Manipur Violence: ಮಣಿಪುರದಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಎರಡು ಗ್ರಾಮಗಳು ಭಸ್ಮ
ಮಣಿಪುರದ ಕಾಮ್‌ಜಾಂಗ್ ಜಿಲ್ಲೆಯ ಗಂಪಾಲ್ ಮತ್ತು ಅದರ ಗ್ರಾಮಾಂತರ ಪ್ರದೇಶವಾದ ಹಯಾಂಗ್‌ನಲ್ಲಿ ಬುಧವಾರ ಬೆಳಗ್ಗೆ ಕೆಲವು ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಎರಡು ಗ್ರಾಮಗಳು ಭಸ್ಮವಾಗಿವೆ(Manipur Violence). ಬುಧವಾರ ಬೆಳಿಗ್ಗೆ ಸುಮಾರು 9 ಗಂಟೆ ಸುಮಾರಿಗೆ ಅಪರಿಚಿತರು ಗಂಪಾಲ್ ಮತ್ತು ಹಯಾಂಗ್ ಗ್ರಾಮಗಳಿಗೆ ಬೆಂಕಿ ಹಚ್ಚಿದ್ದಾರೆ.


ಕಾಮ್‌ಜಾಂಗ್: ಮಣಿಪುರದ (Manipur Violence) ಕಾಮ್‌ಜಾಂಗ್ ಜಿಲ್ಲೆಯ ಗಂಪಾಲ್ (Gampal) ಮತ್ತು ಅದರ ಗ್ರಾಮಾಂತರ ಪ್ರದೇಶವಾದ ಹಯಾಂಗ್‌ನಲ್ಲಿ (Hayang) ಬುಧವಾರ ಬೆಳಗ್ಗೆ ಕೆಲವು ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಎರಡು ಗ್ರಾಮಗಳು ಭಸ್ಮವಾಗಿವೆ. ಬುಧವಾರ ಬೆಳಿಗ್ಗೆ ಸುಮಾರು 9 ಗಂಟೆ ಸುಮಾರಿಗೆ ಅಪರಿಚಿತರು ಗಂಪಾಲ್ ಮತ್ತು ಹಯಾಂಗ್ ಗ್ರಾಮಗಳಿಗೆ ಬೆಂಕಿ ಹಚ್ಚಿದ್ದಾರೆ. ಉಂಟಾಗಬಹುದಾದ ಮತ್ತಷ್ಟು ಅನಾಹುತಗಳನ್ನು ತಡೆಯಲು ಜಿಲ್ಲಾಡಳಿತವು ಗಂಪಾಲ್ ಮತ್ತು ಹಯಾಂಗ್‌ನ ಸಂಪೂರ್ಣ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಯಿಂದ ಕರ್ಫ್ಯೂ ಜಾರಿಗೊಳಿಸಿದೆ.
ಕಾಮ್‌ಜಾಂಗ್ ಎಸ್‌ಪಿ ಪ್ರಕಾರ, ಈ ಕೃತ್ಯದಲ್ಲಿ ಗಂಪಾಲ್ ಮತ್ತು ಹಯಾಂಗ್‌ನ ಎಲ್ಲಾ ಗ್ರಾಮದ ಮನೆಗಳು ಸುಟ್ಟು ಕರಕಲಾಗಿವೆ. ಇದು ಕಾನೂನು ಮತ್ತು ಸುವ್ಯವಸ್ಥೆಗೆ ಗಂಭೀರ ಧಕ್ಕೆ ತಂದಿದ್ದು, ಪ್ರದೇಶದಲ್ಲಿ ಶಾಂತಿ ಮತ್ತು ಸಾರ್ವಜನಿಕ ಸೌಹಾರ್ದತೆಗೆ ಭಂಗ ತರುವ ಅಪಾಯವನ್ನುಂಟುಮಾಡಿದೆ.
