ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಕೆಎಲ್‌ ರಾಹುಲ್‌ ಅಸಮಾಧಾನ? ಎಚ್‌ ಬದ್ರಿನಾಥ್‌ ಹೇಳಿದ್ದಿದು!

IPL 2026: 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ ಆರಂಭವಾಗುವುದಕ್ಕೂ ಮುನ್ನ ಚೆನೈ ಸೂಪರ್‌ ಕಿಂಗ್ಸ್‌ ಮಾಜಿ ಆಟಗಾರ ಎಸ್‌ ಬದ್ರಿನಾಥ್‌, ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವಿಕೆಟ್‌ ಕೀಪರ್‌ ಕೆಎಲ್‌ ರಾಹುಲ್‌ ಬಗ್ಗೆ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಡೆಲ್ಲಿ ತಂಡದಲ್ಲಿ ರಾಹುಲ್‌ಗೆ ಅಸಮಾಧಾನವಿದೆ ಎಂದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಕೆಎಲ್‌ ರಾಹುಲ್‌ ಅಸಮಾಧಾನ!

ಕೆಎಲ್‌ ರಾಹುಲ್‌ ಬಗ್ಗೆ ಎಸ್‌ ಬದ್ರಿನಾಥ್‌ ಅಚ್ಚರಿ ಹೇಳಿಕೆ. -

Profile
Ramesh Kote Mar 18, 2026 5:35 PM

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್‌ (Delhi capitals) ತಂಡದಲ್ಲಿ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ಗೆ (KL Rahul) ಅಸಮಾಧಾನವಿದೆ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ಬ್ಯಾಟ್ಸ್‌ಮನ್‌ ಸುಬ್ರಮಣ್ಯಮ್‌ ಬದ್ರಿನಾಥ್‌ (S Badrinath) ಅಚ್ಚರಿ ಹೇಳಿಕೆ ನೀಡಿದ್ದಾರೆ. 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆಟಗಾರರ ಮೆಹಾ ಹರಾಜಿನಲ್ಲಿ ಕೆಎಲ್‌ ರಾಹುಲ್‌ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ 14 ಕೋಟಿ ರು. ಗಳಿಗೆ ಖರೀದಿಸಿತ್ತು ಹಾಗೂ ನಾಯಕತ್ವ ನೀಡಬಹುದೆಂದು ನಿರೀಕ್ಷೆ ಮಾಡಲಾಗಿತ್ತು ಆದರೆ, ಅಕ್ಷರ್‌ ಪಟೇಲ್‌ಗೆ ನಾಯಕತ್ವವನ್ನು ನೀಡಲಾಗಿತ್ತು. ಕಳೆದ ಸೀಸನ್‌ನಲ್ಲಿ ಕೆಎಲ್‌ ರಾಹುಲ್‌ ಅದ್ಭುತವಾಗಿ ಬ್ಯಾಟ್‌ ಮಾಡಿದ್ದರು. ಅವರು ಆಡಿದ್ದ 13 ಇನಿಂಗ್ಸ್‌ಗಳಿಂದ 539 ರನ್‌ಗಳನ್ನು ಸಿಡಿಸಿದ್ದರು.

2026ರ ಐಪಿಎಲ್‌ ಮಿನಿ ಹರಾಜಿಗೂ ಮುನ್ನ ಕೆಎಲ್‌ ರಾಹುಲ್‌ ಡೆಲ್ಲಿ ಫ್ರಾಂಚೈಸಿಯಿಂದ ಟ್ರೇಡ್ ಮೂಲಕ ಹೊರಡುವ ಸಾಧ್ಯತೆಗಳ ಬಗ್ಗೆ ವದಂತಿಗಳು ಹರಿದಾಡುತ್ತಿದ್ದವು. ಆದರೆ ಕೊನೆಗೆ 33ರ ವಯಸ್ಸಿನ ಆಟಗಾರನನ್ನು ಫ್ರಾಂಚೈಸಿ ಉಳಿಸಿಕೊಂಡಿತು.ಚೆನ್ನೈ ಸೂಪರ್‌ಕಿಂಗ್ಸ್‌ ಮಾಜಿ ಬ್ಯಾಟ್ಸ್‌ಮನ್‌ ಎಸ್‌ ಬದ್ರಿನಾಥ್‌, ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಕೆಎಲ್‌ ರಾಹುಲ್‌ ಸಂಪೂರ್ಣವಾಗಿ ಸಂತೋಷವಾಗಿದ್ದಾರೆಯೇ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಕಳೆದ ಸೀಸನ್‌ನಲ್ಲಿ ಅವರ ಬ್ಯಾಟಿಂಗ್ ಸ್ಥಾನವನ್ನು ಪದೇ-ಪದೆ ಬದಲಾಯಿಸಲಾಗಿತ್ತು ಎಂದು ಹೇಳಿದ್ದಾರೆ.

IPL 2026: ಐಪಿಎಲ್‌ ಆರಂಭಕ್ಕೂ ಮುನ್ನ ಅಕ್ಷರ್‌ ಪಟೇಲ್‌ಗೆ ಎಚ್ಚರಿಕೆ ನೀಡಿದ ಚೇತೇಶ್ವರ್‌ ಪೂಜಾರ!

