ಅತಿಥಿ ದೇವೋ ಭವ: ಇದು ಕೇವಲ ಮಾತಲ್ಲ, ಭಾರತೀಯರ ಸಂಸ್ಕೃತಿ, ಅಮೆರಿಕ ಮಹಿಳೆ ಹೇಳಿದ್ದೇನು ನೋಡಿ!
Viral Video: ಅಮೇರಿಕ ಮೂಲದ ಪ್ರವಾಸಿಗರೊಬ್ಬರು ಭಾರತೀಯದ ಸಹೃದಯ, ಪ್ರೀತಿ, ಆತಿಥ್ಯದ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡ ಘಟನೆ ಗುಜರಾತ್ ನಲ್ಲಿ ನಡೆದಿದೆ. ಈ ಮೂಲಕ ಭಾರತೀಯರೆಲ್ಲ ಒಂದೆ ತರನಾಗಿಲ್ಲ.. ಅತಿಥಿ ದೇವೋ ಭವ ಎಂಬ ಮಾತನ್ನು ಪಾಲಿಸುವವರು ಇದ್ದಾರೆ ಎಂಬುದನ್ನು ವಿಡಿಯೋ ಮೂಲಕ ಮಹಿಳೆಯು ತಿಳಿಸಿಕೊಟ್ಟಿದ್ದು ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ...
ಭಾರತೀಯರ ಆತಿಥ್ಯದ ಬಗ್ಗೆ ವಿಡಿಯೊ ಮಾಡಿದ ಮಹಿಳೆ -
ಗುಜರಾತ್, ಡಿ. 22: ಇತ್ತೀಚಿನ ಕೆಲವು ವರ್ಷದಲ್ಲಿ ಭಾರತದ ಪ್ರವಾಸಿ ತಾಣಗಳಿಗೆ ವಿದೇಶಿ ಪ್ರವಾಸಿಗರು ಭೇಟಿ ಕೊಡುವ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಅಮೇರಿಕಾ, ರಷ್ಯಾ , ಇಂಗ್ಲೆಂಡ್, ಜಪಾನ್, ಆಫ್ರೀಕಾ, ಚೀನಾ, ಜರ್ಮನ್ ಸೇರಿದಂತೆ ನೆರೆ ಹೊರೆಯ ರಾಷ್ಟ್ರದವರು ಶಿಕ್ಷಣ, ಉದ್ಯೋಗಕ್ಕಾಗಿ, ಪ್ರಖ್ಯಾತ ತಾಣಗಳಿಗೆ ಭೇಟಿ ನೀಡಬೇಕು ಎಂದು ಬರುವವರು ಇದ್ದಾರೆ. ಹೀಗೆ ಬಂದವರು ಇಲ್ಲಿನ ಅನೇಕ ಸಂಗತಿಯ ಬಗ್ಗೆ ಆನ್ಲೈನ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಇದೆ. ಪ್ರವಾಸಿಗರ ಜೊತೆ ಭಾರತೀಯರು ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂಬ ವಿದೇಶಿ ಮಹಿಳೆಯ ದೂರಿದ್ದ ವಿಡಿಯೋ ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಇದೀಗ ಅದರ ಬೆನ್ನಲ್ಲೆ ಅಮೇರಿಕ ಮೂಲದ ಪ್ರವಾಸಿಗರೊಬ್ಬರು ಭಾರತೀಯದ ಸಹೃದಯ, ಪ್ರೀತಿ, ಆತಿಥ್ಯದ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡ ಘಟನೆ ಗುಜರಾತ್ ನಲ್ಲಿ ನಡೆದಿದೆ. ಈ ಮೂಲಕ ಭಾರತೀಯರೆಲ್ಲ ಒಂದೆತರನಾಗಿಲ್ಲ ಅತಿಥಿ ದೇವೋ ಭವ ಎಂಬ ಮಾತನ್ನು ಪಾಲಿಸುವವರು ಇದ್ದಾರೆ ಎಂಬುದನ್ನು ವಿಡಿಯೋ ಮೂಲಕ ಮಹಿಳೆಯು ತಿಳಿಸಿಕೊಟ್ಟಿದ್ದು ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ಅಮೆರಿಕ ಮೂಲದ ಪ್ರಯಾಣಿಗಳಾದ ತಾನ್ಯಾ ಸಂಘಾನಿ ಅವರು ಇತ್ತೀಚೆಗಷ್ಟೇ ಗುಜರಾತ್‌ಗೆ ಭೇಟಿ ನೀಡಿದ್ದಾರೆ. ಗುಜರಾತ್‌ನ ಮಧುಬನ್ ರೆಸಾರ್ಟ್ ಮತ್ತು ಸ್ಪಾದಲ್ಲಿ ತಂಗಿದ್ದ ಅವರು ಭಾರತೀಯರ ಸಹಾಯವನ್ನು ನೆನೆದುಕೊಂಡು ವೀಡಿಯೊ ಮಾಡಿದ್ದಾರೆ. ಹೊಟೇಲ್ ನಲ್ಲಿದ್ದ ಸಿಬ್ಬಂದಿಗಳು ತನ್ನನ್ನು ಅತ್ಯಂತ ಪ್ರೀತಿಯಿಂದ , ಕಾಳಜಿಯಿಂದ ನೋಡಿಕೊಂಡರು ಎಂಬ ನೆಲೆಯಲ್ಲಿ ತನ್ನ ಅನುಭವವನ್ನು ವಿವರಿಸುವ ಭಾವನಾತ್ಮಕ ವೀಡಿಯೊವನ್ನು ಅವರು ಆನ್ಲೈನ್ ನಲ್ಲಿ ಹಂಚಿ ಕೊಂಡಿದ್ದಾರೆ.
ವಿಡಿಯೋ ನೋಡಿ:
अमेरिका में जन्मी तान्या संगानी ने भारत में मिला अपना एक अच्छा अनुभव शेयर किया।
— JIMMY (@Jimmyy__02) December 20, 2025
गुजरात के मधुबन रिसॉर्ट एंड स्पा में ठहरते समय उनकी तबीयत खराब हो गई थी, होटल के स्टाफ ने उनकी पूरी मदद की और उनके लिए दवा मंगवाई। इस प्यार और सेवा से तान्या बहुत भावुक हो गईं, उन्होंने कहा कि भारत… pic.twitter.com/qyTAPiip62
ವೈರಲ್ ಆದ ವೀಡಿಯೊದಲ್ಲಿ, ಗುಜರಾತ್ ಪ್ರವಾಸದ ವೇಳೆ ನಾನು ಅನಾರೋಗ್ಯಕ್ಕೆ ಒಳಗಾದೆ. ಇದೇ ಸಂದರ್ಭದಲ್ಲಿ ನನ್ನ ಜೊತೆಗೆ ಯಾರು ಇರಲಿಲ್ಲ ಹೀಗಾಗಿ ನಾನು ನನ್ನ ಆರೋಗ್ಯ ಸಮಸ್ಯೆ ಯಾರೊಂದಿಗೂ ಹೇಳಿಕೊಂಡಿರಲಿಲ್ಲ. ರೂಮಿನೊಳಗೆ ಸ್ಪೂನ್ ಮತ್ತು ಫೋರ್ಕ್ ಇಲ್ಲದ ಕಾರಣ ಹೊಟೇಲ್ ಸಿಬಂದಿಗೆ ಕರೆ ಮಾಡಿ ರೂಮಿಗೆ ಕಳುಹಿಸುವಂತೆ ಹೇಳಿದೆ. ಹೋಟೆಲ್ ಸಿಬ್ಬಂದಿ ಅದನ್ನು ನೀಡಿ ಗುಡ್ ನೈಟ್ ಹೇಳಿದರು. ಅದಕ್ಕೆ ನಾನು ಪ್ರತ್ಯುತ್ತರವಾಗಿ ಗುಡ್ ನೈಟ್ ಹೇಳಿದೆ. ಅಲ್ಲಿಂದ ಅವರು ಸ್ವಲ್ಪ ಸಮಯಕ್ಕೆ ಸಿಬಂದಿಯೊಬ್ಬರು ಹತ್ತಿರದ ಮೆಡಿಕಲ್ ಶಾಪ್ ನಿಂದ ನನಗೆ ಬೇಕಾದ ಔಷಧಗಳ ವ್ಯವಸ್ಥೆ ಮಾಡಿದರು ಎಂದು ಹೇಳಿದ್ದನ್ನು ವಿಡಿಯೋದಲ್ಲಿ ಕಾಣಬಹುದು.
Viral Video: ಗಾಂಜಾ ಬಗ್ಗೆ ದೂರು ನೀಡಿದ್ದಕ್ಕೆ ಮಕ್ಕಳ ಮೇಲೆ ಹಲ್ಲೆ ನಡೆಸಿದ ಅಪ್ರಾಪ್ತ ಬಾಲಕರು
ಅದನ್ನು ತನಗೆ ತಂದುಕೊಟ್ಟು ಯೋಗಕ್ಷೇಮವನ್ನು ವಿಚಾರಿಸಿದರು. ಸಿಬ್ಬಂದಿಯ ಬಳಿ ತಾನು ಏನು ಹೇಳದಿದ್ದರೂ ಎಲ್ಲ ಅರ್ಥ ಮಾಡಿಕೊಂಡು ಕುಟುಂಬದವರಂತೆ ಆತಿಥ್ಯ ನೀಡಿದ್ದಾರೆ. ಭಾರತ ಜನತೆ ಬಗ್ಗೆ ಕೆಲವು ತಪ್ಪು ಸಂದೇಶಗಳಿವೆ. ಅದನ್ನು ತಿಳಿದ ನನಗೆ ಇವರ ಈ ನಡೆ ನಿಜಕ್ಕೂ ಆಶ್ಚರ್ಯ ಎಂಬಂತಿತ್ತು. ಭಾರತದ ಜನರು ತುಂಬಾ ಒಳ್ಳೆಯವರು ಎಂದು ಅವರು ಭಾರತೀಯ ಆತಿಥ್ಯವನ್ನು ಶ್ಲಾಘಿಸುತ್ತಾ ಹೇಳಿದ್ದ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು.
ಈ ವಿಡಿಯೋ ಟ್ವಿಟರ್ ಎಕ್ಸ್ ನಲ್ಲಿ ವೈರಲ್ ಆಗಿದ್ದು ವ್ಯಾಪಕ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಬಳಕೆದಾರರೊಬ್ಬರು ಈ ಬಗ್ಗೆ ಭಾರತಕ್ಕೆ ಬಂದ ವಿದೇಶಿಗರಿಗೆಲ್ಲ ಕೆಟ್ಟ ಅನುಭವವೇ ಆಗುವುದಿಲ್ಲ ನಮ್ಮಲ್ಲಿಯೂ ಅತಿಥಿಗಳಿಗೆ ತುಂಬಾ ಗೌರವ ನೀಡುತ್ತಾರೆ ಇದನ್ನು ಈ ಮಹಿಳೆ ತಿಳಿಸಿದ್ದಕ್ಕೆ ಧನ್ಯವಾದಗಳು. ಯಾವುದೇ ಸ್ವಾರ್ಥವಿಲ್ಲದೆ ಅನಾರೋಗ್ಯದಿಂದ ಬಳಲುತ್ತಿರುವ ಯಾರಿಗಾದರೂ ಸಹಾಯ ಮಾಡುವುದು ಮಾನವೀಯತೆ ಅದು ನಮ್ಮ ಭಾರತೀಯರಿಗೆ ಈ ಮಾನವೀಯ ಮೌಲ್ಯ ಎಲ್ಲ ಕಾಲಕ್ಕೂ ಜಾಗೃತವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಭಾರತದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು ಬಹಳ ಮುಗ್ದರಾಗಿದ್ದು ಅವರು ಅತಿಥಿಗಳನ್ನು ಬಹಳ ಸತ್ಕಾರದಿಂದ ನೋಡಿಕೊಳ್ಳುತ್ತಾರೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.