ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Global Firepower Index 2025: ಜಾಗತಿಕ ಟಾಪ್ 10 ಸೇನಾ ವ್ಯವಸ್ಥೆಯಲ್ಲಿ ಭಾರತಕ್ಕೆ 5ನೇ ಸ್ಥಾನ

ದೇಶವೊಂದರ ಸಾಮರ್ಥ್ಯವನ್ನು ಅಳೆಯುವುದರಲ್ಲಿ ಆ ದೇಶದ ಸೇನಾ ಸಾಮರ್ಥ್ಯವೂ ಸಹ ಒಂದು ಮಾನದಂಡವಾಗಿರುತ್ತದೆ. ಈ ನಿಟ್ಟಿನಲ್ಲಿ ಗ್ಲೋಬಲ್ ಫೈರ್ ಪವರ್ ಇಂಡೆಕ್ಸ್ ಜಾಗತಿಕ ಟಾಪ್ 10 ಸೇನಾ ವ್ಯವಸ್ಥೆಯನ್ನುಯ ಹೊಂದಿರುವ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರ ವಿವರ ಇಲ್ಲಿದೆ...

ಸೇನಾ ವ್ಯವಸ್ಥೆಯಲ್ಲಿ ಭಾರತವೇ ಸ್ಟ್ರಾಂಗ್ ಗುರು! ಪಾಕ್ ಯಾವ ಸ್ಥಾನದಲ್ಲಿದೆ?

Profile Sushmitha Jain Feb 5, 2025 6:40 AM

ನವದೆಹಲಿ: ವಿಶ್ವದಲ್ಲೇ ಅತೀ ಬಲಿಷ್ಠ ಸೇನಾ ವ್ಯವಸ್ಥೆಯನ್ನು ಹೊಂದಿರುವ ದೇಶಗಳ ಪಟ್ಟಿ ಬಿಡುಗಡೆಗೊಂಡಿದ್ದು, ಇದರಲ್ಲಿ ಭಾರತ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಗ್ಲೋಬಲ್ ಫೈರ್ ಪವರ್ ಇಂಡೆಕ್ಸ್ 2025 (Global Firepower Index 2025) ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತ (India) ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸುವ ಮೂಲಕ, ಇತ್ತೀಚಿನ ವರ್ಷಗಳಲ್ಲಿ ಭಾರತದ ಭೂಸೇನೆ,(Army) ವಾಯುಸೇನೆ (Air Force) ಹಾಗೂ ನೌಕಾಪಡೆಯ (Navy) ಸಾಮರ್ಥ್ಯ ಗಣನೀಯವಾಗಿ ವೃದ್ಧಿಯಾಗಿರುವುದು ಸ್ಪಷ್ಟವಾಗಿದೆ. ಇದೇ ವೆಳೆ ನಮ್ಮ ನೆರೆಯ ರಾಷ್ಟ್ರ ಪಾಕ್ ಈ ಬಾರಿ 12ನೇ ಸ್ಥಾನಕ್ಕೆ ಕುಸಿದಿದ್ದು, ಕಳೆದ ವರ್ಷಕ್ಕೆ ಹೊಲಿಸಿದರೆ ಪಾಕ್ ನ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಪಾಕಿಸ್ಥಾನ ಕಳೆದ ಬಾರಿ 10ನೇ ಸ್ಥಾನದಲ್ಲಿತ್ತು.

ಸುಮಾರು 60 ಮಾನದಂಡಗಳನ್ನು ಇರಿಸಿಕೊಂಡು ಗ್ಲೋಬಲ್ ಫೈರ್ ಪವರ್ ಇಂಡೆಕ್ಸ್, ವಿವಿಧ ದೇಶಗಳ ಮಿಲಿಟರಿ ಸಾಮರ್ಥ್ಯವನ್ನು ಅಳೆಯುತ್ತದೆ. ಇದರಲ್ಲಿ ರಕ್ಷಣಾ ತಂತ್ರಜ್ಞಾನ, ಹಣಕಾಸಿನ ಮೂಲಗಳು, ಲಾಜಿಸ್ಟಿಕ್ಸ್, ಭೌಗೋಳಿಕತೆ ಮತ್ತು ತಂತ್ರಗಾರಿಕಾ ಸ್ಥಾನಗಳಂತ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ. ಈ ಪಟ್ಟಿಯಲ್ಲಿ ವಿಶ್ವದ ದೊಡ್ಡಣ್ಣ ಪ್ರಥಮ ಸ್ಥಾನದಲ್ಲಿದೆ.

ರಷ್ಯಾದ ಸೇನಾ ವ್ಯವಸ್ಥೆ (Russian army) ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಚೀನಾದ (China) ಸೇನೆ ಮೂರನೇ ಸ್ಥಾನದಲ್ಲಿದೆ. ಇದರ ಬೆನ್ನಲ್ಲೇ ಭಾರತೀಯ ಸೇನಾ ವ್ಯವಸ್ಥೆ ಇರುವುದು ವಿಶೇಷವಾಗಿದೆ. ಭಾರತದ ರಕ್ಷಣಾ ವ್ಯವಸ್ಥೆಗಳ ಉತ್ಪಾದನೆ ಮತ್ತು ರಕ್ಷಣಾ ವ್ಯವಸ್ಥೆಯಲ್ಲಿ ಸ್ವಾವಲಂಬನೆಗಳ ಮಟ್ಟವೂ ಸಹ ಸುಧಾರಿಸಿದೆ. ನಮ್ಮ ಸೇನಾ ವ್ಯವಸ್ಥೆಯ ವಿವಿಧ ವಿಭಾಗಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಸುಧಾರಣೆ ಮತ್ತು ಬೆಳವಣಿಗೆಗಳಾಗಿರುವುದು, ವಿಶ್ವದ ಪಟ್ಟಿಯಲ್ಲಿ ಭಾರತದ ಸ್ಥಾನದ ಏರಿಕೆಗೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.

ಈ ಪಟ್ಟಿಯಲ್ಲಿ ಇನ್ನೊಂದು ಗಮನಾರ್ಹ ಸ್ಥಾನ ಪಲ್ಲಟವೆಂದರೆ, ಫ್ರಾನ್ಸ್ (France) ದೇಶದ್ದು, ಕಳೆದ ವರ್ಷ ಫ್ರಾನ್ಸ್ ಈ ಪಟ್ಟಿಯಲ್ಲಿ ಹನ್ನೊಂದನೇ ಸ್ಥಾನದಲ್ಲಿತ್ತು, ಈ ಬಾರಿ ಫ್ರಾನ್ಸ್ ದೇಶದ ಸೇನಾ ವ್ಯವಸ್ಥೆ ಗಮನಾರ್ಹ ಸುಧಾರಣೆ ಕಂಡು ಏಳನೇ ಸ್ಥಾನಕ್ಕೇರಿದೆ. ಇದೇ ವೇಳೆ ಜಪಾನ್ ಈ ಪಟ್ಟಿಯಲ್ಲಿ ಒಂದು ಸ್ಥಾನವನ್ನು ಕುಸಿತ ಕಂಡು 8ನೇ ಸ್ಥಾನಕ್ಕಿಳಿದಿದೆ, ಕಳೆದ ವರ್ಷ ಜಪಾನ್ ಏಳನೇ ಸ್ಥಾನದಲ್ಲಿತ್ತು.



ಭಾರತದ ಸೇನಾ ವ್ಯವಸ್ಥೆಯ ಸಾಮರ್ಥ್ಯಗಳೇನು..?

ಸೇನೆಯಲ್ಲಿರುವ ಯೋಧರ ಸಂಖ್ಯೆಯಲ್ಲಿ ಭಾರತ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ, ನಮ್ಮ ಸೇನೆಯಲ್ಲಿ 14 ಲಕ್ಷದ 55 ಸಾವಿರದ 550 ಸಕ್ರಿಯ ಯೋಧರಿದ್ದರತೆ, 11 ಲಕ್ಷದ 55 ಸಾವಿರ ಮೀಸಲು ಯೋಧರ ಪಡೆ ನಮ್ಮ ಸೇನೆಯಲ್ಲಿದೆ.

ಇನ್ನು, ನಮ್ಮ ಸೇನೆಯಲ್ಲಿರುವ ಶಸ್ತ್ರಾಸ್ತ್ರ ಸಂಗ್ರಹಗಳ ಬಗ್ಗೆ ಮಾತನಾಡುವುದಿದ್ದರೆ, ಭಾರತದ ಬಳಿ ಟಿ-90 ಭೀಷ್ಮ ಮತ್ತು ಅರ್ಜುನ್ ಟ್ಯಾಂಕ್ ಗಳು, ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಪಿನಾಕಾ ರಾಕೆಟ್ ವ್ಯವಸ್ಥೆಗಳಂತಹ ಅತ್ಯಾಧುನಿಕ ಮಾದರಿಯ ಶಸ್ತ್ರಾಸ್ತ್ರಗಳು ನಮ್ಮ ಸೇನಾ ಬತ್ತಳಿಕೆಯಲ್ಲಿವೆ. ಇನ್ನು ನಮ್ಮ ವಾಯು ಪಡೆ ತನ್ನ ಶಸ್ತ್ರಾಸ್ತ್ರ ಸಂಗ್ರಹಗಳನ್ನು ಮತ್ತು ಆಧುನಿಕರ ರಕ್ಷಣಾ ತಂತ್ರಜ್ಞಾನಗಳನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದು, ನಮ್ಮ ವಾಯುಸೇನೆಯ ಬಳಿ 2,229 ವಿಮಾನಗಳಿವೆ, ಇದರಲ್ಲಿ 600 ಫೈಟರ್ ಜೆಟ್ ಗಳಿವೆ. 899 ಹೆಲಿಕಾಫ್ಟರ್ ಗಳಿದ್ದು, 831 ಬೆಂಬಲ ವಿಮಾನಗಳಿವೆ.

