New Rules: ಇಂದಿನಿಂದ ಎಲ್ಲಾ ರೂಲ್ಸ್ ಚೇಂಜ್, ಚೇಂಜ್; ಇಲ್ಲಿದೆ ನೋಡಿ ಡಿಟೇಲ್ಸ್
ಸೆಪ್ಟೆಂಬರ್ 1ರಿಂದ ಹಲವಾರು ಮಹತ್ವದ ಹಣಕಾಸು, ತೆರಿಗೆ ಬದಲಾವಣೆಗಳು ಜಾರಿಯಾಗಲಿವೆ. ನ್ಯಾಶನಲ್ ಪೆನ್ಷನ್ ಸಿಸ್ಟಮ್ ಅಡಿಯಲ್ಲಿ ಕೇಂದ್ರ ಸರಕಾರಿ ಉದ್ಯೋಗಿಗಳು ಯುನಿಫೈಡ್ ಪೆನ್ಷನ್ ಸ್ಕೀಮ್ (UPS) ಅನ್ನು ಆಯ್ಕೆ ಮಾಡಿಕೊಳ್ಳಲು ಸೆಪ್ಟೆಂಬರ್ 30 ರ ತನಕ ಕಾಲಾವಕಾಶ ಇದೆ.

-

ಬೆಂಗಳೂರು: ಸೆಪ್ಟೆಂಬರ್ 1ರಿಂದ ಹಲವಾರು ಮಹತ್ವದ ಹಣಕಾಸು, (New Rules) ತೆರಿಗೆ ಬದಲಾವಣೆಗಳು ಜಾರಿಯಾಗಲಿವೆ. ಐಟಿಆರ್ ಫೈಲಿಂಗ್ ಗಡುವು, ಯುಪಿಎಸ್ ಡೆಡ್‌ಲೈನ್, ಆಧಾರ್ ಅಪ್ ಡೇಟ್, ಪ್ರಮುಖ ಬ್ಯಾಂಕ್‌ಗಳ ಫಿಕ್ಸೆಡ್ ಡೆಪಾಸಿಟ್ ರೇಟ್‌ಗಳಲ್ಲಿ ಬದಲಾವಣೆ ಸೇರಿದಂತೆ ನೀವು ತಿಳಿದುಕೊಳ್ಳಬೇಕಾದ ಹಣಕಾಸು ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ
ಐಟಿಆರ್ ಸಲ್ಲಿಕೆಗೆ ಸೆಪ್ಟೆಂಬರ್ 15 ಗಡುವು:
ಆದಾಯ ತೆರಿಗೆ ಇಲಾಖೆಯು 2025-26ರ ಐಟಿಆರ್ ಫೈಲಿಂಗ್‌ಗೆ ಗಡುವನ್ನು ಜುಲೈ 30ರಿಂದ ಸೆಪ್ಟೆಂಬರ್ 15ಕ್ಕೆ ಮುಂದೂಡಿತ್ತು. ಹೀಗಾಗಿ ಸೆಪ್ಟೆಂಬರ್ 15ರೊಳಗೆ ಐಟಿ ರಿಟರ್ನ್ ಸಲ್ಲಿಸಬೇಕು.
ನ್ಯಾಶನಲ್ ಪೆನ್ಷನ್ ಸಿಸ್ಟಮ್ ಅಡಿಯಲ್ಲಿ ಕೇಂದ್ರ ಸರಕಾರಿ ಉದ್ಯೋಗಿಗಳು ಯುನಿಫೈಡ್ ಪೆನ್ಷನ್ ಸ್ಕೀಮ್ (UPS) ಅನ್ನು ಆಯ್ಕೆ ಮಾಡಿಕೊಳ್ಳಲು ಸೆಪ್ಟೆಂಬರ್ 30 ರ ತನಕ ಕಾಲಾವಕಾಶ ಇದೆ. ಈ ಹಿಂದೆ ಜೂನ್ 30ರ ಡೆಡ್ ಲೈನ್ ಇತ್ತು. ಬಳಿಕ 90 ದಿನಗಳ ಕಾಲ ಮುಂದೂಡಲಾಗಿತ್ತು. ಯುಪಿಎಸ್ ಕೂಡ ಒಂದು ಪಿಂಚಣಿ ಯೋಜನೆ ಆಗಿದ್ದು, ನ್ಯಾಶನಲ್ ಪೆನ್ಷನ್ ಸ್ಕೀಮ್ ಅಡಿಯಲ್ಲಿಯೇ ಬರುತ್ತದೆ. ಯುನಿಫೈಡ್ ಪೆನ್ಷನ್ ಸ್ಕೀಮ್ ಅಡಿಯಲ್ಲಿ ಕೇಂದ್ರ ಸರಕಾರಿ ಉದ್ಯೋಗಿಗಳಿಗೆ ಖಾತರಿಯ ಪಿಂಚಣಿ ಸಿಗಲಿದೆ. ನಿವೃತ್ತಿಯ ಕೊನೆಯ 12 ತಿಂಗಳಿನ ಸರಾಸರಿ ಬೇಸಿಕ್ ಸ್ಯಾಲರಿಯ ಅಧಾರದಲ್ಲಿ ಖಾತರಿಯ ಪಿಂಚಣಿ ಅದಾಯ ದೊರೆಯಲಿದೆ. ಈ ಆಯ್ಕೆಗೆ ಸೇರಿಕೊಳ್ಳಲು ಸೆಪ್ಟೆಂಬರ್ 30 ಕೊನೆಯ ದಿನ. ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದವರಿಗೆ ಮಾಸಿಕ ಕನಿಷ್ಠ 10,000 ಪಿಂಚಣಿ ಸಿಗಲಿದೆ.
ರಿಜಿಸ್ಟರ್ ಪೋಸ್ಟ್ ರದ್ದು:
ಅಂಚೆ ಇಲಾಖೆಯು ರಿಜಿಸ್ಟರ್ ಪೋಸ್ಟ್ ಸೇವೆಯನ್ನು ಸೆಪ್ಟೆಂಬರ್ ಒಂದರಿಂದ ರದ್ದುಪಡಿಸಿದ್ದು, ಅದನ್ನು ಸ್ಪೀಡ್ ಪೋಸ್ಟ್ ಸೇವೆಯಲ್ಲಿ ವಿಲೀನಗೊಳಿಸಿದೆ. ಆದ್ದರಿಂದ ನೀವು ರಿಜಿಸ್ಟರ್ ಪೋಸ್ಟ್ ಕಳಿಸಬೇಕಿದ್ದರೆ ಸ್ಪೀಡ್ ಪೋಸ್ಟ್ ಮೂಲಕ ಕಳಿಸಬೇಕಾಗುತ್ತದೆ. ಅಂಚೆ ಇಲಾಖೆ ಆಧುನೀಕರಣವಾಗುವ ನಿಟ್ಟಿನಲ್ಲಿ ಬದಲಾವಣೆಯನ್ನು ತರುತ್ತಿದೆ. ಕಡಿಮೆ ಬಳಕೆಯಾಗುತ್ತಿರುವ ರಿಜಿಸ್ಟರ್ ಪೋಸ್ಟ್ ಅನ್ನು ಸ್ಪೀಡ್ ಪೋಸ್ಟ್ ಜತೆಗೆ ವಿಲೀನಗೊಳಿಸುತ್ತಿದೆ. ಆನ್‌ಲೈನ್ ಟ್ರ್ಯಾಕಿಂಗ್ ಮತ್ತು ಬಳಕೆದರರಿಗೆ ಕೊಟ್ಟಿರುವುದಕ್ಕೆ ಪ್ರೂಫ್ ಅನ್ನೂ ನೀಡುತ್ತದೆ. ಡಿಜಿಟಲ್ ಕಮ್ಯುನಿಕೇಶನ್ ಮತ್ತು ಪ್ರೈವೇಟ್ ಕೊರಿಯರ್ ಪರಿಣಾಮ ರಿಜಿಸ್ಟರ್ ಪೋಸ್ಟ್ ಸೇವೆಗೆ ಬೇಡಿಕೆ ಇಳಿದಿತ್ತು. ಹೀಗಿದ್ದರೂ, ರಿಜಿಸ್ಟರ್ ಪೋಸ್ಟ್ ರದ್ದುಪಡಿಸಿರುವುದರಿಂದ ಕೆಲ ಬಳಕೆದಾರರಿಗೆ ವೆಚ್ಚ ಹೆಚ್ಚಬಹುದು. ಏಕೆಂದರೆ ಸ್ಪೀಡ್ ಪೋಸ್ಟ್ ನ ಆರಂಭಿಕ ಶುಲ್ಕವು ಸಾಮಾನ್ಯ ರಿಜಿಸ್ಟರ್ ಪೋಸ್ಟ್‌ಗೆ ಹೋಲಿಸಿದರೆ ಅಧಿಕವಾಗಿದೆ.
