ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗ್ರೇಟ್ ನಿಕೋಬಾರ್ ಯೋಜನೆ ಸ್ಥಳೀಯರ ಮೇಲಿನ ನೇರ ದಾಳಿ: ರಾಹುಲ್ ಗಾಂಧಿ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ದಕ್ಷಿಣದ ತುದಿಯಲ್ಲಿರುವ ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ಅಂತಾರಾಷ್ಟ್ರೀಯ ಹಡಗು ರವಾನೆ ಕೇಂದ್ರ, ವಿಮಾನ ನಿಲ್ದಾಣ, ವಿದ್ಯುತ್ ಸ್ಥಾವರ ಮತ್ತು ಟೌನ್‌ಶಿಪ್‌ ನಿರ್ಮಿಸಲು ಕೇಂದ್ರ ಸರ್ಕಾರ ರೂಪಿಸಿರುವ ಗ್ರೇಟ್ ನಿಕೋಬಾರ್ ಯೋಜನೆಯು ಪ್ರಕೃತಿ ಮತ್ತು ಬುಡಕಟ್ಟು ಜನಾಂಗದ ಮೇಲೆ ನಡೆಸುತ್ತಿರುವ ದಾಳಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಬುಧವಾರ ಟೀಕಿಸಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾದ ಸುಮಾರು 72,000 ರಿಂದ 81,000 ಕೋಟಿ ರೂ. ವೆಚ್ಚದ ಗ್ರೇಟ್ ನಿಕೋಬಾರ್ ಯೋಜನೆಯು (Great Nicobar project) ಪ್ರಕೃತಿ ಮತ್ತು ಬುಡಕಟ್ಟು ಜನಾಂಗದ ಮೇಲೆ ನಡೆಸುತ್ತಿರುವ ದಾಳಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ (Leader of Opposition) ರಾಹುಲ್ ಗಾಂಧಿ (Rahul Gandhi) ಟೀಕಿಸಿದ್ದಾರೆ. ಲೋಕಸಭೆಯಲ್ಲಿ (Loksabha) ಬುಧವಾರ ಮಾತನಾಡಿದ ಅವರು ಈ ಯೋಜನೆಯಡಿಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ದಕ್ಷಿಣದ ತುದಿಯಲ್ಲಿರುವ ಗ್ರೇಟ್ ನಿಕೋಬಾರ್ (Great Nicobar Island) ದ್ವೀಪದಲ್ಲಿ ಅಂತಾರಾಷ್ಟ್ರೀಯ ಹಡಗು ರವಾನೆ ಕೇಂದ್ರ, ವಿಮಾನ ನಿಲ್ದಾಣ, ವಿದ್ಯುತ್ ಸ್ಥಾವರ ಮತ್ತು ಟೌನ್‌ಶಿಪ್‌ಗಳನ್ನು ನಿರ್ಮಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಅವರು ತಿಳಿಸಿದರು.

ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ಕೇಂದ್ರದ ಮೆಗಾ ಯೋಜನೆಯು ದುರ್ಬಲವಾದ ಪರಿಸರ ವ್ಯವಸ್ಥೆ ಮತ್ತು ಸ್ಥಳೀಯ ಸಮುದಾಯಗಳ ಮೇಲಿನ ನೇರ ದಾಳಿಯಾಗಿದೆ. ಇದರಿಂದ ಪರಿಸರ ಹಾನಿ ಮತ್ತು ಸ್ಥಳೀಯರ ಸ್ಥಳಾಂತರ ಆರ್ಥಿಕ ಲಾಭಕ್ಕಿಂತ ಹೆಚ್ಚು ನಷ್ಟವನ್ನು ಉಂಟು ಮಾಡಬಹುದು ಎಂದು ಹೇಳಿದ್ದಾರೆ.

