Operation Sindoor: ಉರಿಯಿಂದ ಪಹಲ್ಗಾಮ್‌ವರೆಗೆ- 3 ಪ್ರಮುಖ ಭಯೋತ್ಪಾದಕ ದಾಳಿಗಳಿಗೆ ಭಾರತದ ಪ್ರತ್ಯುತ್ತರ ಹೇಗಿತ್ತು?
Operation Sindoor: ಇಂದು ಬೆಳಗ್ಗೆ 1:44 ಗಂಟೆಗೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯ 15 ದಿನಗಳ ನಂತರ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) 9 ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಸ್ಕಾಲ್ಪ್ ಕ್ಷಿಪಣಿ, ಹ್ಯಾಮರ್ ಬಾಂಬ್‌ಗಳಂತಹ ನಿಖರ ಶಸ್ತ್ರಾಸ್ತ್ರಗಳು ಮತ್ತು 'ಲಾಯಿಟರಿಂಗ್ ಮ್ಯುನಿಷನ್ಸ್' ಅಂದರೆ ಡ್ರೋನ್‌ಗಳ ಮೂಲಕ ಗುರಿಗಳನ್ನು ಗುರುತಿಸಿ ದಾಳಿ ಮಾಡುವ ಕ್ಷಿಪಣಿಗಳನ್ನು ಈ ಕಾರ್ಯಾಚರಣೆಯಲ್ಲಿ ಬಳಸಲಾಗಿದೆ


ನವದೆಹಲಿ: ಇಂದು ಬೆಳಗ್ಗೆ 1:44 ಗಂಟೆಗೆ, ಪಹಲ್ಗಾಮ್ (Pahalgam) ಭಯೋತ್ಪಾದಕ ದಾಳಿಯ (Pahalgam Terrorist Attack) 15 ದಿನಗಳ ನಂತರ ಭಾರತವು ಪಾಕಿಸ್ತಾನ (Pakistan) ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) 9 ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಸ್ಕಾಲ್ಪ್ ಕ್ಷಿಪಣಿ (SCALP Missile), ಹ್ಯಾಮರ್ ಬಾಂಬ್‌ಗಳಂತಹ (HAMMER Bomb) ನಿಖರ ಶಸ್ತ್ರಾಸ್ತ್ರಗಳು ಮತ್ತು 'ಲಾಯಿಟರಿಂಗ್ ಮ್ಯುನಿಷನ್ಸ್' ಅಂದರೆ ಡ್ರೋನ್‌ಗಳ ಮೂಲಕ ಗುರಿಗಳನ್ನು ಗುರುತಿಸಿ ದಾಳಿ ಮಾಡುವ ಕ್ಷಿಪಣಿಗಳನ್ನು ಈ ಕಾರ್ಯಾಚರಣೆಯಲ್ಲಿ ಬಳಸಲಾಗಿದೆ. ಒಂಬತ್ತು ಗುರಿಗಳಲ್ಲಿ 26/11 ಮುಂಬೈ ದಾಳಿಗಳ ಹಿಂದಿರುವ ಭಯೋತ್ಪಾದಕರ ತರಬೇತಿ ಕೇಂದ್ರಗಳು ಮತ್ತು ಪಹಲ್ಗಾಮ್‌ನಲ್ಲಿ 26 ಜನರನ್ನು ಕೊಂದವರ ಶಿಬಿರಗಳು ಸೇರಿವೆ.
‘ಆಪರೇಷನ್ ಸಿಂದೂರ್' ಎಂಬ ಕೋಡ್‌ನೇಮ್‌ನ ಈ ದಾಳಿಗಳು ಲಷ್ಕರ್-ಎ-ತೊಯ್ಬಾ, ಜೈಷ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನ ಶಿಬಿರಗಳು ಮತ್ತು ಲಾಂಚ್‌ಪ್ಯಾಡ್‌ಗಳನ್ನು ಗುರಿಯಾಗಿಸಿದವು. ಈ ಮೂರು ಗುಂಪುಗಳು 2016 ರ ಉರಿ ಮತ್ತು 2019 ರ ಪುಲ್ವಾಮ ದಾಳಿಗಳು ಸೇರಿದಂತೆ ಭಾರತಕ್ಕೆ ದೀರ್ಘಕಾಲದಿಂದ ತೊಂದರೆ ಮತ್ತು ನಷ್ಟವನ್ನುಂಟುಮಾಡಿವೆ. 1971 ರ ಪಾಕಿಸ್ತಾನದೊಂದಿಗಿನ ಯುದ್ಧದ ನಂತರ ಇದು ಭಾರತದ ಮೊದಲ ತ್ರಿ-ಸೇವಾ ಸೈನಿಕ ಕಾರ್ಯಾಚರಣೆಯಾಗಿದೆ.
