Chennai Aircraft Crash: ತಮಿಳುನಾಡಿನಲ್ಲಿ ಭಾರತೀಯ ವಾಯುಪಡೆಯ ವಿಮಾನ ಪತನ
ಭಾರತೀಯ ವಾಯುಪಡೆಗೆ ಸೇರಿದ Pilatus PC-7 ವಿಮಾನ ತಮಿಳುನಾಡಿನಲ್ಲಿ ಪತನವಾಗಿದೆ. ಚೆಂಗಳಪಟ್ಟು ಜಿಲ್ಲೆಯ ತಾಂಬರಮ್‌ನಲ್ಲಿ ವಿಮಾನ ಪತನವಾಗಿದ್ದು, ಪೈಲಟ್ ಅಪಾಯವಿಲ್ಲದೆ ಪಾರಾಗಿದ್ದಾರೆ. ದೈನಂದಿನ ತರಬೇತಿ ವೇಳೆ ಈ ಅವಘಡ ಸಂಭವಿಸಿದೆ. ಸದ್ಯ ವಿಮಾನ ಪತನವಾದ ದೃಶ್ಯ ವೈರಲ್ ಆಗಿದೆ.
ತಮಿಳುನಾಡಿನಲ್ಲಿ ಭಾರತೀಯ ಪಾಯುಪಡೆಗೆ ಸೇರಿದ ವಿಮಾನ ಪತನವಾಗಿದೆ -
ಚೆನ್ನೈ, ನ. 14: ಭಾರತೀಯ ವಾಯುಪಡೆಗೆ (Indian Air Force Aircraft) ಸೇರಿದ Pilatus PC-7 ವಿಮಾನ ತಮಿಳುನಾಡಿನಲ್ಲಿ ಪತನವಾಗಿದೆ (Chennai Aircraft Crash). ಚೆಂಗಳಪಟ್ಟು ಜಿಲ್ಲೆಯ ತಾಂಬರಂನಲ್ಲಿ ವಿಮಾನ ಪತನವಾಗಿದ್ದು, ಯಾವುದೇ ಅಪಾಯವಿಲ್ಲದೆ ಪೈಲಟ್ ಪಾರಾಗಿದ್ದಾರೆ. ದೈನಂದಿನ ತರಬೇತಿ ವೇಳೆ ಈ ಅವಘಡ ಸಂಭವಿಸಿದೆ. ವಿಮಾನ ಪತನವಾದ ಸ್ಥಳದಲ್ಲಿ ಸಾರ್ವಜನಿಕರು ಗುಂಪುಗೂಡಿರುವ ವಿಡಿಯೊ ವೈರಲ್ ಆಗಿದೆ.
ಅಪಘಾತಕ್ಕೀಡಾದ ವಿಮಾನವು ಪಿಸಿ-7 ಪಿಲಾಟಸ್ ಆಗಿದ್ದು, ಇದು ವಾಯುಪಡೆಯ ಕೆಡೆಟ್‌ಗಳಿಗೆ ಆರಂಭಿಕ ಹಾರಾಟ ತರಬೇತಿ ನೀಡುತ್ತದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಮತ್ತು ವಾಯು ಪಡೆಯ ತುರ್ತು ತಂಡಗಳು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ಕೈಗೊಂಡವು.
ವೈರಲ್ ಆದ ವಿಮಾನ ಪತನದ ದೃಶ್ಯ:
VIDEO | Tamil Nadu: An Air Force training aircraft crashed near Thiruporur in Chengalpattu district. More details are awaited.
— Press Trust of India (@PTI_News) November 14, 2025
(Full video available on PTI Videos – https://t.co/n147TvrpG7) pic.twitter.com/SPPRXri1mO
ಅಪಘಾತಕ್ಕೆ ಕಾರಣವೇನು ಎನ್ನುವುದು ತಕ್ಷಣಕ್ಕೆ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲು ವಿಚಾರಣೆ ಆರಂಭಿಸಲಾಗಿದೆ.
ಭಾರತೀಯ ವಾಯುಪಡೆಯ ಫ್ಲೈಯಿಂಗ್ ಇನ್‌ಸ್ಟ್ರಕ್ಟರ್ ಸ್ಕೂಲ್ (Flying Instructor's School) ಚೆನ್ನೈನ ತಾಂಬರಂನ ವಾಯುಪಡೆ ನಿಲ್ದಾಣದಲ್ಲಿದೆ. ಎಫ್‌ಐಎಸ್ ಸಶಸ್ತ್ರ ಪಡೆಗಳ ಪೈಲಟ್‌ಗಳಿಗೆ ತರಬೇತಿ ನೀಡುವ ಮತ್ತು ಅವರನ್ನು ಅರ್ಹ ಫ್ಲೈಯಿಂಗ್ ಇನ್‌ಸ್ಟ್ರಕ್ಟರ್‌ಗಳಾಗಿ ರೂಪಿಸುತ್ತದೆ. ಭಾರತೀಯ ವಾಯುಪಡೆ, ಭಾರತೀಯ ನೌಕಾಪಡೆ, ಭಾರತೀಯ ಸೇನೆ, ಭಾರತೀಯ ಕರಾವಳಿ ಕಾವಲು ಪಡೆಗೆ ತಾಂಬರಂನಲ್ಲಿ ತರಬೇತಿ ನೀಡಲಾಗುತ್ತದೆ.
ಈ ಸುದ್ದಿಯನ್ನೂ ಓದಿ: Jet Crash: ಜಾಗ್ವಾರ್ ಯುದ್ಧ ವಿಮಾನ ಪತನ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ
ಜೈಪುರ: ಕೆಲವು ತಿಂಗಳ ಹಿಂದೆ ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನವೊಂದು ರಾಜಸ್ಥಾನದ ಚುರು ಜಿಲ್ಲೆಯ ಭನೋಡದಲ್ಲಿ ಪತನವಾಗಿದ್ದು, ಇಬ್ಬರು ಪೈಲಟ್‌ಗಳು ಮೃತ ಪಟ್ಟಿದ್ದರು. ತರಬೇತಿ ಪ್ರಯುಕ್ತ ಹಾರಾಟ ನಡೆಸುತ್ತಿದ್ದ ಯುದ್ಧ ವಿಮಾನ ಗದ್ದೆ ಮೇಲೆ ಬಿದ್ದಿತ್ತು. ಎರಡು ಆಸನದ ಈ ಯುದ್ದ ವಿಮಾನ ರಾಜಸ್ಥಾನದ ಸೂರತ್‌ಗಡ್ ವಾಯುನೆಲೆಯಿಂದ ಹೊರಟಿತ್ತು.
ಈ ವರ್ಷ ನಡೆದ 3ನೇ ಜಾಗ್ವಾರ್ ಫೈಟರ್ ಜೆಟ್ ಅಪಘಾತ ಅದಾಗಿತ್ತು. ಮೊದಲನೆಯ ಜೆಟ್ ಮಾರ್ಚ್ 7ರಂದು ಹರಿಯಾಣದ ಪಂಚಕುಲದಲ್ಲಿ ಪತನವಾಗಿದ್ದರೆ ಎರಡನೆಯದು ಏಪ್ರಿಲ್ 2ರಂದು ಗುಜರಾತ್‌ನ ಜಾಮ್‌ನಗರ ಬಳಿ ಧರೆಗುರುಳಿತ್ತು.