Mahakumbh 2025 : ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್
ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಮಹಾಕುಂಭ ಮೇಳಕ್ಕೆ ಆಗಮಿಸಿದ್ದರು. ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಮಹಾಕುಂಭ ಮೇಳದ ಅತ್ಯುತ್ತಮ ವ್ಯವಸ್ಥೆಗಾಗಿ ಆದಿತ್ಯನಾಥ ಯೋಗಿ ಅವರ ಸರ್ಕಾರವನ್ನು ಅವರು ಅಭಿನಂದಿಸಿದ್ದಾರೆ.
ಲಖನೌ: ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ (Maha kumbh) ನಡೆಯುತ್ತಿದ್ದು, ದೇಶ ವಿದೇಶಗಳಿಂದ ಜನರು ಆಗಮಿಸುತ್ತಿದ್ದಾರೆ. ಶನಿವಾರ ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankar) ಅವರು ಮಹಾಕುಂಭ ಮೇಳಕ್ಕೆ ಆಗಮಿಸಿದ್ದರು. ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಮಹಾಕುಂಭ ಮೇಳದ ಅತ್ಯುತ್ತಮ ವ್ಯವಸ್ಥೆಗಾಗಿ ಆದಿತ್ಯನಾಥ ಯೋಗಿ ಅವರ ಸರ್ಕಾರವನ್ನು ಅವರು ಅಭಿನಂದಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಒಂದು ಐತಿಹಾಸಿಕ ಕುಂಭ ಮೇಳವಾಗಿದೆ. ಇಷ್ಟು ಹಿಂದೂಗಳೂ ಯಾವತ್ತು ಒಟ್ಟಿಗೆ ಸೇರಿರಲಿಲ್ಲ. ಮಹಾಕುಂಭಕ್ಕೆ ಆಗಮಿಸಿದ ಜನರ ಸಂಖ್ಯೆ ಅಮೆರಿಕದ ಜನಸಂಖ್ಯೆಗೆ ಸರಿಸುಮಾರು ಸಮಾನವಾಗಿದೆ ಎಂದು ತಿಳಿದರೆ ಜಗತ್ತೇ ಬೆರಗಾಗುತ್ತದೆ ಎಂದು ಹೇಳಿದ್ದಾರೆ. ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಆದಿತ್ಯನಾಥ್ ಅವರನ್ನು ಶ್ಲಾಘಿಸಿದ ಅವರು, ಮಹಾಕುಂಭಕ್ಕಾಗಿ ಒಂದು ಲಕ್ಷಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಎಲ್ಲರಿಗೂ ಉತ್ತಮ ಗುಣಮಟ್ಟದ ಆಹಾರವನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
#WATCH उपराष्ट्रपति जगदीप धनखड़ ने प्रयागराज में महाकुंभ क्षेत्र का दौरा किया। इस दौरान उत्तर प्रदेश के मुख्यमंत्री योगी आदित्यनाथ भी मौजूद रहे।#MahaKumbhMela2025 #JagdeepDhankhar
— Hindustan (@Live_Hindustan) February 1, 2025
(📹ANI) pic.twitter.com/y7NRd2d4H9
ಈ ಸುದ್ದಿಯನ್ನೂ ಓದಿ : Mahakumbh 2025 : ಮಹಾಕುಂಭ ಮೇಳಕ್ಕೆ ಹೋಗುವವರಿಗೆ ಸಿಹಿ ಸುದ್ದಿ; ವಿಮಾನ ಟಿಕೆಟ್ ದರ ಅರ್ಧದಷ್ಟು ಇಳಿಕೆ!
ನಾನು ಈಗ ಪುಣ್ಯ ಸ್ನಾನ ಮಾಡಿದ್ದೇನೆ. ಇದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣವಾಗಿತ್ತು ಎಂದು ಹೇಳಿದ್ದಾರೆ. ಜಗದೀಪ್ ಧನಕರ್ ಅವರು ತಮ್ಮ ಪತ್ನಿಯ ಜೊತೆ ಪ್ರಯಾಗ್‌ರಾಜ್‌ಗೆ ಆಗಮಿಸಿದ್ದರು. ಸ್ನಾನದ ನಂತರ ಸರಸ್ವತಿ ಕೂಪ್, ಅಕ್ಷಯ ವತ್ತ ಮತ್ತು ಬಡೇ ಹನುಮಾನ್ ಮಂದಿರದಲ್ಲಿ ಪೂಜೆ ಸಲ್ಲಿಸಿದ್ದಾರೆ.