ಚಲಿಸುತ್ತಿದ್ದ ಆಂಬ್ಯುಲೆನ್ಸ್‌ಗೆ ಬೆಂಕಿ; 1 ದಿನದ ನವಜಾತ ಶಿಶು ಸೇರಿ ನಾಲ್ವರು ಸಜೀವ ದಹನ
ಗುಜರಾತ್‌ನಲ್ಲಿ ನವೆಂಬರ್ 18ರಂದು ಭೀಕರ ದುರಂತವೊಂದು ನಡೆದಿದ್ದು, ಚಲಿಸುತ್ತಿದ್ದ ಆಂಬ್ಯಲೆನ್ಸ್‌ಗೆ ಬೆಂಕಿ ಹತ್ತಿಕೊಂಡು ನವಜಾತ ಶಿಶು, ವೈದ್ಯ ಸೇರಿ ನಾಲ್ವರು ಸಜೀವ ದಹನವಾಗಿದ್ದಾರೆ. ಅರವಲ್ಲಿ ಜಿಲ್ಲೆಯ ಮೋಡಸಾ ಪಟ್ಟಣದಲ್ಲಿ ಈ ದುರಂತ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಗುಜರಾತ್‌ನಲ್ಲಿ ಚಲಿಸುತ್ತಿದ್ದ ಆಂಬ್ಯುಲೆನ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ನಾಲ್ವರು ಮೃತಪಟ್ಟಿದ್ದಾರೆ -
ಗಾಂಧಿನಗರ, ನ. 18: ಗುಜರಾತ್‌ನಲ್ಲಿ ನವೆಂಬರ್ 18ರಂದು ಭೀಕರ ದುರಂತವೊಂದು ನಡೆದಿದ್ದು, ಚಲಿಸುತ್ತಿದ್ದ ಆಂಬ್ಯಲೆನ್ಸ್‌ಗೆ ಬೆಂಕಿ ಹತ್ತಿಕೊಂಡು ನವಜಾತ ಶಿಶು, ವೈದ್ಯ ಸೇರಿ ನಾಲ್ವರು ಸಜೀವ ದಹನವಾಗಿದ್ದಾರೆ (Fire Accident). ಅರವಲ್ಲಿ ಜಿಲ್ಲೆಯ ಮೋಡಸಾ ಪಟ್ಟಣದಲ್ಲಿ ಈ ದುರಂತ ನಡೆದಿದೆ. ಆಸ್ಪತ್ರೆಯೊಂದರಲ್ಲಿ ಜನಿಸಿದ 1 ದಿನದ ಶಿಶುವಿನ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅದನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಮೃತರ ಪೈಕಿ ನವಜಾತ ಶಿಶು, ವೈದ್ಯ, ಮತ್ತು ಇತರ ಇಬ್ಬರು ಸೇರಿದ್ದಾರೆ. ಮೋಡಸಾ-ಧನ್ಸುರ ರಸ್ತೆಯಲ್ಲಿ ಅಂಬ್ಯುಲೆನ್ಸ್ ಸಾಗುತ್ತಿದ್ದಾಗ ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆಗೆ ಅಂಬ್ಯಲೆನ್ಸ್‌ಗೆ ಬೆಂಕಿ ಹತ್ತಿಕೊಂಡಿತ್ತು.
