ಪಣಜಿ, ಡಿ. 22: ಡಿಸೆಂಬರ್ 6ರಂದು 25 ಜನರ ಸಾವಿಗೆ ಕಾರಣವಾದ ಗೋವಾದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ (Goa Night Club Tragedy) ಮಾಲಕರಾದ ಸೌರಭ್ ಲೂಥ್ರಾ ಮತ್ತು ಗೌರವ್ ಲೂಥ್ರಾ (Luthra Brothers) ಅವರ ಪೊಲೀಸ್ ಕಸ್ಟಡಿಯನ್ನು, ಗೋವಾ ನ್ಯಾಯಾಲಯ ಸೋಮವಾರ (ಡಿಸೆಂಬರ್ 22) ಐದು ದಿನಗಳ ಕಾಲ ವಿಸ್ತರಿಸಿದೆ. ದುರ್ಘಟನೆಯ ನಂತರ ಸಹೋದರರು ಥೈಲ್ಯಾಂಡ್‌ಗೆ ಪಲಾಯನ ಮಾಡಿದ್ದರು.
ಡಿಸೆಂಬರ್ 17ರಂದು ಆ ದೇಶದಿಂದ ಅವರನ್ನು ಭಾರತಕ್ಕೆ ಕರೆ ತರಲಾಯಿತು. ನ್ಯಾಯಾಲಯವು ಸೌರಭ್ ಲೂಥ್ರಾ ಮತ್ತು ಗೌರವ್ ಲೂಥ್ರಾ ಅವರ ಪೊಲೀಸ್ ಕಸ್ಟಡಿಯನ್ನು ಐದು ದಿನಗಳವರೆಗೆ ವಿಸ್ತರಿಸಿದೆ ಎಂದು ಸಂತ್ರಸ್ತರ ಕುಟುಂಬವನ್ನು ಪ್ರತಿನಿಧಿಸುವ ವಕೀಲ ವಿಷ್ಣು ಜೋಶಿ ಹೇಳಿದ್ದಾರೆ.
ಕ್ಲಬ್‌ನ ಸಹಮಾಲಕ ಅಜಯ್ ಗುಪ್ತಾ ಅವರನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಜೋಶಿ ಹೇಳಿದರು. ಅಂಜುನಾ ಪೊಲೀಸರು ಲೂಥ್ರಾ ಸಹೋದರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ಸಂಬಂಧ ಈವರೆಗೆ ಎಂಟು ಜನರನ್ನು ಬಂಧಿಸಲಾಗಿದ್ದು, ಇಂಗ್ಲೆಂಡ್‌ಗೆ ಪರಾರಿಯಾಗಿರುವ ಆರೋಪಿ ಬ್ರಿಟಿಷ್ ಪ್ರಜೆ ಸುರಿಂದರ್ ಕುಮಾರ್ ಖೋಸ್ಲಾ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡುವ ಪ್ರಕ್ರಿಯೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ.
ಗೋವಾ ನೈಟ್‌ಕ್ಲಬ್ ದುರಂತ: ಲೂತ್ರಾ ಸಹೋದರರು ಪರಾರಿ
ಇನ್ನು ಗೋವಾ ನೈಟ್ ಕ್ಲಬ್ ದುರಂತಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್ ಕ್ಲಬ್‌ನ ಮಾಲಕರಾದ ಸೌರವ್ ಮತ್ತು ಗೌರವ್ ಲೂಥ್ರಾ ಅವರನ್ನು ಪೊಲೀಸರು ಬಳಿಕ ಥಾಯ್ಲೆಂಡ್‌ನಿಂದ ಬಂಧಿಸಿ ಭಾರತಕ್ಕೆ ಕರೆತಂದಿದ್ದರು. ಆದರೆ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ತನಿಖಾಧಿಕಾರಿಗಳ ಜತೆ ಲೂಥ್ರಾ ಬ್ರದರ್ಸ್ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಹೇಳಲಾಗಿದೆ.
ಇಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ ತಕ್ಷಣ ಲೂಥ್ರಾ ಬ್ರದರ್ಸ್ ಥಾಯ್ಲೆಂಡ್‌ಗೆ ಪರಾರಿಯಾಗಿದ್ದರು. ಬಳಿಕ ಅವರನ್ನು ಡಿ. 16ರಂದು ಭಾರತಕ್ಕೆ ಕರೆತರಲಾಗಿತ್ತು. ಇಲ್ಲಿ ಅವರಿಗೆ ಐದು ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿತ್ತು.
ಗೋವಾ ನೈಟ್ ಕ್ಲಬ್ ಅಗ್ನಿ ದುರಂತ: ಬೆಂಕಿ ಕಾಣಿಸಿಕೊಳ್ಳಲು ಕಾರಣವಾದ ವಿಡಿಯೊ ಇಲ್ಲಿದೆ
ತನಿಖೆಯ ಸಂದರ್ಭದಲ್ಲಿ ಲೂಥ್ರಾ ಸಹೋದರರು ಗೋವಾ ಪೊಲೀಸರಿಗೆ ಹಾರಿಕೆಯ ಉತ್ತರವನ್ನು ನೀಡುತ್ತಿದ್ದರು ಎನ್ನಲಾಗಿದೆ. ಪ್ರತೀ ಗಂಟೆಗೊಮ್ಮೆ ಲೂಥ್ರಾ ಸಹೋದರರು ಏನಾದರೊಂದು ಅನಾರೋಗ್ಯದ ಕುಂಟುನೆಪ ಹೇಳುತ್ತಿದ್ದರು. ಬೆನ್ನು ನೋವು, ಎದೆ ನೋವು, ಕಾಲು ನೋವೆಂದು ತನಿಖೆಗೆ ಅಡ್ಡಗಾಲು ಹಾಕುತ್ತಿದ್ದರು. ಆದರೆ ವೈದ್ಯಕೀಯ ಪರೀಕ್ಷೆಗಳ ಸಂದರ್ಭದಲ್ಲಿ ಅವರಲ್ಲಿ ಅಂತಹ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲವೆಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಲೂಥ್ರಾ ಸಹೋದರರು ಥಾಯ್ಲೆಂಡ್‌ಗೆ ಪರಾರಿಯಾದ ಬಳಿಕವೂ ಗೋವಾ ಪೊಲೀಸರು ಅವರನ್ನು ಸಂಪರ್ಕಿಸಿ, ಭಾರತಕ್ಕೆ ವಾಪಾಸಾಗಿ ತನಿಖೆಗೆ ಸಹಕರಿಸುವಂತೆ ಕೇಳಿಕೊಂಡಿದ್ದರು. ಆದರೆ ಪೊಲೀಸರ ಈ ಮನವಿಯನ್ನು ಅವರಿಬ್ಬರೂ ಕ್ಯಾರೇ ಅಂದಿರಲಿಲ್ಲ. ತಮ್ಮ ಮಾಲಕತ್ವದ ಕ್ಲಬ್‌ನಲ್ಲಿ ದುರಂತ ಸಂಭವಿಸಿದ, 25 ಜನರ ಸಾವು ಸಂಭವಿಸಿದ್ದರೂ ಅವರಿಗೆ ಯಾವುದೇ ಬೇಸರವಿರಲಿಲ್ಲ.