ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ಮಿಜೋರಾಂ- ದೆಹಲಿಗೆ ನೇರ ರೈಲು ಸಂಪರ್ಕ; ಸೈರಾಂಗ್ ರೈಲು ಮಾರ್ಗವನ್ನು ಉದ್ಘಾಟಿಸಿದ ಮೋದಿ

2023 ರಲ್ಲಿ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ. ಇಂದು ಬೆಳಿಗ್ಗೆ 10:00 ಗಂಟೆಗೆ ಐಜ್ವಾಲ್ ತಲುಪಿದರು. ಅವರು ಲಮ್ಮುವಲ್ ಮೈದಾನದಲ್ಲಿ ವಿವಿಧ ಯೋಜನೆಗಳಿಗೆ ಅಡಿಪಾಯ ಹಾಕಿದರು.

ಸೈರಾಂಗ್ ರೈಲು ಮಾರ್ಗವನ್ನು ಉದ್ಘಾಟಿಸಿದ ಮೋದಿ

-

Vishakha Bhat Vishakha Bhat Sep 13, 2025 11:27 AM

ಐಜ್ವಾಲ್‌: 2023 ರಲ್ಲಿ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಮೊದಲ ಬಾರಿಗೆ ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ. ಇಂದು ಬೆಳಿಗ್ಗೆ 10:00 ಗಂಟೆಗೆ ಐಜ್ವಾಲ್ ತಲುಪಿದರು. ಅವರು ಲಮ್ಮುವಲ್ ಮೈದಾನದಲ್ಲಿ ವಿವಿಧ ಯೋಜನೆಗಳಿಗೆ ಅಡಿಪಾಯ ಹಾಕಿದರು. ನಂತರ ಅವರು ಮಧ್ಯಾಹ್ನ 12:30 ಕ್ಕೆ ಮಣಿಪುರದ ಚುರಚಂದಪುರಕ್ಕೆ ಭೇಟಿ ನೀಡಲಿದ್ದಾರೆ, ಅಲ್ಲಿಯೂ ಪೀಸ್ ಮೈದಾನದಲ್ಲಿ ಇದೇ ರೀತಿಯ ಸಮಾರಂಭ ನಡೆಯಲಿದೆ. ನಂತರ ಪ್ರಧಾನಿಯವರು (Mizoram) ಮಣಿಪುರದ ಇಂಫಾಲ್‌ಗೆ ಭೇಟಿ ನೀಡಲಿದ್ದು, ಕಾಂಗ್ಲಾ ಮೈದಾನದಲ್ಲಿ ಹೆಚ್ಚುವರಿ ಯೋಜನೆಗಳ ಉದ್ಘಾಟನೆ ಮಾಡಲಿದ್ದಾರೆ, ಕಾರ್ಯಕ್ರಮವು ಮಧ್ಯಾಹ್ನ 2:30 ಕ್ಕೆ ಪ್ರಾರಂಭವಾಗಲಿದೆ.

ಬಳಿಕ ಮೋದಿ ಅಸ್ಸಾಂಗೆ ತೆರಳಲಿದ್ದಾರೆ. ಅಲ್ಲಿ ಪ್ರಸಿದ್ಧ ಕಲಾವಿದ ಮತ್ತು ಭಾರತ ರತ್ನ ಪುರಸ್ಕೃತ ಡಾ. ಭೂಪೇನ್ ಹಜಾರಿಕಾ ಅವರ 100 ನೇ ಜನ್ಮ ದಿನಾಚರಣೆಯ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಐಜ್ವಾಲ್‌ನಲ್ಲಿ ಯುವ ಸಬಲೀಕರಣದ ಬಗ್ಗೆ ಮಾತನಾಡಿದ ಮೋದಿ, ಪ್ರಧಾನಿ ನರೇಂದ್ರ ಮೋದಿ ಯುವ ಸಬಲೀಕರಣದ ಬಗ್ಗೆ ಮಾತನಾಡುತ್ತಾ, ಸರ್ಕಾರ ಈಗಾಗಲೇ ಮಿಜೋರಾಂನಲ್ಲಿ 11 ಎ-ಕ್ಲಬ್ ವಸತಿ ಶಾಲೆಗಳನ್ನು ಪ್ರಾರಂಭಿಸಿದೆ ಎಂದು ಹೇಳಿದರು.

