ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Bhagwat: ಮುಸ್ಲಿಂ, ಕ್ರಿಶ್ಚಿಯನ್ನರ ಪೂರ್ವಜರು ಹಿಂದೂಗಳ ವಂಶಸ್ಥರೇ; RSS ಮುಖ್ಯಸ್ಥ ಮೋಹನ್‌ ಭಾಗವತ್‌

ಮುಸ್ಲಿಮರು, ಕ್ರಿಶ್ಚಿಯನ್ನರು ಒಂದೇ ಪೂರ್ವಜರ ವಂಶಸ್ಥರು. ಭಾರತದಲ್ಲಿ ಅಹಿಂದೂಗಳು ಯಾರೂ ಇಲ್ಲ. ಎಲ್ಲ ಹಿಂದೂಗಳೇ ಆಗಿದ್ದಾರೆ. ದೇಶದ ಮೂಲ ಸಂಸ್ಕೃತಿಯೇ ಹಿಂದೂಗಳು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. '100 ವರ್ಷಗಳ ಸಂಘದ ಪಯಣ: ಹೊಸ ದಿಗಂತಗಳು' ಕುರಿತು ಉಪನ್ಯಾಸ ನೀಡುತ್ತಾ ಭಾಗವತ್ ಈ ಹೇಳಿಕೆ ನೀಡಿದ್ದಾರೆ.

ಮುಸ್ಲಿಂ, ಕ್ರಿಶ್ಚಿಯನ್ನರ ಪೂರ್ವಜರು ಹಿಂದೂಗಳ ವಂಶಸ್ಥರು ಎಂದು ಮೋಹನ್‌ ಭಾಗವತ್‌ ಹೇಳಿದ್ದಾರೆ.

ನವದೆಹಲಿ: ಭಾರತದಲ್ಲಿ ಅಹಿಂದೂಗಳು ಯಾರು ಇಲ್ಲ. ಎಲ್ಲರೂ ಹಿಂದೂಗಳೇ (hindu). ಯಾಕೆಂದರೆ ಎಲ್ಲರೂ ಒಂದೇ ಪೂರ್ವಜರ ವಂಶಸ್ಥರು. ದೇಶದ ಮೂಲ ಸಂಸ್ಕೃತಿಯೇ ಹಿಂದೂಗಳು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (Rashtriya Swayamsevak Sangh) ಮುಖ್ಯಸ್ಥ (RSS Chief) ಮೋಹನ್ ಭಾಗವತ್ (Mohan Bhagwat) ಹೇಳಿದರು. "ರಾಷ್ಟ್ರೀಯ ಸ್ವಯಂಸೇವಕ ಸಂಘದ 100 ವರ್ಷಗಳ ಪಯಣ: ಹೊಸ ದಿಗಂತಗಳು" ಕುರಿತು ಶನಿವಾರ ಉಪನ್ಯಾಸ ನೀಡಿದ ಅವರು, ಹಿಂದೂಗಳೇ ಭಾರತಕ್ಕೆ ಜವಾಬ್ದಾರರು. ಆರ್‌ಎಸ್‌ಎಸ್ ಅಧಿಕಾರಕ್ಕಾಗಿ ಅಲ್ಲ, ರಾಷ್ಟ್ರದ ವೈಭವಕ್ಕಾಗಿ ಹಿಂದೂ ಸಮಾಜವನ್ನು ಸಂಘಟಿಸುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘವು ಒಂದು ಸಂಘಟಿತ ಶಕ್ತಿ. ಅದು ಅಧಿಕಾರವನ್ನು ಬಯಸುವುದಿಲ್ಲ. ಸಮಾಜದಲ್ಲಿ ಪ್ರಾಮುಖ್ಯತೆಯನ್ನು ಬಯಸುವುದಿಲ್ಲ. ಭಾರತ ಮಾತೆಯ ಸೇವೆಗಾಗಿ ಸಮಾಜವನ್ನು ಸಂಘಟಿಸಲು ಬಯಸುತ್ತದೆ. ನಮ್ಮ ದೇಶದಲ್ಲಿ ಜನರು ಅದನ್ನು ನಂಬುವುದು ತುಂಬಾ ಕಷ್ಟಕರವಾಗಿತ್ತು. ಆದರೆ ಈಗ ನಂಬುತ್ತಾರೆ ಎಂದು ಭಾಗವತ್ ಹೇಳಿದರು.

