ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss 12: ಅದೊಂದು ವಿಚಾರಕ್ಕಾಗಿ ಜೈಲಿಗೆ ಹೋಗಿದ್ದ ʻಕಾಕ್ರೋಚ್‌ʼ ಸುಧಿ! ಈ ಪ್ರಕರಣ ಸುಖಾಂತ್ಯವಾಗಿದ್ದೇಗೆ?

Cockroach Sudhi Marriage Story: ಬಿಗ್‌ ಬಾಸ್‌ನಿಂದ ಕಾಕ್ರೋಚ್‌ ಸುಧಿ ಅವರು ಎಲಿಮಿನೇಟ್‌ ಆಗಿ ಹೊರಗೆ ಬಂದಿದ್ದಾರೆ. ಇದೀಗ ಅವರು ತಾವು ಜೈಲಿಗೆ ಹೋಗಿದ್ದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಲವ್‌ ಮ್ಯಾರೇಜ್‌ ಕಾರಣದಿಂದ ಈ ಘಟನೆ ನಡೆದಿತ್ತು. ಆಗಿನ್ನೂ ಪತ್ನಿಗೆ 18 ವರ್ಷ ತುಂಬಿರದ ಕಾರಣ ಕೇಸ್‌ ದಾಖಲಾಗಿತ್ತು ಅಂತ ವಿಶ್ವವಾಣಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

BBK 12: ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಸುಧಿ ಜೈಲಿಗೆ ಹೋಗಿದ್ದೇಕೆ?

-

Avinash GR
Avinash GR Nov 18, 2025 2:44 PM

ಕಾಕ್ರೋಚ್‌ ಸುಧಿ ಅವರು ಬಿಗ್‌ ಬಾಸ್‌ ಮನೆಯಲ್ಲಿರುವಾಗ ತಾವು ಹಿಂದೊಮ್ಮೆ ಜೈಲಿಗೆ ಹೋಗಿದ್ದಾಗಿ ಹೇಳಿಕೊಂಡಿದ್ದರು. ಆದರೆ ಯಾವ ಕಾರಣಕ್ಕಾಗಿ ಅವರು ಜೈಲಿಗೆ ಹೋಗಿದ್ದರು? ಏನದು ಪ್ರಕರಣ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಇದೀಗ ಬಿಗ್‌ ಬಾಸ್‌ ನಿಂದ ಎಲಿಮಿನೇಟ್‌ ಆಗಿರುವ ಕಾಕ್ರೋಚ್‌ ಸುಧಿ ಅವರು ಆ ಬಗ್ಗೆ ವಿಶ್ವವಾಣಿ ಟಿವಿ ಜೊತೆ ಎಕ್ಸ್‌ಕ್ಲೂಸಿವ್‌ ಆಗಿ ಮಾತನಾಡಿದ್ದಾರೆ.

ಲವ್‌ನಿಂದಾಗಿ ನಾನು ಜೈಲಿಗೆ ಹೋಗಬೇಕಾಗಿ ಬಂತು

"ನಂದು ಲವ್‌ ಮ್ಯಾರೇಜ್.‌ ನಾವಿಬ್ಬರು ಪ್ರೀತಿಸಿ, ಮನೆಬಿಟ್ಟು ಹೋಗಿದ್ದೆವು. ಆಗಿನ್ನೂ ನನ್ನ ಪತ್ನಿಗೆ 18 ವರ್ಷ ಕಂಪ್ಲೀಟ್‌ ಆಗಿರಲಿಲ್ಲ. ನಂತರ ಅದು ಕೇಸ್‌ ಆಗಿತ್ತು. ನಾನು ಬಂದು ಪೊಲೀಸರಿಗೆ ಶರಣಾಗಿದ್ದೆ. ಇದ್ದಂತಹ ಕಾನೂನು ಪ್ರಕ್ರಿಯೆಗಳನ್ನೆಲ್ಲಾ ಮುಗಿಸಿ, ನನ್ನ ಪತ್ನಿಗೆ 18 ವರ್ಷ ಕಂಪ್ಲೀಟ್‌ ಆದಮೇಲೆ ನಾನು ಹೋಗಿ ಮದುವೆ ಮಾಡಿಕೊಂಡಿದ್ದೆ. ಹಾಗಾಗಿ, ಆ ಸಮಯದಲ್ಲಿ ನಾನು ಜೈಲಿಗೆ ಹೋಗಬೇಕಾಗಿ ಬಂತು" ಎಂದು ಕಾಕ್ರೋಚ್‌ ಸುಧಿ ಹೇಳಿದ್ದಾರೆ.

Bigg Boss Kannada 12: ಬಿಗ್​ಬಾಸ್ ಮನೆಯಿಂದ ಕಾಕ್ರೋಚ್ ಸುಧಿ ಔಟ್‌; ʻಸೂಪರ್‌ ಪವರ್‌ʼ ಸುಧಿಯ ಜರ್ನಿ ಹೇಗಿತ್ತು?

