Viral Video: ʻಬ್ರಿಟನ್ಸ್ ಗಾಟ್ ಟಾಲೆಂಟ್ʼನಲ್ಲಿ ಭಾರತದ ಬಾಲಕಿಗೆ 3ನೇ ಸ್ಥಾನ; ಈಕೆ ಅದ್ಭುತ ಡಾನ್ಸ್ ವಿಡಿಯೊ ಇಲ್ಲಿದೆ ನೋಡಿ
Britain's Got Talent 2025: ಬ್ರಿಟನ್ ಗಾಟ್ ಟಾಲೆಂಟ್ 2025ರ ಕಾರ್ಯಕ್ರಮದಲ್ಲಿ 9 ವರ್ಷದ ಬಿನಿತಾ ಚೆತ್ರಿ ಎನ್ನುವ ಬಾಲಕಿಯ ಅಸಾಧಾರಣ ನೃತ್ಯಕೌಶಲ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಬ್ರಿಟನ್ ಗಾಟ್ ಟಾಲೆಂಟ್ 2025ರ ನೃತ್ಯ ಕಾರ್ಯಕ್ರಮದಲ್ಲಿ ಅಸಾಧರಣ ಪ್ರತಿಭೆ ತೋರಿದ್ದ ಬಾಲಕಿ, ತೃತೀಯ ಸ್ಥಾನಕ್ಕೆ ಭಾಜನಳಾಗಿದ್ದಾಳೆ. ಇನ್ನು ಅಸ್ಸಾಂನ ಮುಖ್ಯಮಂತ್ರಿ ಸೇರಿದಂತೆ ಹಲವರು ಬಾಲಕಿಯನ್ನು ಪ್ರಶಂಸಿಸಿದ್ದಾರೆ.


ಲಂಡನ್: ಇತ್ತೀಚಿಗೆ ಲಂಡನ್‌ನಲ್ಲಿ ನಡೆದ "ಬ್ರಿಟನ್ ಗಾಟ್ ಟಾಲೆಂಟ್ 2025"ರ(Britain's Got Talent 2025) ಕಾರ್ಯಕ್ರಮದಲ್ಲಿ ಅಸ್ಸಾಂ ಮೂಲದ 9 ವರ್ಷದ ಬಿನಿತಾ ಚೆತ್ರಿ ಮೂರನೇ ಸ್ಥಾನ ಗಳಿಸುವ ಮೂಲಕ ಅದ್ಭುತ ಸಾಧನೆಗೈದಿದ್ದಾಳೆ. ಇನ್ನು ತನ್ನ ಅಮೋಘ ನೃತ್ಯ ಪ್ರದರ್ಶನದದ ಮೂಲಕ ಎಲ್ಲರ ಗಮನ ಸೆಳೆದಿದ್ದ ಬಾಲಿಕಿಯ ನೃತ್ಯ ಕೌಶಲ್ಯಕ್ಕೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಪ್ರಶಂಶಿಸಿದ್ದಾರೆ.
ಬಾಲಕಿಯ ಪ್ರತಿಭೆಯನ್ನು ಹಾಡಿ ಹೊಗಳಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಅಭಿನಂದನೆ ತಿಳಿಸಿದ್ದಾರೆ. "ನೃತ್ಯದಿಂದ ಗೆಲುವಿನತ್ತ ಸಾಗಿದ ಬಿನಿತಾ ಚೆತ್ರಿಗೆ ಹಾರ್ದಿಕ ಅಭಿನಂದನೆಗಳು. ಬ್ರಹ್ಮಪುತ್ರದಿಂದ ಥೇಮ್ಸ್ ನದಿವರೆಗೆ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ಬಿನಿತಾ ನಮ್ಮ ರಾಜ್ಯದ ಹೆಮ್ಮೆ, ಮುಂದಿನ ಭವಿಷ್ಯ ಉಜ್ವಲವಾಗಿರಲಿ" ಎಂದು ಬರೆದುಕೊಂಡಿದ್ದಾರೆ. ಜೊತೆಗೆ, ಫೈನಲ್‌ನಲ್ಲಿ ಬಿನಿತಾ ಮ್ಯಾಜಿಶಿಯನ್ ಹ್ಯಾರಿ ಮೌಲ್ಡಿಂಗ್ (ವಿಜೇತೆ) ಮತ್ತು ಡಾನ್ಸ್ ಗ್ರೂಪ್ ‘ದಿ ಬ್ಲ್ಯಾಕ್‌ಔಟ್ಸ್’ (ರನ್ನರ್‌ಅಪ್) ಜೊತೆ ನಿಂತಿರುವ ವಿಡಿಯೊವನ್ನೂ ಹಂಚಿಕೊಂಡಿದ್ದಾರೆ.
Dancing her way to glory 🎊
— Himanta Biswa Sarma (@himantabiswa) June 1, 2025
Many congratulations to our very own #BinitaChetry on securing the 3rd spot at #BGTFinal.
Her performances have mesmerized audiences from the Brahmaputra to the Thames and made us all proud.
I wish her all the best for her future endeavours ❤️ pic.twitter.com/jBhAcJwGb8
ಈ ಸುದ್ದಿಯನ್ನೂ ಓದಿ: Viral Video: ಮೆಟ್ರೋ ಸ್ಟೇಷನ್ ಬಳಿ ತನಗೇ ತಾನೇ ಬೆಂಕಿ ಹಚ್ಚಿಕೊಂಡ ಭೂಪ! ಶಾಕಿಂಗ್ ವಿಡಿಯೊ ಫುಲ್ ವೈರಲ್
ಕೈ ಮುಗಿದು ಕೃತಜ್ಞತೆ ತಿಳಿಸಿದ ಬಿನಿತಾ ಚೆತ್ರಿ
ಫೈನಲ್ ನೇರ ಪ್ರಸಾರದಲ್ಲಿ ಬಿನಿತಾ ಚೆತ್ರಿಗೆ ಸೆಕೆಂಡ್ ರನ್ನರ್‌ಅಪ್ ಎಂದು ಘೋಷಿಸಲಾಯಿತು. ಬಳಿಕ ಸಂದರ್ಶನದಲ್ಲಿ ಮಾತಾನಾಡಿದ ಬಿನಿತಾ ಹರ್ಷ ವ್ಯಕ್ತಪಡಿಸುತ್ತಾ, “ನನಗೆ ತುಂಬಾ ಖುಷಿಯಾಗಿದೆ ಮತ್ತು ನನಗೆ ಹೆಮ್ಮೆಯಾಗುತ್ತಿದೆ. ಇದು ನನಗೆ ಅತ್ಯುತ್ತಮ ಅನುಭವ,” ಎಂದು ಹೇಳಿದ್ದಾರೆ. ಪ್ರೋತ್ಸಾಹ ನೀಡಿದ ಪ್ರೇಕ್ಷಕರಿಗೂ ಕೈಮುಗಿದು ಕೃತಜ್ಞತೆ ಸಲ್ಲಿಸಿದ್ದಾಳೆ. ಬ್ರಿಟನ್ ಗಾಟ್ ಟಾಲೆಂಟ್‌ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯೂ ಬಿನಿತಾ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದು, “ಮೂರನೇ ಸ್ಥಾನ ಪಡೆದ ಬಿನಿತಾ ಚೆತ್ರಿಗೆ ಅಭಿನಂದನೆಗಳು ಎಂದು ಪೋಸ್ಟ್ ಮಾಡಿದ್ದಾರೆ. ಇನ್ನು ಹಲವರು ಬಿನಿತಾ ಚೆತ್ರಿಯ ಸಾಧನೆ, ಕೇವಲ ನೃತ್ಯ ಕೌಶಲ್ಯವಲ್ಲ, ಭಾರತದ ಪ್ರತಿಭೆಯನ್ನು ಜಗತ್ತಿಗೆ ತೋರಿಸಿದ ಅದ್ಭುತ ನಿದರ್ಶನವಾಗಿದೆ ಎಂದಿದ್ದಾರೆ.