ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkanna: ಚಿಕ್ಕಣ್ಣ ಮದುವೆ ಫಿಕ್ಸ್; ಲವ್ವಾ? ಅರೇಂಜ್ಡ್ ಮ್ಯಾರೇಜಾ? ನಟ ಹೇಳಿದ್ದೇನು?

Chikkanna marriage: ಚಿಕ್ಕಣ್ಣ ಮದುವೆ ನಿಶ್ಚಿತವಾದ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಫ್ಯಾನ್ಸ್ ಕೂಡ ಖುಷಿ ಪಟ್ಟಿದ್ದಾರೆ.‌ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿ ಪಾವನಾ ಎಂಬ ಹುಡುಗಿ ಜೊತೆ ಮದುವೆ ಫಿಕ್ಸ್ ಆಗಿದ್ದು ಶೀಘ್ರದಲ್ಲೆ ಮದುವೆಯಾಗಲಿದ್ದಾರೆ. ಚಿಕ್ಕಣ್ಣ ಹಾಗೂ ಅವರ ಹುಡುಗಿಯ ಫೋಟೋ ವೈರಲ್ ಆಗುತ್ತಿದ್ದಂತೆ ಚಿಕ್ಕಣ್ಣ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮದುವೆ ಬಗ್ಗೆ ನಟ ಚಿಕ್ಕಣ್ಣ ಹೇಳಿದ್ದೇನು?

-

Profile Pushpa Kumari Sep 1, 2025 6:37 PM

ಬೆಂಗಳೂರು: ಸ್ಯಾಂಡಲ್‌ವುಡ್ ನಲ್ಲಿ ಹಾಸ್ಯ ನಟನೆ ಮೂಲಕವೇ ಮೋಡಿ ಮಾಡಿದ ನಟ ಚಿಕ್ಕಣ್ಣ (Chikkanna) ಮದುವೆ ಫಿಕ್ಸ್ ಆಗಿದೆ. ಚಿಕ್ಕಣ್ಣ ಮದುವೆ ನಿಶ್ಚಿತವಾದ ಸುದ್ದಿ ಇದೀಗ ಸೋಷಿಯಲ್ ಮೀಡಿಯಾ ದಲ್ಲಿ ಭಾರೀ ವೈರಲ್ ಆಗಿದ್ದು ಫ್ಯಾನ್ಸ್​ ಕೂಡ ಖುಷಿ ಪಟ್ಟಿದ್ದಾರೆ.‌ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿ ಪಾವನಾ ಎಂಬ ಹುಡುಗಿ ಜೊತೆ ಮದುವೆ ಫಿಕ್ಸ್ ಆಗಿದ್ದು ಶೀಘ್ರದಲ್ಲೆ ಮದುವೆಯಾಗಲಿದ್ದಾರೆ. ಚಿಕ್ಕಣ್ಣ ಹಾಗೂ ಅವರ ಹುಡುಗಿಯ ಫೋಟೋ ವೈರಲ್ ಆಗುತ್ತಿದ್ದಂತೆ ಚಿಕ್ಕಣ್ಣ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಚಿಕ್ಕಣ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿ ಕೊಂಡಿತ್ತು. ಇದೀಗ ಹುಡುಗಿ ನಿಶ್ಚಯ ವಾಗಿದ್ದು ನಿಶ್ಚಿತಾರ್ಥ ಹಾಗೂ ಮದುವೆ ದಿನಾಂಕದ ಬಗ್ಗೆ ಅಧಿಕೃತ ಘೋಷಣೆಯಾಗಿಲ್ಲ. ಆದರೆ ಶೀಘ್ರದಲ್ಲೇ ಈ ಜೋಡಿ ಮದುವೆ ಯಾಗಲಿದ್ದಾರೆ. ಇದೀಗ ತಮ್ಮ ಮದುವೆ ಹಾಗೂ ಕೈ ಹಿಡಿಯುವ ಹುಡುಗಿ ಪಾವನಾ ಬಗ್ಗೆ ಹಾಸ್ಯ ನಟ ಚಿಕ್ಕಣ್ಣ ಅವರೇ ಮಾತನಾಡಿದ್ದಾರೆ. ಈ ಬಗ್ಗೆ ಚಿಕ್ಕಣ್ಣ ಮಾತನಾಡಿ ತಿಂಗಳ ಹಿಂದೆಯೇ ನಮ್ಮ ಮದುವೆ ಫಿಕ್ಸ್ ಆಗಿದೆ. ಹೂ ಮುಡಿಸುವ ಶಾಸ್ತ್ರ ನಡೀತು. ನಿನ್ನೆ ಬರ್ತ್‌ಡೇ ಪಾರ್ಟಿಗೆ ಹೋಗಿದ್ದ ಸಂದರ್ಭ ಅಲ್ಲಿ ಯಾರೋ ಫೋಟೊ ತೆಗೆದು ವೈರಲ್ ಮಾಡಿದ್ದಾರೆ ಎಂದು ಚಿಕ್ಕಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಪಾವನಾ ಅವ್ರು ಉದ್ಯಮಿ. ಬಯೋ ಡಿ ಕಾಂಪೋಸಬಲ್‌ ಮೆಟೀರಿಯಲ್ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡು ತ್ತಿದ್ದಾರೆ. ಮನೆಯವರೇ ನೋಡಿ ನಿಶ್ಚಯಿಸಿರುವ ಆರೆಂಜ್ ಮ್ಯಾರೆಜ್ ಎಂದು ಚಿಕ್ಕಣ್ಣ ಹೇಳಿದ್ದಾರೆ.

ಇದನ್ನು ಓದಿ:Mirai Movie: ಮಿರಾಯ್ ಚಿತ್ರದ ಟ್ರೈಲರ್ ರಿಲೀಸ್- ಯೋಧನಾಗಿ ಎಂಟ್ರಿ ನೀಡಿದ ತೇಜ ಸಜ್ಜಾ

ಮದುವೆ ಸಿದ್ಧತೆ ನಡೀತಿದ್ದು ಸಾಧ್ಯವಾದರೆ ಇದೇ ವರ್ಷ ಮದುವೆ ನಡೆಯಬಹುದು. ಅಥವಾ ಮುಂದಿನ ವರ್ಷ ಆಗಬಹುದು. ಈಗ್ಲೇ ಎಲ್ಲವನ್ನು ಹೇಳುವುದು ಕಷ್ಟ. ಎರಡೂ ಕುಟುಂಬದ ಸದಸ್ಯರು ಒಪ್ಪಿ ನಿಗದಿ ಮಾಡಬೇಕು ಎಂದು ತಿಳಿಸಿದ್ದಾರೆ. ಸದ್ಯ ಚಿಕ್ಕಣ್ಣ 'ಲಕ್ಷ್ಮಿ ಪುತ್ರ' ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ರಾಜಾಹುಲಿ', 'ಬುಲ್ ಬುಲ್', 'ಅಧ್ಯಕ್ಷ', 'ರನ್ನ', 'ನಟ ಸಾರ್ವ ಭೌಮ' ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದ ಚಿಕ್ಕಣ್ಣ ಸಾಕಷ್ಟು ಫೇಮ್ ಗಿಟ್ಟಿಸಿಕೊಂಡಿದ್ದಾರೆ.