ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs PAK: ಔಟ್‌ ಆಫ್‌ ಫಾರ್ಮ್‌ ಸೂರ್ಯಕುಮಾರ್‌ ಯಾದವ್‌ಗೆ ಸುನೀಲ್‌ ಗವಾಸ್ಕರ್‌ ಮಹತ್ವದ ಸಲಹೆ!

sunil Gavaskar advised Suryakumar Yadav: ಪ್ರಸ್ತುತ ಫಾರ್ಮ್‌ ಕಳೆದುಕೊಂಡು ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ಗೆ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಮಹತ್ವದ ಸಲಹೆಯನ್ನು ನೀಡಿದ್ದಾರೆ. ಭಾರತ ತಂಡ, ಭಾನುವಾರ ಪಾಕಿಸ್ತಾನ ವಿರುದ್ಧ ಫೈನಲ್‌ನಲ್ಲಿ ಕಾದಾಟ ನಡೆಸಲಿದೆ.

ಸೂರ್ಯಕುಮಾರ್‌ ಯಾದವ್‌ಗೆ ಸುನೀಲ್‌ ಗವಾಸ್ಕರ್‌ ಮಹತ್ವದ ಸಲಹೆ!

ಸೂರ್ಯಕುಮಾರ್‌ ಯಾದವ್‌ಗೆ ಸುನೀಲ್‌ ಗವಾಸ್ಕರ್‌ ಮಹತ್ವದ ಸಲಹೆ. -

Profile Ramesh Kote Sep 27, 2025 5:26 PM

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ಗೆ (Suryakumar Yadav) ಫಾರ್ಮ್‌ ಕಂಡುಕೊಳ್ಳಲು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ (Sunil Gavaskar) ಮಹತ್ವದ ಸಲಹೆಯನ್ನು ನೀಡಿದ್ದಾರೆ. ಭಾನುವಾರ ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್‌ ಫೈನಲ್‌ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ಆರಂಭದಲ್ಲಿ ಕೆಲ ಎಸೆತಗಳನ್ನು ಆಡುವ ಮೂಲಕ ಪಿಚ್‌ ಕಂಡೀಷನ್ಸ್‌ ಅನ್ನು ಅರಿತುಕೊಳ್ಳಬೇಕು ಎಂದಿದ್ದಾರೆ. ಪ್ರಸ್ತುತ ಟೂರ್ನಿಯಲ್ಲಿ ಸೂರ್ಯ ಆಡಿದ ಐದು ಇನಿಂಗ್ಸ್‌ಗಳಲ್ಲಿ 23.66ರ ಸರಾಸರಿ ಮತ್ತು 107.57ರ ಸ್ಟ್ರೈಕ್‌ ರೇಟ್‌ನಲ್ಲಿ ಕೇವಲ 71 ರನ್‌ ಗಳಿಸಿದ್ದಾರೆ. ಇದರಲ್ಲಿ ಅವರು ಕ್ರಮವಾಗಿ 7*, 47*, 0, 5 ಹಾಗೂ 12 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ್ದಾರೆ.

ಕಳೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತೋರಿದ್ದ ಪ್ರದರ್ಶನವನ್ನು ಏಷ್ಯಾ ಕಪ್‌ ಟೂರ್ನಿಯಲ್ಲಿ ಪ್ರತಿಬಿಂಬಿಸುವಲ್ಲಿ ಸೂರ್ಯಕುಮಾರ್‌ ಯಾದವ್‌ ವಿಫಲರಾಗಿದ್ದಾರೆ. ಅವರು 2025ರ ಐಪಿಎಲ್‌ ಟೂರ್ನಿಯಲ್ಲಿ 65.18ರ ಸರಾಸರಿ ಮತ್ತು 167.91ರ ಸ್ಟ್ರೈಕ್‌ ರೇಟ್‌ನಲ್ಲಿ 717 ರನ್‌ಗಳನ್ನು ಬಾರಿಸಿದ್ದರು. ಆದರೆ, ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಅವರು 13 ಎಸೆತಗಳಲ್ಲಿ 12 ರನ್‌ ಗಳಿಸಿದ ಬಳಿಕ ವಾನಿಂದು ಹಸರಂಗ ಅವರ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಆದರೆ, ಕಂಡೀಷನ್ಸ್‌ಗೆ ಹೊಂದಿಕೊಂಡು ಆಡುವುದರ ಮಹತ್ವವನ್ನು ಸುನೀಲ್‌ ಗವಾಸ್ಕರ್‌ ಒತ್ತಿ ಹೇಳಿದ್ದಾರೆ.

IND vs PAK: ಏಷ್ಯಾ ಕಪ್‌ ಫೈನಲ್‌ನಲ್ಲಿ ಅರ್ಷದೀಪ್‌ ಸಿಂಗ್‌ ಆಡಬೇಕೆಂದ ಇರ್ಫಾನ್‌ ಪಠಾಣ್‌!

