ನೇಪಾಳ ಮೂಲಕ ಬಿಹಾರಕ್ಕೆ ಮೂವರು ಜೈಶ್ ಭಯೋತ್ಪಾದಕರು ಎಂಟ್ರಿ; ಹೈ ಅಲರ್ಟ್ ಘೋಷಣೆ
ಬಿಹಾರ ಪೊಲೀಸ್ ಮುಖ್ಯ ಕಚೇರಿಯು ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮೂವರು ಶಂಕಿತ ಉಗ್ರರು ನೇಪಾಳ ಗಡಿ ಮೂಲಕ ರಾಜ್ಯಕ್ಕೆ ಸುಳಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಹೈ ಅಲರ್ಟ್ ಘೋಷಿಸಿದೆ. ಶಂಕಿತರನ್ನು ರಾವಲ್ಪಿಂಡಿಯ ಹಸನೈನ್ ಅಲಿ, ಉಮೆರ್‌ಕೋಟ್‌ನ ಆದಿಲ್ ಹುಸೇನ್ ಮತ್ತು ಬಹವಲ್ಪುರದ ಮೊಹಮ್ಮದ್ ಉಸ್ಮಾನ್ ಎಂದು ಗುರುತಿಸಲಾಗಿದೆ.

ಭಯೋತ್ಪಾದಕ ಸಂಘಟನೆಯ ಮೂವರು ಶಂಕಿತ ಉಗ್ರರು

ಪಾಟ್ನಾ: ಬಿಹಾರ ಪೊಲೀಸ್ (Bihar Police) ಮುಖ್ಯ ಕಚೇರಿಯು ಪಾಕಿಸ್ತಾನ (Pakistan) ಮೂಲದ ಜೈಶ್-ಎ-ಮೊಹಮ್ಮದ್ (Jaish-e-Mohammed) ಭಯೋತ್ಪಾದಕ ಸಂಘಟನೆಯ ಮೂವರು ಶಂಕಿತ ಉಗ್ರರು ನೇಪಾಳ (Nepal) ಗಡಿ ಮೂಲಕ ರಾಜ್ಯಕ್ಕೆ ಸುಳಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಹೈ ಅಲರ್ಟ್ ಘೋಷಿಸಿದೆ. ಶಂಕಿತರನ್ನು ರಾವಲ್ಪಿಂಡಿಯ ಹಸನೈನ್ ಅಲಿ, ಉಮೆರ್‌ಕೋಟ್‌ನ ಆದಿಲ್ ಹುಸೇನ್ ಮತ್ತು ಬಹವಲ್ಪುರದ ಮೊಹಮ್ಮದ್ ಉಸ್ಮಾನ್ ಎಂದು ಗುರುತಿಸಲಾಗಿದೆ.
ಗುಪ್ತಚರ ವರದಿಗಳ ಪ್ರಕಾರ, ಈ ಶಂಕಿತರು ಆಗಸ್ಟ್‌ನ ಎರಡನೇ ವಾರದಲ್ಲಿ ಕಾಠ್ಮಂಡುವಿಗೆ ತಲುಪಿ, ಕಳೆದ ವಾರ ನೇಪಾಳದ ಗಡಿಯ ಮೂಲಕ ಬಿಹಾರಕ್ಕೆ ಪ್ರವೇಶಿಸಿದ್ದಾರೆ. ಪೊಲೀಸ್ ಮುಖ್ಯ ಕಚೇರಿಯು ಶಂಕಿತರ ಪಾಸ್‌ಪೋರ್ಟ್ ವಿವರಗಳನ್ನು ಗಡಿಭಾಗದ ಜಿಲ್ಲೆಗಳ ಪೊಲೀಸರಿಗೆ ಒದಗಿಸಿದೆ. ಭದ್ರತಾ ಸಂಸ್ಥೆಗಳಿಗೆ ನಿಗಾ ವಹಿಸಲು ಮತ್ತು ಗುಪ್ತಚರ ಮಾಹಿತಿ ಸಂಗ್ರಹಿಸಲು ಸೂಚನೆ ನೀಡಲಾಗಿದೆ. ಜಿಲ್ಲಾ ಗುಪ್ತಚರ ಘಟಕಗಳಿಗೆ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ.
ಬಿಹಾರವು ನೇಪಾಳದೊಂದಿಗೆ ಸುಮಾರು 729 ಕಿಲೋ ಮೀಟರ್ ತೆರೆದ ಗಡಿಯನ್ನು ಹಂಚಿಕೊಂಡಿದ್ದು, ಒಳನುಸುಳುವಿಕೆ ಮತ್ತು ಗಡಿಪಾರು ಚಲನೆಗೆ ಇದು ಪ್ರಮುಖ ಕೇಂದ್ರವಾಗಿದೆ. ಮಧುಬನಿ, ಸೀತಾಮರ್ಹಿ, ಸುಪೌಲ್, ಅರಾರಿಯಾ, ಪೂರ್ವ ಮತ್ತು ಪಶ್ಚಿಮ ಚಂಪಾರಣ್ ಜಿಲ್ಲೆಗಳಂತಹ ಗಡಿಭಾಗಗಳಲ್ಲಿ ಈಗಾಗಲೇ ಗಸ್ತು ತೀವ್ರಗೊಳಿಸಲಾಗಿದೆ. ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂಡೋ-ನೇಪಾಳ ಗಡಿ ಮತ್ತು ಸೀಮಾಂಚಲ್ ಜಿಲ್ಲೆಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.
ಈ ಸುದ್ದಿಯನ್ನು ಓದಿ: Viral Video: ರೀಲ್ಸ್‌ಗಾಗಿ ಫ್ಲೈಓವರ್‌ನಿಂದ ಜಿಗಿದು ರಸ್ತೆಗೆ ಬಿದ್ದು, ನರಳಾಡಿದ ಯುವಕ: ನಿಂಗಿದು ಬೇಕಿತ್ತಾ ಎಂದ ನೆಟ್ಟಿಗರು
ಭಾರತವು ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್, ಮ್ಯಾನ್ಮಾರ್ ಮತ್ತು ಆಫ್ಘಾನಿಸ್ತಾನದೊಂದಿಗೆ ಭೂಗಡಿಯನ್ನು ಹಂಚಿಕೊಂಡಿದೆ. ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಇಂಡೋನೇಷಿಯಾದೊಂದಿಗೆ ಸಮುದ್ರ ಗಡಿಯೂ ಇದೆ. ಬಿಹಾರದ ಏಳು ಜಿಲ್ಲೆಗಳು ನೇಪಾಳದ ಗಡಿಯ ಸನಿಹದಲ್ಲಿದ್ದು, ಭದ್ರತೆಗೆ ದೊಡ್ಡ ಸವಾಲು ಒಡ್ಡುತ್ತವೆ.
ಈ ಶಂಕಿತ ಉಗ್ರರು ಒಳನುಸುಳಿರುವ ಮಾಹಿತಿಯು ರಾಜ್ಯದಲ್ಲಿ ಭದ್ರತಾ ಕಳವಳವನ್ನು ಹೆಚ್ಚಿಸಿದೆ. ಪೊಲೀಸರು ಈಗ ಗಡಿಭಾಗದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಿದ್ದು, ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.