ಮೃತರನ್ನು 1 ದಿನದ ನವಜಾತ ಶಿಶು, ಅದರ ತಂದೆ ಜಿಗ್ನೇಶ್ ಮೋಚಿ (38), ಅಹಮಾದಾಬಾದ್‌ನ ವೈದ್ಯ ಶಾಂತಿಲಾಲ್ ತೆನಿಟಾ (30), ನರ್ಸ್ ಭುರಿಬೆನ್ ಮಾನತ್ (23) ಎಂದು ಗುರುತಿಸಲಾಗಿದೆ. ಚಾಲಕ ಅಚ್ಚರಿಯ ರೀತಿಯಲ್ಲಿ ಪಾರಾಗಿದ್ದಾನೆ. ಆಂಬ್ಯುಲೆನ್ಸ್ ಸುಟ್ಟು ಕರಕಲಾಗಿದೆ. ಗಾಯಗೊಂಡ ಮೂವರಲ್ಲಿ ಮೋಚಿಯ ಇಬ್ಬರು ಸಂಬಂಧಿಕರೂ ಇದ್ದಾರೆ. ಸುಟ್ಟ ಗಾಯಗಳೊಂದಿಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Road Accident: ಕಾರು ಮರಕ್ಕೆ ಡಿಕ್ಕಿ, ಗರ್ಭಿಣಿ ರುಂಡ ಕತ್ತರಿಸಿ ಸಾವು
"ಜಿಗ್ನೇಶ್ ಮೋಚಿ ಮಹಿಸಾಗರ್ ಜಿಲ್ಲೆಯವರಾಗಿದ್ದು, ಅವರ ನವಜಾತ ಶಿಶು ಜನನದ ನಂತರ ಮೋಡಸಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಅದರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ, ದಾರಿ ಮಧ್ಯೆ ಆಂಬ್ಯುಲೆನ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತುʼʼ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಬ್ಯಲೆನ್ಸ್‌ಗೆ ಬೆಂಕಿ ಹತ್ತಿಕೊಂಡ ಘಟನೆಯ ವಿಡಿಯೊ:
A newborn baby, a doctor, and two others were burnt to death after the ambulance they were traveling in caught fire near Modasa town in #Gujarat ‘s Arvalli district.@NewIndianXpress @santwana99 @jayanthjacob pic.twitter.com/L0KBE92lCK
— Dilip Kshatriya (@Kshatriyadilip) November 18, 2025
ಪೊಲೀಸರು ಬಿಡುಗಡೆ ಮಾಡಿದ ಸಿಸಿಟಿವಿ ದೃಶ್ಯದಲ್ಲಿ, ಆಂಬ್ಯುಲೆನ್ಸ್‌ಗೆ ಬೆಂಕಿ ಕಾಣಿಸಿಕೊಂಡಿರುವುದು ಗೊತ್ತಾಗುತ್ತಿದ್ದಂತೆ ಚಾಲಕನಿಗೆ ನಿಧಾನವಾಗಿ ಚಲಾಯಿಸುತ್ತಿರುವುದನ್ನು ಕಾಣಬಹುದು.
ʼʼಚಾಲಕ ಮತ್ತು ಮೊದಲ ಸೀಟ್‌ನಲ್ಲಿದ್ದ ಮೋಚಿ ಅವರ ಇಬ್ಬರು ಸಂಬಂಧಿಕರು ಪಾರಾಗಿದ್ದಾರೆ. ಗಾಯಗೊಂಡ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಿಂದಿನ ಸೀಟ್‌ನಲ್ಲಿದಲ್ಲಿ ಮಗು, ಅದರ ತಂದೆ, ವೈದ್ದಯ ಮತ್ತು ನರ್ಸ್ ಸುಟ್ಟು ಕರಕಲಾಗಿದ್ದಾರೆʼʼ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಡಿಬಿ ವಾಲಾ ವಿವರಿಸಿದ್ದಾರೆ.
Kurnool Bus Fire: ಕರ್ನೂಲ್ ಬಸ್ ದುರಂತದಲ್ಲಿ ಬೆಂಗಳೂರಿನ ಒಂದೇ ಕುಟುಂಬದ ನಾಲ್ವರು ದುರ್ಮರಣ
ʼʼಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಧಾವಿಸಿದರೂ ನಾಲ್ವರು ಉಳಿಸಲು ಸಾಧ್ಯವಾಗಲಿಲ್ಲʼʼ ಎಂದಿದ್ದಾರೆ. ಗಾಯಗೊಂಡವರನ್ನು ಚಾಲಕ ಅಂಕಿತ್ ಠಾಕೂರ್ ಮತ್ತು ಜಿಗ್ನೇಶ್ ಮೋಚಿ ಅವರ ಸಂಬಂಧಿಕರಾದ ಗೌರಂಗ್ ಮೋಚಿ ಮತ್ತು ಗೀತಾಬೆನ್ ಮೋಚಿ ಎಂದು ಗುರುತಿಸಲಾಗಿದೆ. ಘಟನೆಯ ತನಿಖೆ ನಡೆಸಲು ಮತ್ತು ದುರಂತಕ್ಕೆ ಕಾರಣ ಕಂಡುಹಿಡಿಯಲು ವಿಧಿವಿಜ್ಞಾನ ತಜ್ಞರನ್ನು ಕರೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಹರ್ಸಿನ್ ಜಡೇಜಾ ತಿಳಿಸಿದ್ದಾರೆ.
"ಮೋಡಸಾ ಪಟ್ಟಣದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ ಚಲಿಸುತ್ತಿದ್ದ ಆಂಬ್ಯುಲೆನ್ಸ್‌ನಲ್ಲಿ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿತು. ವಿಧಿವಿಜ್ಞಾನ ತಂಡದ ವರದಿಯ ನಂತರ ಬೆಂಕಿಗೆ ನಿಖರ ಕಾರಣ ತಿಳಿದುಬರಲಿದೆ" ಎಂದು ಜಡೇಜಾ ಹೇಳಿದ್ದಾರೆ.