Merchant navy officer murder: ಜೈಲಿನಲ್ಲಿ ಮಾದಕ ದ್ರವ್ಯಕ್ಕೆ ಬೇಡಿಕೆ ಇಟ್ಟ ಆರೋಪಿಗಳು!
ಮರ್ಚೆಂಟ್ ನೇವಿ ಅಧಿಕಾರಿಯೊಬ್ಬರ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಜೈಲಿನಲ್ಲಿರುವ ಆರೋಪಿಗಳು ಮಾದಕ ದ್ರವ್ಯ ವ್ಯಸನಿಗಳು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಆರೋಪಿಗಳು ಮಾದಕವಸ್ತುಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿ ಆಗಿದೆ.


ಲಖನೌ: ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಮಾಜಿ ಮರ್ಚೆಂಟ್ ನೇವಿ ಅಧಿಕಾರಿಯೊಬ್ಬರನ್ನು (Merchant navy officer murder) ಅವರ ಪತ್ನಿ ಹಾಗೂ ಆಕೆಯ ಪ್ರಿಯಕರ ಕೊಲೆ ಮಾಡಿದ್ದರು. ಮೃತ ಅಧಿಕಾರಿ ಸೌರಭ್‌ನನ್ನು ಕೊಂದು ಸಿಮೆಂಟ್ ಹಾಕಿ ಮುಚ್ಚಲಾಗಿತ್ತು. ನಂತರ ಆರೋಪಿಗಳನ್ನು ಬಂಧಿಸಿ ವಿಚರಣೆಗೆ ಒಳಪಡಿಸಲಾಗಿತ್ತು. ಪತ್ನಿ ಮುಸ್ಕಾನ್ ಹಾಗೂ ಆಕೆಯ ಸ್ನೇಹಿತ ಸಾಹಿಲ್ ಬಗ್ಗೆ ಬಗೆದಷ್ಟು ವಿಚಾರಗಳು ಇದೀಗ ಹೊರ ಬರುತ್ತಿವೆ. ಸದ್ಯ ಜೈಲಿನಲ್ಲಿರುವ ಆರೋಪಿಗಳು ಮಾದಕ ದ್ರವ್ಯ ವ್ಯಸನಿಗಳು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಆರೋಪಿಗಳು ಮಾದಕವಸ್ತುಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿ ಆಗಿದೆ.
ಆರೋಪಿಗಳನ್ನು ಮೀರತ್ ಜಿಲ್ಲಾ ಕಾರಾಗೃಹದ ಪ್ರತ್ಯೇಕ ಬ್ಯಾರಕ್ಗಳಲ್ಲಿ ಇರಿಸಲಾಗಿದೆ. ಆರೋಪಿಗಳು ಪೊಲೀಸರು ನೀಡಿದ್ದ ಆಹಾರ ಸೇವಿಸಲು ನಿರಾಕರಿಸಿದ್ದಾರೆ. ಜೈಲಿನ ಅಧಿಕಾರಿಯೊಬ್ಬರು ಮಾತನಾಡುತ್ತಾ, ಅವರ ವ್ಯಸನವು ವಿಪರೀತವಾಗಿದೆ ಎಂದು ಹೇಳಿದ್ದಾರೆ. ರು. ಮುಸ್ಕಾನ್ ಮತ್ತು ಸಾಹಿಲ್ ಚುಚ್ಚುಮದ್ದಿನ ಔಷಧಿಗಳನ್ನು ನಿಯಮಿತವಾಗಿ ಬಳಸುತ್ತಿದ್ದರು ಎಂದು ಅವರು ಹೇಳಿದ್ದಾರೆ. ಇಬ್ಬರೂ ಆರೋಪಿಗಳನ್ನು ಜೈಲಿನಲ್ಲಿರುವ ವ್ಯಸನ ಮುಕ್ತಿ ಕೇಂದ್ರದಲ್ಲಿ ನಿಗಾದಲ್ಲಿ ಇರಿಸಲಾಗಿದೆ. ಅವರ ಸ್ಥಿತಿ ಹದಗೆಟ್ಟರೆ, ಅವರನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಿಸಬಹುದು. ಅವರು ಸ್ಥಿರಗೊಳ್ಳಲು ಎಂಟರಿಂದ 10 ದಿನಗಳು ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Meerut Murder Case: "ಅಪ್ಪ ಡ್ರಮ್‌ನೊಳಗಿದ್ದಾರೆ," ಎಂದು ನೆರೆಹೊರೆಯವರಿಗೆ ಹೇಳಿದ್ದ ಮೃತ ಮರ್ಚೆಂಟ್ ನೇವಿ ಅಧಿಕಾರಿಯ 6 ವರ್ಷದ ಮಗಳು
ಮುಸ್ಕಾನ್ ಕುಟುಂಬವು ಈ ಹಿಂದೆ ಸಾಹಿಲ್ ಮೇಲೆ ಆರೋಪ ಮಾಡಿದ್ದು, ಆತನೇ ಮುಸ್ಕಾನ್‌ಗೆ ಮಾದಕ ದ್ರವ್ಯವನ್ನು ಒದಗಿಸುತ್ತಿದ್ದ ಎಂದು ಹೇಳಿತ್ತು. ಜೈಲಿಗೆ ಹೋದಾಗಿನಿಂದ ಮುಸ್ಕಾನ್ ತುಂಬಾ ನೊಂದಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಳು ರಾತ್ರಿ ಊಟ ಮಾಡಿಲ್ಲ. ಮತ್ತೊಂದೆಡೆ, ಸಾಹಿಲ್ ಹೆಚ್ಚಾಗಿ ಮೌನವಾಗಿದ್ದನು ಆದರೆ ಬಹಿರಂಗವಾಗಿ ಮಾದಕ ದ್ರವ್ಯಗಳನ್ನು ಬೇಡುತ್ತಿದ್ದನು ಎಂದು ತಿಳಿದು ಬಂದಿದೆ. 2024 ನವೆಂಬರ್‌ನಿಂದಲೂ ಮುಸ್ಕಾನ್ ತನ್ನ ಪತಿಯ ಕೊಲೆ ಬಗ್ಗೆ ಯೋಜನೆ ರೂಪಿಸಿದ್ದಳು. ಸೌರಭ್‌ಗೆ ಮಾದಕ ದ್ರವ್ಯ ನೀಡಿ, 10 ಬಾರಿ ಇರಿದು, ಅವನ ದೇಹವನ್ನು ಇಬ್ಬರು ಸೇರಿ ತುಡರಿಸಿದ್ದರು. ಬಾತ್ ರೂಂನಲ್ಲೇ ಇದ್ದ ಕಟರ್‌ನಿಂದ ತಲೆ ಕತ್ತರಿಸಿದ್ದರು. ಸೌರಭ್‌ನ ಕೊಲೆಯಾದ ನಂತರ ಆತನ ದೇಹವನ್ನು ಒಂದು ರಾತ್ರಿ ಪೂರ್ತಿ ಸ್ನಾನಗೃಹದಲ್ಲಿ ಇಟ್ಟಿದ್ದರು. ಕತ್ತರಿಸಿದ ತಲೆಯೊಂದಿಗೆ ಅವನ ದೇಹ ಸ್ನಾನಗೃಹದಲ್ಲಿ ಇಟ್ಟಿದ್ದರು ಎಂದು ತಿಳಿದು ಬಂದಿದೆ.