Nepal Floods: ಗಂಡಕ್ ನದಿಯಲ್ಲಿ ನೀರಿನ ಮಟ್ಟ ಇಳಿಕೆ; ನಿಟ್ಟುಸಿರುಬಿಟ್ಟ ಬಿಹಾರ, ಉತ್ತರ ಪ್ರದೇಶದ ಜನ
Gandak River Recedes: ನೇಪಾಳದ ಹಿಮಾಲಯ ಪ್ರದೇಶದಲ್ಲಿ ಭಾರಿ ಪ್ರವಾಹ ಉಂಟಾದ ನಂತರ ಬಿಹಾರ ಮತ್ತು ಪೂರ್ವ ಉತ್ತರ ಪ್ರದೇಶದ ಗಡಿ ಪ್ರದೇಶಗಳಲ್ಲಿನ ನದಿ ದಡದ ಜನರಿಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿತ್ತು. ಇದೀಗ ಗಂಡಕ್ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದು, ಜನರು ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ. ನೇಪಾಳದ ತ್ರಿಶೂಲಿ ನದಿಯ ನೀರು ನಾರಾಯಣಿ ನದಿಯ ಮೂಲಕ ಹರಿಯುತ್ತಿರುವುದರಿಂದ, ಗಂಡಕ್ ನದಿ ಮೇಲಿನ ಒತ್ತಡ ಕಡಿಮೆಯಾಗುತ್ತಿದೆ.
ನೇಪಾಳ ಸಂಭವಿಸಿದ ಪ್ರವಾಹ -
ಪಾಟ್ನಾ, ಆ. 27: ನೇಪಾಳವು ಪ್ರವಾಹಕ್ಕೆ (Nepal Floods) ಅಕ್ಷರಶಃ ತತ್ತರಿಸಿ ಹೋಗಿದೆ. ನೆರೆಯ ದೇಶದ ಪ್ರವಾಹದ ಪರಿಣಾಮವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ (Bihar) ಎಚ್ಚರಿಕೆ ಘೋಷಿಸಲಾಗಿತ್ತು. ಇದೀಗ ಗಂಡಕ್ ನದಿಯಲ್ಲಿ ನೀರಿನ ಮಟ್ಟ ವೇಗವಾಗಿ ಇಳಿಕೆಯಾಗುತ್ತಿದೆ ಎಂದು ತಿಳಿದುಬಂದಿದೆ. ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ವಾಲ್ಮೀಕಿನಗರ ಗಂಡಕ್ ಬ್ಯಾರೇಜ್‌ನಲ್ಲಿ ನೀರಿನ ಹೊರಹೋಗುವಿಕೆ ಸುಮಾರು 81,000 ಕ್ಯೂಸೆಕ್‌ಗಳಿಗೆ ಇಳಿದಿದೆ. ಇದರಿಂದ ಉತ್ತರ ಪ್ರದೇಸ ಮತ್ತು ಬಿಹಾರದ ಜನ ನಿಟ್ಟುಸಿರು ಬಿಟ್ಟಿದ್ದಾರೆ.
ನೇಪಾಳದ ಹಿಮಾಲಯ ಪ್ರದೇಶದಲ್ಲಿ ಭಾರಿ ಪ್ರವಾಹ ಉಂಟಾದ ನಂತರ ಬಿಹಾರ ಮತ್ತು ಪೂರ್ವ ಉತ್ತರ ಪ್ರದೇಶದ ಗಡಿ ಪ್ರದೇಶಗಳಲ್ಲಿನ ನದಿ ದಡದ ಜನರಿಗೆ ಎಚ್ಚರಿಕೆ ನೀಡಲಾಗಿತ್ತು. ಇದೀಗ ಜನರು ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ.
