ಕಾರ್ಮಿಕರೇ ಗಮನಿಸಿ; ಸೌಲಭ್ಯಕ್ಕಾಗಿ ಇಂದೇ ನೋಂದಣಿ ಮಾಡಿಕೊಳ್ಳಿ, ದಾಖಲೆಗಳೇನು ಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ
ನೀವು ಕಟ್ಟಡ ಅಥವಾ ಇತರ ನಿರ್ಮಾಣ ಸಂಬಂಧಿ ಕೆಲಸ ಮಾಡ್ತಾ ಇದ್ದೀರಾ? ಹಾಗಾದ್ರೆ ಸುದ್ದಿಯನ್ನು ತಪ್ಪದೇ ಓದಿ. 'ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ' ಕಾರ್ಮಿಕರ ಅನುಕೂಲಕ್ಕಾಗಿ ಹತ್ತು ಹಲವು ಸೌಲಭ್ಯಗಳನ್ನು ನೀಡ್ತಿದೆ. ಇದನ್ನು ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ.
ಸಂಗ್ರಹ ಚಿತ್ರ -
ಬೆಂಗಳೂರು: ನೀವು ಕಟ್ಟಡ ಅಥವಾ ಇತರ ನಿರ್ಮಾಣ ಸಂಬಂಧಿ ಕೆಲಸ ಮಾಡ್ತಾ ಇದ್ದೀರಾ? ಹಾಗಾದ್ರೆ ಸುದ್ದಿಯನ್ನು ತಪ್ಪದೇ ಓದಿ. 'ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ (Karnataka Labour welfare Board) ಮಂಡಳಿ' ಕಾರ್ಮಿಕರ ಅನುಕೂಲಕ್ಕಾಗಿ ಹತ್ತು ಹಲವು ಸೌಲಭ್ಯಗಳನ್ನು ನೀಡ್ತಿದೆ. ಆದ್ರೆ, ಈ ಸೌಲಭ್ಯಗಳೆಲ್ಲ ನಿಮಗೆ ಸಿಗಬೇಕು ಅಂದರೆ ಮೊದಲಿಗೆ ನೀವು ಕಾರ್ಮಿಕರಾಗಿ ರಿಜಿಸ್ಟರ್ ಮಾಡಿಕೊಳ್ಳಲೇಬೇಕು!
ನೋಂದಣಿಗೆ ಬೇಕಾದ ಅರ್ಹತೆಗಳು ಏನೇನು?
- ಮೊದಲನೆಯದಾಗಿ, ನೀವು ಕಟ್ಟಡ ಮತ್ತು ಇತರೆ ನಿರ್ಮಾಣ ವಲಯದ ಅಧಿಕೃತ ಕಾರ್ಮಿಕರಾಗಿರಬೇಕು.
- ನಿಮ್ಮ ವಯಸ್ಸು ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ ವಯಸ್ಸು 60 ವರ್ಷ ಮೀರಿರಬಾರದು.
- ಮತ್ತು ಅತ್ಯಂತ ಮುಖ್ಯವಾಗಿ, ಕಳೆದ 1 ವರ್ಷದಲ್ಲಿ ಕನಿಷ್ಠವೆಂದರೂ 90 ದಿನಗಳ ಕಾಲ ಕಟ್ಟಡ ಹಾಗೂ ಇತರೆ ನಿರ್ಮಾಣ ಕೆಲಸ ಮಾಡಿರಲೇಬೇಕು.
ಈ ನೋಂದಣಿಗೆ ಏನೇನು ದಾಖಲೆಗಳು ಬೇಕು?:
- ನೀವು ಕೆಲಸ ಮಾಡ್ತಾ ಇದ್ದೀರಿ ಅನ್ನೋದಕ್ಕೆ ಉದ್ಯೋಗ ದೃಢೀಕರಣ ಪತ್ರ.
- ಕಾರ್ಮಿಕರು ಹಾಗೂ ಅವರ ಮನೆಯವರ ಆಧಾರ್ ಕಾರ್ಡ್.
- ಕಾರ್ಮಿಕರ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.
- ಹಾಗೂ ನಿಮ್ಮ ಆಧಾರ್ಗೆ ಲಿಂಕ್ ಆಗಿರೋ ಫೋನ್ ನಂಬರ್. ಇಷ್ಟು ದಾಖಲೆಗಳು ಇದ್ದರೆ ಸಾಕು!
ನೋಂದಣಿ ಎಲ್ಲಿ ಮಾಡಿಸಬೇಕು?
ನಿಮ್ಮ ಹತ್ತಿರದ ಕಾರ್ಮಿಕ ನಿರೀಕ್ಷಕರ ಕಚೇರಿ ಅಥವಾ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಕಾರ್ಮಿಕ ಸೇವಾ ಕೇಂದ್ರಗಳಿಗೆ ನೇರವಾಗಿ ಭೇಟಿ ನೀಡಿ ಸುಲಭವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಈ ಕುರಿತು ಹೆಚ್ಚಿನ ಮಾಹಿತಿ ಏನಾದರೂ ಬೇಕಾದ್ರೆ ಕೂಡಲೇ 155214 ಉಚಿತ ಸಹಾಯವಾಣಿಗೆ ಕಾಲ್ ಮಾಡಿ! ಅಥವಾ ನಿಮ್ಮ ಹತ್ತಿರದ ಕಾರ್ಮಿಕ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಿ. ಇಂದೇ ನಿಮ್ಮ ಹೆಸರನ್ನು ನೋಂದಾಯಿಸಿ, ಸರ್ಕಾರದ ಸೌಲಭ್ಯಗಳ ಲಾಭ ಪಡೆಯಿರಿ.