"ಇನ್ನೂ ಆರು ಶಾಲೆಗಳನ್ನು ಪ್ರಾರಂಭಿಸುವ ಕೆಲಸ ನಡೆಯುತ್ತಿದೆ. ನಮ್ಮ ಈಶಾನ್ಯವು ಸ್ಟಾರ್ಟ್‌ಅಪ್‌ಗಳಿಗೆ ಪ್ರಮುಖ ಕೇಂದ್ರವಾಗುತ್ತಿದೆ. ಈ ಪ್ರದೇಶದಲ್ಲಿ ಸುಮಾರು 4,500 ಸ್ಟಾರ್ಟ್‌ಅಪ್‌ಗಳು ಮತ್ತು 25 ಇನ್‌ಕ್ಯುಬೇಟರ್‌ಗಳು ಕಾರ್ಯನಿರ್ವಹಿಸುತ್ತಿರುವುದು ನನಗೆ ಸಂತೋಷ ತಂದಿದೆ. ಮಿಜೋರಾಂನ ಯುವಕರು ಈ ಆಂದೋಲನಕ್ಕೆ ಸಕ್ರಿಯವಾಗಿ ಸೇರುತ್ತಿದ್ದಾರೆ ಮತ್ತು ತಮಗಾಗಿ ಮತ್ತು ಇತರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ. ಭಾರತವು ಜಾಗತಿಕ ಕ್ರೀಡೆಗಳಿಗೆ ತ್ವರಿತವಾಗಿ ಪ್ರಮುಖ ಕೇಂದ್ರವಾಗುತ್ತಿದೆ" ಎಂದು ಅವರು ಹೇಳಿದರು.



ಇದು ದೇಶದಲ್ಲಿ ಕ್ರೀಡಾ ಆರ್ಥಿಕತೆಯನ್ನೂ ಸೃಷ್ಟಿಸುತ್ತಿದೆ. ಮಿಜೋರಾಂ ಫುಟ್ಬಾಲ್ ಮತ್ತು ಇತರ ಎಲ್ಲಾ ಕ್ರೀಡೆಗಳಲ್ಲಿ ಅನೇಕ ಚಾಂಪಿಯನ್‌ಗಳನ್ನು ಉತ್ಪಾದಿಸುವ ಅದ್ಭುತ ಸಂಪ್ರದಾಯವನ್ನು ಹೊಂದಿದೆ. ನಮ್ಮ ಕ್ರೀಡಾ ನೀತಿಗಳು ಮಿಜೋರಾಂಗೂ ಪ್ರಯೋಜನವನ್ನು ನೀಡುತ್ತಿವೆ. ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ, ನಾವು ಆಧುನಿಕ ಕ್ರೀಡಾ ಮೂಲಸೌಕರ್ಯಗಳ ಸೃಷ್ಟಿಗೆ ಬೆಂಬಲ ನೀಡುತ್ತಿದ್ದೇವೆ. ಇತ್ತೀಚೆಗೆ, ನಮ್ಮ ಸರ್ಕಾರವು ಖೇಲೋ ಇಂಡಿಯಾ ಖೇಲ್ ನೀತಿ ಎಂಬ ರಾಷ್ಟ್ರೀಯ ಕ್ರೀಡಾ ನೀತಿಯನ್ನು ಸಹ ಹೊರತಂದಿದೆ . ಇದು ಮಿಜೋರಾಂನ ಯುವಕರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯುತ್ತದೆ" ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: Narendra Modi: ನೇಪಾಳದ ಪ್ರಗತಿಗೆ ಭಾರತ ಬದ್ಧ; ಪ್ರಧಾನಿ ಸುಶೀಲಾ ಕರ್ಕಿಗೆ ಅಭಿನಂದನೆ ತಿಳಿಸಿದ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೈರಾಬಿ-ಸೈರಾಂಗ್ ಹೊಸ ರೈಲು ಮಾರ್ಗವನ್ನು ಉದ್ಘಾಟಿಸಿದ್ದಾರೆ. ಇದು ಮಿಜೋರಾಂನಲ್ಲಿ ಸಂಪರ್ಕ ಮತ್ತು ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಐಜ್ವಾಲ್‌ನಲ್ಲಿ ರೈಲು ಸೇವೆಗಳನ್ನು ಉದ್ಘಾಟಿಸಿದ ನಂತರ, ಪ್ರಧಾನಿ ಮೋದಿ, "ಇಂದು, ಮಿಜೋರಾಂ ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇಂದು ರಾಷ್ಟ್ರಕ್ಕೆ, ವಿಶೇಷವಾಗಿ ಮಿಜೋರಾಂ ಜನರಿಗೆ ಐತಿಹಾಸಿಕ ದಿನವಾಗಿದೆ. ಐಜ್ವಾಲ್ ಈಗ ಭಾರತೀಯ ರೈಲ್ವೆ ನಕ್ಷೆಯಲ್ಲಿ ಸ್ಥಾನ ಪಡೆದಿದೆ ಎಂದು ಹೇಳಿದರು.