ಕೇರಳಂನಲ್ಲಿ ಭೂಕುಸಿತ: ಹಳಿ ತಪ್ಪಿದ ಬಿಲಾಸ್ಪುರ-ತಿರುನಲ್ವೇಲಿ ಎಕ್ಸ್ಪ್ರೆಸ್ ರೈಲು
ಕೇರಳಂನ ದಕ್ಷಿಣ ಭಾಗದಲ್ಲಿ ಭೂಕುಸಿತ ಉಂಟಾಗಿದ್ದು, ರೈಲು ಪ್ರಯಾಣಕ್ಕೆ ಅಡ್ಡಿಯಾಗಿದೆ. ಪರಸಾಲ ರೈಲು ನಿಲ್ದಾಣದ ಬಳಿ ಗುರುವಾರ ಮುಂಜಾನೆ ಭೂಕುಸಿತ ಉಂಟಾಗಿತ್ತು. ಇದರಿಂದ ಬಿಲಾಸ್ಪುರ- ತಿರುನಲ್ವೇಲಿ ಎಕ್ಸ್ಪ್ರೆಸ್ ರೈಲಿನ ಎಂಜಿನ್ ಹಳಿ ತಪ್ಪಿದ್ದು, ಆರು ಪ್ಯಾಸೆಂಜರ್ ರೈಲು ಪ್ರಯಾಣವನ್ನು ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.
ಸಂಗ್ರಹ ಚಿತ್ರ -
ತಿರುವನಂತಪುರಂ: ಭಾರಿ ಮಳೆಯ (Heavy rain) ಪರಿಣಾಮ ಭೂಕುಸಿತ ಉಂಟಾಗಿ ರೈಲು ಸಂಚಾರಕ್ಕೆ ಅಡ್ಡಿಯಾಗಿರುವ ಘಟನೆ ಕೇರಳಂನ (keralam) ದಕ್ಷಿಣ ಭಾಗದಲ್ಲಿ ನಡೆದಿದೆ. ತಿರುವನಂತಪುರಂ ಜಿಲ್ಲೆಯ ಪರಸಾಲದ ನಿಲ್ದಾಣದ ( Parassala railway station) ಬಳಿ ಗುರುವಾರ ಮುಂಜಾನೆ ಉಂಟಾದ ಭೂಕುಸಿತದಿಂದಾಗಿ ಬಿಲಾಸ್ಪುರ-ತಿರುನಲ್ವೇಲಿ ಎಕ್ಸ್ಪ್ರೆಸ್ ರೈಲಿನ (Bilaspur-Tirunelveli Express train) ಎಂಜಿನ್ ಹಳಿ ತಪ್ಪಿದೆ. ರೈಲಿನ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಬಿಲಾಸ್ಪುರ-ತಿರುನಲ್ವೇಲಿ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿದ್ದರಿಂದ ರೈಲು ಸಂಚಾರಕ್ಕೆ ಅಡ್ಡಿಯಾಗಿದ್ದು, ಆರು ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ವಲಯವು ಪ್ರಕಟಣೆಯಲ್ಲಿ ತಿಳಿಸಿದೆ
ಕೇರಳದ ದಕ್ಷಿಣ ಜಿಲ್ಲೆಯಲ್ಲಿರುವ ಪರಸಾಲ ರೈಲು ನಿಲ್ದಾಣದ ಬಳಿ ಗುರುವಾರ ಮುಂಜಾನೆ 2.19ರ ಸುಮಾರಿಗೆ ಭೂಕುಸಿತ ಉಂಟಾಗಿದೆ. ಈ ಸಂದರ್ಭದಲ್ಲಿ ಪ್ರಯಾಣಿಸುತ್ತಿದ್ದ ಬಿಲಾಸ್ಪುರ-ತಿರುನಲ್ವೇಲಿ ಎಕ್ಸ್ಪ್ರೆಸ್ ರೈಲಿನ ಎಂಜಿನ್ ಹಳಿ ತಪ್ಪಿದೆ. ಬಳಿಕ ಎಕ್ಸ್ಪ್ರೆಸ್ ರೈಲಿನ ಸೇವೆಯನ್ನು ಭಾಗಶಃ ರದ್ದುಪಡಿಸಲಾಗಿದೆ.
ಎಲ್ ನಿನೋ ಪರಿಣಾಮ; ತಾಪಮಾನ ಇನ್ನಷ್ಟು ಹೆಚ್ಚಳ: ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ
ಈ ಕುರಿತು ಮಾಹಿತಿ ನೀಡಿರುವ ದಕ್ಷಿಣ ರೈಲ್ವೆ ವಿಭಾಗ, ಭೂಕುಸಿತದ ಕಾರಣದಿಂದ ಬಿಲಾಸ್ಪುರ-ತಿರುನಲ್ವೇಲಿ ಎಕ್ಸ್ಪ್ರೆಸ್ ರೈಲನ್ನು ಪರಸಾಲ ಬಳಿ ನಿಲ್ಲಿಸಲಾಗಿತ್ತು. ರೈಲು ನಿಂತ ಅನಂತರ ಅದರ ಎಂಜಿನ್ ಹಳಿ ತಪ್ಪಿರುವುದು ಕಂಡುಬಂದಿದೆ. ಪ್ರಯಾಣಿಕರು, ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.
