ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆಸ್ತಿ ವಿವಾದ; 15 ತಿಂಗಳು ತಾಯಿ-ಮಗನನ್ನ ಕೂಡಿ ಹಾಕಿದ 'ಕೈ' ನಾಯಕ

ಆಸ್ತಿಗಾಗಿ ಸಂಬಂಧಿಗಳು ದಾಯಾದಿಗಳು ಆಗುವುದನ್ನು ಕೇಳಿದ್ದೇವೆ. ಅಣ್ಣ-ತಮ್ಮಂದಿರು ಒಡೆದುಕೊಳ್ಳುವುದನ್ನು ಕಂಡಿದ್ದೇವೆ. ಈ ಹಣ ಸಂಪತ್ತಿಗಾಗಿ ಕೊಲೆ, ರಕ್ತಪಾತ ಆಗಿರುವುದು ಇದೆ. ಇದೀಗ ಅಂತದೇ ಒಂದು ಅಮಾನವೀಯ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ಆಸ್ತಿ ವಿವಾದಕ್ಕಾಗಿ ಅಮ್ಮ ಮಗನನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಲಾಗಿದೆ.

ಆಸ್ತಿಗಾಗಿ ಅಮ್ಮ-ಮಗನನ್ನು ಕತ್ತಲೆಯಲ್ಲಿ ಬಂಧಿಸಿದ ಪಾಪಿಗಳು

ಸಂತ್ರಸ್ತರು -

Profile Sushmitha Jain Oct 14, 2025 10:09 PM

ರಾಂಚಿ: ಆಸ್ತಿ ವಿವಾದದ (Property Dispute) ಹಿನ್ನೆಲೆಯಲ್ಲಿ ತಾಯಿ-ಮಗನನ್ನು ಸುಮಾರು 15 ತಿಂಗಳು ಕೂಡಿ ಹಾಕಿರುವ ಆಘಾತಕಾರಿ ಘಟನೆ ಜಾರ್ಖಂಡ್‌(Jharkhand)ನ ಬೋಕಾರೋ(Bokaro) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸೆಕ್ಟರ್-6 ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂಗೀತಾ (Sangita) ನೇತೃತ್ವದ ತಂಡ ಸ್ಥಳಕ್ಕಾಗಮಿಸಿ, ಮನೆಯ ಬೀಗ ಒಡೆದು ತಾಯಿ-ಮಗನನ್ನು ರಕ್ಷಿಸಿದೆ.

"ಆರೋಪಿ ಸುಳ್ಳು ಹೇಳಿ ತಾಯಿ-ಮಗನನ್ನು ಮನೆಗೆ ಕರೆಸಿ, ಆಸ್ತಿಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದ್ದಾನೆ. ಅದಕ್ಕೆ ನಿರಾಕರಿಸಿದಾಗ ಇಬ್ಬರನ್ನೂ ಅಲ್ಲಿಯೇ ಕೂಡಿ ಹಾಕಿದ್ದಾನೆ. ಹಲವಾರು ದಿನಗಳವರೆಗೆ ಸರಿಯಾಗಿ ನೀರು-ಆಹಾರ ಸಿಗದೇ ಸಂತ್ರಸ್ತರು ಶೋಚನೀಯ ಸ್ಥಿತಿಯಲ್ಲಿದ್ದರು" ಎಂದು ಇನ್ಸ್‌ಪೆಕ್ಟರ್ ಸಂಗೀತಾ ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ಅವನು ನನ್ನ ಪಕ್ಕದಲ್ಲಿ ಮಲಗಲು ಯತ್ನಿಸುತ್ತಿದ್ದ- ರೈಲಿನಲ್ಲಾದ ಭಯಾನಕ ಅನುಭವ ಬಿಟ್ಟಿಟ್ಟ ಯುವತಿ

ಇನ್ನು ಘಟನೆಯ ಬಗ್ಗೆ ಪ್ರಕ್ತಿಯಿಸಿರುವ ಸಂತ್ರಸ್ತ ಸಂತೋಷ್ ಸಿಂಗ್ "ಔಷಧಿ, ಇತರ ಅಗತ್ಯ ವಸ್ತುಗಳ ಬೇಕಿದ್ದಾಗ ದಾರಿಹೋಕರಿಂದ ಸಹಾಯ ಪಡೆಯುತ್ತಿದ್ದೆವು. ಅಶೋಕ್ ಸಿಂಗ್ (Ashok Singh) ಎಂಬಾತ ನಮ್ಮನ್ನು ಕೂಡಿ ಹಾಕಿದ್ದ, ಆತ ತನ್ನನ್ನು ಕಾಂಗ್ರಸ್ ನಾಯಕ (Congress leader.) ಎಂದು ಹೇಳಿಕೊಂಡಿದ್ದ" ಎಂದು ತಾವು ಅನುಭವಿಸಿದ ದಾರುಣ ಘಟನೆಯನ್ನು ತಿಳಿಸಿದ್ದಾರೆ.

