ನವದೆಹಲಿ: ಯಾವುದೇ ಸಂಘರ್ಷವನ್ನು (Iran- Israel war) ಮಿಲಿಟರಿಯಿಂದ ಮಾತ್ರ ಪರಿಹರಿಸುವುದು ಸಾಧ್ಯವಿಲ್ಲ. ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಅಮೆರಿಕ, ಇಸ್ರೇಲ್ ಮತ್ತು ಇರಾನ್, ರಷ್ಯಾ ಮತ್ತು ಉಕ್ರೇನ್ (Russia and Ukraine war) ನಡುವಿನ ಸಮಸ್ಯೆಗೆ ಮಿಲಿಟರಿ ಸಂಘರ್ಷ (Military conflict) ಪರಿಹಾರವಲ್ಲ. ಇದಕ್ಕಾಗಿ ಕಾನೂನಿನ ನಿಯಮ, ಸಂವಾದ ಮತ್ತು ರಾಜತಾಂತ್ರಿಕತೆಯ ತ್ರಿಪಕ್ಷಗಳು ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಈ ಕುರಿತು ಗುರುವಾರ ಮಾತನಾಡಿದ ಅವರು, ಭಾರತ ಮತ್ತು ಫಿನ್ ಲ್ಯಾಂಡ್ ( Finland ) ಕಾನೂನು ನಿಯಮ, ಸಂವಾದ ಮತ್ತು ರಾಜತಾಂತ್ರಿಕತೆಯನ್ನು ನಂಬುತ್ತವೆ ಎಂದರು.
ದೆಹಲಿಯಲ್ಲಿ ಫಿನ್ ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ಯಾವುದೇ ಸಮಸ್ಯೆಯನ್ನು ಮಿಲಿಟರಿ ಸಂಘರ್ಷದ ಮೂಲಕ ಪರಿಹರಿಸಲಾಗುವುದಿಲ್ಲ ಎಂದು ನಾವು ಒಪ್ಪುತ್ತೇವೆ. ಅದು ಉಕ್ರೇನ್ ಅಥವಾ ಪಶ್ಚಿಮ ಏಷ್ಯಾವೇ ಆಗಿರಲಿ. ಸಂಘರ್ಷಗಳು ತಕ್ಷಣ ಕೊನೆಯಾಗಬೇಕು. ಅದಕ್ಕಾಗಿ ಶಾಂತಿ ಪ್ರಯತ್ನವನ್ನು ನಾವು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ಭಾರತೀಯ ಅತಿಥಿಯಾಗಿದ್ದ ಐಆರ್‌ಐಎಸ್ ದೇನಾ ಮೇಲಿನ ದಾಳಿಗೆ ಅಮೆರಿಕ ಪಶ್ಚಾತಾಪ ಪಡಲಿದೆ: ಇರಾನ್ ಗುಡುಗು
ಜಾಗತಿಕ ಸವಾಲುಗಳ ಬಗ್ಗೆ ಮಾತನಾಡಿದ ಅವರು, ಬೆಳೆಯುತ್ತಿರುವ ಜಾಗತಿಕ ಸವಾಲುಗಳನ್ನು ಎದುರಿಸಲು ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಯನ್ನು ತರುವುದು ಅಗತ್ಯ. ಇದು ತುರ್ತಾಗಿ ನಡೆಯಬೇಕಿದೆ. ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಅದರ ಬೇರು ಸಹಿತ ನಿರ್ಮೂಲನೆ ಮಾಡುವುದು ನಮ್ಮ ಬದ್ಧತೆಯಾಗಿದೆ ಎಂದು ತಿಳಿಸಿದರು.
ಖಮೇನಿ ನಿಧನಕ್ಕೆ ಸಂತಾಪ ಸೂಚಿಸಿದ ಭಾರತ; ಇರಾನ್ ಬಗ್ಗೆ ಕೇಂದ್ರದ ನಿಲುವು ಬದಲಾಗಿದ್ದೇಕೆ?
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬಳಿಕ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಸಂಘರ್ಷದ ವಾತಾವರಣದ ನಡುವೆ ಪ್ರಧಾನಿ ಮೋದಿ ಅವರು ಯುರೋಪಿಯನ್ ಒಕ್ಕೂಟದೊಂದಿಗೆ ಜನವರಿಯಲ್ಲಿ ಸಹಿ ಹಾಕಿರುವ ಐತಿಹಾಸಿಕ ವ್ಯಾಪಾರ ಒಪ್ಪಂದದ ಬಗ್ಗೆ ಉಲ್ಲೇಖಿಸಿ, ಸಂಘರ್ಷದಿಂದ ಜಾಗತಿಕವಾಗಿ ಉಂಟಾಗಿರುವ ಅಸ್ಥಿರತೆಯ ಸಂದರ್ಭದಲ್ಲಿ ವಿಶ್ವದ ಎರಡು ಪ್ರಮುಖ ರಾಜತಾಂತ್ರಿಕ ಶಕ್ತಿಗಳಾದ ಭಾರತ ಮತ್ತು ಯುರೋಪ್ ತಮ್ಮ ಸಂಬಂಧದ ಸುವರ್ಣ ಯುಗವನ್ನು ಪ್ರವೇಶಿಸುತ್ತಿವೆ. ಇದು ಜಾಗತಿಕ ಸ್ಥಿರತೆ, ಅಭಿವೃದ್ಧಿ ಮತ್ತು ಹಂಚಿಕೆಗೆ ಹೊಸ ಶಕ್ತಿ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.