ಸ್ಪೋರ್ಟ್ಸ್‌ ಟುಡೇ ಜೊತೆ ಮಾತನಾಡಿದ ಸುನೀಲ್‌ ಗವಾಸ್ಕರ್‌, "ಅವರು ಕ್ಲಾಸ್‌ ಬ್ಯಾಟ್ಸ್‌ಮನ್‌ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ಬ್ಯಾಟಿಂಗ್‌ಗೆ ಹೋದಾಗ ಎರಡು ಅಥವಾ ಮೂರು ಎಸೆತಗಳಿಗೆ ಗೌರವ ಕೊಟ್ಟು ಆಡಬೇಕು. ಆ ಮೂಲಕ ಪಿಚ್‌ ಕಂಡೀಷನ್ಸ್‌, ಬೌನ್ಸ್‌, ತಿರುವು ಸೇರಿದಂತೆ ಪರಿಸ್ಥಿತಿಗಳನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಡಗ್‌ಔಟ್‌ನಿಂದ ನೀವು ನೋಡುವುದು ಹಾಗೂ ಸ್ವತಃ ನೀವು ಬ್ಯಾಟ್‌ ಮಾಡುವಾಗ ಆಗುವ ಅನುಭವ ತುಂಬಾ ವಿಭಿನ್ನವಾಗಿದೆ,"ಎಂದು ಹೇಳಿದ್ದಾರೆ.

"ಕೆಲವೊಮ್ಮೆ ಬ್ಯಾಟ್ಸ್‌ಮನ್ ಮುಂದಿದ್ದರೆ, ಪಿಚ್‌ನಲ್ಲಿ ಏನೂ ಇಲ್ಲ ಎಂದು ತೋರುತ್ತದೆ. ಆದರೆ ನಿಮ್ಮ ಸ್ವಾಭಾವಿಕ ಆಟವನ್ನು ಆಡುವ ಮುನ್ನ ಪರಿಸ್ಥಿತಿಯನ್ನು ಅಳೆಯಲು ಕೆಲವು ಚೆಂಡುಗಳನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ," ಎಂದು ಬ್ಯಾಟಿಂಗ್‌ ದಿಗ್ಗಜ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

41 ವರ್ಷಗಳು, 17 ಏಷ್ಯಾಕಪ್‌ಗಳ ನಂತರ ಮೊದಲ ಬಾರಿ ಭಾರತ vs ಪಾಕ್‌ ಫೈನಲ್!

"ಏಷ್ಯಾ ಕಪ್‌ ಫೈನಲ್‌ ಪಂದ್ಯಕ್ಕೂ ಹಿಂದಿನ ದಿನ ಭಾರತ ತಂಡಕ್ಕೆ ಲಾಭದಾಯಕವಾಗಿದೆ. ಇದು ಭಾರತ ತಂಡಕ್ಕೆ ಲಾಭದಾಯಕವಾಗಲಿದೆ. ಇದು ಕೆಟ್ಟ ದಿನವಾಗಿರಬಹುದು ಅಥವಾ ಒಳ್ಳೆಯ ದಿನವಾಗಿರಬಹುದು. ತಂಡದ ಮೊತ್ತಕ್ಕೆ ಎದುರಾಳಿ ತಂಡವನ್ನು ನಿಯಂತ್ರಿಸುವ ವೇಳೆ ಭಾರತ ತಂಡದ ಬೌಲರ್‌ಗಳು ಕೊನೆಯಲ್ಲಿ ಉತ್ತಮವಾಗಿ ಬೌಲಿಂಗ್‌ ನಿರ್ವಹಿಸಿದ್ದಾರೆ," ಎಂದರು.

"ಹರ್ಷಿತ್‌ ರಾಣಾ ಕೊನೆಯ ಓವರ್‌ನಲ್ಲಿ ವೇಗದ ಎಸೆತಗಳ ಬದಲು ನಿಧಾನಗತಿಯ ಎಸೆತಗಳನ್ನು ಹಾಕಿದ್ದರೆ ಫೈನಲ್‌ ಓವರ್‌ ಇನ್ನಷ್ಟು ಉತ್ತಮವಾಗಿರುತ್ತಿತ್ತು. ಆದಾಗ್ಯೂ, ಕುಸಾಲ್ ಪೆರೇರಾ ಮತ್ತು ನಿಸಾಂಕ ಅವರ ಬಲವಾದ ಪ್ರದರ್ಶನದ ಹೊರತಾಗಿಯೂ ತಂಡ ಹೇಗೆ ಚೇತರಿಸಿಕೊಂಡಿತು ಎಂಬುದು ಅವರ ಸ್ಥಿತಿಸ್ಥಾಪಕತ್ವ ಮತ್ತು ಮನೋಧರ್ಮದ ಬಗ್ಗೆ ಬಹಳಷ್ಟು ಹೇಳುತ್ತದೆ," ಎಂದು ಸುನೀಲ್‌ ಗವಾಸ್ಕರ್ ತಿಳಿಸಿದ್ದಾರೆ.