ಈ ಸುದ್ದಿಯನ್ನು ಓದಿ: Pahalgam Terror Attack: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ; ಪಾಕಿಸ್ತಾನ ಹೈಕಮಿಷನ್ ಹೊರಗೆ ಭಾರಿ ಪ್ರತಿಭಟನೆ
ಬೆಂಕಿಯ ಜ್ವಾಲೆಗಳು ಮನೆಗಳು ಮತ್ತು ಧಾನ್ಯದ ಗೋದಾಮುಗಳನ್ನು ಆವರಿಸಿದ್ದರಿಂದ ನಿವಾಸಿಗಳು ಅನಿರೀಕ್ಷಿತವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ವರ್ಷಗಟ್ಟಲೆ ಶ್ರಮದಿಂದ ಕಟ್ಟಿಕೊಂಡ ಜೀವನೋಪಾಯವು ಒಂದೇ ಕ್ಷಣದಲ್ಲಿ ನಾಶವಾಗಿದೆ. ಹಯಾಂಗ್ ಗ್ರಾಮವು ಅಧಿಕೃತವಾಗಿ ರಾಜಸ್ವ ಗ್ರಾಮವಾಗಿ ಗುರುತಿಸಲ್ಪಟ್ಟಿಲ್ಲವಾದರೂ, ಅಲ್ಲಿ ವಾಸಿಸುತ್ತಿದ್ದ ಹಲವು ಕುಟುಂಬಗಳು ಈಗ ಸಂಪೂರ್ಣವಾಗಿ ಸ್ಥಳಾಂತರಗೊಂಡು ವಿಪರೀತ ಸಂಕಷ್ಟಕ್ಕೆ ಒಳಗಾಗಿವೆ. ಈ ಘಟನೆಯ ಹಿನ್ನೆಲೆಯ ಸತ್ಯಾಸತ್ಯತೆ ಮತ್ತು ಉದ್ದೇಶವನ್ನು ಕಂಡುಹಿಡಿಯಲು ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಮಣಿಪುರ ಪೊಲೀಸರು ವಿವಿಧ ಉಗ್ರ ಸಂಘಟನೆಗಳಿಂದ ಆರು ಉಗ್ರರನ್ನು ಬಂಧಿಸಿ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಂಗ್ರಹವನ್ನು ವಶಪಡಿಸಿಕೊಂಡಿದ್ದರು. ಇದರ ಜೊತೆಗೆ 3.15 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯಗಳನ್ನೂ ಸಹ (Terrorist Arrest) ವಶಪಡಿಸಿಕೊಳ್ಳಲಾಗಿತ್ತು. ನಿಷೇಧಿತ ಸಂಘಟನೆಯಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ಇಬ್ಬರು ಕಾರ್ಯಕರ್ತರನ್ನುಇಂಫಾಲ್ ಪಶ್ಚಿಮ ಜಿಲ್ಲೆಯಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.
ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೈಪಾಕ್ (PREPAK)ಸಂಘಟನೆಯ ಇಬ್ಬರು ಉಗ್ರಗಾಮಿಗಳು ಮತ್ತು ಕಾಂಗ್ಲೈ ಯಾವೋಲ್ ಕನ್ನಾ ಲುಪ್ (KYKL) ನ ಸಕ್ರಿಯ ಸದಸ್ಯನನ್ನು ಇಂಫಾಲ್ ಪೂರ್ವ ಜಿಲ್ಲೆಯಿಂದ ಬಂಧಿಸಲಾಗಿದೆ. ಪೊಲೀಸರು ಟೆಂಗ್ನೌಪಾಲ್ ಜಿಲ್ಲೆಯಿಂದ ಕೊಯಿರೆಂಗ್ ನೇತೃತ್ವದ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (UNLF-K) ನ ಒಬ್ಬ ಉಗ್ರನೊಬ್ಬನ್ನು ಬಂಧಿಸಿದ್ದರು. ಬಂಧಿತ ಉಗ್ರಗಾಮಿಗಳು ಉದ್ಯಮಿಗಳು ಹಾಗೂ ವ್ಯಾಪಾರಿಗಳಿಂದ ಹಣ ವಸೂಲು ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ.