ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭೂ ವೀಕ್ಷಣಾ ಉಪಗ್ರಹವನ್ನು ಹೊತ್ತೊಯ್ದ GSLV F17 ರಾಕೆಟ್ ಯಶಸ್ವಿಯಾಗಿ ಉಡಾಯಿಸಿದ ಇಸ್ರೋ

GSLV F17: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೋ ಶುಕ್ರವಾರ ಬೆಳಗ್ಗಿನ ಜಾವ EOS-05 ಭೂ ವೀಕ್ಷಣಾ ಉಪಗ್ರಹ ಯಶಸ್ವಿಯಾಗಿ ತನ್ನ ಕಕ್ಷೆ ಸೇರಿದೆ. ಇದನ್ನು ಶ್ರೀಹರಿಕೋಟಾದಿಂದ ಜಿಎಸ್ಎಲ್ವಿ-ಎಫ್17 ರಾಕೆಟ್ ಮೂಲಕ ಉಡಾವಣೆ ಮಾಡಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಡಾ. ವಿ. ನಾರಾಯಣನ್ ತಿಳಿಸಿದ್ದಾರೆ.

ಇಸ್ರೋ GSLV F17 ರಾಕೆಟ್ ಉಡಾವಣೆ ಯಶಸ್ವಿ

ಸಂಗ್ರಹ ಚಿತ್ರ -

ಆಂಧ್ರಪ್ರದೇಶ: ಭೂ ವೀಕ್ಷಣಾ ಉಪಗ್ರಹ EOS-05 (Satellite EOS-05) ಅನ್ನು ಜಿಎಸ್ಎಲ್ವಿ-ಎಫ್17 ರಾಕೆಟ್ (GSLV F17 rocket) ಮೂಲಕ ಶುಕ್ರವಾರ ಬೆಳಗ್ಗಿನ ಜಾವ ಆಂಧ್ರಪ್ರದೇಶದ ಶ್ರೀಹರಿಕೋಟಾ ( Sriharikota) ಬಾಹ್ಯಾಕಾಶ ನಿಲ್ದಾಣದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಮಾಡಿದೆ.ಜಿಎಸ್ಎಲ್ವಿ-ಎಫ್17 ರಾಕೆಟ್ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 2:55ಕ್ಕೆ ಸರಿಯಾಗಿ ಉಡಾವಣೆ ಮಾಡಲಾಯಿತು. ರಾಕೆಟ್ ಉಡಾವಣೆಯಾದ ಕೂಡಲೇ, ಇಒಎಸ್-05 ಉಪಗ್ರಹವನ್ನು ಅದರ ಉದ್ದೇಶಿತ ಸಬ್ ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಡಾ. ವಿ. ನಾರಾಯಣನ್ (Science and Technology Minister Jitendra Singh) ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ಜಿಎಸ್ಎಲ್ವಿ-ಎಫ್17 ರಾಕೆಟ್ ಭೂ ವೀಕ್ಷಣಾ ಉಪಗ್ರಹ ಇಒಎಸ್-05 ಜಿಯೋ-ಇಮೇಜಿಂಗ್ ಉಪಗ್ರಹವನ್ನು ಉದ್ದೇಶಿತ ಮತ್ತು ಅಗತ್ಯವಿರುವ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ ಎಂದು ಘೋಷಿಸಲು ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ತೆಲಂಗಾಣ ಸೇನಾ ನೆಲೆಯಿಂದ 4 ಎಕೆ-203 ರೈಫಲ್‌ ಸೇರಿ11 ಶಸ್ತ್ರಾಸ್ತ್ರಗಳ ಕಳವು

ಜಿಎಸ್ಎಲ್ವಿ-ಎಫ್17 ರಾಕೆಟ್ ಕಾರ್ಯಾಚರಣೆಯ ಮಿಷನ್ ನಿರ್ದೇಶಕ ಥಾಮಸ್ ಕುರಿಯನ್ ಅವರು ಮಾತನಾಡಿ ಇದು ಜಿಎಸ್ ಎಲ್ವಿ ನಿಂದ ಜಿಟಿಒ ಅಥವಾ ಸಬ್-ಜಿಟಿಒ ಕಕ್ಷೆಗೆ ಉಡಾಯಿಸಲ್ಪಟ್ಟ ಅತ್ಯಂತ ಭಾರವಾದ ಉಪಗ್ರಹವಾಗಿದೆ ಎಂದು ತಿಳಿಸಿದರು.



ಇದು ಅತ್ಯಂತ ಹೆಮ್ಮೆ ಮತ್ತು ಸಂತೋಷದ ಕ್ಷಣವಾಗಿದೆ. ಜಿಎಸ್ ಎಲ್ ವಿಯ ಯಶಸ್ಸು ತನ್ನ 19ನೇ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ. ಈ ಬಾರಿ ಅದು ನೈಜ ಸಮಯದ ಚಿತ್ರಣ ನೀಡುವ ಭೂ ವೀಕ್ಷಣಾ ಉಪಗ್ರಹವನ್ನು ಹೊತ್ತೊಯ್ದಿದೆ. ಇದು ಜಿಎಸ್ ಎಲ್ವಿ ನಿಂದ ಜಿಟಿಒ ಅಥವಾ ಸಬ್-ಜಿಟಿಒ ಕಕ್ಷೆಗೆ ಉಡಾಯಿಸಲ್ಪಟ್ಟ ಅತ್ಯಂತ ಭಾರವಾದ ಉಪಗ್ರಹವಾಗಿದೆ. ಇದರ ಉಡಾವಣೆ ಸಮಯ ಕೆಲವೇ ನಿಮಿಷಗಳಾಗಿದೆ. ಆದರೆ ಅದಕ್ಕಾಗಿ ವಿಜ್ಞಾನಿಗಳ ಹಲವು ತಿಂಗಳು, ವರ್ಷಗಳ ಕಠಿಣ ಪರಿಶ್ರಮ ಬೇಕಾಗಿರುತ್ತದೆ ಎಂದು ತಿಳಿಸಿದರು.