ಆಪರೇಷನ್ ಸಿಂದೂರ್
2025ರ ಏಪ್ರಿಲ್ 22ರ ಬೆಳಿಗ್ಗೆ, ದಕ್ಷಿಣ ಕಾಶ್ಮೀರದ 'ಮಿನಿ-ಸ್ವಿಟ್ಜರ್‌ಲ್ಯಾಂಡ್' ಎಂದು ಕರೆಯಲ್ಪಡುವ ಪಹಲ್ಗಾಮ್‌ನ ಬೈಸರನ್ ಕಣಿವೆಯು ಸಂತೋಷ ಮತ್ತು ಆನಂದದಿಂದ ಕೂಡಿತ್ತು. ಪ್ರವಾಸಿಗರು ತಂಪಾದ ಗಾಳಿ ಮತ್ತು ಹಸಿರು ಹುಲ್ಲುಗಾವಲುಗಳನ್ನು ಆನಂದಿಸಲು ಆಗಮಿಸಿದ್ದರು. ಆದರೆ, ಮಧ್ಯಾಹ್ನ 2 ಗಂಟೆಯ ಹೊತ್ತಿಗೆ, ಆ ಹಸಿರು ಶವಗಳಿಂದ ಆವೃತವಾಯಿತು. ಉಗ್ರರು 26 ಜನರನ್ನು ಕೊಂದರು. ಇದು ವರ್ಷಗಳಲ್ಲೇ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿತ್ತು.
ಎರಡು ವಾರಗಳಿಗಿಂತ ಸ್ವಲ್ಪ ಹೆಚ್ಚು ಕಾಲದ ನಂತರ, ಮೇ 7 ರಂದು ಭಾರತೀಯ ಸೈನ್ಯವು ರಾತ್ರಿಯ ದಾಳಿಯನ್ನು ಆರಂಭಿಸಿತು, ಇದು ಭಯೋತ್ಪಾದಕ ಗುಂಪಿನ ಮುಖ್ಯ ಕಚೇರಿ ಮತ್ತು ದೇಶದ ವಿರುದ್ಧ ಬಳಸಲಾದ ತರಬೇತಿ ಶಿಬಿರಗಳನ್ನು ಗುರಿಯಾಗಿಸಿತು. ಪಾಕಿಸ್ತಾನದ ಪ್ರತಿಕ್ರಿಯೆಯನ್ನು ಆಧರಿಸಿ, ‘ಆಪರೇಷನ್ ಸಿಂದೂರ್' ಇದು ಮೊದಲ ಹಂತವಾಗಿದೆ ಎಂದು ವರದಿಯಾಗಿದೆ.
ಉರಿ ಸರ್ಜಿಕಲ್ ಸ್ಟ್ರೈಕ್
2016ರ ಸೆಪ್ಟೆಂಬರ್ 18 ರಂದು, ಜೈಷ್-ಎ-ಮೊಹಮ್ಮದ್‌ಗೆ ಸಂಬಂಧಿಸಿದ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಪಟ್ಟಣದ ಬಳಿಯ ಸೇನಾ ನೆಲೆಯ ಮೇಲೆ, ವಾಸ್ತವವಾಗಿ ಬ್ರಿಗೇಡ್ ಮುಖ್ಯ ಕಚೇರಿಯ ಮೇಲೆ ದಾಳಿ ನಡೆಸಿದರು. ಇದರಲ್ಲಿ ಹತ್ತೊಂಬತ್ತು ಸೈನಿಕರು ಹತರಾಗಿ ಮೂವತ್ತು ಜನರು ಗಾಯಗೊಂಡಿದ್ದರು.