ಇದನ್ನೂ ಓದಿ: HD Kumaraswamy: ಕಬ್ಬು ಬೆಳೆಗಾರರ ಕಿವಿಗೆ ಹೂವಿಟ್ಟು ದೊಡ್ಡ ದೋಖಾ ಮಾಡಿದೆ ರಾಜ್ಯ ಸರ್ಕಾರ: ಎಚ್‌ಡಿಕೆ

ಆರ್‌ಎಸ್‌ಎಸ್ ಹಿಂದೂ ಸಮಾಜದ ಮೇಲೆಯೇ ಏಕೆ ಕೇಂದ್ರಿಕೃತವಾಗಿದೆ ಎಂದರೆ ಹಿಂದೂಗಳೇ ಭಾರತಕ್ಕೆ ಜವಾಬ್ದಾರರಾಗಿದ್ದಾರೆ. ಬ್ರಿಟಿಷರು ನಮಗೆ ರಾಷ್ಟ್ರತ್ವವನ್ನು ನೀಡಿಲ್ಲ. ಭಾರತ ಒಂದು ಪ್ರಾಚೀನ ರಾಷ್ಟ್ರ. ರಾಷ್ಟ್ರವು ತನ್ನದೇ ಆದ ಮೂಲ ಸಂಸ್ಕೃತಿಯನ್ನು ಹೊಂದಿದೆಪ್ರತಿಯೊಂದು ರಾಷ್ಟ್ರಕ್ಕೂ ಒಂದು ಮೂಲ ಸಂಸ್ಕೃತಿ ಎಂಬುದು ಇದೆ. ಅಂತೆಯೇ ಭಾರತದ ಮೂಲ ಸಂಸ್ಕೃತಿ ಹಿಂದೂ ಎಂದರು.

ಭಾರತದಲ್ಲಿರುವ ಎಲ್ಲರೂ ತಿಳಿದೋ ತಿಳಿಯದೆಯೋ ಎಲ್ಲರೂ ಭಾರತೀಯ ಸಂಸ್ಕೃತಿಯನ್ನು ಅನುಸರಿಸುತ್ತಾರೆ. ಇಲ್ಲಿರುವವರಲ್ಲಿ ಯಾರೂ ಅಹಿಂದೂಗಳು ಅಲ್ಲ. ಪ್ರತಿಯೊಬ್ಬನು ಹಿಂದೂ ಎಂದು ಅರಿತುಕೊಳ್ಳಬೇಕು ಎಂದರು.

ಹಿಂದೂ ಸಮಾಜವು ತನ್ನ ಪ್ರಧಾನ ಶಕ್ತಿ ಮತ್ತು ವೈಭವಕ್ಕಾಗಿ ಜಗತ್ತನ್ನು ಒಂದುಗೂಡಿಸಲು ಪ್ರಯತ್ನಿಸುತ್ತಿರುವುದರಿಂದ ಸಂಪೂರ್ಣ ಹಿಂದೂ ಸಮಾಜವು ಸಂಘಟಿತವಾಗಬೇಕಿದೆ. ಸನಾತನ ಧರ್ಮದ ಪ್ರಗತಿಯು ಭಾರತದ ಪ್ರಗತಿಯಾಗಿದೆ ಎಂದು ಭಾಗವತ್ ಹೇಳಿದರು.

