Lalu Prasad Yadav: ಕುಂಭಮೇಳಕ್ಕೆ ನೋ ಎಂದಿದ್ದ ಲಾಲೂ ಮನೆಯಲ್ಲಿ ವಿದೇಶಿ ಹಬ್ಬ ಆಚರಣೆ; ಭಾರೀ ವಿವಾದ
ಬಿಹಾರದಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ. ಈ ನಡುವೆ ಬಿಜೆಪಿ ಲಾಲು ಪ್ರಸಾದ್ ಯಾವದ್ ಅವರ ಕುಟುಂಬದ ಫೋಟೋ ಒಂದನ್ನು ಶೇರ್ ಮಾಡಿದ್ದು, ಇದೀಗ ಸಂಚಲನ ಮೂಡಿಸಿದೆ. ಲಾಲು ಯಾದವ್ ಅವರ ಮನೆಯಲ್ಲಿ ಹ್ಯಾಲೋವೀನ್ ಆಚರಣೆಗೆ ಸಂಬಂಧಿಸಿದಂತೆ ಬಿಜೆಪಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸ್ಥಾಪಕರು ಕುಂಭ ಮೇಳವನ್ನು ಟೀಕಿಸಿದ್ದರು.
-
Vishakha Bhat
Nov 2, 2025 1:27 PM
ಪಟನಾ: ಬಿಹಾರದಲ್ಲಿ ಚುನಾವಣಾ ( Bihar election) ಕಾವು ಹೆಚ್ಚಾಗಿದೆ. ಈ ನಡುವೆ ಬಿಜೆಪಿ ಲಾಲು ಪ್ರಸಾದ್ ಯಾವದ್ (Lalu Prasad Yadav) ಅವರ ಕುಟುಂಬದ ಫೋಟೋ ಒಂದನ್ನು ಶೇರ್ ಮಾಡಿದ್ದು, ಇದೀಗ ಸಂಚಲನ ಮೂಡಿಸಿದೆ. ಲಾಲು ಯಾದವ್ ಅವರ ಮನೆಯಲ್ಲಿ ಹ್ಯಾಲೋವೀನ್ (Halloween Fest) ಆಚರಣೆಗೆ ಸಂಬಂಧಿಸಿದಂತೆ ಬಿಜೆಪಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸ್ಥಾಪಕರು ಕುಂಭ ಮೇಳವನ್ನು ಟೀಕಿಸಿದ್ದರು. ಆದರೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಆಚರಿಸುತ್ತಾರೆ. ಇಂತವರು ಹಿಂದೂಗಳ ಮತ ಕೇಳುತ್ತಾರೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಹ್ಯಾಲೋವೀನ್ ವೇಷಭೂಷಣಗಳಲ್ಲಿ ತಮ್ಮ ಮಕ್ಕಳ ದೃಶ್ಯಗಳನ್ನು ಪೋಸ್ಟ್ ಮಾಡಿದ ನಂತರ ಟೀಕೆಗಳು ಬಂದವು.
ಯಾದವ್ ಅವರು ತಮ್ಮ ಮೊಮ್ಮಕ್ಕಳೊಂದಿಗೆ ಪೋಸ್ ನೀಡುತ್ತಿರುವುದು ಫೋಟೋದಲ್ಲಿ ಕಂಡು ಬಂದಿದೆ. ಅವರು ಗ್ರಿಮ್ ರೀಪರ್ ಮತ್ತು ಇತರ ವೇಷಭೂಷಣಗಳಲ್ಲಿ ಧರಿಸಿದ್ದರು. "ಎಲ್ಲರಿಗೂ ಹ್ಯಾಲೋವೀನ್ ಶುಭಾಶಯಗಳು ಎಂದು ಲಾಲೂ ಪುತ್ರಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಬಿಜೆಪಿ ಕಿಸಾನ್ ಮೋರ್ಚಾ ಹ್ಯಾಂಡಲ್, ಕುಂಭ ಮೇಳ ಮತ್ತು ಹ್ಯಾಲೋವೀನ್ ದೃಶ್ಯಗಳ ಕುರಿತು ಯಾದವ್ ಅವರ ಹೇಳಿಕೆಗಳ ವೀಡಿಯೊವನ್ನು ಹಂಚಿಕೊಂಡಿದ್ದು, ಆರ್‌ಜೆಡಿ ನಾಯಕನಿಗೆ ಬ್ರಿಟಿಷ್ ಹಬ್ಬವನ್ನು ಆಚರಿಸುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದೆ.
ಬಿಜೆಪಿ ಹಂಚಿಕೊಂಡ ವಿಡಿಯೋ
भूलना मत बिहार वासियों, यही लालू यादव है, जिसने आस्था और आध्यात्म के महाकुंभ को फालतू बताया था और अंग्रेजों का त्योहार Halloween मना रहा है।
— BJP Kisan Morcha (@bjpkm4kisan) November 1, 2025
जो आस्था पर करेगा चोट, बिहार वासी नहीं करेंगे उसको वोट।#ShameOnLaluYadav#BiharElection2025 pic.twitter.com/u1kquCg1gg
ಬಿಹಾರದ ಜನರೇ, ಮರೆಯಬೇಡಿ, ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಮಹಾ ಕುಂಭವನ್ನು ನಿಷ್ಪ್ರಯೋಜಕ ಎಂದು ಕರೆದ ಮತ್ತು ಬ್ರಿಟಿಷ್ ಹಬ್ಬ ಹ್ಯಾಲೋವೀನ್ ಅನ್ನು ಆಚರಿಸುತ್ತಿರುವ ಲಾಲು ಯಾದವ್ ಇದೇ. ನಂಬಿಕೆಯ ಮೇಲೆ ದಾಳಿ ಮಾಡುವವರು ಬಿಹಾರದ ಜನರು ಅವರಿಗೆ ಮತ ಹಾಕುವುದಿಲ್ಲ" ಎಂದು ಬಿಜೆಪಿ ಕಿಸಾನ್ ಮೋರ್ಚಾ ಹೇಳಿದೆ.
ಕುಂಭ ಮೇಳದ ಕುರಿತು ಲಾಲೂ ಹೇಳಿದ್ದೇನು?
ಫೆಬ್ರವರಿಯಲ್ಲಿ ನಡೆದ ಮಹಾ ಕುಂಭ ಉತ್ಸವವನ್ನು "ಅರ್ಥಹೀನ" ಎಂದು ಲಾಲು ಯಾದವ್ ಕರೆದಿದ್ದರು, ಇದು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಕುಂಭಮೇಳಕ್ಕೆ ಏನಾದರೂ ಅರ್ಥವಿದೆಯೇ? ಅದು ನಿಷ್ಪ್ರಯೋಜಕ ಎಂದು ಅವರು ಟೀಕಿಸಿದ್ದರು. ಆರ್‌ಜೆಡಿ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ, ಇಂತಹ ಹೇಳಿಕೆಗಳು ಹಿಂದೂಗಳ ಬಗೆಗಿನ ಅವರ ಪಕ್ಷದ ಮನಸ್ಥಿತಿಯನ್ನು ಬಹಿರಂಗಪಡಿಸುತ್ತವೆ ಎಂದು ಹೇಳಿತ್ತು. ಆರ್‌ಜೆಡಿ ಯಾವಾಗಲೂ ಹಿಂದೂಗಳ ಭಾವನೆಗಳನ್ನು ಅವಮಾನಿಸಿದೆ ಎಂದು ಕಿಡಿ ಕಾರಿತ್ತು.
ಹ್ಯಾಲೋವೀನ್ ಏಂದರೇನು?
ಪಾಶ್ಚಿಮಾತ್ಯರು ಹ್ಯಾಲೋವೀನ್ ಅನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ. ಈ ದಿನ ಜನರು ದೆವ್ವ, ಪಿಶಾಚಿ, ಪ್ರೇತಾತ್ಮ, ಮಮ್ಮಿ, ರಾಕ್ಷಸರು ಮುಂತಾದ ಭಯಾನಕ ವೇಷಗಳನ್ನು ಧರಿಸಿ ಅದ್ದೂರಿ ಪಾರ್ಟಿಗಳನ್ನು ಆಯೋಜಿಸುತ್ತಾರೆ. ಹ್ಯಾಲೋವೀನ ಕ್ರಿಶ್ಚಿಯನ್ ಹಬ್ಬವಾಗಿದ್ದು, , ಇದನ್ನು ಪ್ರತಿವರ್ಷ ಸೆಲ್ಟಿಕ್ ಕ್ಯಾಲೆಂಡರ್ನ ಕೊನೆಯ ದಿನ ಅಂದರೆ ಅಕ್ಟೋಬರ್ 31 ನೇ ತಾರೀಕಿನಂದು ಆಚರಿಸಲಾಗುತ್ತದೆ. ಇದರ ಮರುದಿನವನ್ನು ಹೊಸ ವರ್ಷದ ಆರಂಭ ಎಂದು ಪರಿಗಣಿಸಲಾಗುತ್ತದೆ.
ಈ ಸುದ್ದಿಯನ್ನೂ ಓದಿ: Bihar Assembly Election: 1 ಕೋಟಿ ಸರ್ಕಾರಿ ಉದ್ಯೋಗ, 10 ಲಕ್ಷ ರೂ. ಸಹಾಯ ಧನ; ಬಿಹಾರ ಚುನಾವಣೆಗೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ
ಹ್ಯಾಲೋವೀನ್ ದಿನದಂದು ಭೂತದ ವೇಷವನ್ನು ಧರಿಸುವುದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಕ್ರಿಶ್ಚಿಯನ್ ಸಮುದಾಯದಲ್ಲಿದೆ. ಈ ಕಾರಣದಿಂದಲೇ ಜನರು ಈ ದಿನ ದೆವ್ವ, ಭೂತ, ಪ್ರೇತಾತ್ಮ ಹೀಗೆ ಭಯಾನಕ ವೇಷಗಳನ್ನು ಧರಿಸುತ್ತಾರೆ. ಅಷ್ಟೇ ಅಲ್ಲದೇ ಸಿಹಿ ಹಾಗೂ ಚಾಕಲೇಟ್ ಹಂಚಿ ಸಂಭ್ರಮಿಸುತ್ತಾರೆ.