ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Air India Plain Crash: ʼಹೆಂಡತಿ, ಮಗುವಿನೊಂದಿಗೂ ಮಾತನಾಡಲಾಗುತ್ತಿಲ್ಲʼ; ಏರ್ ಇಂಡಿಯಾ ದುರಂತದಲ್ಲಿ ಬದುಕುಳಿದಿದ್ದ ವ್ಯಕ್ತಿ ಹೇಳಿದ್ದೇನು?

ಜೂನ್ 12 ರಂದು ಅಹಮದಾಬಾದ್‌ನಲ್ಲಿ 241 ಜೀವಗಳನ್ನು ಬಲಿತೆಗೆದುಕೊಂಡ ಏರ್ ಇಂಡಿಯಾ (Air India) ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಶ್‌ಕುಮಾರ್ ರಮೇಶ್ ತಮ್ಮ ಜೀವನ ಅತ್ಯಂತ ಕಷ್ಟಕರ ದಿನಗಳ ಕುರಿತು ಮಾತನಾಡಿದ್ದಾರೆ. ರಮೇಶ್ ಅವರಿಗೆ ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿಟಿಎಸ್‌ಡಿ) ಇರುವುದು ಪತ್ತೆಯಾಗಿದೆ ಆದರೆ ಭಾರತದಿಂದ ಲೀಸೆಸ್ಟರ್‌ಗೆ ಹಿಂದಿರುಗಿದಾಗಿನಿಂದ ಚಿಕಿತ್ಸೆ ಪಡೆದಿಲ್ಲ ಎಂದು ತಿಳಿದು ಬಂದಿದೆ. ಅಹಮದಾಬಾದ್‌ನಿಂದ ಲಂಡನ್‌ಗೆ ಹಾರುತ್ತಿದ್ದ ಏರ್‌ ಇಂಡಿಯಾ ವಿಮಾನವು ಟೇಕ್ ಆಫ್ ಆದ ತಕ್ಷಣವೇ ಪತನಗೊಂಡಿತು. ಅಹಮದಾಬಾದ್​​ ವಿಮಾನ ನಿಲ್ದಾಣದಿಂದ ಲಂಡನ್​ಗೆ ಹೊರಟಿದ್ದ ವಿಮಾನವು ಹಾರಾಟ ನಡೆಸಿದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿತ್ತು.

ಏರ್ ಇಂಡಿಯಾ ದುರಂತದಲ್ಲಿ ಬದುಕುಳಿದ ವ್ಯಕ್ತಿ ಹೇಳಿದ್ದೇನು?

ಏರ್‌ ಇಂಡಿಯಾ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ; ಫೋಟೋ ಸಂಗ್ರಹ -

Vishakha Bhat Vishakha Bhat Nov 3, 2025 5:36 PM

ನವದೆಹಲಿ: ಜೂನ್ 12 ರಂದು ಅಹಮದಾಬಾದ್‌ನಲ್ಲಿ 241 ಜೀವಗಳನ್ನು ಬಲಿತೆಗೆದುಕೊಂಡ ಏರ್ ಇಂಡಿಯಾ (Air India) ವಿಮಾನ ಅಪಘಾತದಲ್ಲಿ (Air India Plain Crash) ಬದುಕುಳಿದ ಏಕೈಕ ವ್ಯಕ್ತಿ ವಿಶ್ವಶ್‌ಕುಮಾರ್ ರಮೇಶ್ ತಮ್ಮ ಜೀವನ ಅತ್ಯಂತ ಕಷ್ಟಕರ ದಿನಗಳ ಕುರಿತು ಮಾತನಾಡಿದ್ದಾರೆ. ಅಪಘಾತದ ಬಳಿಕ ತಮಗಾದ ದೈಹಿಕ ಹಾಗೂ ಮಾನಸಿಕ ಯಾತನೆ ಕುರಿತು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ವಿಮಾನ ಅಪಘಾತದ ಬಳಿಕ ಅವರ ಕುಟುಂಬಕ್ಕಾದ ನಷ್ಟದ ಕುರಿತು ಅವರು ಬಿಚ್ಚಿಟ್ಟಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಾನು ಒಬ್ಬಂಟಿಯಾಗಿಯೇ ಇದ್ದೇನೆ ಮತ್ತು ತನ್ನ ಹೆಂಡತಿ ಮತ್ತು ಮಗನೊಂದಿಗೆ ಮಾತನಾಡುತ್ತಿಲ್ಲ ಎಂದು ಅವರು ಹೇಳಿದರು.

