ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

CISF ಯೋಧನಿಂದ ನಾಲ್ವರು ಸಹೋದ್ಯೋಗಿಗಳ ಹತ್ಯೆ ;‌ ಕೊಲೆ ಮಾಡಲು ಮಗು ಕಾರಣವಾಯ್ತಾ? ತನಿಖೆ ವೇಳೆ ಹೇಳಿದ್ದೇನು?

Jammu and Kashmir Case: ವಾಗ್ವಾದದ ನಂತರ ಹೆಡ್ ಕಾನ್‌ಸ್ಟೇಬಲ್ ಅವದೇಶ್ ಕುಮಾರ್ ಸಿಂಗ್ ತಮ್ಮ ಸೇವಾ ಬಂದೂಕಿನಿಂದ 18 ಸುತ್ತು ಗುಂಡು ಹಾರಿಸಿ, ಸಹಾಯಕ ಕಮಾಂಡೆಂಟ್ ಅಂಕಿತ್ ಕುಮಾರ್ ಪಾಂಡೆ, ಸಬ್-ಇನ್‌ಸ್ಪೆಕ್ಟರ್ ಲಕ್ಷ್ಮಣ್ ಸಿಂಗ್ ಮತ್ತು ಕಾನ್‌ಸ್ಟೇಬಲ್‌ಗಳಾದ ರಫೀಕ್ ಅಹ್ಮದ್ ಮತ್ತು ಸಂದೀಪ್ ಕುಮಾರ್ ಎಂಬ ನಾಲ್ವರು ಸಿಐಎಸ್ಎಫ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು.

CISF ಯೋಧನಿಂದ ನಾಲ್ವರು ಸಹೋದ್ಯೋಗಿಗಳ ಹತ್ಯೆ; ತನಿಖೆಯಲ್ಲಿ ಹೇಳಿದ್ದೇನು?

ಯೋಧ ಅವದೇಶ್ ಕುಮಾರ್ ಸಿಂಗ್ -

Priyanka P
Priyanka P Sep 30, 2026 5:37 PM

ಜಮ್ಮು, ಸೆ.30: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಥುವಾದಲ್ಲಿ ತನ್ನ ನಾಲ್ವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ಹತ್ಯೆ ಮಾಡಿದ್ದರು. ತಾನು ಪತ್ನಿಯೊಂದಿಗೆ ಕೆಲಸ ಮಾಡುತ್ತಿದ್ದ ಜಲವಿದ್ಯುತ್ ಯೋಜನೆಗೆ ತನ್ನ ಮಗುವನ್ನು ಕರೆತರುವ ವಿಚಾರದಲ್ಲಿ ಸಹೋದ್ಯೋಗಿಗಳೊಂದಿಗೆ ವಾಗ್ವಾದ ನಡೆಸಿದ್ದರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಗಳವಾರ (ಸೆ.29) ಸಂಜೆ ನಡೆದ ವಾಗ್ವಾದದ ನಂತರ ಹೆಡ್ ಕಾನ್‌ಸ್ಟೇಬಲ್ ಅವದೇಶ್ ಕುಮಾರ್ ಸಿಂಗ್ ತಮ್ಮ ಸೇವಾ ಬಂದೂಕಿನಿಂದ 18 ಸುತ್ತು ಗುಂಡು ಹಾರಿಸಿ, ಸಹಾಯಕ ಕಮಾಂಡೆಂಟ್ ಅಂಕಿತ್ ಕುಮಾರ್ ಪಾಂಡೆ, ಸಬ್-ಇನ್‌ಸ್ಪೆಕ್ಟರ್ ಲಕ್ಷ್ಮಣ್ ಸಿಂಗ್ ಮತ್ತು ಕಾನ್‌ಸ್ಟೇಬಲ್‌ಗಳಾದ ರಫೀಕ್ ಅಹ್ಮದ್ ಮತ್ತು ಸಂದೀಪ್ ಕುಮಾರ್ ಎಂಬ ನಾಲ್ವರು ಸಿಐಎಸ್ಎಫ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು.

ಹಿಮಾಚಲ ಪ್ರದೇಶದ ಗಡಿಯ ಸಮೀಪವಿರುವ ಬಸೋಹ್ಲಿಯ ಮಷ್ಕಾ ಗ್ರಾಮದಲ್ಲಿರುವ ಸೇವಾ-III ಜಲವಿದ್ಯುತ್ ಯೋಜನೆಯಲ್ಲಿ ಈ ಘಟನೆ ನಡೆದಿದೆ. ಸಿಂಗ್ ಮತ್ತು ಅವರ ಪತ್ನಿ ಹೆಡ್ ಕಾನ್ಸ್‌ಟೇಬಲ್ ಪೂಜಾ ದೇವಿ ಇಬ್ಬರನ್ನೂ ಒಂದೇ ಯೋಜನಾ ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಅವರಿಗೆ ವಿಭಿನ್ನ ಪಾಳಿಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಜಮ್ಮು-ಕಾಶ್ಮೀರದಲ್ಲಿ CISF ಸಿಬ್ಬಂದಿಯಿಂದಲೇ ಗುಂಡಿನ ದಾಳಿ: ನಾಲ್ವರು ಯೋಧರ ಹತ್ಯೆ

