South Indian Bank: ಸೌತ್ ಇಂಡಿಯನ್ ಬ್ಯಾಂಕ್‌ನಿಂದ ಸುಲಭ, ತ್ವರಿತ ‘ಸ್ಥಿರ ಠೇವಣಿ’ ಯೋಜನೆ
ಎಸ್‌ಐಬಿ (ಸೌತ್ ಇಂಡಿಯನ್ ಬ್ಯಾಂಕ್) ನಲ್ಲಿ ಸ್ಥಿರ ಠೇವಣಿ ಪಡೆಯಬಹುದಾಗಿದ್ದು ಯಾವುದೇ ಬ್ಯಾಂಕ್‌ನಲ್ಲಿರುವ ಹಣವನ್ನು ವರ್ಗಾಯಿಸಿ ಠೇವಣಿದಾರರು ಯುಪಿಐ ಸೇವೆ , ಹಾಗೂ ಸೂಕ್ತ ಕೆವೈಸಿ ವ್ಯವಸ್ಥೆ ಮೂಲಕ ಸೌತ್ ಇಂಡಿಯನ್ ಬ್ಯಾಂಕ್‌ನಲ್ಲಿ ಇನ್ನು ಠೇವಣಿ ಇರಿಸಬಹುದಾಗಿದೆ. ಎಸ್‌ಐಬಿ ಕೇರಳ ಮೂಲದ ಖಾಸಗಿ ಬ್ಯಾಂಕ್ ಸಂಸ್ಥೆಯಾಗಿದ್ದು ಇದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲ್ ವ್ಯವಸ್ಥೆಯ ಸಾಧ್ಯತೆಯನ್ನು ವಿಸ್ತರಿಸಿದೆ


ಬೆಂಗಳೂರು: ಸೌತ್ ಇಂಡಿಯನ್ ಬ್ಯಾಂಕ್ (South Indian Bank) ಸ್ಥಿರ ಠೇವಣಿ (ಫಿಕ್ಸ್‌ಡ್ ಡಿಪಾಸಿಟ್) ವ್ಯವಸ್ಥೆಗೆ ನೂತನ ಯೋಜನೆಯನ್ನು ಘೋಷಿಸಿದೆ. ಈ ಯೋಜನೆ ಮೂಲಕ ಸುಲಭವಾಗಿ ಹಾಗೂ ತ್ವರಿತವಾಗಿ ಠೇವಣಿದಾರರು ಎಸ್‌ಐಬಿ (ಸೌತ್ ಇಂಡಿಯನ್ ಬ್ಯಾಂಕ್) ನಲ್ಲಿ ಸ್ಥಿರ ಠೇವಣಿ ಪಡೆಯಬಹುದಾಗಿದ್ದು ಯಾವುದೇ ಬ್ಯಾಂಕ್ ನಲ್ಲಿರುವ ಹಣವನ್ನು ವರ್ಗಾಯಿಸಿ ಠೇವಣಿದಾರರು ಯುಪಿಐ ಸೇವೆ , ಹಾಗೂ ಸೂಕ್ತ ಕೆವೈಸಿ ವ್ಯವಸ್ಥೆ ಮೂಲಕ ಸೌತ್ ಇಂಡಿಯನ್ ಬ್ಯಾಂಕ್‌ನಲ್ಲಿ ಇನ್ನು ಠೇವಣಿ ಇರಿಸಬಹುದಾಗಿದೆ. ಎಸ್‌ಐಬಿ ಕೇರಳ ಮೂಲದ ಖಾಸಗಿ ಬ್ಯಾಂಕ್ ಸಂಸ್ಥೆಯಾಗಿದ್ದು ಇದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲ್ ವ್ಯವಸ್ಥೆಯ ಸಾಧ್ಯತೆಯನ್ನು ವಿಸ್ತರಿಸಿದೆ.
ಯೋಜನೆಯ ಮುಖ್ಯಾಂಶಗಳು:
- ಗ್ರಾಹಕರು ಸೌತ್ ಇಂಡಿಯನ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರದಿದ್ದರೂ ‘ಸ್ಥಿರ ಠೇವಣಿ’ ಇರಿಸಬಹುದಾಗಿದೆ.
- ಸಂಪೂರ್ಣ ಠೇವಣಿ ಸೌಲಭ್ಯ ಪೇಪರ್ ರಹಿತವಾಗಿದ್ದು, ಡಿಜಿಟಲ್ ವ್ಯವಸ್ಥೆ ಮೂಲಕ 5 ನಿಮಿಷದಲ್ಲಿ ಈ ಯೋಜನೆ ಯನ್ನುಪಡೆಯಬಹುದಾಗಿದೆ.
ಇದನ್ನು ಓದಿ: Chikkaballapur News: ರಾಷ್ಟ್ರ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಲು ಸ್ಕೇಟಿಂಗ್ ಉತ್ತಮ ತರಬೇತಿ ನೀಡಲಾಗುತ್ತಿದೆ
- ಗ್ರಾಹಕರು ಯುಪಿಐ ಮೂಲಕ ಎಫ್‌ಡಿಗೆ ಹಣ ವರ್ಗಾಯಿಸಬಹುದು.
- ಸ್ಥಿರ ಠೇವಣಿ ಸೌಲಭ್ಯ ಪಡೆಯಲು ಆಧಾರ್ ಮಾಹಿತಿ ಹಾಗೂ ಪಾನ್ ಕಾರ್ಡ್ ಮಾಹಿತಿ ಮಾತ್ರ ಸಾಕು
- ಎಫ್‌ಡಿ ಖಾತೆಯನ್ನು ಯಾವುದೇ ಸಮಯದಲ್ಲಿ ತೆರೆಯಬಹುದು. 24/7 ಸಮಯ ಈ ಸೇವೆ ಲಭ್ಯವಿರಲಿದೆ
- ಸ್ಪರ್ಧಾತ್ಮಕ ಬಡ್ಡಿ ದರ ಹಾಗೂ ಅವಧಿಗೂ ಮುನ್ನ ಹಣ ಹಿಂಪಡೆಯುವ ಸೌಲಭ್ಯ
- ಸ್ಥಿರ ಠೇವಣಿ (ಎಫ್‌ಡಿ) ಆರಂಭಿಕ ಮೊತ್ತ ರು.1000 ಇದ್ದು ಸಾಕಷ್ಟು ಜನರಿಗೆ ಇದು ಅನುಕೂಲಕರ ಯೋಜನೆಯಾಗಿದೆ.
- ಠೇವಣಿ 5 ಲಕ್ಷದವರೆಗೆ ಡಿಐಸಿಜಿಸಿ ವಿಮೆಯ ಭದ್ರತೆ ಹೊಂದಿದ್ದು , ಠೇವಣಿದಾರರಿಗೆ ಉತ್ತಮ ಭದ್ರತೆ ನೀಡುತ್ತದೆ.