I love Muhammad campaign: 'ಐ ಲವ್ ಮುಹಮ್ಮದ್' ಅಭಿಯಾನದ ರೂವಾರಿ ಅರೆಸ್ಟ್! ಕಿಡಿಗೇಡಿ ಕೃತ್ಯದ ಹಿಂದಿರುವ ಧರ್ಮಗುರು ಈತನೇ ನೋಡಿ
'ಐ ಲವ್ ಮುಹಮ್ಮದ್' (I love Muhammad campaign) ಅಭಿಯಾನವನ್ನು ಬೆಂಬಲಿಸಿದ್ದ ಸ್ಥಳೀಯ ಧರ್ಮಗುರು ಮತ್ತು ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ತೌಕೀರ್ ರಜಾ ಅವರನ್ನು ಶನಿವಾರ ಬಂಧಿಸಲಾಯಿತು. ಇವರು ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಪೋಸ್ಟ್ ಮಾಡಿದ ಬಳಿಕ ಅವರ ಮನೆಯ ಮುಂದೆ ಭಾರಿ ಜನಸಮೂಹ ಸೇರಿದ್ದು, ಇದು ಘರ್ಷಣೆಗೆ ಕಾರಣವಾಗಿತ್ತು.

-

ರಾಯ್‌ಬರೇಲಿ: ಉತ್ತರ ಪ್ರದೇಶದಲ್ಲಿ (uttar pradesh) ಘರ್ಷಣೆಗೆ ಕಾರಣವಾದ 'ಐ ಲವ್ ಮುಹಮ್ಮದ್' ಅಭಿಯಾನವನ್ನು (I love Muhammad campaign) ಬೆಂಬಲಿಸಿ ಪ್ರತಿಭಟನೆಗೆ ಕರೆ ನೀಡಿದ್ದ ಸ್ಥಳೀಯ ಧರ್ಮಗುರು ಮತ್ತು ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ (Ittehad-e-Millat Council) ಮುಖ್ಯಸ್ಥ ತೌಕೀರ್ ರಜಾ (Tauqeer Raza) ಅವರನ್ನು ಶನಿವಾರ ಬಂಧಿಸಲಾಯಿತು. ಅವರು 'ಐ ಲವ್ ಮುಹಮ್ಮದ್' ಅಭಿಯಾನವನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ (viral video) ಪೋಸ್ಟ್ ಮಾಡಿದ್ದರು. ಇದರ ಬಳಿಕ ಭಾರಿ ಜನಸಮೂಹ ಸೇರಿದ್ದು, ಇದು ಘರ್ಷಣೆಗೆ ಕಾರಣವಾಗಿತ್ತು.
'ಐ ಲವ್ ಮುಹಮ್ಮದ್' ಅಭಿಯಾನವನ್ನು ಬೆಂಬಲಿಸಿ ಪ್ರತಿಭಟನೆಗೆ ಕರೆ ನೀಡಿದ್ದ ಉತ್ತರ ಪ್ರದೇಶದ ಬರೇಲಿಯಲ್ಲಿ ಅವ್ಯವಸ್ಥೆಗೆ ಕಾರಣವಾಗಿದ್ದ ಸ್ಥಳೀಯ ಧರ್ಮಗುರು ಮತ್ತು ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ತೌಕೀರ್ ರಜಾ ಅವರನ್ನು ಶನಿವಾರ ಬಂಧಿಸಲಾಯಿತು. ಅಧಿಕಾರಿಗಳ ಪ್ರಕಾರ, ಅಭಿಯಾನವನ್ನು ಬೆಂಬಲಿಸಿ ವೀಡಿಯೊ ಪೋಸ್ಟ್ ಮಾಡಿದ ನಂತರ ರಜಾ ಅವರ ಮನೆಯ ಹೊರಗೆ ಭಾರಿ ಜನಸಮೂಹ ಜಮಾಯಿಸಿತ್ತು. ಪ್ರಸ್ತುತ ಅವರ ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವಿನಾಶ್ ಸಿಂಗ್ ತಿಳಿಸಿದ್ದಾರೆ.