ರೈಲನ್ನು ಸ್ಥಳಾಂತರಿಸಲು ತಕ್ಷಣವೇ ಮತ್ತೊಂದು ಎಂಜಿನ್ ವ್ಯವಸ್ಥೆ ಮಾಡಲಾಯಿತು. ದುರಸ್ತಿ ಕಾರ್ಯ ಕೈಗೊಳ್ಳಲು ಮತ್ತು ರೈಲು ಸೇವೆಯನ್ನು ಪುನರಾರಂಭಿಸಲು ಸಹಾಯ ಮಾಡಲು, ಸಿಬ್ಬಂದಿ ಹಾಗೂ ಅಗತ್ಯ ಉಪಕರಣಗಳೊಂದಿಗೆ ಅಪಘಾತ ಪರಿಹಾರ ರೈಲು ಸ್ಥಳಕ್ಕೆ ಕಳುಹಿಸಲಾಯಿತು. ಅಕ್ಟೋಬರ್ 20ರಂದು ಬಿಲಾಸ್ಪುರದಿಂದ ಪ್ರಯಾಣ ಆರಂಭಿಸಿದ್ದ ಬಿಲಾಸ್ಪುರ-ತಿರುನಲ್ವೇಲಿ ಎಕ್ಸ್ಪ್ರೆಸ್ ರೈಲು ನೆಯ್ಯಾತ್ತಿಂಕರದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.
STORY | Landslide derails locomotive in southern Keralam, disrupts train services A landslide near the Parassala railway station in this southern Keralam district derailed the locomotive of the Bilaspur-Tirunelveli Express early on Thursday, disrupting train services, with the railways cancelling six passenger trains and partially cancelling the affected express train. The incident occurred at 2:19 am when Train No. 22619 Bilaspur-Tirunelveli Express was stopped near Parassala following the landslide. READ: https://t.co/TVf1tq2EkU VIDEO | (Full video available on PTI Videos - https://t.co/bIyFWTfmBd)
— Press Trust of India (@PTI_News) October 22, 2026
ನೆಯ್ಯಾತ್ತಿಂಕರ ಮತ್ತು ತಿರುನಲ್ವೇಲಿ ನಡುವಿನ ಮಾರ್ಗದಲ್ಲಿ ರೈಲು ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗಿದೆ. ಪ್ರಯಾಣಿಕರಿಗೆ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಪರಸಾಲ ರೈಲು ನಿಲ್ದಾಣದ ಬಳಿ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಗುರುವಾರ ನಿಗದಿಯಾಗಿದ್ದ ಆರು ಪ್ಯಾಸೆಂಜರ್ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ರದ್ದುಗೊಂಡ ರೈಲುಗಳಲ್ಲಿ ತಿರುವನಂತಪುರಂ ನಾರ್ತ್-ನಾಗರ್ಕೋಯಿಲ್ ಜಂಕ್ಷನ್ ಪ್ಯಾಸೆಂಜರ್, ನಾಗರ್ಕೋಯಿಲ್ ಜಂಕ್ಷನ್-ಕೊಲ್ಲಂ ಜಂಕ್ಷನ್ ಪ್ಯಾಸೆಂಜರ್, ನಾಗರ್ಕೋಯಿಲ್ ಜಂಕ್ಷನ್-ತಿರುವನಂತಪುರಂ ನಾರ್ತ್ ಪ್ಯಾಸೆಂಜರ್ ಮತ್ತು ಕೊಲ್ಲಂ ಜಂಕ್ಷನ್-ನಾಗರ್ಕೋಯಿಲ್ ಜಂಕ್ಷನ್ ಪ್ಯಾಸೆಂಜರ್ ಸೇರಿವೆ.
ಕನ್ಯಾಕುಮಾರಿಯಿಂದ ಮುಂಜಾನೆ 3.45ಕ್ಕೆ ಹೊರಡಬೇಕಿದ್ದ ಕನ್ಯಾಕುಮಾರಿ-ಮಂಗಳೂರು ಸೆಂಟ್ರಲ್ ಪರಶುರಾಮ್ ಎಕ್ಸ್ಪ್ರೆಸ್ ರೈಲಿನ ಸಮಯವನ್ನು ಬದಲಾಯಿಸಲಾಗಿದೆ. ಅದು ಬೆಳಗ್ಗೆ 7 ಗಂಟೆಗೆ ಹೊರಡಲಿದೆ. ರೈಲು ಸೇವೆಗಳ ಕುರಿತು ಮಾಹಿತಿ ಪಡೆಯಲು ಬಯಸುವ ಪ್ರಯಾಣಿಕರಿಗಾಗಿ, ದಕ್ಷಿಣ ರೈಲ್ವೆಯು ತಾತ್ಕಾಲಿಕ ಸಹಾಯವಾಣಿ 9188241681, 9188523905 ಮತ್ತು 8590137970 ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.
ಕೇರಳಂನಲ್ಲಿ ಇಂಗ್ಲೆಂಡ್ ಪ್ರವಾಸಿ ಮೇಲೆ ಲೈಂಗಿಕ ದೌರ್ಜನ್ಯ; ಮಧ್ಯರಾತ್ರಿ ಖಾಲಿ ರಸ್ತೆಯಲ್ಲಿ ನಡೆದಿದ್ದೇನು?
ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯು ತಿರುವನಂತಪುರಂ ಜಿಲ್ಲೆಯಲ್ಲಿ ಬುಧವಾರದವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಅಕ್ಟೋಬರ್ 22 ರಿಂದ 25 ರವರೆಗೆ ಹಳದಿ ಅಲರ್ಟ್ ನೀಡಲಾಗಿದೆ.