Man Ki Baat: 2025 ರ ಕೊನೆಯ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮಾತು; ಭಾರತದ ಹೆಮ್ಮೆಯ ಕ್ಷಣಗಳನ್ನು ನೆನಪಿಸಿದ ಮೋದಿ
Narendra Modi: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ 129 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ 2025 ರಲ್ಲಿ ಭಾರತದ ಹೆಮ್ಮೆಯ ಕ್ಷಣಗಳ ಕುರಿತು ಮಾತನಾಡಿದ್ದಾರೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತದ ಶೌರ್ಯವನ್ನು ಇಡೀ ಜಗತ್ತೇ ನೋಡಿದೆ ಎಂದು ಅವರು ಹೇಳಿದ್ದಾರೆ.
ನರೇಂದ್ರ ಮೋದಿ -
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ತಮ್ಮ 129 ನೇ ಮನ್ ಕಿ ಬಾತ್ (Man ki baat) ಕಾರ್ಯಕ್ರಮದಲ್ಲಿ 2025 ರಲ್ಲಿ ಭಾರತದ ಹೆಮ್ಮೆಯ ಕ್ಷಣಗಳ ಕುರಿತು ಮಾತನಾಡಿದ್ದಾರೆ. ಆಪರೇಷನ್ ಸಿಂಧೂರ್ (Operation Sindoor) ಸಮಯದಲ್ಲಿ ಭಾರತದ ಶೌರ್ಯವನ್ನು ಇಡೀ ಜಗತ್ತೇ ನೋಡಿದೆ ಎಂದು ಅವರು ಹೇಳಿದ್ದಾರೆ. ದೇಶದ ಭದ್ರತೆಗೆ ಬದ್ಧತೆಯ ಪ್ರದರ್ಶನವಾಗಿತ್ತು. ಪಾಕಿಸ್ತಾನದ ದುಸ್ಸಾಹಸದ ವಿರುದ್ಧದ ಕಾರ್ಯಾಚರಣೆಯು ಭಾರತ ಭದ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ನೀಡಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಈ ವರ್ಷ, 'ಆಪರೇಷನ್ ಸಿಂದೂರ್' ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಸಂಕೇತವಾಯಿತು. ಇಂದಿನ ಭಾರತವು ತನ್ನ ಭದ್ರತೆಯ ಬಗ್ಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಜಗತ್ತು ಸ್ಪಷ್ಟವಾಗಿ ಕಂಡಿತು. 'ಆಪರೇಷನ್ ಸಿಂದೂರ್' ಸಮಯದಲ್ಲಿ, ವಿಶ್ವದ ಮೂಲೆ ಮೂಲೆಯಿಂದ ಭಾರತ ಮಾತೆಯ ಮೇಲಿನ ಪ್ರೀತಿ ಮತ್ತು ಭಕ್ತಿಯ ಚಿತ್ರಗಳು ಹೊರಹೊಮ್ಮಿದವು... 'ವಂದೇ ಮಾತರಂ' 150 ವರ್ಷಗಳನ್ನು ಪೂರೈಸಿದಾಗಲೂ ಇದೇ ಮನೋಭಾವ ಕಂಡುಬಂದಿತು" ಎಂದು ಪ್ರಧಾನಿ ಮೋದಿ ಹೇಳಿದರು.
ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವಕಪ್‌ನಲ್ಲಿ ಜಯಗಳಿಸಿದ ಭಾರತದ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದರು, ಈ ಸಾಧನೆಗಳನ್ನು 2025 ರ ಪ್ರಮುಖ ಸಾಧನೆಗಳು ಎಂದು ಕರೆದರು. 2025 ಕ್ರೀಡೆಗಳ ದೃಷ್ಟಿಯಿಂದಲೂ ಸ್ಮರಣೀಯ ವರ್ಷವಾಗಿತ್ತು. ನಮ್ಮ ಪುರುಷರ ಕ್ರಿಕೆಟ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿತು. ಮಹಿಳಾ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತು. ಭಾರತದ ಹೆಣ್ಣುಮಕ್ಕಳು ಮಹಿಳಾ ಅಂಧರ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಹಲವಾರು ಪದಕಗಳನ್ನು ಗೆಲ್ಲುವ ಮೂಲಕ, ಪ್ಯಾರಾ-ಅಥ್ಲೀಟ್‌ಗಳು ಯಾವುದೇ ಅಡೆತಡೆಗಳು ದೃಢಸಂಕಲ್ಪವನ್ನು ತಡೆಯಲು ಸಾಧ್ಯವಿಲ್ಲ ಎಂದು ಸಾಬೀತುಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ಅನೌನ್ಸ್ ! ಮೋದಿ ಪಾತ್ರದಲ್ಲಿ ಮಲಯಾಳಂ ನಟ ಉಣ್ಣಿ ಮುಕುಂದನ್
ಮಾಸಿಕ ರೇಡಿಯೋ ಕಾರ್ಯಕ್ರಮದ ವರ್ಷದ ಕೊನೆಯ ಸಂಚಿಕೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಗಳನ್ನು ಎತ್ತಿ ತೋರಿಸಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಶುಭಾಂಶು ಶುಕ್ಲಾ ಅವರ ಸಾಧನೆಯನ್ನು ಅವರು ಶ್ಲಾಘಿಸಿದರು. ಮಹಾಕುಂಭ ಮೇಳ ಆಯೋಜನೆ ಮತ್ತು ರಾಮ ಮಂದಿರದಲ್ಲಿ ಧ್ವಜಾರೋಹಣ ಸೇರಿದಂತೆ ಭಾರತಕ್ಕೆ 2025 ರ ಸಾಂಸ್ಕೃತಿಕ ಮಹತ್ವವನ್ನು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.