ತೆಲಂಗಾಣದಲ್ಲಿ ವಿಜೃಂಭಣೆಯ ಗಣೇಶ ಚತುರ್ಥಿ: 2.90 ಕೋಟಿ ರೂಪಾಯಿ ಮೌಲ್ಯದ ನೋಟುಗಳಿಂದ ಕಂಗೊಳಿಸುತ್ತಿರುವ ಗಣೇಶ ಮೂರ್ತಿ
Viral News: ತೆಲಂಗಾಣದ ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯ ಪಲ್ವಂಚ ನಗರದಲ್ಲಿ ಆಚರಿಸಿದ ಗಣೇಶ ಚತುರ್ಥಿ ಬಹಳಷ್ಟು ವಿಶೇಷವಾಗಿತ್ತು. ಇಲ್ಲಿ ಈ ಬಾರಿಯ ಆಚರಣೆಯಲ್ಲಿ ಎರಡು ಪ್ರತ್ಯೇಕ ಗಣೇಶ ಮೂರ್ತಿಗಳನ್ನು ಒಟ್ಟು 2.90 ಕೋಟಿ ಮೌಲ್ಯದ ಭಾರತೀಯ ನೋಟಿನಿಂದ ಶೃಂಗರಿಸಿದ್ದು ಎಲ್ಲರ ಗಮನ ಸೆಳೆಯುವಂತಿತ್ತು.
2.90 ಕೋಟಿ ರೂಪಾಯಿ ಮೌಲ್ಯದ ನೋಟುಗಳಿಂದ ಕಂಗೊಳಿಸುತ್ತಿರುವ ಗಣೇಶ ಮೂರ್ತಿ -
ಹೈದರಾಬಾದ್, ಸೆ. 20: ಈ ಬಾರಿ ಎಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಜೋರಾಗಿತ್ತು. ವಿವಿಧೆಡೆ ಬಣ್ಣ- ಬಣ್ಣದ ಗಣಪನ ವಿಗ್ರಹಗಳು ಗಮನ ಸೆಳೆದಿವೆ. ತೆಲಂಗಾಣದ ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯ ಪಲ್ವಂಚ ನಗರದಲ್ಲಿ ಆಚರಿಸಿದ ಗಣೇಶ ಚತುರ್ಥಿ ಬಹಳಷ್ಟು ವಿಶೇಷವಾಗಿತ್ತು. ಇಲ್ಲಿ ಈ ಬಾರಿಯ ಆಚರಣೆಯಲ್ಲಿ ಎರಡು ಪ್ರತ್ಯೇಕ ಗಣೇಶ ಮೂರ್ತಿಗಳನ್ನು ಒಟ್ಟು 2.90 ಕೋಟಿ ರೂಪಾಯಿ ಮೌಲ್ಯದ ಭಾರತೀಯ ನೋಟಿನಿಂದ ಶೃಂಗರಿಸಿದ್ದು ಎಲ್ಲರ ಗಮನ ಸೆಳೆದಿದೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ಈ ವಿಶೇಷ ಗಣೇಶನ ಆಲಂಕಾರ ಹಲವು ಭಕ್ತರನ್ನು ಆಕರ್ಷಿಸಿದವು. ಉತ್ಸವದ ಸಮಯದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡುವ ಜನರಿಗೆ ಪ್ರತಿಷ್ಠಾಪನೆಗಳು ಪ್ರಮುಖ ಕೇಂದ್ರಬಿಂದುವಾಗಿತ್ತು. ಕಾಪು ಸಮುದಾಯವು ಒಂದು ವಿಗ್ರಹಕ್ಕೆ 1.40 ಕೋಟಿ ರೂಪಾಯಿ ನೋಟು ಬಳಸಿದರೆ, ಇನ್ನೊಂದು ಟೀಮ್ ಏಕದಂತ ವಿಗ್ರಹಕ್ಕೆ 1.50 ಕೋಟಿ ರೂಪಾಯಿ ಮೌಲ್ಯದ ನೋಟು ಬಳಸಿವೆ. ಕಾಪು ಸಮುದಾಯದ ಮುಖಂಡರು ಹಾಗೂ ಸದಸ್ಯರು ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಗೆ 1.40 ಕೋಟಿ ರೂಪಾಯಿ ಮೌಲ್ಯದ ಕರೆನ್ಸಿ ನೋಟುಗಳನ್ನು ಬಳಸಿ ವಿಶಿಷ್ಟವಾಗಿ ಅಲಂಕರಿಸಿದ್ದು, ಸ್ಥಳೀಯ ಬ್ಯಾಂಕುಗಳು ಬೆಂಬಲ ನೀಡಿವೆ.
ವಿಡಿಯೊ ನೋಡಿ:
The Ganesh Chaturthi festivities in Telangana have taken an opulent turn in Palvancha, with two Lord Ganesha idols embellished with currency notes amounting to Rs 2.90 crorehttps://t.co/xbGFKdBKBr
— The CSR Journal (@thecsrjournal) September 19, 2026
ಮತ್ತೊಂದೆಡೆ ಟೀಮ್ ಏಕದಂತ ವತಿಯಿಂದ 1.50 ಕೋಟಿ ರೂಪಾಯಿ ಮೌಲ್ಯದ ಗಣೇಶೋತ್ಸವವನ್ನು ಮತ್ತಷ್ಟು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿತು. ಈ ಯುವ ಪಡೆ ತಂದಿದ್ದ ಗಣೇಶ ಮೂರ್ತಿಗೆ 1.50 ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಜೋಡಿಸಿ ಗಣೇಶನ ವಿನ್ಯಾಸವನ್ನು ಮಾಡಿದೆ. ಅದೇ ರೀತಿ ಈ ಬೃಹತ್ ಮಟ್ಟದ ಅಲಂಕಾರಕ್ಕೆ ಅಗತ್ಯವಿದ್ದ ಹಣವನ್ನು ಸ್ಥಳೀಯ ವರ್ತಕರು, ಉದ್ಯಮಿಗಳು ಹಾಗ ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಲಾಗಿದೆ.
20 ಅಡಿ ಎತ್ತರದ ಫ್ಲೈಓವರ್ ನಡುವೆ ಸಿಲುಕಿದ ಕಾರ್! ಚಾಲಕ ಪವಾಡ ಸದೃಶ ಪಾರು
ಸಂಪೂರ್ಣವಾಗಿ ಹೊಸ ನೋಟುಗಳ ಮೂಲಕವೇ ಹಾರದ ವಿನ್ಯಾಸ ಮಾಡಲಾಗಿತ್ತು. ಈ ವಿಶಿಷ್ಟ ರೂಪವನ್ನು ಕಣ್ಣುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ನೋಟುಗಳಿಂದ ಶೃಂಗರಿಸಲ್ಪಟ್ಟ ಈ ಎರಡೂ ಗಣೇಶ ಮೂರ್ತಿಗಳ ವಿಡಿಯೊ ವೈರಲ್ ಆಗಿದ್ದು, ಪಲ್ವಂಚ ನಗರಕ್ಕೆ ಸುತ್ತಮುತ್ತಲಿನ ಊರುಗಳಿಂದ ಭಕ್ತ ಸಾಗರವೇ ಹರಿದುಬಂದಿದೆ. ಹಬ್ಬದ ಆಚರಣೆ ಮುಗಿದ ನಂತರ ಈ ಹಣವನ್ನು ಸುರಕ್ಷಿತವಾಗಿ ತೆಗೆದು ವೆಚ್ಚಗಳಿಗೆ ತಕ್ಕಂತೆ ಹಂಚಿಕೆ ಮಾಡಲಾಗಿದೆ.