ಬಹುನಿರೀಕ್ಷಿತ ಎಕ್ಸಿಟ್‌ ಪೋಲ್‌ ರಿಸಲ್ಟ್‌ ಔಟ್‌; ಯಾರಿಗೆ ಯಾವ ರಾಜ್ಯ? ಮುಂದುವರಿಯಲಿದೆ ಎನ್‌ಡಿಎ ಮ್ಯಾಜಿಕ್: ಪಶ್ಚಿಮ ಬಂಗಾಳದಲ್ಲಿ ದೀದಿ ಸರ್ಕಾರ ಅಂತ್ಯ

ಗ್ರೇಟ್ ನಿಕೋಬಾರ್‌ ಮೂಲಸೌಕರ್ಯ ಯೋಜನೆ ನಮ್ಮ ಜೀವಿತಾವಧಿಯಲ್ಲಿ ದೇಶದ ನೈಸರ್ಗಿಕ ಮತ್ತು ಬುಡಕಟ್ಟು ಪರಂಪರೆಯ ವಿರುದ್ಧ ನಡೆಯುವ ಅತಿದೊಡ್ಡ ಹಗರಣ ಮತ್ತು ಅತ್ಯಂತ ಗಂಭೀರ ಅಪರಾಧಗಳಲ್ಲಿ ಒಂದಾಗಿದೆ ಎಂದು ಹೇಳಿದ ಅವರು, ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆ ಅಭಿವೃದ್ಧಿ ಹೆಸರಿನಲ್ಲಿ ನಡೆಯುವ ವಿನಾಶ ಎಂದು ತಿಳಿಸಿದರು.

ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಈ ಕುರಿತು ಬರೆದಿರುವ ಅವರು, ಸರ್ಕಾರ ಇಲ್ಲಿ ಮಾಡುವುದನ್ನು ಯೋಜನೆ ಎಂದು ಕರೆಯುತ್ತದೆ. ನಾನು ನೋಡುತ್ತಿರುವುದು ಯೋಜನೆಯಲ್ಲ. ಲಕ್ಷಾಂತರ ಮರಗಳ ಬಲಿ. 160 ಚದರ ಕಿಲೋ ಮೀಟರ್ ಮಳೆಕಾಡಿನ ಸಾವಿನ ಶಿಕ್ಷೆ ಎಂದರು.

ಗ್ರೇಟ್ ನಿಕೋಬಾರ್ ದ್ವೀಪದ ಕಾಡುಗಳಿಗೆ ಹಿಂದೆ ಭೇಟಿ ನೀಡಿರುವುದನ್ನು ನೆನಪಿಸಿಕೊಂಡ ಅವರು, ಅಲ್ಲಿನ ಮರಗಳು ತುಂಬಾ ಹಳೆಯವು. ಅನೇಕ ತಲೆಮಾರುಗಳಿಂದ ಪೋಷಿಸಲ್ಪಟ್ಟ ಈ ಕಾಡುಗಳು ದ್ವೀಪದಲ್ಲಿ ವಾಸಿಸುವ ಸುಂದರ ಜನರಿಗಾಗಿ. ಈಗ ಅದನ್ನು ಅವರಿಂದ ದೋಚಲಾಗುತ್ತಿದೆ. ಈ ಯೋಜನೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಅನುಮತಿ ನೀಡಿದೆ. ಇದನ್ನು ಕಾಂಗ್ರೆಸ್ ಈ ಹಿಂದೆ ಅರ್ಧ ಬೇಯಿಸಿದ ಯೋಜನೆ ಎಂದು ಬಣ್ಣಿಸಿತ್ತು ಎಂದು ತಿಳಿಸಿದರು.

ಮೇ 1ರಿಂದ ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್‌ ನಿಯಮದಲ್ಲಿ ಬದಲಾವಣೆ; ಏನೆಲ್ಲ ಬದಲಾಗಲಿದೆ?

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ದಕ್ಷಿಣ ತುದಿಯಲ್ಲಿ ಟ್ರಾನ್ಸ್‌ಶಿಪ್‌ಮೆಂಟ್ ಮತ್ತು ಲಾಜಿಸ್ಟಿಕ್ಸ್ ಹಬ್ ನಿರ್ಮಿಸುವ ಯೋಜನೆಯ ಕುರಿತು ಈ ಹಿಂದೆ ಟೀಕಿಸಿದ್ದ ಸೋನಿಯಾ ಗಾಂಧಿ, ಇದನ್ನು ಮರು ಪರಿಶೀಲಿಸುವಂತೆ ಒತ್ತಾಯಿಸಿದ್ದರು.

ವಿದ್ಯಾ ಇರ್ವತ್ತೂರು

View all posts by this author