ʼʼನಮ್ಮ ಕುಟುಂಬಕ್ಕೆ ಸಂಬಂಧಿಸಿದ ಆಸ್ತಿಯ ಬಗ್ಗೆ ತಕರಾರು ಇದ್ದು, ಅದು ಕೋರ್ಟ್‌ನಲ್ಲಿದೆ. ಈ ಹಿನ್ನೆಲೆಯಲ್ಲಿ ವಕೀಲ ನಿತೀಶ್ ಟಂಡನ್ (Nitish Tandon) ಎಂಬುವರು ಅಶೋಕ್ ಸಿಂಗ್‌ ಅವರನ್ನು ನಮ್ಮ ತಾಯಿಯೊಂದಿಗೆ ಭೇಟಿಯಾಗಲು ವ್ಯವಸ್ಥೆ ಮಾಡಿದ್ದರು. ಅಲ್ಲಿ ಆಶೋಕ್ ಸಿಂಗ್ ಸ್ವಲ್ಪ ಹಣವನ್ನು ನೀಡಿ, ಆಸ್ತಿಯನ್ನು ಕಬಳಿಸಲು ಯತ್ನಿಸಿದ್ದರು. ಅಷ್ಟೇ ಅಲ್ಲದೇ ಆ ಆಸ್ತಿಗೆ ಸಂಬಂಧಿಸಿದಂತೆ ಪವರ್ ಆಫ್ ಅಟಾರ್ನಿ ಪಡೆದು, 2024ರ ಜುಲೈ 23ರಿಂದ ನಮ್ಮಿಬ್ಬರನ್ನು ಕೂಡಿ ಹಾಕಿದ್ದಾರೆ" ಎಂದು ಸಂತೋಷ್ ಹೇಳಿದ್ದಾರೆ.


https://x.com/Sarvesh638793/status/1978001508450136562?ref_src=twsrc%5Etfw%7Ctwcamp%5Etweetembed%7Ctwterm%5E1978001508450136562%7Ctwgr%5Ea5ff2e9f7956d7b23df10f4c8df44348016792c9%7Ctwcon%5Es1_c10&ref_url=https%3A%2F%2Fwww.freepressjournal.in%2Findia%2Fmother-son-duo-locked-up-for-15-months-by-congress-leader-over-property-dispute-in-jharkhands-bokaro

ಆರೋಪಿ ಅಶೋಕ್ ಸಿಂಗ್ ವಿರುದ್ಧ ಈಗಾಗಲೇ ಮಾನಸಿಕ ಕಿರುಕುಳ, ಅವಾಚ್ಯ ಶಬ್ದ ಬಳಕೆ ಹಾಗೂ ಅಶ್ಲೀಲ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಸೇರಿದಂತೆ ಹಲವಾರ ಪ್ರಕರಣಗಳು ದಾಖಲಾಗಿವೆ. ಸದ್ಯ ಆರೋಪಿಯನ್ನು ಚಿರಾಚಾಸ್ ಠಾಣೆ ಪೊಲೀಸರು ವಶಕ್ಕೆ ಪಡೆದು, ಕಾನೂನು ಕ್ರಮ ಕೈಗೊಂಡಿದ್ದಾರೆ.

ಈ ನಡುವೆ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಜವಾಹರ್ ಲಾಲ್ ಮಹಥಾ (Jawahar Lal Mahtha ) ಪ್ರತಿಕ್ರಿಯಿಸಿದ್ದು, "ಆಶೋಕ್ ಸಿಂಗ್ ಯಾವುದೇ ಕಾಂಗ್ರೆಸ್ ನಾಯಕ ಅಥವಾ ಕಾರ್ಯಕರ್ತನಲ್ಲ. ಅವನಿಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.