ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮುಲಾಯಂ ಸಿಂಗ್ ಯಾದವ್ ಕಿರಿಯ ಪುತ್ರ ಪ್ರತೀಕ್ ಯಾದವ್ ನಿಧನ; ಯಾರಿವರು? ಏನಿವರ ಹಿನ್ನೆಲೆ?

ಸಮಾಜವಾದಿ ಪಕ್ಷದ ಸಂಸ್ಥಾಪಕ, ದಿವಂಗತರಾದ ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ಪ್ರತೀಕ್ ಯಾದವ್ ಬುಧವಾರ ಲಕ್ನೋದಲ್ಲಿ ನಿಧನರಾಗಿದ್ದಾರೆ. ಅವರಿಗೆ 38 ವರ್ಷ ವಯಸ್ಸಾಗಿತ್ತು. ಆರೋಗ್ಯ ಹದಗೆಟ್ಟಿದ್ದರಿಂದ ಬೆಳಗ್ಗೆ ಲಕ್ನೋ ಸಿವಿಲ್ ಆಸ್ಪತ್ರೆಗೆ ಅವರನ್ನು ಕರೆತರಲಾಗಿದ್ದು, ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಸಂಗ್ರಹ ಚಿತ್ರ

ನವದೆಹಲಿ: ಸಮಾಜವಾದಿ ಪಕ್ಷದ ಸಂಸ್ಥಾಪಕ (Samajwadi Party founder), ದಿವಂಗತ ಮುಲಾಯಂ ಸಿಂಗ್ ಯಾದವ್ (Mulayam Singh Yadav) ಅವರ ಪುತ್ರ, ಬಿಜೆಪಿ ನಾಯಕಿ ಅಪರ್ಣಾ ಯಾದವ್ (BJP leader Aparna Yadav) ಅವರ ಪತಿ ಪ್ರತೀಕ್ ಯಾದವ್ ಅವರಿ ಬುಧವಾರ ಬೆಳಗ್ಗೆ ಲಕ್ನೋದಲ್ಲಿ (Lucknow civil hospital) ನಿಧನರಾಗಿದ್ದಾರೆ. ಅವರಿಗೆ 38 ವರ್ಷ ವಯಸ್ಸಾಗಿತ್ತು. ದೀರ್ಘಕಾಲದಿಂದ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಬುಧವಾರ ಬೆಳಗ್ಗೆ ಲಕ್ನೋ ಸಿವಿಲ್ ಆಸ್ಪತ್ರೆಗೆ ಕರೆತರಲಾಗಿದ್ದು, ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಮಲಸಹೋದರರಾಗಿರುವ ಪ್ರತೀಕ್ ಯಾದವ್ ಅವರನ್ನು ಬುಧವಾರ ಬೆಳಗ್ಗೆ 6.15ರ ಸುಮಾರಿಗೆ ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಅವರ ಪತ್ನಿ ಜೊತೆ ಇರಲಿಲ್ಲ.

ಮಿತವ್ಯಯ ಕ್ರಮ ಪರಿಚಯಿಸಲು ಮುಂದಾದ ಕೇಂದ್ರ ಸರ್ಕಾರ: ಸಚಿವರ ಪ್ರವಾಸ, ಔತಣಕೂಟಗಳಿಗೆ ಬ್ರೇಕ್

ಪ್ರತೀಕ್ ಯಾದವ್ ಅವರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಹೀಗಾಗಿ ಅವರ ಸಾವಿನ ನಿಖರವಾದ ಕಾರಣವನ್ನು ಪತ್ತೆ ಹಚ್ಚಲು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯರ ಸಮಿತಿಯು ಶೀಘ್ರದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಿದೆ.

ದೀರ್ಘಕಾಲದಿಂದ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದ ಪ್ರತೀಕ್ ಯಾದವ್ ಅವರು ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಚಿಕಿತ್ಸೆ ಪಡೆಯುತ್ತಿದ್ದರು.

ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಎರಡನೇ ಪತ್ನಿ ಸಾಧನಾ ಅವರ ಮಗನಾಗಿರುವ ಪ್ರತೀಕ್ ಯಾದವ್ ಅವರು ಯುಕೆಯ ಲೀಡ್ಸ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದು, ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದರು. ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದ ಅವರು 2012ರ ಸೆಪ್ಟೆಂಬರ್ ನಲ್ಲಿ ಅಂತಾರಾಷ್ಟ್ರೀಯ ಮೆಚ್ಚುಗೆ ಪಡೆದ ದೇಹದಾರ್ಢ್ಯ ವೆಬ್‌ಸೈಟ್‌ನ "ತಿಂಗಳ ಅಂತಾರಾಷ್ಟ್ರೀಯ ರೂಪಾಂತರ" ದಲ್ಲಿ ಕಾಣಿಸಿಕೊಂಡಿದ್ದರು. ೨೦೧೭ರಲ್ಲಿ ೫ ಕೋಟಿ ರೂಪಾಯಿಗಳ ಲ್ಯಾಂಬೋರ್ಘಿನಿ ಕಾರು ಖರೀದಿಸಿ ವಿವಾದವನ್ನು ಪ್ರತೀಕ್ ಯಾದವ್ ಎದುರಿಸಿದ್ದರು.

ಎಂಟು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸಿದ್ದ ಪ್ರತೀಕ್ ಯಾದವ್ ಮತ್ತು ಅಪರ್ಣಾ ಯಾದವ್ 2011 ರಲ್ಲಿ ವಿವಾಹವಾದರು. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಅಪರ್ಣಾ ಯಾದವ್ ಅವರಿಂದ ವಿಚ್ಛೇದನ ಪಡೆಯುವುದಾಗಿ ಪ್ರತೀಕ್ ಯಾದವ್ ಘೋಷಿಸಿದರು. ಆಕೆ ಕುಟುಂಬ ಸಂಬಂಧಗಳನ್ನು ಹಾಳು ಮಾಡಿದ್ದಾಳೆ. ಅವಳು ಸ್ವಾರ್ಥಿ. ಆಕೆಗೆ ಪ್ರಸಿದ್ಧಿ ಪಡೆಯಬೇಕಿತ್ತು. ಆಕೆ ನನ್ನ ಮಾನಸಿಕ ಆರೋಗ್ಯದ ಬಗ್ಗೆ ಯಾವುದೇ ಕಾಳಜಿಯನ್ನು ತೋರಿಸಿಲ್ಲ ಎಂದು ಪ್ರತೀಕ್ ಯಾದವ್ ಆರೋಪಿಸಿದ್ದರು.

ಪೂಂಚ್‌ನಲ್ಲಿ ಒಳನುಸುಳಲು ಯತ್ನಸಿದ ಭಯೋತ್ಪಾದಕರನ್ನು ತಡೆದ ಭಾರತೀಯ ಸೇನೆ; ಓರ್ವ ಬಲಿ

ಕುಟುಂಬದಲ್ಲಿ ಬಹುತೇಕ ಎಲ್ಲರೂ ರಾಜಕೀಯದಲ್ಲಿದ್ದರೂ ಪ್ರತೀಕ್ ಯಾದವ್ ಅವರು ರಾಜಕೀಯದಿಂದ ದೂರವೇ ಉಳಿದಿದ್ದರು. 2014ರ ಚುನಾವಣೆಯಲ್ಲಿ ಸ್ಪರ್ಧಿಸಭೆಯು ಎನ್ನುವ ಒತ್ತಾಯವಿದ್ದರೂ ಕೂಡ ಅವರು ಚುನಾವಣೆಯಲ್ಲಿ ಭಾಗವಹಿಸಲು ಆಸಕ್ತಿ ತೋರಲಿಲ್ಲ.

ವಿದ್ಯಾ ಇರ್ವತ್ತೂರು

View all posts by this author