ನೇಪಾಳದಲ್ಲಿ ಸಂಭವಿಸಿದ ಪ್ರವಾಹ:
Nepal Before 2 Months & Nepal Toady#NepalFlood #Nepal #Rasuwa #FlashFlood #Floods #नेपालबाढ़
— Ashutosh Krishna ༗ (@IAmKrishnaaX) August 27, 2026
Before👇 After👇 pic.twitter.com/cuD1NntjP6
ನೇಪಾಳದ ತ್ರಿಶೂಲಿ ನದಿಯ ನೀರು ನಾರಾಯಣಿ ನದಿಯ ಮೂಲಕ ಹರಿಯುತ್ತಿರುವುದರಿಂದ, ಗಂಡಕ್ ನದಿ ಮೇಲಿನ ಒತ್ತಡ ಕಡಿಮೆಯಾಗುತ್ತಿದೆ. ಹೀಗಾಗಿ ಅಪಾಯದಮಟ್ಟ ಕಡಿಮೆಯಾಗಿದೆ. ಆದರೂ ಅಧಿಕಾರಿಗಳು ನದಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುವ ನಿರೀಕ್ಷೆಯಿದೆ. ಜನರನ್ನು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ನೇಪಾಳ ಜಲಸ್ಫೋಟ; ಕರ್ನಾಟಕದ ಇಬ್ಬರು ನಿವಾಸಿಗಳ ರಕ್ಷಣೆ
ಬುಧವಾರ (ಆ. 26) ಟಿಬೆಟ್ ಗಡಿಯ ಸಮೀಪವಿರುವ ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ನಂತರ ಈ ಎಚ್ಚರಿಕೆಯನ್ನು (ಅಲರ್ಟ್) ನೀಡಲಾಗಿತ್ತು. ಮಂಜುಗಡ್ಡೆ ಮತ್ತು ಬಂಡೆಗಳ ಹಿಮಕುಸಿತ ಅಥವಾ ಭೂಕುಸಿತದಿಂದಾಗಿ ಈ ವಿಪತ್ತು ಸಂಭವಿಸಿದೆ ಎಂದು ನಂಬಲಾಗಿದ್ದು, ಇದು ನೇಪಾಳದ ಹಲವು ಭಾಗಗಳಲ್ಲಿ ಭಾರಿ ಪ್ರಮಾಣದ ನೀರು ಮತ್ತು ಅವಶೇಷಗಳು ನುಗ್ಗಲು ಕಾರಣವಾಗಿದೆ. ಇದರಿಂದಾಗಿ ಮನೆಗಳು, ರಸ್ತೆಗಳು, ಸೇತುವೆಗಳು ಮತ್ತು ಜಲವಿದ್ಯುತ್ ಮೂಲಸೌಕರ್ಯಗಳು ಧ್ವಂಸಗೊಂಡಿವೆ. ನೇಪಾಳದಲ್ಲಿ ಕನಿಷ್ಠ 157 ಜನರು ಮೃತಪಟ್ಟಿರುವುದು ದೃಢಪಟ್ಟಿದ್ದು, ನೂರಾರು ಜನ ಇನ್ನೂ ನಾಪತ್ತೆಯಾಗಿದ್ದಾರೆ.
ಈ ವಿಪತ್ತು ಭಾರತೀಯ ಸ್ವರೂಪದ ಪ್ರಮುಖ ಆಯಾಮವನ್ನು ಹೊಂದಿದೆ. ಯಾತ್ರಿಕರು ಮತ್ತು ಪ್ರವಾಸಿಗರು ಸೇರಿ ಹಲವು ಭಾರತೀಯ ಪ್ರಜೆಗಳು ನಾಪತ್ತೆಯಾದವರಲ್ಲಿ ಸೇರಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಂತೆ ತ್ರಿಶೂಲಿ ಮತ್ತು ನಾರಾಯಣಿ ಸೇರಿ ಹಲವು ನದಿಗಳ ಉದ್ದಕ್ಕೂ ಅಪಾಯಗಳು ಮುಂದುವರಿಯುವ ಬಗ್ಗೆ ನೇಪಾಳದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಗಂಡಕ್ ನದಿಯ ನೀರಿನ ಹರಿವು ಕಡಿಮೆಯಾಗುತ್ತಿರುವುದರಿಂದ ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ಇದ್ದ ತಕ್ಷಣದ ಪ್ರವಾಹದ ಅಪಾಯವು ಸದ್ಯಕ್ಕೆ ದೂರವಾದಂತೆ ತೋರುತ್ತಿದೆ. ಗಂಡಕ್ ನದಿಯು ನೇಪಾಳದಲ್ಲಿ ಹುಟ್ಟಿ ಭಾರತದಲ್ಲಿ ಹರಿಯುತ್ತದೆ. ನದಿಯ ಮೇಲ್ಭಾಗದಲ್ಲಿ (ನೇಪಾಳದಲ್ಲಿ) ಸಂಭವಿಸುವ ಹಠಾತ್ ಪ್ರವಾಹಗಳು ಕೆಳಭಾಗದಲ್ಲಿರುವ ಭಾರತಕ್ಕೂ ಆತಂಕವನ್ನು ಉಂಟು ಮಾಡುತ್ತವೆ.