ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IndiGo Flight: ಕುಡಿದ ಮತ್ತಿನಲ್ಲಿ ವಿಮಾನದಲ್ಲಿ ʼಹರ್ ಹರ್ ಮಹಾದೇವ್ʼ ಘೋಷಣೆ ಕೂಗಿದ ವಕೀಲ

ದೆಹಲಿ-ಕೋಲ್ಕತ್ತಾ ಇಂಡಿಗೋ ವಿಮಾನದಲ್ಲಿ ಸೋಮವಾರ ಕುಡಿದ ಮತ್ತಿನಲ್ಲಿದ್ದ ವಕೀಲರೊಬ್ಬರು ಹರ್ ಹರ್ ಮಹಾದೇವ್ ಎಂಬ ಧಾರ್ಮಿಕ ಘೋಷಣೆಗಳನ್ನು ಕೂಗಿದರು. ಈ ವಿಚಾರದಲ್ಲಿ ವಿಮಾನ ಸಿಬ್ಬಂದಿಯೊಂದಿಗೆ ಅವರು ಜಗಳವಾಡಿದ್ದರಿಂದ ವಿಮಾನವು 30 ನಿಮಿಷಗಳಿಗೂ ಹೆಚ್ಚು ಕಾಲ ಪಾರ್ಕಿಂಗ್ ಬೇಯಲ್ಲಿ ಸಿಲುಕಿಕೊಂಡಿತ್ತು.

ಕುಡಿದ ಮತ್ತಿನಲ್ಲಿ ವಿಮಾನದಲ್ಲಿ ಗಲಾಟೆ ಮಾಡಿದ ವಕೀಲ

-

ಕೋಲ್ಕತಾ: ಕುಡಿದ ಮತ್ತಿನಲ್ಲಿ ವಕೀಲರೊಬ್ಬರು (Drunk lawyer) ಸೋಮವಾರ ವಿಮಾನದಲ್ಲಿ ಹರ್ ಹರ್ ಮಹಾದೇವ್ (Har Har Mahadev) ಎಂದು ಘೋಷಣೆ ಕೂಗಿದ ಘಟನೆ ದೆಹಲಿ- ಕೋಲ್ಕತಾ ಇಂಡಿಗೋ ವಿಮಾನದಲ್ಲಿ (Delhi-Kolkata IndiGo flight) ನಡೆದಿದೆ. ಇದು ವಿಮಾನದಲ್ಲಿ ಕೆಲ ಕಾಲ ಆತಂಕದ ವಾತಾವರಣ ಉಂಟು ಮಾಡಿತ್ತು. ಇದರಿಂದ ವಿಮಾನ ಪಾರ್ಕಿಂಗ್ ಬೇಯಲ್ಲಿ (Parking bay) ಸುಮಾರು 30 ನಿಮಿಷಗಳಿಗೂ ಹೆಚ್ಚು ಕಾಲ ನಿಂತಿತ್ತು ಎನ್ನಲಾಗಿದೆ.

ದೆಹಲಿ- ಕೋಲ್ಕತಾ ಇಂಡಿಗೋ ವಿಮಾನದಲ್ಲಿ ಸೋಮವಾರ ಕುಡಿದ ಮತ್ತಿನಲ್ಲಿದ್ದ ವಕೀಲರೊಬ್ಬರು ಹರ್ ಹರ್ ಮಹಾದೇವ್ ಎಂಬ ಧಾರ್ಮಿಕ ಘೋಷಣೆಗಳನ್ನು ಕೂಗಿದರು. ಇದರ ಬಳಿಕ ಸಹ ಪ್ರಯಾಣಿಕರ ಬಳಿ ಜೈ ಶ್ರೀ ರಾಮ್ ಎಂದು ಜಪಿಸುವಂತೆ ಒತ್ತಾಯಿಸಿದರು. ಈ ವಿಚಾರದಲ್ಲಿ ವಿಮಾನ ಸಿಬ್ಬಂದಿಯೊಂದಿಗೆ ಅವರು ಜಗಳವಾಡಿದ್ದು, ಇದರಿಂದ ವಿಮಾನವು 30 ನಿಮಿಷಗಳಿಗೂ ಹೆಚ್ಚು ಕಾಲ ಪಾರ್ಕಿಂಗ್ ಬೇಯಲ್ಲಿ ಸಿಲುಕಿಕೊಂಡಿತ್ತು ಎನ್ನಲಾಗಿದೆ.

