Jet Crash: ಜಾಗ್ವಾರ್ ಯುದ್ಧ ವಿಮಾನ ಪತನ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಬುಧವಾರ ರಾತ್ರಿ ಗುಜರಾತ್‌ನ ಜಾಮ್‌ನಗರ ಬಳಿ ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನಗೊಂಡಿತ್ತು. ಆಗ ಆಕಾಶದಲ್ಲಿ ಬೆಳಕಿನ ಮಿಂಚು ಕಾಣಿಸಿಕೊಂಡಿದೆ. ಈ ಘಟನೆಗೆ ಕೆಲವೇ ಕ್ಷಣಗಳ ಮೊದಲು ಸುವರ್ದಾ ಗ್ರಾಮದ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಜೆಟ್ ಪತನಗೊಂಡ ಸಂಪೂರ್ಣ ದೃಶ್ಯಾವಳಿಗಳು ಸೆರೆಯಾಗಿವೆ.


ಗಾಂಧಿನಗರ: ವಾಯುಪಡೆಯ ಜಾಗ್ವಾರ್ ಜೆಟ್ ಗುಜರಾತ್‌ನಲ್ಲಿ ಪತನಗೊಂಡಿರುವ ಕ್ಷಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ (Jet Crash). ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನವು ತರಬೇತಿ ಕಾರ್ಯಾಚರಣೆಯಲ್ಲಿದ್ದಾಗ ಬುಧವಾರ (ಏ. 2) ಗುಜರಾತ್‌ನ ಹಳ್ಳಿಯೊಂದರಲ್ಲಿ ಪತನಗೊಂಡಿತ್ತು. ಇದರಲ್ಲಿದ್ದ ಪೈಲಟ್‌ಗಳಲ್ಲಿ ಒಬ್ಬರು ಸುರಕ್ಷಿತವಾಗಿ ಹೊರಜಿಗಿದಿದ್ದರೆ, ಇನ್ನೊಬ್ಬ ಪೈಲೆಟ್ ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ಗುಜರಾತ್‌ನ ಜಾಮ್‌ನಗರ ಬಳಿ ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನಗೊಂಡಿತ್ತು. ಆಗ ಆಕಾಶದಲ್ಲಿ ಬೆಳಕಿನ ಮಿಂಚು ಕಾಣಿಸಿಕೊಂಡಿದೆ. ಈ ಘಟನೆಗೆ ಕೆಲವೇ ಕ್ಷಣಗಳ ಮೊದಲು ಸುವರ್ದಾ ಗ್ರಾಮದ ಮನೆಯೊಂದರ ಸಿಸಿಟಿವಿ ಕೆಮರಾದಲ್ಲಿ ಜೆಟ್ ಪತನಗೊಂಡ ಸಂಪೂರ್ಣ ದೃಶ್ಯಾವಳಿಗಳು ಸೆರೆಯಾಗಿವೆ.
ವೈರಲ್ ವಿಡಿಯೊ ಇಲ್ಲಿದೆ:
#Gujarat
— Saleem Iqbal Qadri (@SaleemQadri_) April 3, 2025
CCTV Captures Moment Air Force's #Jaguar Jet Crashed In Gujarat. #jaguarcrash @IAF_MCC pic.twitter.com/sXgEEG7H2S
ಜೆಟ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಬಳಿಕ ರಾತ್ರಿ 9:30ರ ಸುಮಾರಿಗೆ ಫೈಟರ್ ಜೆಟ್ ತೆರೆದ ಮೈದಾನದಲ್ಲಿ ಪತನಗೊಂಡಿತು. ತರಬೇತಿ ಕಾರ್ಯಾಚರಣೆಯಲ್ಲಿದ್ದ ಪೈಲಟ್‌ಗಳಲ್ಲಿ ಒಬ್ಬರು ಸುರಕ್ಷಿತವಾಗಿ ಹೊರ ಜಿಗಿದಿದ್ದಾರೆ. ಆದರೆ ಅವರು ಕೊಂಚ ಗಾಯಗೊಂಡಿದ್ದಾರೆ. ಅವರನ್ನು ಗುರು ಗೋಬಿಂದ್ ಸಿಂಗ್ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಜೆಟ್‌ನಲ್ಲಿದ್ದ ಇನ್ನೊಬ್ಬ ಪೈಲಟ್ ಸಕಾಲದಲ್ಲಿ ಜೆಟ್‌ನಿಂದ ಹೊರಬರಲು ಸಾಧ್ಯವಾಗದ ಕಾರಣ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಜೆಟ್ ಪತನಗೊಂಡ ತಕ್ಷಣ ಅದು ಬೆಂಕಿಗೆ ಆಹುತಿಯಾಗಿದೆ. ಮಾಹಿತಿ ತಿಳಿದ ಅಗ್ನಿಶಾಮಕ ದಳದವರು ಅಲ್ಲಿಗೆ ತೆರಳಿ ಬೆಂಕಿಯನ್ನು ನಂದಿಸಿದರು.
ಇದನ್ನು ಓದಿ: Viral Video: ಸುಪ್ರೀಂಕೋರ್ಟ್‌ನ ಗಾರ್ಡನ್‍ನಿಂದ ಗುಲಾಬಿ ಹೂ ಕಿತ್ತ ಮಹಿಳೆ; ಪ್ರಶ್ನಿಸಿದ್ದಕ್ಕೆ ಹೇಳಿದ್ದೇನು? ವಿಡಿಯೊ ವೈರಲ್
ಅಪಘಾತದ ಕಾರಣವನ್ನು ತನಿಖೆ ಮಾಡಲು ಮತ್ತು ತಾಂತ್ರಿಕ ವೈಫಲ್ಯಕ್ಕೆ ಕಾರಣವಾದ ಸಂದರ್ಭಗಳನ್ನು ನಿರ್ಧರಿಸಲು ಐಎಎಫ್ ತನಿಖಾ ನ್ಯಾಯಾಲಯಕ್ಕೆ ಆದೇಶಿಸಿದೆ.