H-1B Visa: "ಭಾರತದಲ್ಲಿ ಸಿಲುಕಿಕೊಂಡಿದ್ದೇನೆ, ಕಂಪನಿ ನನ್ನ ಜೀವ ಹಿಂಡುತ್ತಿದೆ"; H-1B ವೀಸಾ ಸಂದರ್ಶನ ವಿಳಂಬಕ್ಕೆ ಜನರು ಸುಸ್ತೋ ಸುಸ್ತು
ಅಮೆರಿಕದ H-1B ವೀಸಾ ಹೊಸ ನೀತಿ ಭಾರತೀಯರಿಗೆ ತಲೆನೋವಾಗಿ ಪರಿಣಮಿಸಿದೆ. ಸಾವಿರಾರು ಭಾರತೀಯ H-1B ವೀಸಾ ಹೊಂದಿರುವವರು ವೀಸಾ ನವೀಕರಣಕ್ಕಾಗಿ ಭಾರತಕ್ಕೆ ಬಂದು ಸಿಲುಕಿಕೊಂಡಿದ್ದಾರೆ. US ಕಾನ್ಸುಲರ್ ಕಚೇರಿಗಳು ಹಠಾತ್ ಅಪಾಯಿಂಟ್‌ಮೆಂಟ್‌ಗಳನ್ನು ರದ್ದುಪಡಿಸಿ ತಿಂಗಳುಗಳ ನಂತರ ಮರು ನಿಗದಿಪಡಿಸಿದ್ದರಿಂದ ಈ ಸಮಸ್ಯೆ ಉಂಟಾಗಿದೆ.
ಸಾಂಧರ್ಬಿಕ ಚಿತ್ರ -
ವಾಷಿಂಗ್ಟನ್: ಅಮೆರಿಕದ H-1B ವೀಸಾ ಹೊಸ ನೀತಿ (H-1B Visa) ಭಾರತೀಯರಿಗೆ ತಲೆನೋವಾಗಿ ಪರಿಣಮಿಸಿದೆ. ಸಾವಿರಾರು ಭಾರತೀಯ H-1B ವೀಸಾ ಹೊಂದಿರುವವರು ವೀಸಾ ನವೀಕರಣಕ್ಕಾಗಿ ಭಾರತಕ್ಕೆ ಬಂದು ಸಿಲುಕಿಕೊಂಡಿದ್ದಾರೆ. US ಕಾನ್ಸುಲರ್ ಕಚೇರಿಗಳು ಹಠಾತ್ ಅಪಾಯಿಂಟ್‌ಮೆಂಟ್‌ಗಳನ್ನು ರದ್ದುಪಡಿಸಿ ತಿಂಗಳುಗಳ ನಂತರ ಮರು ನಿಗದಿಪಡಿಸಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಡಿಸೆಂಬರ್ ಮಧ್ಯದಿಂದ ಕೊನೆಯವರೆಗೆ ನಿಗದಿಯಾಗಿದ್ದ ಸಂದರ್ಶನಗಳನ್ನು ಮುಂದಿನ ವರ್ಷದ ಮಾರ್ಚ್‌ಗೆ ಮುಂದೂಡಲಾಗಿದೆ ಎಂದು ವರದಿಯಾಗಿದೆ.
