ಕಾಳಿಂಗ ಸರ್ಪದ ಜೊತೆ ಹುಚ್ಚಾಟ; ಪ್ರಾಣವನ್ನೇ ಕಳೆದುಕೊಂಡ ಉರಗ ತಜ್ಞ, ಭಯಾನಕ ವಿಡಿಯೊ ವೈರಲ್
Viral Video: ವಿಷಕಾರಿ ಹಾವಿನ ಜೊತೆ ಹುಚ್ಚಾಟ ಮೆರೆಯುವುದು ಅಷ್ಟು ಸುಲಭದ ಮಾತಲ್ಲ.. ನಾಗರ ಹಾವು, ಕಾಳಿಂಗ ಸರ್ಪ ಹೀಗೆ ವಿಷಕಾರಿ ಹಾವನ್ನು ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡವರು ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಯಾವುದೇ ಸುರಕ್ಷತಾ ಮಾರ್ಗ ಬಳಸದೇ ಉರಗ ತಜ್ಞ ಕಾಳಿಂಗ ಸರ್ಪವನ್ನು ಹಿಡಿಯಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಸದ್ಯ ಈ ಅಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಕಾಳಿಂಗ ಸರ್ಪ ಹಿಡಿಯಲು ಹೋಗಿ ಉರಗ ತಜ್ಞ ಸಾವು -
ನವದೆಹಲಿ,ಮೇ.2: ಹಾವಿನ ದ್ವೇಷ ಹನ್ನೇರಡು ವರುಷ ಅನ್ನುವ ಮಾತನ್ನು ನೀವು ಕೇಳಿರಬಹುದು. ಅದರಲ್ಲೂ ವಿಷಕಾರಿ ಹಾವಿನ ಜೊತೆ ಹುಚ್ಚಾಟ ಮೆರೆಯುವುದು ಅಷ್ಟು ಸುಲಭದ ಮಾತಲ್ಲ. ನಾಗರ ಹಾವು, ಕಾಳಿಂಗ ಸರ್ಪ ಹೀಗೆ ವಿಷಕಾರಿ ಹಾವನ್ನು ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡವರು ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಯಾವುದೇ ಸುರಕ್ಷತಾ ಮಾರ್ಗ ಬಳಸದೇ ಉರಗ ತಜ್ಞ ಕಾಳಿಂಗ ಸರ್ಪವನ್ನು ಹಿಡಿಯಲು ಹೋಗಿ ಪ್ರಾಣವನ್ನೇ ಕಳೆದು ಕೊಂಡಿದ್ದಾನೆ. ಸದ್ಯ ಈ ಅಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗುತ್ತಿದೆ.
ಉರಗ ತಜ್ಞರು ಹಾವುಗಳನ್ನು ಹಿಡಿಯಲು ಹೋದರೂ ಸುರಕ್ಷಿತವಾಗಿ ಹಿಡಿಯುತ್ತಾರೆ. ಆದರೆ ಇಲ್ಲೊಬ್ಬರು ಅತೀವ ಆತ್ಮವಿಶ್ವಾಸದಿಂದ ಹಾವಿನ ಜೊತೆ ಹುಚ್ಚಾಟ ಮೆರೆಯಲು ಹೋಗಿ ಸಾವನ್ನಪ್ಪಿದ್ದಾರೆ. ಜನ ವಸತಿ ಪ್ರದೇಶ ಇರುವ ಕಟ್ಟಡ ವೊಂದಕ್ಕೆ ಹಾವು ತೆರಳಿದ್ದು ಇದನ್ನು ಹಿಡಿಯಲು ಹೋದ ಉರಗ ತಜ್ಞ ಅತೀವವಾಗಿ ವರ್ತಿಸಿದ್ದಾನೆ.
ವಿಡಿಯೋ ನೋಡಿ:
The man who came to catch the snake paid a heavy price for playing with it, a painful de**ath in a live video within 3 minutes! pic.twitter.com/usGR3Xx3MI
— Ghar Ke Kalesh (@gharkekalesh) May 1, 2026
ಹಾವನ್ನು ಹಿಡಿದು ಸುರಕ್ಷಿತವಾಗಿ ಬ್ಯಾಗ್ ನ ಒಳಗೆ ಹಾಕುವ ಬದಲು ಆತ ಜನರಿಗೆ ನೋಡಲು ಪ್ರದರ್ಶನ ಇಟ್ಟಿದ್ದಾನೆ. ಈ ಸಂದರ್ಭದಲ್ಲಿ ಆತನ ಹಿಡಿತದಿಂದ ತನ್ನನ್ನು ತಾನು ಬಿಡಿಸಿ ಕೊಳ್ಳಲು ಹಾವು ಪ್ರಯತ್ನಿಸುತ್ತದೆ. ಆತ ಹಾವನ್ನು ತಟ್ಟುತ್ತಿದ್ದಂತೆ ಕೋಪಗೊಂಡ ಕಾಳಿಂಗ ಸರ್ಪ ಮೊದಲು ಆತನ ಕಾಲಿಗೆ ಕಚ್ಚಿದೆ.