ಇನ್ನು, ಭಾರತೀಯ ನೌಕಾದಳವೂ ಸಹ ತನ್ನ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದು, ನಮ್ಮ ನೌಕಾ ಪಡೆಯ ಬಳಿ 1 ಲಕ್ಷದ 42 ಸಾವಿರದ 251 ಯುದ್ಧ ನೌಕೆಗಳು ಹಾಗೂ 150 ಸಬ್ ಮೆರೈನ್ ಗಳಿವೆ.

ಇದನ್ನೂ ಓದಿ: Mahakumbh 2025: ಮಹಾಕುಂಭ ಮೇಳದ ಕಾಲ್ತುಳಿತದ ನಂತರ 15 ಸಾವಿರ ಜನ ಮಿಸ್ಸಿಂಗ್?



ಪಾಕಿಸ್ಥಾನದ ಸೇನಾ ಸಾಮರ್ಥ್ಯಗಳೇನು?

ಸೇನಾ ಸಾಮರ್ಥ್ಯದ ವಿಚಾರಕ್ಕೆ ಬಂದಾಗ ಭಾರತೀಯರಲ್ಲಿ ಮೂಡುವ ಮೊದಲ ಪ್ರಶ್ನೆಯೆಂದರೆ, ನಮ್ಮ ಶತ್ರುರಾಷ್ಟ್ರ ಪಾಕಿಸ್ಥಾನದ ಸೇನಾ ಸಾಮರ್ಥ್ಯ ಎಷ್ಟಿದೆ? ಎಂಬುದಾಗಿದೆ. ಫೈರ್ ಪವರ್ ಇಂಡೆಕ್ಸ್ ಪ್ರಕಾರ, ಒಟ್ಟು ಎಂಟು ಮಾನದಂಡಗಳಲ್ಲಿ ಪಾಕಿಸ್ಥಾನ ಭಾರತಕ್ಕಿಂತ ಕೇವಲ ಎರಡರಲ್ಲಷ್ಟೇ ಮುಂದಿದೆ. ಅವುಗಳೆಂದರೆ, ಭೂ ಸೇನಾ ಸಾಮರ್ಥ್ಯ ಮತ್ತು ಭೌಗೋಳಿಕತೆ. ಪಾಕ್ ಸೇನೆಯಲ್ಲಿ 6 ಲಕ್ಷದ 54 ಸಾವಿರ ಯೋಧರಿದ್ದಾರೆ. ಆದರೆ ರಕ್ಷಣಾ ಬಜೆಟ್ ವಿಷಯದಲ್ಲಿ ಪಾಕ್ ಭಾರತಕ್ಕಿಂತ ಬಹಳಷ್ಟು ಹಿಂದಿದೆ. ಇನ್ನು ವಾಯು ಪಡೆಯನ್ನು ಹೋಲಿಕೆ ಮಾಡುವುದಾದರೆ, ಪಾಕ್ ಬಳಿ 1,399 ವಿಮಾನಗಳಿವೆ, ಇದರಲ್ಲಿ 328 ಫೈಟರ್ ಜೆಟ್ ಗಳಿವೆ. ನೌಕಾ ಪಡೆ ಸಾಮರ್ಥ್ಯವನ್ನು ನೋಡುವುದಾದರೆ, ಪಾಕ್ ಬಳಿ ಏರ್ ಕ್ರಾಫ್ಟ್ ಸಾಗಾಟದ ನೌಕೆಗಳಲ್ಲಿ, ಆ ವಿಚಾರದಲ್ಲಿ ಭಾರತವೇ ಮುಂದಿದೆ. ಇನ್ನು ಭಾರತದ ಬಳಿ 18 ಸಬ್ ಮೆರೈನ್ ಗಳಿದ್ದರೆ, ಪಾಕ್ ಬಳಿ ಕೇವಲ 8 ಸಬ್ ಮೆರೈನ್ ಗಳಿವೆ.

ಸೇನಾ ವ್ಯವಸ್ಥೆಯಲ್ಲಿ ಟಾಪ್ 10 ರಾಷ್ಟ್ರಗಳ ಪಟ್ಟಿ ಇಲ್ಲಿದೆ:

ಅಮೆರಿಕಾ

ರಷ್ಯಾ

ಚೀನಾ

ಇಂಡಿಯಾ

ದಕ್ಷಿಣ ಕೊರಿಯಾ

ಯುನೈಟೆಡ್ ಕಿಂಗ್ಡಂ

ಫ್ರಾನ್ಸ್

ಜಪಾನ್

ಟರ್ಕಿ

ಇಟಲಿ