31ಡಿಯಲ್ಲಿ ಕುಳಿತಿದ್ದ ವಕೀಲರು ಕ್ಯಾಬಿನ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಉಳಿದ ಪ್ರಯಾಣಿಕರಿಗೆ ತೊಂದರೆ ಮಾಡಿದ್ದಾರೆ ಎಂದು ಇಂಡಿಗೋ ತಿಳಿಸಿದೆ. 2025ರ ಸೆಪ್ಟೆಂಬರ್ 1ರಂದು ದೆಹಲಿಯಿಂದ ಕೋಲ್ಕತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನ 6ಇ 6571ರಲ್ಲಿ ಅಶಿಸ್ತಿನ ವರ್ತನೆಯ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿ ವಿಮಾನದಲ್ಲಿದ್ದ ಗ್ರಾಹಕರೊಬ್ಬರು ಕ್ಯಾಬಿನ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಸಹ ಪ್ರಯಾಣಿಕರಿಗೆ ತೊಂದರೆ ನೀಡಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ನಿಯಮಾನುಸಾರವಾಗಿ ಗ್ರಾಹಕನನ್ನು ಅಶಿಸ್ತಿನವನೆಂದು ಘೋಷಿಸಲಾಯಿತು. ಬಳಿಕ ಆತನನ್ನು ಭದ್ರತಾ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಈ ಕುರಿತು ಸಂಬಂಧಿತ ಅಧಿಕಾರಿಗಳಿಗೆ ಔಪಚಾರಿಕ ದೂರು ಕೂಡ ಸಲ್ಲಿಸಲಾಗಿದೆ ಎಂದು ತಿಳಿಸಿದೆ.

ವಿಮಾನಯಾನ ಸಂಸ್ಥೆಯು ವಕೀಲರನ್ನು ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿತು ಮತ್ತು ಅವರ ನಡವಳಿಕೆಯ ಬಗ್ಗೆ ಪೊಲೀಸರಿಗೆ ದೂರು ಕೂಡ ಸಲ್ಲಿಸಿದೆ.

ಇದಕ್ಕೆ ಸಂಬಂಧಿಸಿ ವಕೀಲರು ಕೂಡ ವಿಮಾನಯಾನ ಸಿಬ್ಬಂದಿ ವಿರುದ್ಧ ದೂರು ನೀಡಿದ್ದಾರೆ. ವಿಮಾನಯಾನ ಸಿಬ್ಬಂದಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಅವರು ಪ್ರತಿದೂರು ದಾಖಲಿಸಿದರು.

ಇದನ್ನೂ ಓದಿ: Viral News: ಆಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಈ ಕುಟುಂಬ ಮಾಡಿದ ಮಾಸ್ಟರ್‌ ಪ್ಲ್ಯಾನ್‌ ಏನ್‌ ಗೊತ್ತಾ?

ತಮ್ಮ ಬಳಿ ಇದ್ದ ಬಿಯರ್ ಬಾಟಲಿ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಇದು ವಿಮಾನ ಹತ್ತುವ ಮೊದಲು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾವು ಖರೀದಿಸಿದ ವಸ್ತು ಎಂದು ಹೇಳಿ ಅದರ ರಶೀದಿಯನ್ನು ಕೂಡ ಸಲ್ಲಿಸಿದ್ದಾರೆ.