ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

IIT Baba : ಖಾಸಗಿ ವಾಹಿನಿಯ ಸಂದರ್ಶನದ ವೇಳೆ ಐಐಟಿ ಬಾಬಾ ಮೇಲೆ ಹಲ್ಲೆ; ನಡೆದಿದ್ದೇನು?

ಮಹಾಕುಂಭ ಮೇಳದಲ್ಲಿ ಜನಪ್ರಿಯರಾದ 'ಐಐಟಿ ಬಾಬಾ'ಅಲಿಯಾಸ್ ಅಭಯ್ ಸಿಂಗ್, ಶುಕ್ರವಾರ ನೋಯ್ಡಾದಲ್ಲಿ ಖಾಸಗಿ ಚಾನೆಲ್ ಒಂದರ ಸುದ್ದಿ ಚರ್ಚಾ ಕಾರ್ಯಕ್ರಮದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಐಐಟಿ ಬಾಬಾ' ಸೆಕ್ಟರ್ 126 ರ ಪೊಲೀಸ್ ಹೊರಠಾಣೆ ಹೊರಗೆ ಕುಳಿತು ಪ್ರತಿಭಟನೆ ನಡೆಸಿದ್ದರು. ನಂತರ ಪೊಲೀಸರು ಅವರ ಮನವೊಲಿಸಿದ ನಂತರ ಅವರು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ಐಐಟಿ ಬಾಬಾ ಮೇಲೆ ಹಲ್ಲೆ?  ಘಟನೆಯೇನು?

ಐಐಟಿ ಬಾಬಾ

Profile Vishakha Bhat Mar 1, 2025 10:58 AM

ಲಖನೌ: ಮಹಾಕುಂಭ ಮೇಳದಲ್ಲಿ ಜನಪ್ರಿಯರಾದ 'ಐಐಟಿ ಬಾಬಾ' (IIT Baba) ಅಲಿಯಾಸ್ ಅಭಯ್ ಸಿಂಗ್, ಶುಕ್ರವಾರ ನೋಯ್ಡಾದಲ್ಲಿ ಖಾಸಗಿ ಚಾನೆಲ್ ಒಂದರ ಸುದ್ದಿ ಚರ್ಚಾ ಕಾರ್ಯಕ್ರಮದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಕೇಸರಿ ಬಟ್ಟೆ ಧರಿಸಿದ ಕೆಲವು ಜನರು ಸುದ್ದಿ ಕೊಠಡಿಗೆ ಬಂದು ತನ್ನೊಂದಿಗೆ ಅನುಚಿತವಾಗಿ ವರ್ತಿಸಿ, ಕೋಲುಗಳಿಂದ ಹೊಡೆದಿದ್ದಾರೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಐಐಟಿ ಬಾಬಾ' ಸೆಕ್ಟರ್ 126 ರ ಪೊಲೀಸ್ ಹೊರಠಾಣೆ ಹೊರಗೆ ಕುಳಿತು ಪ್ರತಿಭಟನೆ ನಡೆಸಿದ್ದರು. ನಂತರ ಪೊಲೀಸರು ಅವರ ಮನವೊಲಿಸಿದ ನಂತರ ಅವರು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ವರದಿಗಳ ಪ್ರಕಾರ, ಐಐಟಿ ಬಾಬಾ ಅವರು ನೋಯ್ಡಾದ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಚರ್ಚೆಯಲ್ಲಿ ಭಾಗವಹಿಸಲು ಭೇಟಿ ನೀಡಿದ್ದರು. ಈ ಸಮಯದಲ್ಲಿ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಐಐಟಿ ಬಾಬಾ ತಮ್ಮ ಇನ್‌ಸ್ಟಾಗ್ರಾಮ್ ಲೈವ್ ಸೆಷನ್‌ನಲ್ಲಿ ಇಡೀ ಘಟನೆಯನ್ನು ವಿವರಿಸಿದ್ದಾರೆ. ಹಲ್ಲೆಗೆ ಸಂಬಂಧಿಸಿದಂತೆ ಅವರು ಪೊಲೀಸರಿಗೆ ಸಲ್ಲಿಸಿದ ದೂರು ಪತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಪತ್ರದಲ್ಲಿ ಅವರು "ನನ್ನನ್ನು ಚರ್ಚೆಗೆ ಆಹ್ವಾನಿಸಲಾಗಿತ್ತು. ಈ ಸಮಯದಲ್ಲಿ, ಹೊರಗಿನಿಂದ ಬಂದ ಕೆಲವು ಕೇಸರಿ ವಸ್ತ್ರಧಾರಿ ವ್ಯಕ್ತಿಗಳು ಸುದ್ದಿ ಕೋಣೆಗೆ ನುಗ್ಗಿ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು. ಆ ಕ್ಷಣದಲ್ಲಿ, ಒಬ್ಬ ವ್ಯಕ್ತಿ ನನಗೆ ಕೋಲಿನಿಂದ ಹೊಡೆದನು. ನಂತರ, ನನ್ನನ್ನು ಬಲವಂತವಾಗಿ ಕೋಣೆಯಲ್ಲಿ ಬಂಧಿಸಲಾಯಿತು. ನಾನು ಹೇಗೋ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆ." ಎಂದು ಹೇಳಿದ್ದಾರೆ.

