ಚಲಿಸುತ್ತಿದ್ದ ರೈಲಿನಡಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು; ಕೊನೆಗೆ ಆಗಿದ್ದೇ ಬೇರೆ
Self Harming: ಉತ್ತರ ಪ್ರದೇಶದ ಭದೋಹಿ ಜಿಲ್ಲೆಯಲ್ಲಿ ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದ 28 ವರ್ಷದ ಯುವಕ ಸಾವನ್ನಪ್ಪಿದ್ದು, ಆತನ ಪ್ರೇಯಸಿ 24 ವರ್ಷದ ಯುವತಿಯೊಬ್ಬಳು ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಲಖನೌ: ಉತ್ತರ ಪ್ರದೇಶದ (Uttar Pradesh) ಭದೋಹಿ ಜಿಲ್ಲೆಯಲ್ಲಿ ಚಲಿಸುತ್ತಿದ್ದ ರೈಲಿನ (Train) ಮುಂದೆ ಜಿಗಿದ 28 ವರ್ಷದ ಯುವಕ ಸಾವನ್ನಪ್ಪಿದ್ದು (Suicide Attempt) ಆತನ ಪ್ರೇಯಸಿ 24 ವರ್ಷದ ಯುವತಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣಾಧಿಕಾರಿ ರಮೇಶ್ ಕುಮಾರ್ ಮಾಹಿತಿ ನೀಡಿ, "ಸೊನ್ಹಾರ್ ಮಹುವಾ ಪಟ್ಟಿಯ ನಿವಾಸಿಗಳಾದ ರೋಹಿತ್ ಕುಮಾರ್ ಯಾದವ್ (28) ಮತ್ತು ಕಾಜಲ್ ಗೌತಮ್ (24) ಎಂಬುವವರು ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಭದೋಹಿ-ವಾರಾಣಸಿ ಗಡಿಯ ಕಾಂಢಿಯಾ ರೈಲ್ವೆ ಕ್ರಾಸಿಂಗ್ ಬಳಿ ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದಿದ್ದಾರೆʼʼ ಎಂದು ಹೇಳಿದ್ದಾರೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿರುವ SHO, ಇಬ್ಬರೂ ಆಟೋರಿಕ್ಷಾದಿಂದ ಇಳಿದು ಸುಮಾರು 100 ಮೀಟರ್ ದೂರದಲ್ಲಿರುವ ರೈಲ್ವೆ ಹಳಿಯ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ನೋಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: Haryana Crime: ಸ್ನೇಹಿತನ ಖಾಸಗಿ ಭಾಗಕ್ಕೆ ಪೈಪ್ ಇಟ್ಟು ನೀರು ಬಿಟ್ಟ ಯುವಕರು; ಮುಂದೆ ಆಗಿದ್ದು ಮಾತ್ರ ಘೋರ ದುರಂತ
ಗಂಭೀರವಾಗಿ ಗಾಯಗೊಂಡಿರುವ ಕಾಜಲ್ ಗೌತಮ್‌ಳನ್ನು ಭದೋಹಿಯ ಮಹಾರಾಜ ಬಲವಂತ್ ಸಿಂಗ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ವಾರಾಣಸಿಯ BHU ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಗಿದೆ. ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ. ರೋಹಿತ್ ಯಾದವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪೊಲೀಸರ ಪ್ರಕಾರ ವಿವಾಹಿತನಾಗಿದ್ದ ಯಾದವ್‌ಗೆ ಇಬ್ಬರು ಮಕ್ಕಳಿದ್ದರೂ ಕಾಜಲ್ ಗೌತಮ್ ಜತೆ ಕಳೆದ ಒಂದು ವರ್ಷದಿಂದ ಪ್ರೇಮ ಸಂಬಂಧದಲ್ಲಿದ್ದ. ಇಬ್ಬರೂ ತಮ್ಮ ಕುಟುಂಬಗಳ ವಿರೋಧದ ನಡುವೆಯೂ ಮದುವೆಯಾಗಲು ಇಚ್ಛಿಸಿದ್ದರು ಎಂದು ವರದಿಯಾಗಿದೆ.