ಎಸ್‌ಬಿಐ ಕ್ರೆಡಿಟ್ ಕಾರ್ಡ್ ಇರುವವರಿಗೆ ಸೆಪ್ಟೆಂಬರ್ 1ರಿಂದ ಕೆಲವು ವಿಚಾರಗಳಲ್ಲಿ ರಿವಾರ್ಡ್ ಪಾಯಿಂಟ್ ಗಳು ಸಿಗವುದಿಲ್ಲ. ಡಿಜಿಟಲ್ ಗೇಮಿಂಗ್, ಸರಕಾರಿ ವೆಬ್ ಸೈಟ್ ಮೂಲಕ ನಡೆಸುವ ಹಣಕಾಸು ವರ್ಗಾವಣೆಗಳಿಗೆ ರಿವಾರ್ಡ್ ಅಂಕಗಳು ಸಿಗುವುದಿಲ್ಲ.
ಇಂಡಿಯನ್ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್‌ನ ವಿಶೇಷ ಎಫ್‌ಡಿ ಪ್ಲಾನ್‌ಗಳಲ್ಲಿ ಹೂಡಿಕೆಗೆ ಕೊನೆಯ ದಿನ ಸೆಪ್ಟೆಂಬರ್‌ನಲ್ಲಿದೆ. ಇಂಡಿಯನ್ ಬ್ಯಾಂಕ್‌ನ 444 ದಿನಗಳು ಮತ್ತು 555 ಮತ್ತು 700 ದಿನಗಳ ಪ್ಲಾನ್‌ಗಳಿಗೆ ಡೆಡ್ ಲೈನ್ ಸೆಪ್ಟೆಂಬರ್ 30ಕ್ಕೆ ನಿಗದಿಯಾಗಿದೆ.
ಆಧಾರ್ ಕಾರ್ಡ್ ದಾಖಲಾತಿಗಳ ಉಚಿತ ಅಪ್‌ಡೇಟ್ ಸಲುವಾಗಿ ಯುಐಡಿಎಐ ನಿಗದಿಪಡಿಸಿರುವ ಗಡುವು ಸೆಪ್ಟೆಂಬರ್ 14ಕ್ಕೆ ಮುಕ್ತಾಯವಾಗುತ್ತಿದೆ.
ಈ ಸುದ್ದಿಯನ್ನೂ ಓದಿStock Market: ಟಾಟಾ ಸ್ಟಾಕ್ ವಿಭಜನೆ, 1ಕ್ಕೆ ಸಿಗಲಿದೆ 10 ಸ್ಟಾಕ್ಸ್; ಸೆನ್ಸೆಕ್ಸ್ 418 ಅಂಕ ಜಿಗಿತ
ಬೆಳ್ಳಿಯ ಆಭರಣಗಳಿಗೆ ಹಾಲ್ ಮಾರ್ಕ್ ಅನ್ನು ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಸೆಪ್ಟೆಂಬರ್ ಒಂದರಿಂದ ಜಾರಿಗೊಳಿಸುತ್ತಿದೆ.