ಬ್ರಿಟಿಷ್ ಪ್ರಜೆಯಾಗಿರುವ ರಮೇಶ್‌, ಅಪಾರ ನೋವನ್ನು ಹಂಚಿಕೊಂಡಿದ್ದಾರೆ. ಅದೇ ವಿಮಾನದಲ್ಲಿದ್ದ ಅವರ ಕಿರಿಯ ಸಹೋದರ ಅಜಯ್ ಸಹ ಅಪಘಾತದಲ್ಲಿ ಮೃತಪಟ್ಟಿದ್ದರು. ನಾನೊಬ್ಬನೇ ಬದುಕುಳಿದವನು. ಆದರೂ, ನಾನು ಅದನ್ನು ನಂಬುವುದಿಲ್ಲ. ಇದು ಒಂದು ಪವಾಡ" ಎಂದು ಅವರು ಹೇಳಿದ್ದಾರೆ. ಸಹೋದರನ ನಷ್ಟ ನನ್ನ ಜೀವನವನ್ನು ಶೂನ್ಯವನ್ನಾಗಿಸಿದೆ. ಈಗ ನಾನು ಒಬ್ಬಂಟಿಯಾಗಿದ್ದೇನೆ. ನಾನು ನನ್ನ ಕೋಣೆಯಲ್ಲಿ ಒಬ್ಬಂಟಿಯಾಗಿ ಕುಳಿತುಕೊಳ್ಳುತ್ತೇನೆ, ನನ್ನ ಹೆಂಡತಿ, ನನ್ನ ಮಗನೊಂದಿಗೆ ಮಾತನಾಡುವುದಿಲ್ಲ. ನನ್ನ ಮನೆಯಲ್ಲಿ ಒಬ್ಬಂಟಿಯಾಗಿರಲು ನಾನು ಇಷ್ಟಪಡುತ್ತೇನೆ ಎಂದರು.

ಈ ಸುದ್ದಿಯನ್ನೂ ಓದಿ: Fire Accident: ತಪ್ಪಿದ ಭಾರೀ ದುರಂತ; ಏರ್‌ ಇಂಡಿಯಾ ವಿಮಾನದ ಬಳಿಯೇ ಸುಟ್ಟು ಕರಕಲಾದ ಬಸ್‌

ರಮೇಶ್ ಅವರಿಗೆ ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿಟಿಎಸ್‌ಡಿ) ಇರುವುದು ಪತ್ತೆಯಾಗಿದೆ ಆದರೆ ಭಾರತದಿಂದ ಲೀಸೆಸ್ಟರ್‌ಗೆ ಹಿಂದಿರುಗಿದಾಗಿನಿಂದ ಅವರು ಚಿಕಿತ್ಸೆ ಪಡೆದಿಲ್ಲ ಎಂದು ತಿಳಿದು ಬಂದಿದೆ. "ಈ ಅಪಘಾತದ ನಂತರ ನನಗೆ ಮತ್ತು ನನ್ನ ಕುಟುಂಬಕ್ಕೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಇದು ತುಂಬಾ ಕಷ್ಟಕರವಾಗಿದೆ. ಕಳೆದ ನಾಲ್ಕು ತಿಂಗಳುಗಳಲ್ಲಿ, ನನ್ನ ತಾಯಿ ಪ್ರತಿದಿನ ಬಾಗಿಲಿನ ಹೊರಗೆ ಮಾತನಾಡದೆ, ಏನೂ ಮಾಡದೆ ಕುಳಿತಿರುತ್ತಾರೆ. ನಾನು ಬೇರೆಯವರೊಂದಿಗೆ ಮಾತನಾಡುತ್ತಿಲ್ಲ. ನನಗೆ ಬೇರೆಯವರೊಂದಿಗೆ ಮಾತನಾಡಲು ಇಷ್ಟವಿಲ್ಲ. ನನಗೆ ಹೆಚ್ಚು ಮಾತನಾಡಲು ಸಾಧ್ಯವಿಲ್ಲ. ನಾನು ರಾತ್ರಿಯಿಡೀ ಯೋಚಿಸುತ್ತಿದ್ದೇನೆ, ನಾನು ಮಾನಸಿಕವಾಗಿ ಬಳಲುತ್ತಿದ್ದೇನೆ. ಇಡೀ ಕುಟುಂಬಕ್ಕೆ ಪ್ರತಿದಿನ ನೋವಿನಿಂದ ಕೂಡಿದೆ ಎಂದು ಅವರು ಹೇಳಿದ್ದಾರೆ.

ಏನಿದು ಘಟನೆ?

ಜೂನ್ 12, 2025 ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹಾರುತ್ತಿದ್ದ ಏರ್‌ ಇಂಡಿಯಾ ವಿಮಾನವು ಟೇಕ್ ಆಫ್ ಆದ ತಕ್ಷಣವೇ ಪತನಗೊಂಡಿತು. ಅಹಮದಾಬಾದ್​​ ವಿಮಾನ ನಿಲ್ದಾಣದಿಂದ ಲಂಡನ್​ಗೆ ಹೊರಟಿದ್ದ ವಿಮಾನವು ಹಾರಾಟ ನಡೆಸಿದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿತ್ತು. ಇದರಲ್ಲಿ 169 ಭಾರತೀಯರು, 53 ವಿದೇಶಿ ಪ್ರಜೆಗಳು ಇದ್ದರು. ವಿಮಾನದ ಎರಡೂ ಎಂಜಿನ್‌ಗಳು ಹಾರಿದ ಕೇವಲ 32 ಸೆಕೆಂಡ್‌ಗಳಲ್ಲಿ ಸ್ಥಗಿತಗೊಂಡಿದ್ದವು ಎಂದು ಪ್ರಾಥಮಿಕ ವರದಿಯು ತಿಳಿಸಿದೆ. ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಹತ್ತಿರದ ವೈದ್ಯಕೀಯ ವಸತಿಗೃಹ ಕಟ್ಟಡಕ್ಕೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಒಟ್ಟು 241 ಮಂದಿ ಮೃತಪಟ್ಟಿದ್ದು, ಕ್ತಿ ವಿಶ್ವಶ್‌ಕುಮಾರ್ ರಮೇಶ್ ಎಂಬುವವರು ಮಾತ್ರ ಬದುಕುಳಿದಿದ್ದರು.