ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kunal Kamra Row: ಏಕನಾಥ್ ಶಿಂಧೆ ವಿರುದ್ಧ ಅವಹೇಳನಕಾರಿ ಹೇಳಿಕೆ; ಕುನಾಲ್ ಕಾಮ್ರಾಗೆ ನಿರೀಕ್ಷಣಾ ಜಾಮೀನು

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್‌ ಶಿಂಧೆ(Eknath Shinde) ಅವರ ವಿರುದ್ಧ ಅವಹೇನಕಾರಿ ಹೇಳಿಕೆ ನೀಡಿ ಬಂಧನ ಭೀತಿ ಎದುರಿಸುತ್ತಿರುವ ಖ್ಯಾತ ಸ್ಟ್ಯಾಂಡ್‌ ಕಾಮಿಯನ್‌ ಕುನಾಲ್‌ ಕಾಮ್ರಾ(Kunal Kamra Row)ಅವರಿಗೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಕುನಾಲ್ ಕಾಮ್ರಾಗೆ ಬಿಗ್‌ ರಿಲೀಫ್‌-ನಿರೀಕ್ಷಣಾ ಜಾಮೀನು ಮಂಜೂರು

Profile Rakshita Karkera Mar 28, 2025 6:13 PM

ಮುಂಬೈ: ಕಾಮಿಡಿ ಶೋವೊಂದರಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್‌ ಶಿಂಧೆ(Eknath Shinde) ಅವರ ವಿರುದ್ಧ ಅವಹೇನಕಾರಿ ಹೇಳಿಕೆ ನೀಡಿ ಕಾನೂನು ಸಂಕಷ್ಟ ಎದುರಿಸುತ್ತಿರುವ ಖ್ಯಾತ ಸ್ಟ್ಯಾಂಡ್‌ ಕಾಮಿಯನ್‌ ಕುನಾಲ್‌ ಕಾಮ್ರಾ(Kunal Kamra Row)ಅವರಿಗೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಮಹಾರಾಷ್ಟ್ರದ ನ್ಯಾಯಾಲಯಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಕಮ್ರಾ ಪ್ರಾಥಮಿಕವಾಗಿ ಮದ್ರಾಸ್ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಂದರ್ ಮೋಹನ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ. ಮಹಾರಾಷ್ಟ್ರದ ನ್ಯಾಯಾಲಯಗಳನ್ನು ಸಂಪರ್ಕಿಸಲು ಸಾಕಷ್ಟು ಸಮಯಾವಕಾಶ ನೀಡುವಂತೆ ಅವರ ವಕೀಲರು ಒತ್ತಾಯಿಸಿದ್ದರಿಂದ ಏಪ್ರಿಲ್ 7 ರವರೆಗೆ ಕಾಮ್ರಾಗೆ ಬಿಗ್‌ ರಿಲೀಫ್‌ ಸಿಕ್ಕಿದೆ.

ಕುನಾಲ್ ಕಮ್ರಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ಏಕನಾಥ್ ಶಿಂಧೆ ಅವರನ್ನು ನಂಬಿಕೆದ್ರೋಹಿ ಎಂದು ಕರೆದಿರುವುದನ್ನು ಕಾಣಬಹುದು. ಕುನಾಲ್ ಕಮ್ರಾ ತಮ್ಮ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಶಿವಸೇನೆಯನ್ನು ಟೀಕಿಸಿದ್ದರು. ಕುನಾಲ್ ಕಾಮ್ರಾ ಅವರು ಏಕನಾಥ್ ಶಿಂಧೆ ಮತ್ತು ಶಿವಸೇನೆಯನ್ನು ಟೀಕಿಸುತ್ತಾ, 'ಶಿವಸೇನೆ ಬಿಜೆಪಿಯಿಂದ ಹೊರಬಂದಿತು, ನಂತರ ಶಿವಸೇನೆಯೇ ಶಿವಸೇನೆಯಿಂದ ಹೊರಬಂದಿತು' ಎಂದು ಹೇಳಿದರು. ನಂತರ ಎನ್‌ಸಿಪಿ ಎನ್‌ಸಿಪಿ ತೊರೆದಿತು. ಒಬ್ಬ ಮತದಾರನಿಗೆ 9 ಬಟನ್‌ಗಳನ್ನು ನೀಡಿದರು. ಎಲ್ಲರೂ ಗೊಂದಲಕ್ಕೊಳಗಾದರು. ಇದನ್ನು ಒಬ್ಬ ವ್ಯಕ್ತಿ ಪ್ರಾರಂಭಿಸಿದ್ದು, ಆತನ ಮುಂಬೈನ ಒಂದು ದೊಡ್ಡ ಜಿಲ್ಲೆ ಥಾಣೆಯಿಂದ ಬಂದವರು ಎಂದು ಏಕನಾಥ್‌ ಶಿಂಧೆಯನ್ನು ಪರೋಕ್ಷವಾಗಿ ಟೀಕಿಸಿದ್ದರು. ಸಾಲದೆನ್ನುವಂತೆ ಸ್ವತಃ ತಾವೇ ಬರೆದ ಹಾಡೊಂದು ಹಾಡಿ ಅದರಲ್ಲಿ ಶಿಂಧೆಯನ್ನು ನಂಬಿಕೆದ್ರೋಹಿ ಎಂದು ಕರೆದಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು.

ಈ ಸುದ್ದಿಯನ್ನೂ ಓದಿ: Eknath Shinde: ಸುಪಾರಿ ತೆಗೆದುಕೊಂಡು ಟೀಕಿಸಿದಂತೆ ಕಾಣುತ್ತಿದೆ- ಕುನಾಲ್‌ ಕಾಮ್ರಾ ಬಗ್ಗೆ ಏಕನಾಥ್‌ ಶಿಂಧೆ ಫಸ್ಟ್‌ ರಿಯಾಕ್ಷನ್‌

ವಿಡಿಯೊ ವೈರಲಾಗ್ತಿದ್ದಂತೆ ಇದು ಶಿವಸೈನಿಕರನ್ನು ಕೆರಳಿಸಿತು. ಶಿವಸೇನಾ ಕಾರ್ಯಕರ್ತರು ಈ ಶೋ ನಡೆದಿದ್ದ ಹೋಟೆಲ್ ಯುನಿಕಾಂಟಿನೆಂಟಲ್‌ನ ಸಭಾಂಗಣಕ್ಕೆ ತಲುಪಿ ಅಲ್ಲಿ ಕೋಲಾಹಲ ಸೃಷ್ಟಿಸಿದ್ದರು. ಇಡೀ ಹೊಟೇಲ್‌ನ ಟೇಬಲ್‌ ಕುರ್ಚಿಗಳನ್ನು ಪುಡಿಗಟ್ಟಿದ್ದರು. ಇದಾದ ಬಳಿಕ ಕುನಾಲ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಮುಂಬೈ ಪೊಲೀಸರಿಂದ ಎರಡೆರಡು ಸಮನ್ಸ್‌ ಜಾರಿಗೊಂಡಿದೆ. ಬಂಧನ ಭೀತಿ ಎದುರಿಸುತ್ತಿರುವ ಕುನಾಲ್‌ ನಿರೀಕ್ಷಣಾ ಜಾಮೀನು ಕೋರಿ ಅವರು ಮದ್ರಾಸ್‌ ಕೋರ್ಟ್‌ ಮೆಟ್ಟಿಲೇರಿದ್ದರು.