ಇಒಎಸ್ 5 ಭಾರತಕ್ಕೆ ಭೂಮಿಯಿಂದ ಸುಮಾರು 36,000 ಕಿಲೋಮೀಟರ್ ಎತ್ತರದಲ್ಲಿ ಸ್ಥಾಪನೆಯಾಗಿದೆ. ಇದು ರಾಷ್ಟ್ರದ ಮೇಲೆ ನಿರಂತರ ಪಕ್ಷಿ ನೋಟವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಜಿಎಸ್ಎಲ್ವಿ-ಎಫ್17 ರಾಕೆಟ್ 51.7 ಮೀಟರ್ ಎತ್ತರ ಮತ್ತು 420.5 ಟನ್‌ಗಳಷ್ಟು ಇಂಧನವನ್ನು ಒಳಗೊಂಡಿದೆ. ಇದು ಭಾರತದ ಅತಿದೊಡ್ಡ ರಾಕೆಟ್ ಗಳಲ್ಲಿ ಒಂದಾಗಿದೆ.

ಜಿಎಸ್ಎಲ್ವಿ-ಎಫ್17 ರಾಕೆಟ್ ಮಿಷನ್‌ ಯಶಸ್ವಿಯಾಗಿರುವುದಕ್ಕೆ ಇಸ್ರೋಗೆ ಶ್ಲಾಘನೆ ವ್ಯಕ್ತಪಡಿಸಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್, ಭಾರತದ ಬಾಹ್ಯಾಕಾಶ ಸಾಮರ್ಥ್ಯ ಹೆಚ್ಚಾಗುತ್ತಿದೆ. ಇದು ಜಾಗತಿಕ ಬಾಹ್ಯಾಕಾಶ ಶಕ್ತಿಯಾಗಿ ದೇಶದ ಸ್ಥಾನವನ್ನು ಬಲಪಡಿಸುತ್ತಿವೆ. ಇಒಎಸ್ 5 ಒಂದು ಅತ್ಯಾಧುನಿಕ ಭೂ ವೀಕ್ಷಣಾ ಉಪಗ್ರಹವಾಗಿದೆ. ಇದು ಭೂ-ಸಿಂಕ್ರೋನಸ್ ಕಕ್ಷೆಯಿಂದ ಭಾರತದ ಮೊದಲ ಇಮೇಜಿಂಗ್ ಉಪಗ್ರಹವಾಗಿದ್ದು, ಗೋಚರ, ಅತಿಗೆಂಪು, ಮಲ್ಟಿಸ್ಪೆಕ್ಟ್ರಲ್ ಮತ್ತು ಹೈಪರ್‌ಸ್ಪೆಕ್ಟ್ರಲ್ ಬ್ಯಾಂಡ್‌ಗಳಲ್ಲಿ ಸುಧಾರಿತ ಇಮೇಜಿಂಗ್ ಅನ್ನು ಒದಗಿಸಲಿದೆ ಎಂದು ತಿಳಿಸಿದ್ದಾರೆ.

ಲೈಸೆನ್ಸ್‌ ವಿಚಾರ ಮುಂದಿಟ್ಟು ವಾಹನ ವಿಮಾ ಕ್ಲೇಮ್‌ ತಿರಸ್ಕರಿಸುವಂತಿಲ್ಲ: ಗ್ರಾಹಕ ಆಯೋಗ ಮಹತ್ವದ ತೀರ್ಪು

ಇಸ್ರೋ ಈ ವರ್ಷದ ಆರಂಭದಲ್ಲಿ ಯಾವುದೇ ಸಿಬ್ಬಂದಿ ಇಲ್ಲದ ಗಗನ್ಯಾನ್ ಮಿಷನ್‌ನ ಉಡಾವಣೆಗೆ ಕೆಲಸ ನಡೆಯುತ್ತಿದೆ. ಐಒಎಸ್ -05 ಉಡಾವಣೆ ಈಗ ಯಶಸ್ವಿಯಾಗಿದ್ದು, ಮುಂದೆ ಗಗನ್ಯಾನ್ ಮಿಷನ್ ಉಡಾವಣೆಯ ಸಾಧ್ಯತೆ ಇದೆ. ಇಸ್ರೋ ನ್ಯಾವಿಗೇಷನ್ ಉಪಗ್ರಹ ಎನ್ ವಿಎಸ್ -03 ಸೇರಿದಂತೆ ಇನ್ನೂ ಆರು ಉಡಾವಣೆಗಳನ್ನು ಈ ಹಣಕಾಸು ವರ್ಷದಲ್ಲಿ ಮಾಡುವ ನಿರೀಕ್ಷೆ ಇದೆ.