ಘಟನೆಯ ಕುರಿತು ಹೆಚ್ಚಿನ ಮಾಹಿತಿ ನೀಡಿದ ಪೊಲೀಸ್ ಮೂಲಗಳು, ಐಐಟಿ ಬಾಬಾ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಕೆಲವು ಸಂತರು ಮತ್ತು ಋಷಿಗಳೂ ಉಪಸ್ಥಿತರಿದ್ದರು ಎಂದು ತಿಳಿಸಿವೆ. ಚಾನೆಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಬಾಬಾ ಯಾರೊಂದಿಗೋ ಮೊಬೈಲ್‌ನಲ್ಲಿ ಮಾತನಾಡುತ್ತಾ ಕಾರ್ಯಕ್ರಮದಿಂದ ಹೊರನಡೆಯಲು ಯತ್ನಿಸುತ್ತಿರುವುದು ಕಂಡುಬಂದಿದೆ. ಈ ವೇಳೆ ವಾಹಿನಿಯವರು ತನ್ನನ್ನು ಕೂಡಿಹಾಕಿದ್ದಾರೆ ಎಂದು ಐಐಟಿ ಬಾಬಾ ಆರೋಪಿಸಿದ್ದಾರೆ ಎನ್ನಲಾಗಿದೆ.



ಈ ಸುದ್ದಿಯನ್ನೂ ಓದಿ: IIT Baba: ಸುಳ್ಳಾದ ಐಐಟಿ ಬಾಬಾ ಭವಿಷ್ಯ; ನೀನೊಬ್ಬ ಡೋಂಗಿ ಬಾಬಾ ಎಂದ ನೆಟ್ಟಿಗರು

ಯಾರು ಈ ಐಐಟಿ ಬಾಬಾ?

ಮಹಾ ಕುಂಭದ ಸಂದರ್ಭದಲ್ಲಿ ಮೊದಲ ಬಾರಿಗೆ ಸಾರ್ವಜನಿಕರ ಗಮನ ಸೆಳೆದ ಏರೋಸ್ಪೇಸ್ ಎಂಜಿನಿಯರ್ ಆಗಿದ್ದ ಸಾಧು ಅಭಯ್ ಸಿಂಗ್, ಐಐಟಿ-ಮುಂಬೈ ಪದವಿ ಪಡೆದುಕೊಂಡಿದ್ದರು. ನಂತರ ಸನ್ಯಾಸ ಸ್ವೀಕರಿಸಿದ್ದರು. ಇತ್ತೀಚೆಗೆ ನಡೆದ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ಬಗ್ಗೆ ಬಾಬಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದರು. ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸುತ್ತದೆ ಎಂಬ ಅವರ ಭವಿಷ್ಯ ಸುಳ್ಳಾಗಿತ್ತು. ಈ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ ಸಾಧು ಅಭಯ್ ಸಿಂಗ್ ಒಂದು ಪಾಡ್‌ಕ್ಯಾಸ್ಟ್‌ನಲ್ಲಿ ಭಾರತ ಗೆಲ್ಲುವ ಯಾವುದೇ ಸಾಧ್ಯತೆಯಿಲ್ಲ ಎಂದು ವಿಶ್ವಾಸದಿಂದ ಹೇಳಿಕೆ ನೀಡಿದ್ದರು. "ಈ ಬಾರಿ ಭಾರತ ಗೆಲ್ಲುವುದಿಲ್ಲ. ವಿರಾಟ್ ಕೊಹ್ಲಿ ಮತ್ತು ತಂಡಕ್ಕೆ ಹೇಳಿ, ಗೆದ್ದು ತೋರಿಸಲಿ. ಗೆಲ್ಲುವುದಿಲ್ಲ ಎಂದು ನಾನು ಹೇಳಿದ ಮೇಲೆ ಗೆಲ್ಲುವುದಿಲ್ಲ" ಎಂದು ಬಾಬಾ ಘಂಟಾಘೋಷವಾಗಿ ಹೇಳಿದ್ದರು. ಆದರೆ ಭಾರತದ ಭರ್ಜರಿ ಗೆಲುವಿನ ನಂತರ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್ ಆಗಿತ್ತು.