18 ವರ್ಷ ಆಗಿಲ್ಲ ಏಂದು ಕೇಸ್‌ ಆಯ್ತು

"ನನಗಿನ್ನೂ ಆಗಿ 23 ವರ್ಷ. ಚಿತ್ರರಂಗಕ್ಕೆ ನಾನಿನ್ನೂ ಎಂಟ್ರಿ ಕೊಟ್ಟಿರಲೇ ಇಲ್ಲ. ನಾವಿಬ್ಬರು ತುಂಬಾ ಪ್ರೀತಿ ಮಾಡಿದ್ದೆವು. ಮನೆಯಲ್ಲಿ ಗೊತ್ತಾಗಿ ಗಲಾಟೆ ಆಗಿಬಿಡತ್ತೆ, ಆ ಟೈಮ್‌ನಲ್ಲಿ ಅವರಿಗೆ ಬೇರೆಯವರ ಜೊತೆ ಮದುವೆ ಮಾಡುವ ಮಾತುಕತೆಯೂ ನಡೆಯುತ್ತಿತ್ತು. ಬಿಟ್ರೆ ಮಿಸ್‌ ಆಗಿಬಿಡುತ್ತದೆ ಎಂಬ ಭಯಕ್ಕೆ ನಾವಿಬ್ಬರು ಓಡಿಹೋದೆವು. 18 ವರ್ಷ ಆಗಿಲ್ಲ ಎಂಬುದು ಗೊತ್ತಿದ್ದರೂ, ಅವರನ್ನು ಕರೆದುಕೊಂಡು ಹೋಗಿಬಿಟ್ಟೆ. ಆಮೇಲೆ ನನ್ನ ಮೇಲೆ ಒಂದಷ್ಟು ಕೇಸ್‌ಗಳು ಆದವು. ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದೆ" ಎಂದು ಕಾಕ್ರೋಚ್‌ ಸುಧಿ ಹೇಳಿದ್ದಾರೆ.

ಕಾಕ್ರೋಚ್‌ ಸುಧಿ ಎಕ್ಸ್‌ಕ್ಲೂಸಿವ್‌ ಸಂದರ್ಶನ



‌Bigg Boss 12: ʻನಾನು ಹುಲಿ ವೇಷದಲ್ಲಿರುವ ಹಸು, ನಾನು ಡ್ರಗ್‌ ಅಡಿಕ್ಟ್‌ ಅಲ್ಲʼ; ಕಾಕ್ರೋಚ್‌ ಸುಧಿ ಫಸ್ಟ್‌ ರಿಯಾಕ್ಷನ್

ಜೈಲಿನಿಂದ ಬಂದಮೇಲೆ ಮದುವೆಯಾದೆ

"ಜೈಲಿನಿಂದ ಹೊರಬಂದಮೇಲೆ ನನಗಾಗಿಯೇ ಅವರು ಕಾಯುತ್ತಿದ್ದರು. ಆಗ ಅವರಿಗೆ 18 ವರ್ಷ ತುಂಬಿತ್ತು. ಆಗ ನಾನು ಮತ್ತೆ ಅವರನ್ನೇ ಮದುವೆಯಾದೆ. ನಂತರ ಪೊಲೀಸ್‌ ಸ್ಟೇಷನ್‌ನಲ್ಲಿ ಹುಡುಗಿ ಕಡೆಯವರನ್ನು ಕರೆಸಿ, ಮಾತುಕತೆ ನಡೆಯುತ್ತದೆ. ನಾವಿಬ್ಬರು ಮೇಜರ್‌ ಆಗಿದ್ದರಿಂದ ಏನೂ ಸಮಸ್ಯೆ ಆಗಲಿಲ್ಲ. ಈಗ ನನ್ನ ಪತ್ನಿ ಕಡೆಯವರ ಜೊತೆಗೆ ಚೆನ್ನಾಗಿಯೇ ಇದ್ದೇನೆ. ನನ್ನ ಮಾವನ ಜೊತೆಗೆ ಅಷ್ಟಕ್ಕಷ್ಟೇ. ಯಾಕೆಂದರೆ, ಯಾವ ತಂದೆಗೆ ಆದರೂ ಈ ರೀತಿ ಆದಾಗ ನೋವು ಆಗಿಯೇ ಆಗುತ್ತದೆ. ನನಗೆ ಮಗಳಿದ್ದರೂ ನಾನು ಅದನ್ನೇ ಯೋಚನೆ ಮಾಡುತ್ತಿದ್ದೆ" ಎಂದು ಕಾಕ್ರೋಚ್‌ ಸುಧಿ ಹೇಳಿದ್ದಾರೆ.

ಅಂದಹಾಗೆ, ಬಿಗ್‌ ಬಾಸ್‌ ಮನೆಯಿಂದ 49 ದಿನಗಳಿಗೆ ಎಲಿಮಿನೇಟ್‌ ಆಗಿ ಕಾಕ್ರೋಚ್‌ ಸುಧಿ ಹೊರಗೆ ಬಂದಿದ್ದಾರೆ. ಇನ್ನಷ್ಟು ದಿವಸ ಅವರು ಬಿಗ್‌ ಬಾಸ್‌ ಮನೆಯಲ್ಲಿ ಇರುತ್ತಾರೆ ಎಂಬ ನಿರೀಕ್ಷೆ ವೀಕ್ಷರಲ್ಲಿತ್ತು.