ಆರ್‌ಎಸ್‌ಎಸ್‌ನ ಹಾದಿ ಸುಲಭವಲ್ಲ. ಸಂಘಟನೆಯು ಸುಮಾರು 60- 70 ವರ್ಷಗಳಿಂದ ತೀವ್ರ ವಿರೋಧವನ್ನು ಎದುರಿಸಿದೆ. ಸಂಘದ ಸ್ವಯಂಸೇವಕರು ಸಂಘಕ್ಕೆ ತಮ್ಮ ಎಲ್ಲವನ್ನೂ ನೀಡುತ್ತಾರೆ ಮತ್ತು ಪ್ರತಿಯಾಗಿ ಏನನ್ನೂ ಬಯಸುವುದಿಲ್ಲ. ಆದ್ದರಿಂದ ನಾವು ಎಲ್ಲ ವಿರೋಧಗಳನ್ನೂ ಎದುರಿಸುವುದನ್ನು ಕರಗತ ಮಾಡಿಕೊಂಡಿದ್ದೇವೆ ಎಂದರು.

ಒಂದು ಸಮಾಜದ ಸಂಘಟನೆಯು ಯಾರ ವಿರುದ್ಧವೂ ಅಲ್ಲ. ಅದು ಅಗತ್ಯವಾಗಿದ್ದರಿಂದ ಯೋಚಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ ಎಂದ ಅವರು, ಆರ್‌ಎಸ್‌ಎಸ್ ಪ್ರತಿಗಾಮಿ ಸಂಸ್ಥೆಯಲ್ಲ. ಸಂಘವು ನೀಡಲು ಬಂದಿದೆಯೇ ಹೊರತು ನಾಶ ಮಾಡಲು ಅಲ್ಲ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಯಾವುದ ವಿರೋಧವಲ್ಲ. ಇದು ಸಮಾಜದ ಸಂಘಟನೆಯಾಗಿದೆ, ಈಗ ನಾವು ದೇಶದಲ್ಲಿ ಬಲವಾದ ಅಸ್ತಿತ್ವವನ್ನು ಹೊಂದಿದ್ದೇವೆ. ಆದರೆ ಇದರಿಂದ ತೃಪ್ತರಾಗಿಲ್ಲ. ಯಾಕೆಂದರೆ ಸಂಪೂರ್ಣ ಸಮಾಜವನ್ನು ಸಂಘಟಿತಗೊಳಿಸಬೇಕಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Physical Assault: ಬಾಲಕನನ್ನು ಅಪಹರಿಸಿ ಲೈಂಗಿಕ ಕಿರುಕುಳ; ಆರೋಪಿ ಮಹಿಳೆಗೆ 54 ವರ್ಷಗಳ ಜೈಲು ಶಿಕ್ಷೆ!

ಶತಮಾನೋತ್ಸವದ ಈ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ಮೊದಲ ಕಾಳಜಿ ಎಂದರೆ ಎಲ್ಲಾ ಜಾತಿ ಮತ್ತು ವರ್ಗಗಳನ್ನು ಮೀರಿ ಪ್ರತಿಯೊಂದು ಹಳ್ಳಿ ಮತ್ತು ಸಮಾಜದ ಪ್ರತಿಯೊಂದು ಸ್ತರಕ್ಕೂ ತನ್ನ ಕೆಲಸವನ್ನು ಕೊಂಡೊಯ್ಯುವುದಾಗಿದೆ. ಹಿಂದೂ ಸಮಾಜವನ್ನು ನಾವು ಏಕರೂಪದಲ್ಲಿ ಕಾಣುತ್ತೇವೆ. ಆದರೆ ಜಗತ್ತು ತುಂಬಾ ವೈವಿಧ್ಯತೆಯನ್ನು ನೋಡುತ್ತದೆ. ನಾವು ಪ್ರತಿಯೊಂದು ವೈವಿಧ್ಯತೆಯನ್ನು ತಲುಪಬೇಕು ಎಂದರು.

ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ವಿದ್ಯಾ ಇರ್ವತ್ತೂರು

View all posts by this author