ಆರಂಭದಲ್ಲಿ, ಆ ವ್ಯಕ್ತಿ ಭಯಭೀತನಾಗಿ ಕಾಣಿಸಿದ್ದು ಹಾವನ್ನು ನಿಭಾಯಿಸುವುದನ್ನು ಮುಂದು ವರಿಸುತ್ತಾನೆ.. ಈ ವೇಳೆ ಹಾವು ಎರಡನೇ ಬಾರಿ ಆತನ ಬೆರಳಿಗೆ ಕಚ್ಚಿದೆ. ಬೆರಳಿಗೆ ಕಚ್ಚಿದ ನಂತರ, ಆತ ರಕ್ತವನ್ನು ಹೀರಿ ಹೊರಹಾಕಲು ಪ್ರಯತ್ನಿಸಿದ್ದಾನೆ. ಸ್ವಲ್ಪ ಸಮಯದ ನಂತರ ದೇಹದಲ್ಲಿ ವಿಷ ಹರಡಿದ್ದು ವ್ಯಕ್ತಿಯ ಸ್ಥಿತಿ ಕ್ಷೀಣಿಸಿ ಆತ ಸ್ಥಳದಲ್ಲೇ ಕುಸಿದು ಬೀಳುತ್ತಾನೆ.
Viral Video: ಏರ್‌ಪೋರ್ಟ್ ರೋಡ್‌ನಲ್ಲಿ ಮಚ್ಚು ಹಿಡಿದು ವಿಲೀಂಗ್; ಯುವಕರ ಹುಚ್ಚಾಟ ಕ್ಯಾಮರಾದಲ್ಲಿ ಸೆರೆ
ವೈರಲ್ ವಿಡಿಯೋದಲ್ಲಿ, ಉರಗ ತಜ್ಞ ಕಾಳಿಂಗ ಸರ್ಪವನ್ನು ಕಟ್ಟಡದಿಂದ ಹೊರಗೆ ಹೊತ್ತೊಯ್ಯು ವುದನ್ನು ಕಾಣಬಹುದು. ಆದಾಗ್ಯೂ, ಹಾವನ್ನು ಸುರಕ್ಷಿತ ಚೀಲದಲ್ಲಿ ಇಡುವ ಬದಲು, ಅವನು ಅದನ್ನು ನೆಲದ ಮೇಲೆ ಇಡುತ್ತಾನೆ. ಇದರಿಂದ ಕೆರಳಿದ ಹಾವು ಆತನ ಹಿಡಿತದಿಂದ ತನ್ನನ್ನು ತಾನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ಕಾಳಿಂಗ ಸರ್ಪವು ವ್ಯಕ್ತಿಯ ಕಾಲಿಗೆ ಕಚ್ಚಿ ನಂತರ ಕೈಗೆ ಕಚ್ಚುತ್ತದೆ. ಆತ ಗಾಯವನ್ನು ಪರೀಕ್ಷಿಸಿ ಕ್ಯಾಮೆರಾಮನ್‌ಗೆ ತೋರಿಸುವುದನ್ನು ಕಾಣಬಹುದು. ನಂತರ ಅವನು ತನ್ನ ಉಂಗುರವನ್ನು ತೆಗೆದು ಕಚ್ಚಿದ ಸ್ಥಳದಿಂದ ರಕ್ತವನ್ನು ಹೀರಿದ್ದಾನೆ. ಇದು ದೇಹದಲ್ಲಿ ವಿಷ ಹರಡುವಿಕೆಯನ್ನು ವೇಗಗೊಳಿಸುತ್ತದೆ
ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಈತನ ಮೀತಿ ಮೀರಿದ ವರ್ತನೆಗೆ ಹಾವು ದ್ವೇಷ ತಿರಿಸಿಕೊಂಡಿದೆ ಎಂದಿದ್ದಾರೆ. ಮತ್ತೊಬ್ಬರು ವಿಷಕಾರಿ ಹಾವಿನ ಜೊತೆ ಆಟವಾಡುವುದು ತಪ್ಪು..ಇದರಿಂದ ಪ್ರಾಣವೇ ಕಳೆದುಕೊಂಡಿದ್ದಾನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.