LIC ‘One Man Office’: ಎಲ್‌ಐಸಿ ಸಂಸ್ಥೆಗೆ ‘ ಡಿಜಿಟಲ್ ಟಚ್’- ಮೊಬೈಲ್‌ನಲ್ಲಿ ಪಡೆಯಬಹುದು ವಿಮೆ!
ಒಎಮ್‌ಒ ( ಒನ್ ಮ್ಯಾನ್ ಆಫೀಸ್) ಸೇವೆಯನ್ನು ಎಲ್‌ಐಸಿ ಮೊಬೈಲ್ ಡಿಜಿ ಟಲ್ ಆಫೀಸ್ ಎಂದು ವಿಶ್ಲೇಶಿಸಿದ್ದು ಮೊಬೈಲ್ ಫೋನ್ ಮೂಲಕ ಎಲ್‌ಐಸಿ ಯ ಎಲ್ಲಾ ಸೇವೆಯನ್ನು ಪಡೆಯಲು ಏಕ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಈ ಸೇವೆ ಎಲ್‌ಐಸಿಯ (ಆತ್ಮ ನಿರ್ಭರ ಏಜೆಂಟ್ಸ್ ನ್ಯೂ ಬುಸಿನೆಸ್ ಡಿಜಿಟಲ್ ಆಪ್ಲಿಕೇಶನ್) ಆಧರಿಸಿ ರಚಿಸಲಾಗಿದ್ದು ಇದು ಏಜೆಂಟ್‌ಗಳಿಗೆ ಹೊಸ ಗ್ರಾಹಕರನ್ನು ಪಡೆಯಲು ನೆರವಾಗಲಿದೆ.

LIC ONE MAN OFFICE

ನವದೆಹಲಿ: ಭಾರತೀಯ ಜೀವ ವಿಮಾ ನಿಗಮ (LIC) ಸಂಸ್ಥೆ ತನ್ನ ಸೇವೆಯನ್ನು ಮತ್ತಷ್ಟು ವಿಸ್ತಾರಗೊಳಿಸಲು ಹಾಗೂ ಡಿಜಿಟಲೀಕರಣ ಗೊಳಿಸುವ ಸಲುವಾಗಿ ‘ಒನ್ ಮ್ಯಾನ್ ಆಫೀಸ್’ ಎಂಬ ಅಪ್ಲಿಕೇಶನ್ ಸೇವೆಯನ್ನು ಆರಂಭಿಸಿದೆ. ಫೆ. 17ರಂದು ಈ ಸೇವೆ ಲೋಕಾರ್ಪಣೆ ಗೊಂಡಿದ್ದು ಇದು ಎಲ್‌ಐಸಿ ಏಜೆಂಟ್, ಡೆವೆಲಪ್‌ಮೆಂಟ್ ಆಫಿಸರ್, ಹಿರಿಯ ಬ್ಯುಸಿನೆಸ್ ಅಸೋಸಿಯೇಟ್ ಸೇರಿ ಹಲವು ವಿಭಾಗದ ಸೇವೆ ಪ್ರದಾನಕರ ಕಾರ್ಯವನ್ನು ಮತ್ತಷ್ಟು ಪರಿಣಾಮ ಕಾರಿಗೊಳಿಸಲು ನೆರವಾಗಲಿದೆ ಎಂದು ಎಲ್‌ಐಸಿ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
2047ರೊಳಗೆ ಎಲ್ಲರಗೂ ವಿಮೆ (ಇನ್ಶುರೆನ್ಸ್ ಫಾರ್ ಆಲ್) ಎಂಬ ಎಲ್ ಐಸಿಯ ದೀರ್ಘಕಾಲದ ಗುರಿಯನ್ನು ಸಾಕಾರಗೊಳಿಸುವಲ್ಲಿ ಈ ಸೇವೆ ಮಹತ್ವದ ಹೆಜ್ಜೆಯಾಗಿದೆ. ಒಎಮ್‌ಒ ಸೇವೆ (ಒನ್ ಮ್ಯಾನ್ ಆಫೀಸ್) ಡಿಜಿ ಟಲ್ ಪಾಲಿಸಿ ಮಾರಾಟ, ವಹಿ ವಾಟುಗಳ ಬೆಳವಣಿಗೆಯನ್ನು ಅರಿಯಲು, ಗ್ರಾಹಕ ಸೇವೆ ಮತ್ತು ಎಲ್‌ಐಸಿ ಏಜೆಂಟ್‌ಗಳಿಗೆ ತರಬೇತಿಯನ್ನು ನೀಡಲು ಬಹಳ ಸಹಕಾರಿಯಾಗಲಿದೆ ಎಂದು ಎಲ್‌ಐಸಿ ಸಿಇಒ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಸಿದ್ಧಾರ್ಥ ಮೊಹಾಂಟಿ ಯೋಜನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: South Indian Bank: ಸೌತ್ ಇಂಡಿಯನ್ ಬ್ಯಾಂಕ್‌ನಿಂದ ಸುಲಭ, ತ್ವರಿತ ‘ಸ್ಥಿರ ಠೇವಣಿ’ ಯೋಜನೆ
ಒಎಮ್‌ಒ ( ಒನ್ ಮ್ಯಾನ್ ಆಫೀಸ್) ಸೇವೆಯನ್ನು ಎಲ್‌ಐಸಿ ಮೊಬೈಲ್ ಡಿಜಿಟಲ್ ಆಫೀಸ್ ಎಂದು ವಿಶ್ಲೇಶಿಸಿದ್ದು ಮೊಬೈಲ್ ಫೋನ್ ಮೂಲಕ ಎಲ್‌ಐಸಿಯ ಎಲ್ಲಾ ಸೇವೆಯನ್ನು ಪಡೆಯಲು ಏಕ ವೇದಿಕೆಯಾಗಿ ಕಾರ್ಯ ನಿರ್ವಹಿಸಲಿದೆ. ಈ ಸೇವೆ ಎಲ್‌ಐಸಿಯ ಆನಂದ (ಆತ್ಮ ನಿರ್ಭರ ಏಜೆಂಟ್ಸ್ ನ್ಯೂ ಬುಸಿನೆಸ್ ಡಿಜಿಟಲ್ ಆಪ್ಲಿಕೇಶನ್) ಆಧರಿಸಿ ರಚಿಸಲಾಗಿ ದ್ದು ಇದು ಏಜೆಂಟ್‌ಗಳಿಗೆ ಹೊಸ ಗ್ರಾಹಕರನ್ನು ಪಡೆಯಲು ನೆರವಾಗಲಿದೆ. ಜತೆಗೆ ಯೋಜನೆಗಳ ಪ್ರೀಮಿಯಂ ಲೆಕ್ಕಚಾರ, ಸೇವೆಯ ಲಾಭಗಳ ಮಾಹಿತಿ, ಇ-ಎನ್‌ಎಸಿಹೆಚ್ ನೋಂದಣಿ, ವಿಳಾಸ ಬದಲಾಯಿಸುವ ಸೌಲಭ್ಯ, ಆನ್‌ಲೈನ್ ಸಾಲ ಅರ್ಜಿ, ಪ್ರೀಮಿಯಂ ಪಾವತಿ ರಿನಿವಲ್, ಹಾಗೂ ಕಾಗದ ಪತ್ರಗಳನ್ನು ಸಲ್ಲಿಸುವ ಅವಕಾಶ ಸೇರಿ ಹಲವು ಸೌಲಭ್ಯವನ್ನು ಇಲ್ಲಿ ಪಡೆಯಬಹುದಾಗಿದೆ. ಜತೆಗೆ ಈ ಅಪ್ಲಿಕೇಶನ್‌ನಲ್ಲಿ ಮತ್ತಷ್ಟು ಹೊಸ ಸೌಲಭ್ಯಗಳನ್ನು ಪರಿಚಯಿಸುವ ಯೋಜನೆಯನ್ನು ಹೊಂದಿದೆ.