ಡೆಲ್ಲಿ ತಂಡದಲ್ಲಿ ಕೆಎಲ್‌ ರಾಹುಲ್‌ ಅಸಮಾಧಾನ

ಎಸ್‌ ಬದ್ರಿನಾಥ್‌ ಅವರು ಕೆಎಲ್‌ ರಾಹುಲ್‌ ಅವರ ಬ್ಯಾಟಿಂಗ್ ಸ್ಥಾನ ಕುರಿತು ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಗೊಂದಲ ಮುಂದುವರಿದಿದೆ ಎಂದು ಹೇಳಿದ್ದಾರೆ.

“ಪ್ರತಿ ವರ್ಷವೂ ಅವರ ಬ್ಯಾಟಿಂಗ್ ಆರ್ಡರ್ ಒಂದು ಸಮಸ್ಯೆಯಾಗುತ್ತಿದೆ, ವಿಶೇಷವಾಗಿ ಕೆಎಲ್ ರಾಹುಲ್ ಯಾವ ಸ್ಥಾನದಲ್ಲಿ ಬ್ಯಾಟ್ ಮಾಡಬೇಕು ಎಂಬುದು. ನನ್ನ ಅಭಿಪ್ರಾಯದಲ್ಲಿ ರಾಹುಲ್ ಓಪನಿಂಗ್ ಮಾಡಲು ಇಷ್ಟಪಡುತ್ತಾರೆ. ಆದರೆ ಇನ್ನೊಂದು ಕಡೆ, ಟೀಮ್‌ ಮ್ಯಾನೇಜ್‌ಮೆಂಟ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲು ಬಯಸುತ್ತಿದೆ,” ಎಂದು ಅವರು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಹೇಳಿದ್ದಾರೆ.

“ಇದು ನಿರಂತರವಾಗಿ ನಡೆಯುತ್ತಿರುವ ಸಂಘರ್ಷದಂತಿದೆ. ಈ ಸಮಸ್ಯೆಯನ್ನು ಅವರು ಖಂಡಿತವಾಗಿ ಪರಿಹರಿಸಬೇಕು. ಕೆಎಲ್ ರಾಹುಲ್ ಡಿಸಿ ತಂಡದಲ್ಲಿ ಸಂತೋಷವಾಗಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ,” ಎಂದು ಅವರು ತಿಳಿಸಿದ್ದಾರೆ.

IPL 2026: ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಕೆಎಲ್‌ ರಾಹುಲ್‌ಗೆ ದೊಡ್ಡ ಜವಾಬ್ದಾರಿ!

ಡೆಲ್ಲಿ ಕ್ಯಾಪಿಟಲ್ಸ್‌ ಕಳೆದ ಸೀಸನ್‌ನಲ್ಲಿ ಅಗ್ರ ನಾಲ್ಕಕ್ಕೆ ತಲುಪುವಲ್ಲಿ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಒಂಡಿತ್ತು. ಈ ಬಾರಿ ತಂಡವನ್ನು ಬಲಪಡಿಸಲು ಪ್ರಮುಖ ಆಟಗಾರರನ್ನು ಸೇರಿಸಿಕೊಂಡಿದೆ. ವಿದೇಶಿ ಓಪನರ್‌ಗಳಾಗಿ ಪಥುಮ್‌ ನಿಸಾಂಕ ಮತ್ತು ಬೆನ್‌ ಡಕೆಟ್‌ ಅವರನ್ನು ಸೇರಿಸಿಕೊಂಡಿದ್ದು, ಭಾರತೀಯ ಬ್ಯಾಟರ್ ಪೃಥ್ವಿಶಾ ಅವರನ್ನು ಕರೆದುಕೊಂಡಿದ್ದಾರೆ. ಮಧ್ಯಕ್ರಮದಲ್ಲಿ ನಿತೀಶ್‌ ರಾನಾ, ಡೇವಿಡ್‌ ಮಿಲ್ಲರ್‌ ಹಾಗೂ ಟ್ರಿಸ್ಟನ್‌ ಸ್ಟಬ್ಸ್‌ ಇದ್ದಾರೆ. ಫಿನಿಷರ್ ಪಾತ್ರವನ್ನು ಆಶುತೋಷ್‌ ಶರ್ಮಾ ನಿರ್ವಹಿಸಲಿದ್ದು, ಸಮೀರ್‌ ರಿಝ್ವಿ ಕೂಡ ಕೆಲವು ಪಂದ್ಯಗಳಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಿದೆ.

ಕೆಎಲ್‌ ರಾಹುಲ್‌ ಕಳೆದ 12 ತಿಂಗಳಲ್ಲಿ ಭಾರತ ಪರ ಟೆಸ್ಟ್ ಮತ್ತು ಒಡಿಐಗಳಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಆದರೆ ಅವರು 2022ರ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಆಡಿದ ಬಳಿಕ ಟಿ20ಐ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ.