ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Javed Akhtar: ನರಕ ಮತ್ತು ಪಾಕಿಸ್ತಾನದ ನಡುವೆ ಆಯ್ಕೆ ಮಾಡುವ ಪರಿಸ್ಥಿತಿ ಬಂದರೆ ನಾನು ... ಇದನ್ನ ಆಯ್ಕೆ ಮಾಡಿಕೊಳ್ಳುತ್ತೇನೆ ; ಜಾವೇದ್‌ ಅಖ್ತರ್‌ ಹೇಳಿದ್ದೇನು?

ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ (Javed Akhtar) ಬಗ್ಗೆ, ಬಾಲಿವುಡ್‌ನ ಖ್ಯಾತ ಬರಹಗಾರ ಜಾವೇದ್ ಅಖ್ತರ್ ಅವರು ಪಾಕಿಸ್ತಾನದ ಕುರಿತು ಮಾತನಾಡಿದ್ದಾರೆ. ಒಂದು ವೇಳೆ ನರಕ ಮತ್ತು ಪಾಕಿಸ್ತಾನದ ನಡುವೆ ಆಯ್ಕೆ ಮಾಡುವ ಪರಿಸ್ಥಿತಿ ಬಂದರೆ, ನಾನು ನರಕವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಅವರು ಹೇಳಿದ್ದಾರೆ.

ನರಕ ಮತ್ತು ಪಾಕಿಸ್ತಾನದ ನಡುವೆ ಜಾವೇದ್‌ ಅಖ್ತರ್‌ ಆಯ್ಕೆ ಯಾವುದು?

Profile Vishakha Bhat May 18, 2025 2:11 PM

ಮುಂಬೈ: ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ (Javed Akhtar) ಬಗ್ಗೆ, ಬಾಲಿವುಡ್‌ನ ಖ್ಯಾತ ಬರಹಗಾರ ಜಾವೇದ್ ಅಖ್ತರ್ ಅವರು ಪಾಕಿಸ್ತಾನದ ಕುರಿತು ಮಾತನಾಡಿದ್ದಾರೆ. ಒಂದು ವೇಳೆ ನರಕ ಮತ್ತು ಪಾಕಿಸ್ತಾನದ ನಡುವೆ ಆಯ್ಕೆ ಮಾಡುವ ಪರಿಸ್ಥಿತಿ ಬಂದರೆ, ನಾನು ನರಕವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಅವರು ಹೇಳಿದ್ದಾರೆ. ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದನ್ನು ಉದ್ದೇಶಿಸಿ ಮಾತಣಾಡಿದ ಜಾವೇದ್‌ ಅಖ್ತರ್‌, ಭಯೋತ್ಪಾದನೆಗೆ ಆಶ್ರಯ ನೀಡುವ ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ನನ್ನ ರಾಜಕೀಯ ನಿಲುವುಗಳನ್ನು ಒಪ್ಪದ ಕೆಲವರು ಪಾಕಿಸ್ತಾನಕ್ಕೆ ಹೋಗುವಂತೆ ನನಗೆ ಬೆದರಿಕೆ ಹಾಕುತ್ತಾರೆ. ಆದರೆ ನಾನು ಪಾಕಿಸ್ತಾನಕ್ಕೆ ಹೋಗುವ ಬದಲು ನರಕಕ್ಕೆ ಹೋಗಲು ಇಷ್ಟಪಡುತ್ತೇನೆ. ಏಕೆಂದರೆ ನರಕ ಪಾಕಿಸ್ತಾನಕ್ಕಿಂತ ಉತ್ತಮವಾಗಿದೆ ಎಂದು ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಕುರಿತು ಮಾತನಾಡುವ ಸಂದರ್ಭದಲ್ಲಿ ಅಖ್ತರ್‌ ಈ ಹೇಳಿಕೆ ನೀಡಿದ್ದಾರೆ.



ಒಂದು ಕಡೆ ನನ್ನನ್ನು 'ಕಾಫಿರ್' ಎಂದು ಕರೆಯುತ್ತಾರೆ ಮತ್ತು ನಾನು 'ಜಹನ್ನಮ್' (ನರಕ) ಕ್ಕೆ ಹೋಗುತ್ತೇನೆ ಎಂದು ಹೇಳುತ್ತಾರೆ. ಇನ್ನೊಂದು ಕಡೆ ನನ್ನನ್ನು ಜಿಹಾದಿ ಎಂದು ಕರೆಯುತ್ತಾರೆ ಮತ್ತು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳುತ್ತಾರೆ. ಈ ಎರಡೇ ಆಯ್ಕೆಗಳಿದ್ದರೆ, ನಾನು ನರಕಕ್ಕೆ ಹೋಗಲು ಬಯಸುತ್ತೇನೆ. ನಾನು 19 ವರ್ಷದವನಿದ್ದಾಗ ಮುಂಬೈಗೆ ಬಂದೆ. ನಾನು ಏನಾಗಿದ್ದೇನೆಯೋ ಅದು ಈ ನಗರ ಮತ್ತು ಮಹಾರಾಷ್ಟ್ರದಿಂದ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್‌ ಉಗ್ರರ ದಾಳಿ ರೂವಾರಿ ಶಹೀದ್‌ ಕುಟ್ಟೆ ಎನ್‌ಕೌಂಟರ್‌

ಮುಂದುವರಿದು, ಸ್ವಾತಂತ್ರ್ಯದ ನಂತರ ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿ ಮಾಡಿದಾಗ, ಕಾಶ್ಮೀರಿಗಳು ಅವರನ್ನು ಮೂರು ದಿನಗಳ ಕಾಲ ತಡೆದಿದ್ದರು, ನಮ್ಮ ಸೈನ್ಯವು ಅದರ ನಂತರವೇ ತಲುಪಿತು. ಸತ್ಯವೆಂದರೆ ಅವರು ಭಾರತವಿಲ್ಲದೆ ಬದುಕಲು ಸಾಧ್ಯವಿಲ್ಲ. (ಪಹಲ್ಗಾಮ್‌ನಲ್ಲಿ) ನಡೆದದ್ದು ಅವರಿಗೆ ಹೆಚ್ಚು ನೋವುಂಟು ಮಾಡಿದೆ. ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಕಾಶ್ಮೀರಿಗಳು ಭಾರತೀಯರು ಮತ್ತು ಅವರಲ್ಲಿ 99% ಭಾರತಕ್ಕೆ ನಿಷ್ಠರಾಗಿದ್ದಾರೆ ಎಂದು ಅಖ್ತರ್‌ ಕಾಶ್ಮೀರಗಳ ಪರ ಹೇಳಿಕೆ ನೀಡಿದ್ದಾರೆ.