕಿಯ ಸಾವಿಗೆ ಕಾರಣವಾದ ಅಂಶವೇನು?

ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡ ಕಟ್ಟಡ ಮತ್ತು ಡೆತ್‌ನೋಟ್‌ -

Ramesh B
Ramesh B Feb 5, 2026 10:44 AM

ಲಖನೌ, ಫೆ. 5: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಆನ್‌ಲೈನ್‌ ಗೇಮ್‌ನ ವ್ಯಸನಕ್ಕೆ ಒಳಗಾಗಿ ಮೂವರು ಅಪ್ರಾಪ್ತ ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆಯ ಆಘಾತದಿಂದ ದೇಶ ಇನ್ನೂ ಹೊರ ಬಂದಿಲ್ಲ (Ghaziabad Tragedy). ಗಾಜಿಯಾಬಾದ್‌ನ ಲೋನಿ ಪ್ರದೇಶದಲ್ಲಿನ ಟಿಲಾಮೋಸ್‌ ಪೊಲೀಸ್‌ ಠಾಣೆ ವ್ಯಾಪ್ತಿಗೆ ಸೇರಿದ ಭಾರತ್‌ ಸಿಟಿ ಸೊಸೈಟಿಯ ಬಹುಮಹಡಿ ಕಟ್ಟಡಗಳ ವಸತಿ ಸಂಕೀರ್ಣದಲ್ಲಿ ಈ ಘಟನೆ ನಡೆದಿದೆ. ಚೇತನ್‌ ಕುಮಾರ್‌ ಎಂಬವರ ಮಕ್ಕಳಾದ ಪಾಖಿ (12), ಪ್ರಾಚಿ (14) ಮತ್ತು ನಿಶಿಕಾ (16) ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆ ಬಗ್ಗೆ ಒಂದೊಂದೇ ರಹಸ್ಯ ಇದೀಗ ಹೊರ ಬರುತ್ತಿದೆ. ʼಕೊರಿಯನ್‌ ಲವರ್‌ ಗೇಮ್‌ʼ ಆಡುತ್ತಿದ್ದ ಈ ಮಕ್ಕಳ ಮೊಬೈಲ್‌ ಫೋನ್‌ ತೆಗೆದಿರಿಸಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಮೃತ ಬಾಲಕಿಯ ಕುಟುಂಬ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ. ಮೊಬೈಲ್‌ ಫೋನ್‌ ಬಳಕೆ ಮೇಲಿನ ನಿರ್ಬಂಧ, ಬಾಲಕಿಯರು ಟಾಸ್ಕ್‌ ಆಧಾರಿತ ಕೊರಿಯನ್‌ ಗೇಮ್‌ ವ್ಯಸನಕ್ಕೆ ಒಳಗಾದ ರೀತಿಯ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ.

ಮೂಲಗಳ ಪ್ರಕಾರ ಬಾಲಕಿಯರ ತಂದೆ ಸುಮಾರು 2 ಕೋಟಿ ರುಪಾಯಿ ಸಾಲ ಹೊಂದಿದ್ದರು. ಇದೇ ಕಾರಣಕ್ಕೆ ಅವರು ಬಾಲಕಿಯ ಫೋನ್‌ಗಳನ್ನು ಮಾರಾಟ ಮಾಡಿದ್ದರು. ಷೇರು ವ್ಯಾಪಾರಿ ಚೇತನ್‌ ಕುಮಾರ್‌ ಸಾಕಷ್ಟು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು, ವಿದ್ಯುತ್‌ ಬಿಲ್‌ ಪಾವತಿಸಲು ಮಕ್ಕಳ ಮೊಬೈಲ್‌ ಫೋನ್‌ ಮಾರಾಟ ಮಾಡಿದ್ದರು. ಅಲ್ಲದೆ ಅವರನ್ನು ಮದುವೆ ಮಾಡಿಸುವುದಾಗಿ ಬೆದರಿಕೆ ಒಡ್ಡಿದ್ದರು ಎನ್ನುವ ಮಾಹಿತಿ ತಿಳಿದು ಬಂದಿದೆ.

ಬಾಲಕಿಯ ಆತ್ಮಹತ್ಯೆ ಪ್ರಕರಣದ ಮಾಹಿತಿ:



ಘಟನೆ ನಡೆದ ಬುಧವಾರ (ಫೆಬ್ರವರಿ 4) ಚೇತನ್‌ ಮಕ್ಕಳಿಗೆ ಮೊಬೈಲ್‌ ನೀಡಿರಲಿಲ್ಲ. ಕೊರಿಯನ್‌ ಗೇಮ್‌ಗೆ ವಿಪರೀತ ದಾಸರಾಗಿದ್ದ ಸಹೋದರಿಯಲು ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೋವಿಡ್‌-19 ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಬಳಿಕ ಈ ಕುಟುಂಬದ ಆರ್ಥಿಕ ಸ್ಥಿತಿ ಹದಗೆಡುತ್ತ ಹೋಗಿದ್ದು, ಬಳಿಕ ಈ ಬಾಲಕಿಯರು ಶಾಲೆಗೆ ಹೋಗಿರಲಿಲ್ಲ ಎನ್ನುವ ವಿಚಾರವೂ ತಿಳಿದು ಬಂದಿದೆ.

ಮೂವರು ಬಾಲಕಿಯರ ಪ್ರಾಣ ತೆಗೆದ ಕೊರಿಯನ್ ಗೇಮ್‌; ಏನಿದು ಕೊಲ್ಲುವ ಆಟ?

ಸೋಶಿಯಲ್‌ ಮೀಡಿಯಾದಲ್ಲಿ ಕೊರಿಯನ್‌ ಹೆಸರು

ಬಾಲಕಿಯರು ಕೊರಿಯನ್‌ ಗೇಮ್‌ ಅನ್ನು ಎಷ್ಟು ಹಚ್ಚಿಕೊಂಡಿದ್ದರು ಎಂದರೆ ತಾವು ಕೊರಿಯನ್‌ನವರು ಎಂದೇ ಅವರು ಭಾವಿಸಿದ್ದರು. ನಿಶಿಕಾ, ಪ್ರಾಚಿ ಮತ್ತು ಪಾಖಿ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಖಾತೆಗೆ ಕ್ರಮವಾಗಿ ಕೊರಿಯನ್‌ ಹೆಸರು ಮಾರಿಯಾ, ಆಲಿಝಾ ಹಾಗೂ ಸಿಂಡಿ ಇಟ್ಟುಕೊಂಡಿದ್ದರು.

ಸುಮಾರು 10 ದಿನಗಳ ಹಿಂದೆ ಅವರ ತಂದೆ ಈ ಖಾತೆಯ ಬಗ್ಗೆ ತಿಳಿದುಕೊಂಡು ಅದನ್ನು ಡಿಲೀಟ್‌ ಮಾಡಿ ಅವರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದರು. ತಂದೆ ಮದುವೆ ಮಾಡಿಸುವುದಾಗಿ ಹೇಳಿದಾಗ ತಾವು ಭಾರತೀಯರಲ್ಲ, ಕೊರಿಯನ್‌ ಮೂಲದವರು ಎಂದಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.