ಮರು ನಿಗದಿಪಡಿಸಿದ ದಿನಾಂಕಗಳು 2026ರ ಮಧ್ಯ ಅಥವಾ 2027ರವರೆಗೆ ವಿಸ್ತರಿಸಲ್ಪಟ್ಟಿವೆ. ಇದರಿಂದ ಅವರು ಭಾರತದಲ್ಲಿ ಸಿಲುಕಿಕೊಂಡಿದ್ದು, ಉದ್ಯೋಗದ ಬಗ್ಗೆ ಅನಿಶ್ಚಿತತೆ ಎದುರಿಸುತ್ತಿದ್ದಾರೆ. ಇದೇ ಸಮಸ್ಯೆಯ ಕುರಿತು ಅಮೆರಿಕದಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿ h1b ಅಪಾಯಿಂಟ್‌ಮೆಂಟ್ ವಿಳಂಬವಾಗಿದೆ ಮತ್ತು ನಾನು ಏನು ಮಾಡುತ್ತೇನೆ ಎಂದು ಕಂಪನಿ ನನ್ನನ್ನು ಪ್ರಶ್ನಿಸುತ್ತಿದೆ. ವೀಸಾ ನೇಮಕಾತಿಯನ್ನು ಮರು ನಿಗದಿಪಡಿಸಲಾಗಿದೆ ಮತ್ತು ಈಗ ನಾನು ಅನಿರ್ದಿಷ್ಟವಾಗಿ ಇಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಈ ತಿಂಗಳು ಮದುವೆಗಾಗಿ ಭಾರತಕ್ಕೆ ಹಿಂತಿರುಗಿದ್ದ ಡೆಟ್ರಾಯಿಟ್ ಉಪನಗರಗಳಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಡಿಸೆಂಬರ್ 17 ಮತ್ತು 23 ರಂದು ಕಾನ್ಸುಲರ್ ನೇಮಕಾತಿಗಳನ್ನು ಹೊಂದಿದ್ದರು. ಆದರೆ, ಈಗ ಅವರ ಅವಧಿ ಮುಗಿದಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಅವರು ಕೆಲಸ ಮಾಡುತ್ತಿರುವ ಕಂಪನಿಗಳು ಈಗಾಗಲೇ ಅವರಿಗೆ ಒತ್ತಡ ಹೇರಲು ಪ್ರಾರಂಭಿಸಿವೆ ಎಂದು ತಿಳಿದು ಬಂದಿದೆ.
ಈ ಸಮಸ್ಯೆಯಲ್ಲಿ ಸಿಲುಕಿಕೊಂಡವರಲ್ಲಿ ಹೆಚ್ಚಿನವರು 30 ಅಥವಾ 40ರ ಹರೆಯದ ಟೆಕ್ ಕೆಲಸಗಾರರು. ಅವರು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಹಠಾತ್ ರದ್ದತಿಯು ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ವೀಸಾ ಅವಧಿ ಮುಗಿದವರು ಉದ್ಯೋಗ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಇನ್ನು ಕೆಲವರು ಕುಟುಂಬದಿಂದ ಸಂಪೂರ್ಣ ಬೇರ್ಪಟ್ಟಿದ್ದಾರೆ.
ಲೈಂಗಿಕ ಹಗರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಟ್ರಂಪ್ ಫೋಟೋ ಸೇರಿ ಕನಿಷ್ಠ 16 ದಾಖಲೆಗಳು ನಾಪತ್ತೆ!
ಈ ಮಧ್ಯೆ ಗೂಗಲ್ ಮತ್ತು ಆ್ಯಪಲ್‌ನಂತಹ ಅಮೆರಿಕನ್ ಕಂಪನಿಗಳು, ಯಾವುದೇ ಕಾರಣಕ್ಕೂ ಅಮೆರಿಕ ಬಿಟ್ಟು ತೆರಳದಂತೆ ತಮ್ಮ ಭಾರತೀಯ ಕಾರ್ಮಿಕರನ್ನು ಎಚ್ಚರಿಸಿವೆ. ಈ ಕುರಿತು ಆಂತರಿಕ ಮೆಮೋಗಳನ್ನು ಹೊರಡಿಸಿರುವ ಈ ಕಂಪನಿಗಳು, "ವೀಸಾ ನವೀಕರಣಕ್ಕೆ ಅಸಾಧಾರಣ ಕಾಯುವಿಕೆ ಅನಿವಾರ್ಯವಾಗಿರುವುದರಿಂದ, ವಿದೇಶಿ ಕಾರ್ಮಿಕರು ದೇಶ ಬಿಡಕೂಡದು" ಎಂದು ಸೂಚಿಸಿವೆ. ಸದ್ಯ ಟ್ರಂಪ್ ಆಡಳಿತ ಒಂದು ನಿರ್ಧಾರ ಸಾವಿರಾರು ಭಾರತೀಯರ ಭವಿಷ್ಯಕ್ಕೆ ತೊಂದರೆಯೊಡ್ಡಿದ್ದು, ಮುಂದಿನ ದಿನಗಳಲ್ಲಿ ಸರಿಯಾಗುವ ನಿರೀಕ್ಷೆಯಿದೆ.