ದಂಪತಿ ತಮ್ಮ ಪುಟ್ಟ ಮಗುವನ್ನು ಆಗಾಗ ಉದ್ಯೋಗದ ಸ್ಥಳಕ್ಕೆ ಕರೆತರುತ್ತಿದ್ದ ಕಾರಣ ಜಗಳ ನಡೆದಿತ್ತು ಎಂದು ಘಟನೆಯ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. “ದಂಪತಿ ಒಂದೇ ಸ್ಥಳದಲ್ಲಿ ಬೇರೆ ಬೇರೆ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಒಬ್ಬರು ಕೆಲಸಕ್ಕೆ ಹಾಜರಾಗುವಾಗ, ಮನೆಗೆ ಹಿಂದಿರುಗುತ್ತಿದ್ದ ಮತ್ತೊಬ್ಬ ಸಂಗಾತಿಗೆ ಮಗುವನ್ನು ಒಪ್ಪಿಸಲು ತಮ್ಮ ಮಗುವನ್ನು ಕೆಲಸದ ಸ್ಥಳಕ್ಕೆ ಕರೆತರುತ್ತಿದ್ದರು. ಆದರೆ, ಯೋಜನಾ ಸ್ಥಳಕ್ಕೆ ಮಗುವನ್ನು ಕರೆತರಬಾರದು ಎಂದು ದಂಪತಿಗೆ ಸೂಚಿಸಲಾಗಿತ್ತು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಈ ಸಮಸ್ಯೆ ಉಲ್ಬಣಿಸಿತ್ತು. ಸಿಂಗ್ ಕರ್ತವ್ಯದಲ್ಲಿದ್ದಾಗ ದೇವಿ ತನ್ನ ಮಗುವಿನೊಂದಿಗೆ ಕ್ವಾರ್ಟರ್ ಗಾರ್ಡ್ ಕರ್ತವ್ಯಕ್ಕೆ ಬರುತ್ತಿದ್ದರು. ಮಗುವಿನೊಂದಿಗೆ ಕ್ವಾರ್ಟರ್ ಗಾರ್ಡ್ ಪ್ರದೇಶವನ್ನು ಪ್ರವೇಶಿಸಲು ಅಥವಾ ಅಲ್ಲಿ ಉಳಿಯಲು ಘಟಕದ ಆಡಳಿತವು ಆಕೆಗೆ ಅನುಮತಿ ನೀಡಿರಲಿಲ್ಲ.

“ನಿನ್ನೆಯೂ (ಸೆ.29) ಸಹ, ಅವರಲ್ಲಿ ಒಬ್ಬರು ಮಗುವನ್ನು ಸಂಗಾತಿಗೆ ಹಸ್ತಾಂತರಿಸಲು ಸ್ಥಳಕ್ಕೆ ತಂದಿದ್ದರು. ಈ ವೇಳೆ ಕಮಾಂಡರ್‌ಗೆ ದೂರು ನೀಡಲಾಗಿದೆ. ಇದು ವಾಗ್ವಾದಕ್ಕೆ ಕಾರಣವಾಯಿತು” ಎಂದು ಅಧಿಕಾರಿ ಹೇಳಿದರು. ಸಹಾಯಕ ಕಮಾಂಡೆಂಟ್ ಅಂಕಿತ್ ಕುಮಾರ್ ಪಾಂಡೆ ಅವರಿಗೆ ನೀಡಿದ ದೂರು ಸಿಂಗ್ ಅವರನ್ನು ಕೆರಳಿಸಿತ್ತು ಎನ್ನಲಾಗಿದೆ.

ಬದಲಾಗುತ್ತಿದೆ ಜಮ್ಮು ಮತ್ತು ಕಾಶ್ಮೀರ: 2025ರಲ್ಲಿ ಒಂದೇ ಒಂದು ಕಲ್ಲು ತೂರಾಟದ ಘಟನೆಯಿಲ್ಲ, ಇಲ್ಲಿದೆ ವರದಿ

ಸಿಟ್ಟಿಗೆದ್ದ ಅವರು, ನಾಲ್ವರು ಸಿಬ್ಬಂದಿ ಇದ್ದ ಮುಖ್ಯ ದ್ವಾರದ ಬಳಿ ಇರುವ ಕಾರ್ಯಾಚರಣೆ ವಿಭಾಗದ ಕಚೇರಿಗೆ ನುಗ್ಗಿ ಗುಂಡು ಹಾರಿಸಿದರು. ಗುಂಡಿನ ದಾಳಿಯ ನಂತರ, ಸಿಂಗ್‌ರನ್ನು ಇತರ ಸಿಐಎಸ್ಎಫ್ ಸಿಬ್ಬಂದಿ ಹತ್ತಿಕ್ಕಿ ಬಂಧಿಸಿದರು. ಸಿಐಎಸ್ಎಫ್ ಪ್ರಕಾರ, ಸಿಂಗ್ 150 ಸುತ್ತು ಮದ್ದುಗುಂಡುಗಳನ್ನು ಹೊತ್ತೊಯ್ದಿದ್ದರು. ಘಟನೆಯ ನಂತರ ಸೇವಾ ಆಯುಧವನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಗಾಯಗೊಂಡ ನಾಲ್ವರು ಸಿಬ್ಬಂದಿಯನ್ನು ಹಿಮಾಚಲ ಪ್ರದೇಶದ ಎನ್‌ಎಚ್‌ಪಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಗಂಭೀರ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.