ಈ ದಾಳಿಯಾದ ಒಂಬತ್ತು ದಿನಗಳ ನಂತರ ಭಾರತವು ಸರ್ಜಿಕಲ್ ಸ್ಟ್ರೈಕ್ ನಡೆಸಿತು, ಕೇವಲ ಮಾರಕ ಆಸ್ತ್ರಾಸ್ತ್ರಗಳನ್ನು ಮಾತ್ರವಲ್ಲದೆ, ಉರಿ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾದ ಪುರಾವೆಗಳಿದ್ದವು. ಕೊಲ್ಲಲಾದ ಭಯೋತ್ಪಾದಕರ ದೇಹದಿಂದ ಪಾಕ್ ಸೈನ್ಯದ ಗುರುತುಗಳಿರುವ ಗ್ರೆನೇಡ್‌ಗಳು ಮತ್ತು ಇತರ ಸಲಕರಣೆಗಳನ್ನು ಪಡೆಯಲಾಯಿತು. ಸೇನೆಯು ಗಡಿರೇಖೆಯನ್ನು ದಾಟಿ ಪಿಒಕೆಯಲ್ಲಿ ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳನ್ನು ಧ್ವಂಸಗೊಳಿಸಿದ್ದು, ಯಶಸ್ವಿ ಕಾರ್ಯಾಚರಣೆಯಾಗಿತ್ತು. ವರದಿಗಳ ಪ್ರಕಾರ 100ಕ್ಕೂ ಹೆಚ್ಚು ಭಯೋತ್ಪಾದಕರು ಕೊಲ್ಲಲ್ಪಟ್ಟರು.
ಈ ಸುದ್ದಿಯನ್ನು ಓದಿ: Operation Sindoor: ಛೀ..ನಾಚಿಕೆ ಇಲ್ಲದ ಪಾಕಿಸ್ತಾನ! ಹತ ಉಗ್ರರ ಅಂತ್ಯಕ್ರಿಯೆಯಲ್ಲಿ ಸೇನೆ ಭಾಗಿ; ಮೃತದೇಹಗಳ ಮೇಲೆ ಪಾಕ್ ಧ್ವಜ
ಬಾಲಾಕೋಟ್ ವೈಮಾನಿಕ ದಾಳಿ
ಮೂರು ವರ್ಷಗಳ ನಂತರ, ಕಾಶ್ಮೀರವು ಮತ್ತೊಮ್ಮೆ ಪ್ರಮುಖ ಭಯೋತ್ಪಾದಕ ದಾಳಿಗೆ ಸಾಕ್ಷಿಯಾಯಿತು. ಫೆಬ್ರವರಿ 26 ರಂದು ಭದ್ರತಾ ಪಡೆಗಳ ವಾಹನಗಳ ಮೇಲೆ ಮಾರುತಿ ಸುಜುಕಿ ಈಕೋ ವ್ಯಾನ್ ಚಾಲನೆ ಮಾಡುತ್ತಿದ್ದ ಆತ್ಮಾಹುತಿ ಬಾಂಬರ್ ದಾಳಿ ನಡೆಸಿದ್ದ. ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಯ 40 ಸಿಬ್ಬಂದಿ ಕೊಲ್ಲಲ್ಪಟ್ಟರು. ಈ ದಾಳಿಯನ್ನು ಜೈಷ್ ಗುಂಪು ನಡೆಸಿತ್ತು ಆದ್ರೆ ಪಾಜ್ ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ನಿರಾಕರಿಸಿತು. ಈ ಬಾರಿ, ದಾಳಿಯ 13 ದಿನಗಳ ನಂತರ, ಒಂದು ಡಜನ್ ವಾಯುಸೇನೆಯ ಮಿರಾಜ್ ಫೈಟರ್ ಜೆಟ್‌ಗಳು, ಗಡಿರೇಖೆಯನ್ನು ಸುಮಾರು 20 ಕಿಮೀ ದಾಟಿ, ಪಾಕಿಸ್ತಾನದ ಭೂಪ್ರದೇಶದೊಳಗೆ, ಬಾಲಾಕೋಟ್‌ನಲ್ಲಿ ಜೈಷ್ ತರಬೇತಿ ಶಿಬಿರಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದವು.