ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದಾದಿಯ ನಿರ್ಲಕ್ಷ್ಯಕ್ಕೆ ಒಂದೂವರೆ ತಿಂಗಳ ಮಗುವಿನ ಹೆಬ್ಬೆರಳೇ ಕಟ್; ಮಧ್ಯ ಪ್ರದೇಶದಲ್ಲಿ ಹೃದಯ ವಿದ್ರಾವಕ ಘಟನೆ

Baby thumb cut: ಆಸ್ಪತ್ರೆಯಲ್ಲಿ ದಾದಿಯ ನಿರ್ಲಕ್ಷ್ಯದಿಂದ ಶಿಶುವಿನ ಹೆಬ್ಬೆರಳು ಕಟ್ ಆಗಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಮಹಾರಾಜ ಯಶ್ವಂತ್‌ರಾವ್ ಆಸ್ಪತ್ರೆ ಆಡಳಿತವು ಸಂಬಂಧಿತ ನರ್ಸ್‌ ಅನ್ನು ಅಮಾನತುಗೊಳಿಸಿದ್ದು, ಘಟನೆ ಕುರಿತು ತನಿಖೆಗೆ ಸಮಿತಿಯನ್ನು ರಚಿಸಲಾಗಿದೆ.

ದಾದಿಯ ನಿರ್ಲಕ್ಷ್ಯಕ್ಕೆ ಶಿಶುವಿನ ಹೆಬ್ಬೆರಳು ಕಟ್

ಸಾಂದರ್ಭಿಕ ಚಿತ್ರ -

Priyanka P
Priyanka P Jan 11, 2026 10:12 PM

ಭೋಪಾಲ್, ಜ. 11: ವೈದ್ಯಕೀಯ ಬೇಜವಾಬ್ದಾರಿಯ ಪ್ರಕರಣವೊಂದು ಮಧ್ಯ ಪ್ರದೇಶದ (Madhya Pradesh) ಇಂದೋರ್‌ನಲ್ಲಿ ಬೆಳಕಿಗೆ ಬಂದಿದೆ. ದಾದಿಯೊಬ್ಬಳ ನಿರ್ಲಕ್ಷ್ಯದಿಂದ ಆಸ್ಪತ್ರೆಯಲ್ಲಿ ದಾಖಲಾದ ಒಂದೂವರೆ ತಿಂಗಳ ಶಿಶುವಿಗೆ ಗಂಭೀರ ಗಾಯವಾಗಿದೆ. ನರ್ಸ್ ಇಂಟ್ರಾವೆನಸ್ ಕ್ಯಾತಿಟರ್ ತೆಗೆಯುವಾಗ ಆಕಸ್ಮಿಕವಾಗಿ ಮಗುವಿನ ಹೆಬ್ಬೆರಳು ಕತ್ತರಿಸಿದ್ದಾಳೆ. ಸದ್ಯ ಈ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಮಹಾರಾಜ ಯಶ್ವಂತರಾವ್ ಆಸ್ಪತ್ರೆಯ ನ್ಯೂ ಚೆಸ್ಟ್ ವಾರ್ಡ್‌ನಲ್ಲಿ ಬುಧವಾರ (ಜನವರಿ 7) ಈ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಟ್ಮಾ ನಿವಾಸಿ ಅಂಜುಬಾಯಿ ಎಂಬುವವರ ಮಗುವಿಗೆ ಡಿಸೆಂಬರ್ 24ರಂದು ನ್ಯುಮೋನಿಯಾ ಬಾಧಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಕೈಯಲ್ಲಿ ಊತ ಕಂಡುಬಂದ ಹಿನ್ನೆಲೆಯಲ್ಲಿ ನರ್ಸಿಂಗ್ ಅಧಿಕಾರಿಯನ್ನು ಕರೆಯಲಾಯಿತು. ಕತ್ತರಿಗಳಿಂದ ಇಂಟ್ರಾವೆನಸ್ ಕ್ಯಾತಿಟರ್‌ನ ಟೇಪ್ ಅನ್ನು ಕತ್ತರಿಸುವಾಗ, ನರ್ಸ್ ಆಕಸ್ಮಿಕವಾಗಿ ಶಿಶುವಿನ ಹೆಬ್ಬೆರಳನ್ನು ಕತ್ತರಿಸಿದ್ದಾಳೆ ಎಂದು ಅಂಜುಬಾಯಿ ಹೇಳಿದ್ದಾರೆ.

ಶಿಮ್ಲಾ ಆಸ್ಪತ್ರೆ ಗಲಾಟೆ ಪ್ರಕರಣ; ಪರಸ್ಪರ ಅಪ್ಪಿಕೊಂಡು ಕ್ಷಮೆಯಾಚಿಸಿದ ವೈದ್ಯ-ರೋಗಿ!

ಈ ಗಾಯವು ಕುಟುಂಬ ಸದಸ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯಲ್ಲಿ ಭಯವನ್ನು ಉಂಟುಮಾಡಿತು. ಶಿಶುವನ್ನು ತಕ್ಷಣ ಇಂದೋರ್‌ನ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ಪ್ಲಾಸ್ಟಿಕ್ ಸರ್ಜನ್‌ಗಳ ತಂಡವು ಕತ್ತರಿಸಿದ ಹೆಬ್ಬೆರಳನ್ನು ಮತ್ತೆ ಜೋಡಿಸಲು ತುರ್ತು ಶಸ್ತ್ರಚಿಕಿತ್ಸೆ ನಡೆಸಿತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಮಗುವಿನ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಶಿಶು ಇನ್ನೂ ನಿಗಾದಲ್ಲಿದೆ.

ಘಟನೆಯ ನಂತರ, ಮಹಾರಾಜ ಯಶ್ವಂತರಾವ್ ಆಸ್ಪತ್ರೆಯ ಡಾ. ಅರವಿಂದ್ ಘಂಘೋರಿಯಾ ನರ್ಸ್‌ ಆರತಿ ಶ್ರೋತ್ರಿಯನನ್ನು ಅಮಾನತುಗೊಳಿಸಿದ್ದಾರೆ ಮತ್ತು ಮೂವರು ನರ್ಸಿಂಗ್ ಇನ್-ಚಾರ್ಜ್‌ಗಳ ಒಂದು ತಿಂಗಳ ವೇತನವನ್ನು ತಡೆಹಿಡಿದಿದ್ದಾರೆ. ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಅಶೋಕ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಗಿದೆ.

ಸಮಿತಿಯಲ್ಲಿ ನ್ಯೂ ಚೆಸ್ಟ್ ವಾರ್ಡ್‌ನ ಉಸ್ತುವಾರಿ ಡಾ. ನಿರ್ಭಯ್ ಮೆಹ್ತಾ, ಉಪ ಸೂಪರಿಂಟೆಂಡೆಂಟ್ ಡಾ. ರೋಹಿತ್ ಬಡೇರಿಯಾ ಮತ್ತು ನರ್ಸಿಂಗ್ ಸೂಪರಿಂಟೆಂಡೆಂಟ್ ದಯಾವತಿ ದಯಾಳ್ ಇದ್ದಾರೆ. ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಸಮಿತಿಯು ಶೀಘ್ರದಲ್ಲೇ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.

ದೇವಾಲಯದ ಬಳಿ ಮಲ ವಿಸರ್ಜನೆ; ಆರೋಪಿ ಅರೆಸ್ಟ್

ಹೈದರಾಬಾದ್‌ನ ಮಲ್ಕಜ್‌ಗಿರಿಯಲ್ಲಿರುವ ಕಟ್ಟಮೈಸಮ್ಮ ದೇವಿ ದೇವಾಲಯದ ಬಳಿ ವ್ಯಕ್ತಿಯೊಬ್ಬ ಮಲ ವಿಸರ್ಜನೆ ಮಾಡಿರುವ ಘಟನೆ ಉದ್ವಿಗ್ನತೆಗೆ ಕಾರಣವಾಗಿದೆ. ಸ್ಥಳೀಯ ಬಿಜೆಪಿ ಮತ್ತು ಬಜರಂಗದಳ ಮುಖಂಡರು ಆ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ಸಂಬಂಧ ಬಿಜೆಪಿ ಮತ್ತು ಇತರ ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಈ ಘಟನೆಯು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಮತ್ತು ಹಿಂದೂ ದೇವಾಲಯಗಳ ಬಳಿಯೇ ಇದೇ ರೀತಿಯ ಘಟನೆಗಳು ನಡೆದಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಹಿಂದೂ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿ ದೇವಾಲಯದ ಬಳಿ ಧರಣಿ ನಡೆಸಿವೆ.

ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಲವು ಗುಂಪುಗಳು ಆ ವ್ಯಕ್ತಿ ಸ್ಥಳೀಯ ನಿವಾಸಿಯಲ್ಲ ಎಂದು ಹೇಳಿಕೊಂಡು ಆತನ ಹಿನ್ನೆಲೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿವೆ. ಆದರೆ ಪೊಲೀಸರು ಈ ಹೇಳಿಕೆಗಳನ್ನು ದೃಢಪಡಿಸಿಲ್ಲ. ದೇವಾಲಯದ ಸುತ್ತಮುತ್ತಲಿನ ಪ್ರದೇಶವು ಉದ್ವಿಗ್ನವಾಗಿದ್ದು, ಯಾವುದೇ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗದಂತೆ ಭಾರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.