ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Justin Bieber: ಭಾರತೀಯ ಯುವತಿಯ ವಿವಾಹಕ್ಕೆ ಜಸ್ಟಿನ್ ಬೀಬರ್‌ ಎಂಟ್ರಿ- ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್

ವಿದೇಶಿ ನಾಡಲ್ಲಿ ನಡೆದ ಭಾರತೀಯ ಯುವತಿಯ ಮದುವೆಯ ಸಮಾರಂಭಕ್ಕೆ ಪಾಪ್ ತಾರೆ ಜಸ್ಟಿನ್ ಬೀಬರ್ ಸಾಕ್ಷಿಯಾಗಿದ್ದು, ಲಾಸ್ ಏಂಜಲೀಸ್‌ನಲ್ಲಿ ನಡೆದ ವಿವಾಹಕ್ಕೆ ಏಕಾಏಕಿ ಸರ್ಪ್ರೈಸ್ ವಿಸಿಟ್ ಕೊಟ್ಟಿದ್ದು, ಖ್ಯಾತ ಸಂಗೀತ ಗಾಯಕ ತನ್ನ ಮದುವೆಗೆ ಆಗಮಿಸಿದ್ದನ್ನು ಕಂಡು ಫುಲ್ ಖುಷಿಯಾಗಿದ್ದಾರೆ. ಅಲ್ಲದೇ ಆ ವಧುವಿಗೆ ಇದೊಂದು ಅವಿಸ್ಮರಣೀಯ ಕ್ಷಣವಾಗಿದ್ದು, ನವ ವಧುವಿಗೆ ಖುಷಿಯ ಜೊತೆ ಆಶ್ಚರ್ಯವೂ ಆಗಿದೆ. ಈ ಘಟನೆಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ

ಇಂಡಿಯನ್‌ ವಧುವಿಗೆ ಸರ್ಪ್ರೈಸ್ ಕೊಟ್ಟ ಪಾಪ್ ತಾರೆ ಜಸ್ಟಿನ್ ಬೀಬರ್!

ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡ ಜಸ್ಟಿನ್ ಬೀಬರ್‌ -

Profile Sushmitha Jain Sep 1, 2025 6:30 PM

ಲಾಸ್ ಏಂಜಲೀಸ್: ಪಾಪ್ ತಾರೆ (Pop Star ) ಜಸ್ಟಿನ್ ಬೀಬರ್ (Justin Bieber) ಲಾಸ್ ಏಂಜಲೀಸ್‌ನಲ್ಲಿ (Los Angeles) ನಡೆದ ಭಾರತೀಯ ಯುವತಿಯ ವಿವಾಹ ಸಮಾರಂಭಕ್ಕೆ ತಿಳಿಸದೆ ಆಗಮಿಸಿ, ವಧುವಿಗೆ ಅವಿಸ್ಮರಣೀಯ ಆಶ್ಚರ್ಯವನ್ನು ನೀಡಿದ್ದಾರೆ. ಈ ಘಟನೆಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದ್ದು, ಆಗಮಿಸಿದ್ದ ಅತಿಥಿಗಳನ್ನು ಅಚ್ಚರಿಗೊಳಿಸಿದೆ.

ಜಸ್ಟಿನ್ ಬೀಬರ್‌ನ ಫ್ಯಾನ್ಸ್ ಕ್ಲಬ್‌ನಿಂದ ಹಂಚಿಕೊಳ್ಳಲಾದ ವೀಡಿಯೊ ಕ್ಲಿಪ್‌ನಲ್ಲಿ, ಜಸ್ಟಿನ್ ಬೀಬರ್‌ ಆಗಮಿಸಿದ ಕ್ಷಣವನ್ನು ಚಿತ್ರೀಕರಿಸಲಾಗಿದ್ದು, "ಲಾಸ್ ಏಂಜಲೀಸ್‌ನಲ್ಲಿ ಜಸ್ಟಿನ್ ಬೀಬರ್ ಒಬ್ಬ ವಧುವಿನ ವಿವಾಹಕ್ಕೆ ಆಶ್ಚರ್ಯಕರ ಭೇಟಿ ನೀಡಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ. ಬೀಬರ್ ಅತಿಥಿಗಳೊಂದಿಗೆ ಸರಾಗವಾಗಿ ಬೆರೆತು, ನಗುಮೊಗದಿಂದ ಫೋಟೋಗಳಿಗೆ ಪೋಸ್ ನೀಡಿ, ಆ ಮದುವೆ ಸಮಾರಂಭದ ಮೆರಗನ್ನು ಹೆಚ್ಚಿಸಿದ್ದಾರೆ.

ವಧು ಚಿನ್ನದ ಆಭರಣಗಳೊಂದಿಗೆ ಸಾಂಪ್ರದಾಯಿಕ ಹಸಿರು ಸೀರೆಯಲ್ಲಿ ಆಕರ್ಷಕವಾಗಿ ಕಂಗೊಳಿಸಿದರೆ, ಬೀಬರ್ ಬಿಳಿ ಟೀ-ಶರ್ಟ್, ನೀಲಿ ಶಾರ್ಟ್ಸ್ ಮತ್ತು ಆಕರ್ಷಕ ಜಾಕೆಟ್‌ನಲ್ಲಿ ಸರಳವಾಗಿ ಕಾಣಿಸಿಕೊಂಡಿದ್ದಾರೆ. ಹಾಲಿವುಡ್‌ನ ಸ್ಟೈಲ್ ನಲ್ಲಿ ಭಾರತೀಯ ಸಂಪ್ರದಾಯ ಪ್ರತಿನಿಧಿಸಿದ್ದು, ಮತ್ತಷ್ಟು ಆಕರ್ಷಣೆಯನ್ನು ತಂದುಕೊಟ್ಟಿದೆ.

ಬೀಬರ್‌ ಈ ರೀತಿ ಶುಭ ಕಾರ್ಯಕ್ರಮಕ್ಕೆ ಭೇಟಿ ನೀಡುತ್ತಿರುವುದು ಮೊದಲ ಬಾರಿ ಏನು ಅಲ್ಲ. ಕಳೆದ ವರ್ಷ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಅವರ ಸಂಗೀತ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಆಗಮಿಸಿದ್ದ ಅವರು, 10 ಮಿಲಿಯನ್ ಡಾಲರ್‌ಗೆ ಪ್ರದರ್ಶನ ನೀಡಿದ್ದರು. ಇನ್ನು ಬೀಬರ್‌ ನ ಏಳನೇ ಆಲ್ಬಂ 'ಸ್ವಾಗ್' ಬಿಡುಗಡೆಯಾದ ಸಂದರ್ಭದಲ್ಲಿ ಈ ವಿಶೇಷ ಕ್ಷಣವನ್ನು ಸೆರೆ ಹಿಡಿಯಲಾಗಿದ್ದು, ಜುಲೈ 11 ರಂದು ಸದ್ದಿಲ್ಲದೇ ಬಿಡುಗಡೆಯಾದ ಈ ಆಲ್ಬಂ, ಗುನ್ನಾ, ಡ್ರೂಸ್ಕಿ ಮತ್ತು ಲಿಲ್ ಬಿ ಜೊತೆಗಿನ ಪಾರ್ಟನರ್ ಶಿಪ್ ಅನ್ನು ಹೊಂದಿದೆ. ಬೀಬರ್‌ರ ಸಂಗೀತ ಜೀವನದ ಹೊಸ ಅಧ್ಯಾಯದ ಮುನ್ಸೂಚ್ಚನೆಯನ್ನು ಇದು ನೀಡಿದೆ.