ತೌಕೀರ್ ರಜಾ ಅವರ ಪ್ರತಿನಿಧಿಗಳಿಗೆ ಯಾವುದೇ ಕಾರ್ಯಕ್ರಮ ಅಥವಾ ಮೆರವಣಿಗೆ ನಡೆಸಲು ಅನುಮತಿ ನೀಡಲಾಗಿಲ್ಲ. ಬಿಎನ್‌ಎಸ್‌ಎಸ್‌ನ ಸೆಕ್ಷನ್ 163 ಅನ್ನು ವಿಧಿಸಲಾಗಿದ್ದು, ಯಾವುದೇ ಸಭೆ ಸೇರಲು ಅವಕಾಶ ನೀಡಲಾಗುವುದಿಲ್ಲ ಎಂದು ನಾವು ಅವರ ಪ್ರತಿನಿಧಿಗೆ ತಿಳಿಸಿದ್ದೆವು. ಅವರು ಒಪ್ಪಿಕೊಂಡು ಮೆರವಣಿಗೆ ನಡೆಸುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೂ ಶುಕ್ರವಾರ ಪ್ರಾರ್ಥನೆಯ ಅನಂತರ ಕೆಲವರು ಪ್ರತಿಭಟನೆಗೆ ಮುಂದಾಗಿದ್ದರು. ಇದು ಪರಿಸ್ಥಿತಿ ಉದ್ವಿಗ್ನಗೊಳ್ಳಲು ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬರೇಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ, ಹೆಚ್ಚಿನ ಜನರು ಶಾಂತಿಯುತವಾಗಿ ಸೇರಿದ್ದರು. ಈ ವೇಳೆ ಒಂದು ಗುಂಪು ಕಾನೂನು ಮತ್ತು ಸುವ್ಯವಸ್ಥೆಯನ್ನು ಭಂಗಗೊಳಿಸಲು ಪ್ರಯತ್ನಿಸಿತು ಎಂದು ತಿಳಿಸಿದರು. ಶೇ. 80 ರಿಂದ 90ರಷ್ಟು ಜನರು ಪ್ರಾರ್ಥನೆಯ ಅನಂತರ ಹೊರಟುಹೋದರು. ಆದರೆ ಕೆಲವರು ಇತರರನ್ನು ಪ್ರಚೋದಿಸಲು ಇಸ್ಲಾಮಿಯಾ ಮೈದಾನದ ಕಡೆಗೆ ಹೋಗಲು ಪ್ರಯತ್ನಿಸಿದರು. ಇದರಲ್ಲಿ ಹೊರಗಿನವರು ಕೂಡ ಭಾಗಿಯಾಗಿದ್ದರು ಎನ್ನುವ ಶಂಕೆ ಇದೆ ಎಂದು ಅವರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಬರೇಲಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ಬಳಿಕ 'ಐ ಲವ್ ಮುಹಮ್ಮದ್' ಅಭಿಯಾನವನ್ನು ಬೆಂಬಲಿಸಿ ಪ್ರದರ್ಶನ ನಡೆಸುತ್ತಿದ್ದ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು. ಇದನ್ನು ಹತ್ತಿಕ್ಕಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಈ ವೇಳೆ 10 ಪೊಲೀಸರಿಗೂ ಗಾಯಗಳಾಗಿವೆ. ಕೆಲವು ವಾರಗಳ ಹಿಂದೆಯಷ್ಟೇ 'ಐ ಲವ್ ಮುಹಮ್ಮದ್' ಅಭಿಯಾನಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಮೌನಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ಇದೇ ರೀತಿಯ ಹಿಂಸಾಚಾರ ಉಂಟಾಗಿತ್ತು. ಕೆಲವು ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಇವರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು.
ದೇಶಾದ್ಯಂತ 'ಐ ಲವ್ ಮುಹಮ್ಮದ್' ಅಭಿಯಾನ ಹೆಚ್ಚಾಗಿದ್ದು, ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಗುಂಪೊಂದು ಹಲವಾರು ಅಂಗಡಿ ಮತ್ತು ವಾಹನಗಳಿಗೆ ಹಾನಿ ಮಾಡಿವೆ. ಗುಜರಾತ್‌ನ ಗಾಂಧಿನಗರ, ಕರ್ನಾಟಕದ ದಾವಣಗೆರೆಯಲ್ಲೂ ಇದು ಘರ್ಷಣೆಗೆ ಕಾರಣವಾಗಿತ್ತು.
ಏಳು ಜನರ ಬಂಧನ
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊಗಳಲ್ಲಿ ರಜಾ ಅವರ ಮನೆಯ ಹೊರಗೆ ಜನ ಸೇರಿದ್ದು, 'ಐ ಲವ್ ಮುಹಮ್ಮದ್' ಎಂದು ಬರೆದಿರುವ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು. ಪ್ರಕರಣಕ್ಕೆ ಸಂಬಂಧಿಸಿ ಏಳು ಜನರನ್ನು ಬಂಧಿಸಲಾಗಿದೆ. 40 ಕ್ಕೂ ಹೆಚ್ಚು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದರೂ 1,700 ಮಂದಿ ವಿರುದ್ಧ ಗಲಭೆ, ಸರ್ಕಾರಿ ಕೆಲಸಕ್ಕೆ ಅಡ್ಡಿ ಮತ್ತು ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
'ಐ ಲವ್ ಮುಹಮ್ಮದ್'ಗೆ ಪ್ರತಿಯಾಗಿ 'ಐ ಲವ್ ಮಹಾದೇವ್'
ಸೆ. 4 ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಈದ್-ಎ-ಮಿಲಾದ್-ಉನ್-ನಬಿ ಮೆರವಣಿಗೆಯ ಸಂದರ್ಭದಲ್ಲಿ 'ಐ ಲವ್ ಮುಹಮ್ಮದ್' ಪೋಸ್ಟರ್ ಹಾಕಿದಾಗ ಈ ವಿವಾದ ಉದ್ಭವವಾಗಿದೆ. ರಾಮ ನವಮಿಯಂತಹ ಹಿಂದೂ ಹಬ್ಬಗಳನ್ನು ಆಚರಿಸುವ ಸ್ಥಳದಲ್ಲಿ ಪೋಸ್ಟರ್ ಅನ್ನು ಉದ್ದೇಶಪೂರ್ವಕವಾಗಿ ಅಳವಡಿಸಲಾಗಿದೆ ಎಂದು ಸ್ಥಳೀಯ ಹಿಂದೂ ಸಂಘಟನೆಯವರು ವಾದಿಸಿದ್ದರು.
ಇದನ್ನೂ ಓದಿ: Viral Video: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಎತ್ತಿ ಎಸೆದ ಹೋರಿ; ಶಾಕಿಂಗ್ ವಿಡಿಯೊ ವೈರಲ್
ಬಳಿಕ ಉಂಟಾದ ಉದ್ವಿಗ್ನತೆಯ ಪರಿಣಾಮ ಹಿಂದೂಗಳು ತಮ್ಮ ಪೋಸ್ಟರ್‌ಗಳನ್ನು ಹರಿದು ಹಾಕಿದ್ದಾರೆ ಎಂದು ಆರೋಪಿಸಿದ ಮುಸ್ಲಿಮರು ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಮಾಡಿದ್ದಾರೆ. ಅನಂತರ ವಾರಣಾಸಿಯಲ್ಲಿ ಧಾರ್ಮಿಕ ಮುಖಂಡರು ಕೂಡ ಇದನ್ನು ಬೆಂಬಲಿಸಿದರು. ಹಿಂದೂ ಸಂಘಟನೆಗಳು 'ಐ ಲವ್ ಮಹದೇವ್' ಎಂಬ ಫಲಕಗಳೊಂದಿಗೆ 'ಐ ಲವ್ ಮುಹಮ್ಮದ್' ಪೋಸ್ಟರ್‌ಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಇದು ಎರಡು ಸಮುದಾಯದ ನಡುವೆ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿತ್ತು.